ಪರೀಕ್ಷಾ ಪೆ ಚರ್ಚಾ: ವಿದ್ಯಾರ್ಥಿಗಳ ಜೊತೆ ಮೋದಿ ಸಂವಾದದಲ್ಲಿ ಸದ್ಗುರು, ದೀಪಿಕಾ ಪಡುಕೋಣೆ, ಮೇರಿ ಕೋಮ್ ಭಾಗಿ

ನವದೆಹಲಿ : ಪರೀಕ್ಷೆಯ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳೊಂದಿಗೆ ನಡೆಸುವ ವಾರ್ಷಿಕ ಸಂವಾದ ‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮಕ್ಕೆ ಈ ಬಾರಿ ಹೊಸ ಆಯಾಮ ನೀಡಲಾಗಿದೆ. ಪ್ರಧಾನಿ ಮೋದಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸುವಾಗ ವಿವಿಧ ಕ್ಷೇತ್ರಗಳ ಏಳು ಸಾಧಕರು ಪರೀಕ್ಷೆಯ ಸಮಯದ ಒತ್ತಡ ನಿವಾರಿಸುವ ಕುರಿತು ಸಲಹೆ ನೀಡಲಿದ್ದಾರೆ. ಪರೀಕ್ಷಾ ಪೆ … Continued

ಮಗುವಿಗೆ ಜನ್ಮ ನೀಡಿದ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ

ನವದೆಹಲಿ: ನಟರಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ದಂಪತಿಗೆ ಸೆಪ್ಟೆಂಬರ್ 8 ರ ಭಾನುವಾರ ಹೆಣ್ಣು ಮಗು ಜನಿಸಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಗಣೇಶನ ಹಬ್ಬದ ದಿನವಾದ ಸೆಪ್ಟೆಂಬರ್ 7 ರಂದು ಸಂಜೆ 5 ಗಂಟೆ ಸುಮಾರಿಗೆ ದೀಪಿಕಾ ಆಸ್ಪತ್ರೆಗೆ ದಾಖಲಾಗಿದ್ದರು. ನಟಿ ದೀಪಿಕಾ ಅವರನ್ನು ಮುಂಬೈನ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. … Continued

ಫೈಟರ್‌ ಸಿನೆಮಾದಲ್ಲಿ ವಾಯುಪಡೆ ಸಮವಸ್ತ್ರ ಧರಿಸಿ ಚುಂಬನದ ದೃಶ್ಯ: ವಾಯುಪಡೆ ಅಧಿಕಾರಿಯಿಂದ ಲೀಗಲ್ ನೋಟಿಸ್

ನವದೆಹಲಿ: ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ “ಫೈಟರ್” ಚಿತ್ರದ ನಿರ್ಮಾಪಕರು ವಾಯುಪಡೆಯ ಸಮವಸ್ತ್ರವನ್ನು ಚುಂಬನ ದೃಶ್ಯಕ್ಕೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿ ಐಎಎಫ್ ಅಧಿಕಾರಿಯೊಬ್ಬರು ಕಾನೂನು ನೋಟಿಸ್ ನೀಡಿದ್ದಾರೆ. ವಿಂಗ್ ಕಮಾಂಡರ್ ತಮ್ಮ ವೈಯಕ್ತಿಕ ಸಾಮರ್ಥ್ಯದಲ್ಲಿ ನೋಟಿಸ್ ನೀಡಿದ್ದಾರೆ. ಚಿತ್ರದ ಇಬ್ಬರು ನಾಯಕ ನಟರ ನಡುವಿನ ದೃಶ್ಯವು ಐಎಎಫ್‌ಗೆ ಅವಮಾನವಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ. … Continued