ಫೈಟರ್‌ ಸಿನೆಮಾದಲ್ಲಿ ವಾಯುಪಡೆ ಸಮವಸ್ತ್ರ ಧರಿಸಿ ಚುಂಬನದ ದೃಶ್ಯ: ವಾಯುಪಡೆ ಅಧಿಕಾರಿಯಿಂದ ಲೀಗಲ್ ನೋಟಿಸ್

ನವದೆಹಲಿ: ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ “ಫೈಟರ್” ಚಿತ್ರದ ನಿರ್ಮಾಪಕರು ವಾಯುಪಡೆಯ ಸಮವಸ್ತ್ರವನ್ನು ಚುಂಬನ ದೃಶ್ಯಕ್ಕೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿ ಐಎಎಫ್ ಅಧಿಕಾರಿಯೊಬ್ಬರು ಕಾನೂನು ನೋಟಿಸ್ ನೀಡಿದ್ದಾರೆ. ವಿಂಗ್ ಕಮಾಂಡರ್ ತಮ್ಮ ವೈಯಕ್ತಿಕ ಸಾಮರ್ಥ್ಯದಲ್ಲಿ ನೋಟಿಸ್ ನೀಡಿದ್ದಾರೆ. ಚಿತ್ರದ ಇಬ್ಬರು ನಾಯಕ ನಟರ ನಡುವಿನ ದೃಶ್ಯವು ಐಎಎಫ್‌ಗೆ ಅವಮಾನವಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ. … Continued

8 ವರ್ಷಗಳ ನಂತರ ಆಳ ಸಮುದ್ರದಲ್ಲಿ ಪತ್ತೆಯಾಯ್ತು ನಾಪತ್ತೆಯಾಗಿದ್ದ ವಾಯುಪಡೆ ವಿಮಾನ

ನವದೆಹಲಿ: 2016ರಲ್ಲಿ ಬಂಗಾಳ ಕೊಲ್ಲಿಯಲ್ಲಿ ನಾಪತ್ತೆಯಾಗಿದ್ದ ಭಾರತೀಯ ವಾಯುಪಡೆಯ ಎಎನ್ -32 ಸಾರಿಗೆ ವಿಮಾನದ ಅವಶೇಷಗಳು ಎಂಟು ವರ್ಷಗಳ ನಂತರ ಪತ್ತೆಯಾಗಿದೆ. ಬಂಗಾಳಕೊಲ್ಲಿಯ ಸಮುದ್ರದಲ್ಲಿ 3.4 ಕಿ.ಮೀ ಆಳದಲ್ಲಿ ವಿಮಾನ ಪತ್ತೆಯಾಗಿದೆ. ಸುತ್ತಲಿನ ನಿಗೂಢವನ್ನು ಚೆನ್ನೈ ಕರಾವಳಿಯಲ್ಲಿ ಪತನಗೊಂಡ ವಿಮಾನದ ಅವಶೇಷಗಳು ಪತ್ತೆಯಾದ ನಂತರ ಭೇದಿಸಬಹುದಾಗಿದೆ. ಕಾರ್ಯಾಚರಣೆಯ ಸಮಯದಲ್ಲಿ ನಾಪತ್ತೆಯಾದ ವಿಮಾನದಲ್ಲಿ ಇಪ್ಪತ್ತೊಂಬತ್ತು ಸಿಬ್ಬಂದಿ ಇದ್ದರು. … Continued

ಇಂಫಾಲ್ ವಿಮಾನ ನಿಲ್ದಾಣದ ಬಳಿ ‘ಯುಎಫ್‌ಒ’ ಕಂಡುಬಂದ ನಂತರ ನಂತರ ಎರಡು ರಫೇಲ್‌ ಯುದ್ಧ ವಿಮಾನ ಕಳುಹಿಸಿದ ವಾಯುಪಡೆ

ಇಂಫಾಲ್ (ಮಣಿಪುರ): ಭಾರತೀಯ ವಾಯು ಪಡೆಯ ಎರಡು ರಫೇಲ್ ಯುದ್ಧ ವಿಮಾನಗಳು ಮಣಿಪುರ ರಾಜಧಾನಿ ಇಂಫಾಲ್‌ಗೆ ರವಾನೆ ಆಗಿವೆ. ಇಂಫಾಲ್ ವಿಮಾನ ನಿಲ್ದಾಣದ ಬಳಿ ಗುರುತಿಸಲಾಗದ ಹಾರುವ ವಸ್ತು (UFO) ಹಾರಾಡುತ್ತಿವೆ ಎಂಬ ಮಾಹಿತಿ ಸಿಕ್ಕ ಕೂಡಲೇ ಭಾರತೀಯ ವಾಯು ಪಡೆ ತನ್ನ ಎರಡು ರಫೇಲ್ ಯುದ್ಧ ವಿಮಾನಗಳನ್ನ ಇಂಫಾಲ್‌ಗೆ ರವಾನಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. … Continued

ಮೇಡ್-ಇನ್-ಇಂಡಿಯಾ ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್ (LCH) ಇಂದು ವಾಯುಪಡೆಗೆ ಸೇರ್ಪಡೆ

ನವದೆಹಲಿ: ಭಾರತೀಯ ವಾಯುಪಡೆ(ಐಎಎಫ್)ಗೆ ದೇಶೀಯವಾಗಿ ಅಭಿವೃದ್ಧಿಪಡಿಸಿದ ಲಘು ಯುದ್ಧ ಹೆಲಿಕಾಪ್ಟರ್‌ನ (ಎಲ್‌ಸಿಎಚ್) ಮೊದಲ ಬ್ಯಾಚ್ ಅನ್ನು ಸೋಮವಾರ ಸೇರ್ಪಡೆಗೊಳಿಸಲಿದೆ. ಇದು ಕ್ಷಿಪಣಿಗಳನ್ನು ಮತ್ತು ಇತರ ಆಯುಧಗಳನ್ನು ಹಾರಿಸುವ ಸಾಮರ್ಥ್ಯವನ್ನು ಹೊಂದಿದೆ. . LCH, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL)ನಿಂದ ಅಭಿವೃದ್ಧಿಪಡಿಸಲ್ಪಟ್ಟಿದೆ, ಪ್ರಾಥಮಿಕವಾಗಿ ಎತ್ತರದ ಪ್ರದೇಶಗಳಲ್ಲಿ ನಿಯೋಜನೆಗಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು … Continued