ದಿತ್ವಾ ಚಂಡಮಾರುತ | ಶ್ರೀಲಂಕಾದಲ್ಲಿ 123 ಸಾವು ; ತಮಿಳುನಾಡಿನಲ್ಲಿ 54 ವಿಮಾನಗಳ ಸಂಚಾರ ರದ್ದು, ಶಾಲೆಗಳು ಬಂದ್

ನವದೆಹಲಿ:  ದಿತ್ವಾ (Ditwah) ಚಂಡಮಾರುತವು ಉತ್ತರ ತಮಿಳುನಾಡು ಮತ್ತು ಪುದುಚೇರಿ ಕರಾವಳಿಯ ಕಡೆಗೆ ಮುನ್ನುಗ್ಗುತ್ತಿರುವ ಹಿನ್ನೆಲೆಯಲ್ಲಿ, ಅಧಿಕಾರಿಗಳು ಸಿದ್ಧತೆಗಳನ್ನು ಹೆಚ್ಚಿಸಿದ್ದಾರೆ. ಬೃಹತ್ ಪ್ರಮಾಣದ ಪರಿಹಾರ ಕಾರ್ಯಾಚರಣೆಗಳಿಂದ ಹಿಡಿದು, ವಿಮಾನಗಳ ರದ್ದತಿ ಹಾಗೂ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆಗಳವರೆಗೆ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಪ್ರಸ್ತುತ ಶ್ರೀಲಂಕಾದ ಕರಾವಳಿ ಮತ್ತು ಅಂಡಮಾನ್‌ನ ನೈಋತ್ಯ ಬಂಗಾಳಕೊಲ್ಲಿಯ ಮೂಲಕ ಸಾಗುತ್ತಿರುವ ಈ ಚಂಡಮಾರುತವು ತೀವ್ರಗೊಳ್ಳುತ್ತಲೇ … Continued

ದಿತ್ವಾ ಚಂಡಮಾರುತ ; ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮೂರ್ನಾಲ್ಕು ದಿನ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ

ಬೆಂಗಳೂರು : ಶ್ರೀಲಂಕಾದ ಕರಾವಳಿ ಮತ್ತು ಹೊಂದಿಕೊಂಡಿರುವ ನೈಋತ್ಯ ಬಂಗಾಳಕೊಲ್ಲಿಯ ಮೇಲಿರುವ ‘ದಿತ್ವಾ’ (Ditwah) ಚಂಡಮಾರುತವು ಈ ಚಂಡಮಾರುತವು ನವೆಂಬರ್ 30 ರ ಮುಂಜಾನೆ ವೇಳೆಗೆ ಉತ್ತರ ತಮಿಳುನಾಡು, ಪುದುಚೇರಿ ಮತ್ತು  ದಕ್ಷಿಣ ಆಂಧ್ರಪ್ರದೇಶ ಕರಾವಳಿಯ ಬಳಿಯ ನೈಋತ್ಯ ಬಂಗಾಳಕೊಲ್ಲಿಯನ್ನು ತಲುಪುವ ನಿರೀಕ್ಷೆಯಿದೆ. ಉತ್ತರ ಒಳನಾಡಿನಲ್ಲಿ ನವೆಂಬರ್ 30 ರಂದು ಗುಡುಗು ಸಹಿತ ಮಳೆಯಾಗಲಿದೆ ಹಾಗೂ … Continued

‘ದಿತ್ವಾ’ ಚಂಡಮಾರುತದ ಆರ್ಭಟಕ್ಕೆ ಶ್ರೀಲಂಕಾದಲ್ಲಿ 56 ಸಾವು : ವ್ಯಾಪಕ ಪ್ರವಾಹ, ಕೊಲಂಬೊದಲ್ಲಿ ಜನಜೀವನ ಅಸ್ತವ್ಯಸ್ತ

 ಕೊಲಂಬೊ: ‘ದಿತ್ವಾ’ ಚಂಡಮಾರುತವು ಶುಕ್ರವಾರ ಶ್ರೀಲಂಕಾದಾದ್ಯಂತ ಉತ್ತರಕ್ಕೆ ಸಾಗಿದ್ದು, ವ್ಯಾಪಕ ಪ್ರವಾಹಕ್ಕೆ ಕಾರಣವಾಗಿದೆ. ಚಂಡುಮಾರುತದಿಂದ ಈವರೆಗೆ 56 ಜನರು ಸಾವಿಗೀಡಾಗಿದ್ದಾರೆ ಮತ್ತು 23 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಮುಂದಿನ 12 ಗಂಟೆಗಳಲ್ಲಿ ಭಾರೀ ಮಳೆ ಮತ್ತು ಬಿರುಗಾಳಿಯಿಂದಾಗಿ ಮತ್ತಷ್ಟು ಪ್ರವಾಹ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಶ್ರೀಲಂಕಾದ ಪೂರ್ವ ಮತ್ತು ಮಧ್ಯದ ಪ್ರದೇಶಗಳಲ್ಲಿ … Continued

ಸೆನ್ಯಾರ್’ ನಂತರ ದಕ್ಷಿಣ ಭಾರತಕ್ಕೆ ಈಗ ಮತ್ತೊಂದು ಚಂಡಮಾರುತದ ಭೀತಿ….

ನವದೆಹಲಿ : ಚಂಡಮಾರುತ ‘ಸೆನ್ಯಾರ್’ ದುರ್ಬಲಗೊಳ್ಳುತ್ತಿದ್ದರೂ, ಬಂಗಾಳಕೊಲ್ಲಿಯಲ್ಲಿ ಹೊಸ ಚಂಡಮಾರುತವೊಂದು ಸೃಷ್ಟಿಯಾಗುತ್ತಿದ್ದು, ತಮಿಳುನಾಡು ಮತ್ತು ಆಂಧ್ರಪ್ರದೇಶದ ಕರಾವಳಿ ಜಿಲ್ಲೆಗಳಿಗೆ ಎಚ್ಚರಿಕೆಯಿಂದಿರಲು ಭಾರತೀಯ ಹವಾಮಾನ ಇಲಾಖೆ (IMD) ಸೂಚನೆ ನೀಡಿದೆ. ಗುರುವಾರ ಬಿಡುಗಡೆ ಮಾಡಿದ ತನ್ನ ಬುಲೆಟಿನ್‌ನಲ್ಲಿ, ಹವಾಮಾನ ಇಲಾಖೆಯು ನೈಋತ್ಯ ಬಂಗಾಳಕೊಲ್ಲಿ ಮತ್ತು ಶ್ರೀಲಂಕಾ ಕರಾವಳಿಯನ್ನು ಆವರಿಸಿದ್ದ ವಾಯುಭಾರ ಕುಸಿತವು ತೀವ್ರ ವಾಯುಭಾರ ಕುಸಿತವಾಗಿ ಮಾರ್ಪಟ್ಟಿದೆ … Continued