ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಭೀತಿ..: ಕರ್ನಾಟಕದಲ್ಲಿ ನವೆಂಬರ್ 26ರಿಂದ ಮತ್ತೆ ಭಾರೀ ಮಳೆ ಮುನ್ಸೂಚನೆ..!

ಬೆಂಗಳೂರು: ಈಗ ಸುರಿಯುತ್ತಿರುವ ಮಳೆಗೆ ಈಗಾಗಲೇ ರಾಜ್ಯ ತತ್ತರಿಸಿದೆ. ಈಗ ರಾಜ್ಯಕ್ಕೆ ಈಗ ಮತ್ತೊಂದು ಶಾಕ್‌ ಎದುರಾಗಿದೆ. ನವೆಂಬರ್ 26ಕ್ಕೆ ಮತ್ತೆ ವರುಣನ ಆರ್ಭಟ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆಯಿಂದ ಮುನ್ಸೂಚನೆ ನೀಡಿದೆ. ನವೆಂಬರ್ 26ರಿಂದ ಡಿಸೆಂಬರ್ 15ರ ವರೆಗೆ ಮತ್ತೆ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದ್ದು, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಚಂಡಮಾರುತವಾಗಿ ಮಾರ್ಪಡುವ ಸಾಧ್ಯತೆ … Continued

12ನೇ ತರಗತಿ ವಿದ್ಯಾರ್ಥಿಗೆ ಬೆತ್ತದಿಂದ ಥಳಿಸಿ, ಒದ್ದ ಶಿಕ್ಷಕನ ಬಂಧನ

ಚೆನ್ನೈ: 12ನೇ ತರಗತಿ ವಿದ್ಯಾರ್ಥಿಗೆ ಥಳಿಸಿದ ಹಾಗೂ ಒದ್ದ ಇಲ್ಲಿನ ಕಡಲೂರು ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಶಿಕ್ಷಕನನ್ನು ಬಂಧಿಸಲಾಗಿದೆ. ಈ ಶಿಕ್ಷಕ ವಿದ್ಯಾರ್ಥಿಗೆ ಥಳಿಸಿದ ವಿಡಿಯೋ ಸೋಷಿಯಲ್​ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್​ ಆದ ಬೆನ್ನಲ್ಲೇ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಬಂಧಿತ ಶಿಕ್ಷಕನನ್ನು ಎಂ.ಸುಬ್ರಹ್ಮಣಿಯನ್​ (56) ಎಂದು ಗುರುತಿಸಲಾಗಿದೆ. ಚಿದಂಬರಂನಲ್ಲಿರುವ ನಂದನಾರ್​ … Continued

ಅವಳು ಭ್ರಷ್ಟಳು,ಮತ ಹಾಕಬೇಡಿ ಎಂದು ಮಗಳ ವಿರುದ್ಧವೇ ಮತದಾರರಿಗೆ ಮನವಿ ಮಾಡಿದ ಮಾಜಿ ಸಚಿವರ ಪತ್ನಿ..!

ಚೆನ್ನೈ: ಡಿಎಂಕೆ ಮಾಜಿ ಸಚಿವ ಅಲ್ಲಾಡಿ ಅರುಣಾ ಅವರ ವಿಧವೆ ಮತ್ತು ಅಲಂಗುಲಂ ವಿಧಾನಸಭಾ ಕ್ಷೇತ್ರದ ಡಿಎಂಕೆ ಅಭ್ಯರ್ಥಿ ಪೂಂಗೋಥೈ ಅವರ ತಾಯಿ ಕಮಲಾ ಆಲಾಡಿ ಅರುಣಾ ಅವರು ತಮ್ಮ ಮಗಳು “ಹೆಚ್ಚು ಭ್ರಷ್ಟರಾಗಿದ್ದರಿಂದ” ಮತ ಚಲಾಯಿಸಬಾರದು ಎಂದು ಮತದಾರರಿಗೆ ವಿನಂತಿ ಮಾಡಿದ್ದಾರೆ…! ಶನಿವಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ ತುಣುಕಿನಲ್ಲಿ, ಕಮಲಾ ಅವರು … Continued

ತಮಿಳುನಾಡಿನ ೮೦ ವರ್ಷದ ಇಡ್ಲಿ ಪಾತಿ ಅಮ್ಮನ ನೆರವಿಗೆ ಬಂದ ಉದ್ಯಮಿ ಆನಂದ್ ಮಹೀಂದ್ರಾ.. ಏನು ನೆರವು.?

