ಕೋಲಾರ: ಟೊಮೆಟೊ ಬೆಳೆದು 45 ದಿನಗಳಲ್ಲಿ 4 ಕೋಟಿ ರೂ. ಆದಾಯ ಪಡೆದ ರೈತ….!

ಕೋಲಾರ: ಟೊಮೆಟೊ ಬೆಲೆ ಗಗನಕ್ಕೇರುತ್ತಿರುವ ನಡುವೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ರೈತ ದಂಪತಿ 40,000 ಬಾಕ್ಸ್ ಟೊಮೆಟೊ ಮಾರಾಟ ಮಾಡಿ 45 ದಿನಗಳ ಅವಧಿಯಲ್ಲಿ 3 ಕೋಟಿ ರೂ.ಲಾಭಗಳಿಸಿದ್ದಾರೆ. ಈತ ತನ್ನ ಬೆಳೆಯನ್ನು ಕರ್ನಾಟಕದ ಕೋಲಾರಕ್ಕೆ ತಂದು ಮಾರಾಟ ಮಾಡಿ ಭರ್ಜರಿ ಲಾಭ ಗಳಿಸಿದ್ದಾನೆ. 22 ಎಕರೆ ಕೃಷಿ ಭೂಮಿ ಹೊಂದಿರುವ ಟೊಮೆಟೊ ಕೃಷಿಕ ಚಂದ್ರಮೌಳಿ … Continued

ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ದರ್ಶನ ಟಿಕೆಟ್​​ ಹಗರಣ: ಆಂಧ್ರ ಎಂಎಲ್ಸಿ ಶೇಕ್ ಸಾಬ್ಜಿ ವಿರುದ್ಧ ವಂಚನೆ ಪ್ರಕರಣ ದಾಖಲು

ತಿರುಮಲ: ತಿರುಮಲ ಪೊಲೀಸರು ಶುಕ್ರವಾರ ಟಿಟಿಡಿ ವಿಜಿಲೆನ್ಸ್ ಇಲಾಖೆಯ ದೂರಿನ ಆಧಾರದ ಮೇಲೆ ಆಂಧ್ರ ಪ್ರದೇಶದ ವಿಧಾನ ಪರಿಷತ್‌ ಸದಸ್ಯ (ಶಿಕ್ಷಕರ ಕ್ಷೇತ್ರ) ಶೇಕ್ ಸಾಬ್ಜಿ ಮತ್ತು ಅವರ ಪಿಎ ವೇಣುಗೋಪಾಲ ಮತ್ತು ದೇಗರಾಜು ಎಂಬವರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಶಾಸಕ ಸಾಬಿ ಅವರು ಇತ್ತೀಚೆಗೆ ಶಿಕ್ಷಕರ ಕ್ಷೇತ್ರದಿಂದ (ಏಲೂರು) ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. … Continued

ಚಂದ್ರಬಾಬು ನಾಯ್ಡು ರೋಡ್‌ ಶೋ ವೇಳೆ ನೂಕಾಟದಲ್ಲಿ ಕನಿಷ್ಠ 8 ಮಂದಿ ಸಾವು, ಹಲವರಿಗೆ ಗಾಯ

ನೆಲ್ಲೂರು: ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ರೋಡ್‌ಶೋ ವೇಳೆ ಓರ್ವ ಮಹಿಳೆ ಸೇರಿ ಎಂಟು ಜನರು ಕಾಲ್ತುಳಿತದಲ್ಲಿ ಸಾವಿಗೀಡಾಗಿದ್ದಾರೆ. ಈಗ ಆಂಧ್ರಪ್ರದೇಶ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಚಂದ್ರಬಾಬು ನಾಯ್ಡು ಅವರು ತಮ್ಮ “ಇದೇಮಿ ಖರ್ಮ ಮನ ರಾಷ್ಟ್ರಿಕಿ ಅಭಿಯಾನದ ಭಾಗವಾಗಿ ಕಂದುಕೂರು ಪಟ್ಟಣದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡುವ … Continued

