ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ, ಪುದುಚೇರಿಗೆ ಚುನಾವಣೆ ದಿನಾಂಕ ಘೋಷಿಸಿದ ಚುನಾವಣಾ ಆಯೋಗ

ನವದೆಹಲಿ:  ಚುನಾವಣಾ ಆಯೋಗವು ಇಂದು, ಭಾನುವಾರ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆಗೆ ದಿನಾಂಕಗಳನ್ನು ಘೋಷಿಸಿದೆ. ಉಳಿದ ಎಲ್ಲಾ ರಾಜ್ಯಗಳಲ್ಲಿ ಚುನಾವಣೆಗಳು ಒಂದೇ ಹಂತದಲ್ಲಿ ನಡೆಯಲಿದ್ದರೆ, ಪಶ್ಚಿಮ ಬಂಗಾಳ ಚುನಾವಣೆ ಎರಡು ಹಂತಗಳಲ್ಲಿ ನಡೆಯಲಿದೆ. ಅಸ್ಸಾಂ, ಕೇರಳ ಮತ್ತು ಪುದುಚೇರಿಗೆ ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ … Continued

ದಿತ್ವಾ ಚಂಡಮಾರುತ | ಶ್ರೀಲಂಕಾದಲ್ಲಿ 123 ಸಾವು ; ತಮಿಳುನಾಡಿನಲ್ಲಿ 54 ವಿಮಾನಗಳ ಸಂಚಾರ ರದ್ದು, ಶಾಲೆಗಳು ಬಂದ್

ನವದೆಹಲಿ:  ದಿತ್ವಾ (Ditwah) ಚಂಡಮಾರುತವು ಉತ್ತರ ತಮಿಳುನಾಡು ಮತ್ತು ಪುದುಚೇರಿ ಕರಾವಳಿಯ ಕಡೆಗೆ ಮುನ್ನುಗ್ಗುತ್ತಿರುವ ಹಿನ್ನೆಲೆಯಲ್ಲಿ, ಅಧಿಕಾರಿಗಳು ಸಿದ್ಧತೆಗಳನ್ನು ಹೆಚ್ಚಿಸಿದ್ದಾರೆ. ಬೃಹತ್ ಪ್ರಮಾಣದ ಪರಿಹಾರ ಕಾರ್ಯಾಚರಣೆಗಳಿಂದ ಹಿಡಿದು, ವಿಮಾನಗಳ ರದ್ದತಿ ಹಾಗೂ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆಗಳವರೆಗೆ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಪ್ರಸ್ತುತ ಶ್ರೀಲಂಕಾದ ಕರಾವಳಿ ಮತ್ತು ಅಂಡಮಾನ್‌ನ ನೈಋತ್ಯ ಬಂಗಾಳಕೊಲ್ಲಿಯ ಮೂಲಕ ಸಾಗುತ್ತಿರುವ ಈ ಚಂಡಮಾರುತವು ತೀವ್ರಗೊಳ್ಳುತ್ತಲೇ … Continued

ಚಂಡಮಾರುತ ಫೆಂಗಲ್ ಎಚ್ಚರಿಕೆ: ತಮಿಳುನಾಡು, ಪುದುಚೇರಿಗೆ ಭಾರಿ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ನವದೆಹಲಿ: ಭಾರತೀಯ ಹವಾಮಾನ ಇಲಾಖೆ (IMD) ಮಂಗಳವಾರ (ನವೆಂಬರ್ 26) ನೈಋತ್ಯ ಬಂಗಾಳ ಕೊಲ್ಲಿಯಲ್ಲಿನ ತೀವ್ರವಾದ ವಾಯುಭಾರ ಕುಸಿತವು ಮುಂದಿನ 24 ಗಂಟೆಗಳಲ್ಲಿ ಚಂಡಮಾರುತವಾಗಿ ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದೆ. ಈ ಚಂಡಮಾರುತಕ್ಕೆ ಫೆಂಗಲ್ ಎಂದು ಹೆಸರಿಸುವ ಸಾಧ್ಯತೆಯಿದೆ. ಇದು ಈ ವಾರದ ಕೊನೆಯಲ್ಲಿ ತಮಿಳುನಾಡು ಕರಾವಳಿಯನ್ನು ಸಮೀಪಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಉತ್ತರ-ವಾಯುವ್ಯವಾಗಿ ಗಂಟೆಗೆ … Continued