ಕೊಯಮತ್ತೂರು: ನಗರದ ಹೊರವಲಯದಲ್ಲಿರುವ ವಡಿವೇಲಂಪಾಲಯಂನಲ್ಲಿ ಪ್ರತಿ ಇಡ್ಲಿಗೆ 1 ರೂ.ನಂತೆ ಮಾರಾಟ ಮಾಡುವ ‘ಇಡ್ಲಿ ಪಾತಿ’ ಎಂದು ಜನಪ್ರಿಯವಾಗಿರುವ ಕಮಲಾಥಲ್‌ಗೆ ಆಟೋಮೊಬೈಲ್ ಪ್ರಮುಖ ಮಹೀಂದ್ರಾ ಗ್ರೂಪ್ ಕಂಪೆನಿ ಕ್ಯಾಂಟೀನ್‌ನೊಂದಿಗೆ ಮನೆ ನಿರ್ಮಿಸಿಕೊಡಲಿದೆ. ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಶುಕ್ರವಾರ ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಸುದ್ದಿ ಹಂಚಿಕೊಂಡಿದ್ದಾರೆ. “ಯಾರೊಬ್ಬರ ಸ್ಫೂರ್ತಿದಾಯಕ ಕಥೆಯಲ್ಲಿ ಒಬ್ಬರು ಸಣ್ಣ ಪಾತ್ರ … Continued

ಏಪ್ರಿಲ್ 4ರ ವರೆಗೆ ತಮಿಳುನಾಡಿನ 27 ಜಿಲ್ಲೆಗಳಲ್ಲಿ ಬಿಸಿ ಗಾಳಿ..ಚೆನ್ನೈಗೆ ಅತಿ ಹೆಚ್ಚು ತಾಪದ ಭೀತಿ..!

ಚೆನ್ನೈ: ಚೆನ್ನೈ ಮತ್ತು ಅದರ ನೆರೆಹೊರೆ ಸೇರಿದಂತೆ ತಮಿಳುನಾಡಿನ ಒಟ್ಟು 27 ಜಿಲ್ಲೆಗಳು ಬಿಸಿಗಾಳಿ(ಶಾಖದ ಅಲೆ)ಯಿಂದ ಬಾಧಿತವಾಗಿವೆ. ಹೀಗಾಗಿ ಇಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 4-6 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಇಲ್ಲಿನ ಪ್ರಾದೇಶಿಕ ಹವಾಮಾನ ಕೇಂದ್ರ ಶುಕ್ರವಾರ ಪ್ರಕಟಿಸಿದೆ. ಏಪ್ರಿಲ್ ತಿಂಗಳಲ್ಲಿ ಚೆನ್ನೈನ ಸರಾಸರಿ ತಾಪಮಾನ 34.5 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಆದರೆ, … Continued

ತಮಿಳುನಾಡು ಚುನಾವಣೆ: ಪ್ರಚಾರಕ್ಕೆ ಎಐಎಡಿಎಂಕೆ- ಡಿಎಂಕೆಯಿಂದ 50 ಸಾವಿರಕ್ಕೂ ಹೆಚ್ಚು ವಾಟ್ಸಾಪ್‌ ಗುಂಪುಗಳ ರಚನೆ..!

ಸಾಂಕ್ರಾಮಿಕ-ಸಮಯದ ಚುನಾವಣೆಯು ತಂತ್ರಜ್ಞಾನದ ಮೇಲೆ ಹೆಚ್ಚು ಅವಲಂಬಿತವಾಗಿದೆ. ಏಪ್ರಿಲ್‌ ೬ರಂದು ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಅಲ್ಲಿನ ಎರಡು ಪ್ರಮುಖ ದ್ರಾವಿಡ ರಂಗಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ತಮ್ಮ ಬಹಳಷ್ಟು ಚುನಾವಣೆ ಸೆಣಸಿಗೆ ಅಂತರ್ಜಾಲಕ್ಕೆ ಪರಿವರ್ತನೆಯಾಗಿವೆ. ಆನ್‌ಲೈನ್‌ನಲ್ಲಿ ಒಂದು ಅಪ್ಲಿಕೇಶನ್‌ನಲ್ಲಿ ದೊಡ್ಡ ಚುನಾವಣೆ ಯುದ್ಧವೇ ನಡೆಯುತ್ತಿದೆ. ವಾಟ್ಸಾಪ್, ಪಕ್ಷಗಳು ಹೇಳುವ ಪ್ರಕಾರ, ವಾಸ್ತವಿಕ ‘ವಿಂಗ್‌ಮ್ಯಾನ್’ ಆಗಿದ್ದು, … Continued

ತಮಿಳುನಾಡು ಚುನಾವಣೆ; ಮತಯಾಚನೆ ವೇಳೆ ಮಹಿಳೆಯೊಬ್ಬರ ಬಟ್ಟೆ ಒಗೆದ ಎಐಎಡಿಎಂಕೆ ಅಭ್ಯರ್ಥಿ…!