ಕಾಲೇಜು ಮೇಟ್‌ಗಳು ಸಹ ವಿದ್ಯಾರ್ಥಿಗೆ ಥಳಿಸಿದರು…ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟರು: ವೀಡಿಯೊ ವೈರಲ್‌, ನಾಲ್ವರ ಬಂಧನ

ವಿಜಯವಾಡ: ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂನಲ್ಲಿರುವ ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಮತ್ತೊಬ್ಬ ವಿದ್ಯಾರ್ಥಿಯನ್ನು ಹಾಸ್ಟೆಲ್ ಕೊಠಡಿಯೊಳಗೆ ಕರುಣೆಯಿಲ್ಲದೆ ಥಳಿಸಿದ ವಿಡಿಯೋ ವೈರಲ್ ಆಗಿದೆ. ಆತ ತನ್ನನ್ನು ಬಿಡುವಂತೆ ಬೇಡಿಕೊಂಡರೂ ಹಲ್ಲೆಕೋರರು ಆತನನ್ನು ಪೈಪ್‌ ಹಾಗೂ ದೊಣ್ಣೆಯಂತಹವುಗಳಿಂದ ಹೊಡೆಯುತ್ತಲೇ ಇರುವುದು ವೈರಲ್‌ ವೀಡಿಯೊದಲ್ಲಿ ಕಂಡುಬರುತ್ತದೆ. ಆ ವಿದ್ಯಾರ್ಥಿ ಕ್ಷಮೆ ಯಾಚಿಸುತ್ತಿದ್ದರೂ ಬಿಡದೆ ಹೊಡೆದಿರುವುದನ್ನು … Continued

ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಭೀತಿ..: ಕರ್ನಾಟಕದಲ್ಲಿ ನವೆಂಬರ್ 26ರಿಂದ ಮತ್ತೆ ಭಾರೀ ಮಳೆ ಮುನ್ಸೂಚನೆ..!

ಬೆಂಗಳೂರು: ಈಗ ಸುರಿಯುತ್ತಿರುವ ಮಳೆಗೆ ಈಗಾಗಲೇ ರಾಜ್ಯ ತತ್ತರಿಸಿದೆ. ಈಗ ರಾಜ್ಯಕ್ಕೆ ಈಗ ಮತ್ತೊಂದು ಶಾಕ್‌ ಎದುರಾಗಿದೆ. ನವೆಂಬರ್ 26ಕ್ಕೆ ಮತ್ತೆ ವರುಣನ ಆರ್ಭಟ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆಯಿಂದ ಮುನ್ಸೂಚನೆ ನೀಡಿದೆ. ನವೆಂಬರ್ 26ರಿಂದ ಡಿಸೆಂಬರ್ 15ರ ವರೆಗೆ ಮತ್ತೆ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದ್ದು, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಚಂಡಮಾರುತವಾಗಿ ಮಾರ್ಪಡುವ ಸಾಧ್ಯತೆ … Continued