ಪುದುಚೇರಿಯಲ್ಲಿ ಜುಲೈ 16ರಿಂದ ಶಾಲಾ-ಕಾಲೇಜ್ ಪುನಾರಂಭ: ಸಿಎಂ ರಂಗಸ್ವಾಮಿ

ಪುದುಚೇರಿ: ಕೋವಿಡ್-19 ಉಲ್ಬಣದಿಂದ ಪುದುಚೇರಿಯಲ್ಲಿ ಬಂದ್ ಆಗಿದ್ದ ಶಾಲಾ-ಕಾಲೇಜ್ ಗಳು ಜುಲೈ 16 ರಂದು ಪುನಾರಂಭಗೊಳ್ಳಲಿವೆ. ಜುಲೈ 16 ರಂದು ಕಾಲೇಜ್ ಗಳು ಪುನರಾರಂಭಗೊಳ್ಳಲಿದ್ದು, ಶಾಲೆಗಳು ಭಾಗಶಃ ಪುನಃ ತೆರೆಯಲ್ಪಡುತ್ತವೆ ಎಂದು ಮುಖ್ಯಮಂತ್ರಿ ಎನ್. ರಂಗಸ್ವಾಮಿ ಭಾನುವಾರ ತಿಳಿಸಿದ್ದಾರೆ. ಒಂಭತ್ತರಿಂದ 12 ನೇ ತರಗತಿಗಳಿಗೆ ಮಾತ್ರ ತರಗತಿಗಳು ಆ ದಿನ ಪುನರಾರಂಭಗೊಳ್ಳುತ್ತವೆ ಎಂದು ಅವರು ತಿಳಿಸಿದರು. … Continued

ಪುದುಚೇರಿ: ಕಾಂಗ್ರೆಸ್‌ಗೆ‌ ಮೊದಲ ಶಾಂಕಿಂಗ್‌ ನ್ಯೂಸ್‌…!

ಪುದುಚೇರಿ: ತನ್ನ ಆಂತರಿಕ ಭಿನ್ನಮತದಿಂದಾಗಿ ಇತ್ತೀಚೆಗೆ ಸರ್ಕಾರ ಕಳೆದುಕೊಂಡ ಕಾಂಗ್ರೆಸ್ ಏ.೬ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲೂ ಹಿನ್ನಡೆ ಅನುಭವಿಸಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಯೊಂದು ಹೇಳಿದೆ. ಚುನಾವಣಾಪೂರ್ವ ಸಮೀಕ್ಷೆ ನಡೆಸಿರುವ ಎಬಿಪಿ-ವೋಟರ್ಸ್ ಸಮೀಕ್ಷೆ ಪಾಂಡಿಚೇರಿಯಲ್ಲಿ ಬಿಜೆಪಿ ಅಧಿಕಾರ ಹಿಡಿಯುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದೆ. ಒಟ್ಟು ೩೦ ವಿಧಾಸಭಾ ಕ್ಷೇತ್ರವಿರುವ ಪುದುಚೇರಿ ಕೇಂದ್ರಾಡಳಿತ ಪ್ರದೇಶವಾಗಿರುವ ಏಪ್ರಿಲ್ … Continued

ಪುದುಚೇರಿ: ಬಹುಮತ ಸೋತ ನಾರಾಯಣಸಾಮಿ, ಕಾಂಗ್ರೆಸ್‌ ಸರ್ಕಾರ ಪತನ

ಪುದುಚೇರಿಯಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಪತನವಾಗಿದೆ. ಮುಖ್ಯಮಂತ್ರಿ ವಿ. ನಾರಾಯಣಸಾಮಿ ಅವರು ಸೋಮವಾರ ಸದನದಲ್ಲಿ ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾಗಿದ್ದಾರೆ. ಸದನದಲ್ಲಿ ಮುಖ್ಯಮಂತ್ರಿ ವಿ. ನಾರಾಯಣಸಾಮಿ ಮಂಡಿಸಿದ ವಿಶ್ವಾಸದ ನಿರ್ಣಯಕ್ಕೆ ಸೋಲಾಯಿತು. ಸದನದಲ್ಲಿ ಮಾತನಾಡಿದ ಮುಖ್ಯಮಂತ್ರಿ ನಾರಾಯಣಸಾಮಿ, ತಮ್ಮ ಸರ್ಕಾರ ಮತ್ತು ಪುದುಚೇರಿಯ ಜನರು ಎದುರಿಸುತ್ತಿರುವ ಅಡೆತಡೆಗಳನ್ನು ಪಟ್ಟಿ ಮಾಡಿದರು, ಆಡಳಿತದಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪ ಮತ್ತು … Continued