ನಾಗಪಟ್ಟಣಂ: ನಾಗಪಟ್ಟಣಂ ವಿಧಾನಸಭಾ ಕ್ಷೇತ್ರದ ಎಐಎಡಿಎಂಕೆ ಅಭ್ಯರ್ಥಿ ಸೋಮವಾರ ಮಹಿಳೆಯೊಬ್ಬರ ಬಟ್ಟೆಗಳನ್ನು ಸಾರ್ವಜನಿಕವಾಗಿ ತೊಳೆದು ಮತಯಾಚನೆ ಮಾಡಿದ್ದಾರೆ..!! ನಾಗಪಟ್ಟಣಂ ವಿಧಾನಸಭಾ ಕ್ಷೇತ್ರದ ಎಐಎಡಿಎಂಕೆ ಅಭ್ಯರ್ಥಿ ತಂಗಾ ಕತಿರಾವನ್ ಎಂದು ಕರೆಯಲ್ಪಡುವ ಟಿ. ಕತಿರಾವನ್ ಅವರು ಸೋಮವಾರ ನಾಗೋರ್ ಬಳಿ ಮತ ಚಲಾಯಿಸಲು ಹೋದಾಗ ಸಾಕಷ್ಟು ಸಂಚಲನ ಮೂಡಿಸಿದರು. ಅವರು ಮತ್ತು ಪಕ್ಷದ ಕಾರ್ಯಕರ್ತರು ವಂಡಿಪೆಟ್ಟೈನಲ್ಲಿ ಮನೆ … Continued

ತಮಿಳುನಾಡು: ಕೊರೊನಾ ಹೆಚ್ಚಳ, 9, 10, 11ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಗಳು ಸ್ಥಗಿತ

ಚೆನ್ನೈ: ತಮಿಳುನಾಡಿನಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ, ಮಾರ್ಚ್ 22ರಿಂದ 9, 10 ಮತ್ತು 11 ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲೆಗಳನ್ನು ಮುಚ್ಚುವಂತೆ ಸರ್ಕಾರ ಆದೇಶಿಸಿದೆ. ಶಾಲೆಗಳು 12 ನೇ ತರಗತಿ ವಿದ್ಯಾರ್ಥಿಗಳಿಗೆ ಮುಕ್ತವಾಗಿರುತ್ತವೆ. ಕೋವಿಡ್ ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ರಾಜ್ಯ ಮಂಡಳಿ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. … Continued

ತಮಿಳುನಾಡು ಚುನಾವಣೆ: ಆಸ್ತಿ ವಿವರ ಪ್ರಕಟಿಸಿದ ನಟಿ ಖುಷ್ಬೂ

ಚೆನ್ನೈ: ತಮಿಳುನಾಡಿನ ಥೌಸಂಡ್ ಲೈಟ್ಸ್ ವಿಧಾನಸಭಾ ಕ್ಷೇತ್ರದಿಂದ ನಟಿ ಹಾಗೂ ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭ ತಮ್ಮ ಆಸ್ತಿ ವಿವರ ನೀಡಿದ್ದು, ತಮ್ಮ ಬಳಿ ಒಟ್ಟು 22.55 ಕೋಟಿ ರೂ ಆಸ್ತಿ ಇರುವುದಾಗಿ ಘೋಷಣೆ ಮಾಡಿದ್ದಾರೆ. ಖುಷ್ಬೂ ತಮ್ಮ ಬಳಿ 17.99 ಕೋಟಿ ರೂ ಮೌಲ್ಯದ ಸ್ಥಿರಾಸ್ತಿ ಇದ್ದು, … Continued

ಚುನಾವಣೆ: ಸಾರ್ವಜನಿಕ ಅಭಿಪ್ರಾಯ ರೂಪಿಸಲು ಬಂಗಾಳ, ತಮಿಳುನಾಡು, ಕೇರಳದಲ್ಲಿ ಬೌದ್ಧಿಕ ಮುಖಗಳಿಗೆ ಬಿಜೆಪಿ ಮಣೆ

  ನಟರು, ಬುದ್ಧಿಜೀವಿಗಳು, ನಿವೃತ್ತ ಪೊಲೀಸ್ ಅಧಿಕಾರಿಗಳು – ಹೀಗೆ ಸಾಮಾಜಿ ಸ್ತರದಲ್ಲಿ ಗುರುತಿಸಲ್ಪಟ್ಟವರನ್ನು ಪಶ್ಚಿಮ ಬಂಗಾಳ, ಕೇರಳ ಮತ್ತು ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕಣಕ್ಕಿಳಿಸಿದೆ. ತೃಣ ಮೂಲ ಕಾಂಗ್ರೆಸ್‌ ಜೊತೆ ತೀವ್ರ ಸ್ಪರ್ಧೆ ಇರುವ ಬಂಗಾಳ ಚುನಾವಣೆಯಲ್ಲಿ ಸಾಧನೆಗೈದ ಸಾರ್ವಜನಿಕ ವ್ಯಕ್ತಿಗಳನ್ನು ಬಿಜೆಪಿ ಹೆಚ್ಚು ಕಣಕ್ಕಿಳಿಸಿದೆ.ತಮಿಳುನಾಡು ಮತ್ತು ಕೇರಳದಲ್ಲಿ ಪಕ್ಷವನ್ನು ವಿಸ್ತರಿಸಲು ಇದೇ … Continued