ಆಂಧ್ರದಲ್ಲಿ ಆನಂದಯ್ಯ ಗಿಡಮೂಲಿಕೆ ಕೊರೊನಾ ಔಷಧಿ ವಿತರಣೆ ಆರಂಭ: ಮುಗಿಬೀಳುತ್ತಿರುವ ಜನ

ನೆಲ್ಲೂರು: ಕೊರೊನಾ ವಿರುದ್ಧ ಆನಂದಯ್ಯ ಅವರ ಗಿಡಮೂಲಿಕೆಗಳ ಔಷಧದ ಬಳಕೆಗೆ ಆಂಧ್ರ ಸರ್ಕಾರ ಅನುಮತಿ ನೀಡುತ್ತಿದಂತೆ ಔಷಧ ವಿತರಣೆ ಶುರುವಾಗಿದೆ. ಜಿಲ್ಲೆಯ ಗೊಲಗಮುಡಿಯಲ್ಲಿ ಆನಂದಯ್ಯ ಔಷಧ ವಿತರಣೆ ಇಲ್ಲಿನ ವೆಂಕಯ್ಯ ಸ್ವಾಮಿ ಆಶ್ರಮದಲ್ಲಿ ಶುರುವಾಗಿದ್ದು ಔಷಧಕ್ಕಾಗಿ ಜನ ಮುಗಿಬಿದ್ದಿದ್ದಾರೆ. ಚಿತ್ತೂರು ಜಿಲ್ಲೆಯ ಚಂದ್ರಗಿರಿ ಕ್ಷೇತ್ರದ ಜನಕ್ಕೆ ಮೊದಲು ಔಷಧ ಲಭ್ಯವಾಗಲಿದೆ. ಅಧಿಕಾರಿಗಳಿಂದ ಅನುಮತಿ ಪಡೆದ ಕೂಡಲೇ … Continued

ನಾಳೆ ಭಾರತ್‌ ಬಂದ್‌: ಹರ್ಯಾಣಾ, ಪಂಜಾಬ್‌, ಪಶ್ಚಿಮ ಉತ್ತರ ಪ್ರದೇಶದಲ್ಲಿ ಹೆಚ್ಚು ಪರಿಣಾಮ

ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿರೈತ ಸಂಘಗಳ ಒಕ್ಕೂಟವಾದ ಸಂಯುಕ್ತಾ ಕಿಸಾನ್ ಮೋರ್ಚಾ (ಎಸ್‌ಕೆಎಂ) ಮಾರ್ಚ್ 26, ಶುಕ್ರವಾರ ಭಾರತ್ ಬಂದ್‌ಗೆ ಕರೆ ನೀಡಿದ್ದು, ಶುಕ್ರವಾರ ಬೆಳಿಗ್ಗೆ 6 ರಿಂದ ಸಂಜೆ 6 ರ ವರೆಗೆ ಬಂದ್‌ ನಡೆಯಲಿದೆ ಎಂದು ತಿಳಿಸಿದೆ. ಭಾರತ್ ಬಂಧವನ್ನು ಸಂಪೂರ್ಣ ಯಶಸ್ವಿಗೊಳಿಸಬೇಕೆಂದು ಸಂಯುಕ್ತಾ ಕಿಸಾನ್ ಮೋರ್ಚಾ (ಎಸ್‌ಕೆಎಂ) ಬುಧವಾರ ದೇಶದ … Continued

ಮನೆ ಕಟ್ಟಲು ಕೂಡಿಟ್ಟಿದ್ದ ೫ ಲಕ್ಷ ರೂ. ಗೆದ್ದಲು ಪಾಲು

ಹೈದರಾಬಾದ್‌: ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿನ ಉದ್ಯಮಿಯೊಬ್ಬರು ಮನೆಕಟ್ಟಲು ಟ್ರಂಕ್‌ನಲ್ಲಿ ಕೂಡಿಟ್ಟಿದ್ದ ಸುಮಾರು ಐದು ಲಕ್ಷ ನಗದು ಹಣ ಗೆದ್ದಲು ತಿಂದು ಹರಿದು ಚಿಂದಿಯಾಗಿ ಬಳಕೆಗೆ ಬಾರದಂತಾಗಿದೆ. ಹಂದಿ ವ್ಯಾಪಾರಿಯಾಗಿರುವ ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಮೈಲಾವರಮ್‌ ಗ್ರಾಮದ ನಿವಾಸಿಯಾಗಿರುವ ಬಿಜಿಲ್‌ ಜಮಾಲಯ್ಯ ಎಂಬಾತ ತಾನು ದುಡಿದ ಹಣವನ್ನು ಬ್ಯಾಂಕ್‌ನಲ್ಲಿ ಇಡುವ ಬದಲು, ಕಬ್ಬಿಣದ ಟ್ರಂಕ್‌ನಲ್ಲಿ … Continued