ಪುದುಚೆರಿ: ಮತ್ತಿಬ್ಬರು ಶಾಸಕರು ರಾಜೀನಾಮೆ, ಸಂಕಷ್ಟದಲ್ಲಿ ಕಾಂಗ್ರೆಸ್‌ ಸರ್ಕಾರ

ವಿಧಾನಸಭೆಯಲ್ಲಿ ಬಹುಮತ ಪರೀಕ್ಷೆಗೆ ಒಂದು ದಿನ ಮೊದಲು, ಪುದುಚೇರಿಯಲ್ಲಿ ಕಾಂಗ್ರೆಸ್ ಸರ್ಕಾರದ ಬಿಕ್ಕಟ್ಟು ಉಲ್ಬಣಗೊಂಡಿದೆ. ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟದ ಇನ್ನೆರಡು ಶಾಸಕರು ಭಾನುವಾರ ರಾಜೀನಾಮೆ ನೀಡಿದರು. ಡಿಎಂಕೆ ಶಾಸಕ ವೆಂಕಟೇಶನ್ ಮತ್ತು ಕಾಂಗ್ರೆಸ್ ಶಾಸಕ ಕೆ. ಲಕ್ಷ್ಮೀನಾರಾಯಣನ್ ಅವರ ರಾಜೀನಾಮೆಯೊಂದಿಗೆ, ಆಡಳಿತಾರೂಢ ಮೈತ್ರಿಕೂಟದ ಬಲ ಈಗ 12 ಕ್ಕೆ ಇಳಿಸಲಾಗಿದೆ. 33 ಸದಸ್ಯರ ವಿಧಾನಸಭೆಯಲ್ಲಿ ಪ್ರತಿಪಕ್ಷಗಳು 14 … Continued

ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಸ್ಥಾನದಿಂದ ಕಿರಣ ಬೇಡಿ ವಜಾ

ಅಧ್ಯಕ್ಷ ರಾಮ್ ನಾಥ್ ಕೋವಿಂದ್ ಅವರು ಕಿರಣ್ ಬೇಡಿಯನ್ನು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ (ಎಲ್-ಜಿ) ಸ್ಥಾನದಿಂದ ವಜಾಗೊಳಿಸಿದ್ದಾರೆ ಎಂದು ರಾಷ್ಟ್ರಪತಿ ಭವನ ಮೂಲಗಳು ಮಂಗಳವಾರ ತಿಳಿಸಿದೆ. ನಿಯಮಿತ ವ್ಯವಸ್ಥೆ ಮಾಡುವ ವರೆಗೆ ತೆಲಂಗಾಣ ರಾಜ್ಯಪಾಲರಾದ ತಮಿಳುಸಾಯಿ ಸೌಂದರಾಜನ್‌ಗೆ ಕೇಂದ್ರ ಪ್ರದೇಶದ ಹೆಚ್ಚುವರಿ ಉಸ್ತುವಾರಿ ನೀಡಲಾಗಿದೆ.ಡಾ. ಕಿರಣ್ ಬೇಡಿ ಪುದುಚೇರಿಯ ಲೆಫ್ಟಿನೆಂಟ್-ಗವರ್ನರ್ ಹುದ್ದೆಯನ್ನು ಸ್ಥಗಿತಗೊಳಿಸಿ ಅಧ್ಯಕ್ಷರು ನಿರ್ದೇಶಿಸಿದ್ದಾರೆ … Continued

ಪುದುಚೆರಿಯಲ್ಲಿ ಅಲ್ಪ ಮತಕ್ಕೆ ಕುಸಿದ ಕಾಂಗ್ರೆಸ್‌ ಸರಕಾರ

ನವದೆಹಲಿ: ಚುನಾವಣೆಗೆ ಮೂರು ತಿಂಗಳು ಬಾಕಿ ಇರುವಾಗ ಇಬ್ಬರು ಕಾಂಗ್ರೆಸ್‌ ಶಾಸಕರು ರಾಜಿನಾಮೆ ನೀಡಿರುವುದರಿಂದ ಪುದುಚೆರಿಯಲ್ಲಿ ಕಾಂಗ್ರೆಸ್‌ ನೇತೃತ್ವದ ಸರಕಾರ ಅಲ್ಪಮತಕ್ಕೆ ಕುಸಿದಿದೆ. ಇಬ್ಬರು ಶಾಸಕರ ರಾಜಿನಾಮೆಯೊಂದಿಗೆ ಆಡಳಿತ ಹಾಗೂ ವಿಪಕ್ಷ ಸದಸ್ಯರ ಸಂಖ್ಯೆ ಸಮಬಲವಾಗಿದೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪುದುಚೇರಿ ಭೇಟಿಗೂ ಮುನ್ನ ಇಬ್ಬರು ಶಾಸಕರು ರಾಜೀನಾಮೆ ನಿಡಿರುವುದರಿಂದ ಕಾಂಗ್ರೆಸ್‌ಗೆ ಭಾರೀ ಆಘಾತವಾಗಿದೆ. … Continued