ವೀಡಿಯೊಗಳು..| ಫೆಂಗಲ್ ಚಂಡಮಾರುತಕ್ಕೆ ತಿರುವಣ್ಣಾಮಲೈನಲ್ಲಿ ಭೂ ಕುಸಿತ ; ಮನೆಗಳ ಮಧ್ಯೆಯೇ ಕೆಸರಿನ ಪ್ರವಾಹ: ಸಿಕ್ಕಿದ್ದನ್ನು ಕೊಚ್ಚೊಯ್ದ ಮಳೆ ನೀರು
ಚೆನ್ನೈ: ತಮಿಳುನಾಡಿನ ತಿರುವಣ್ಣಾಮಲೈ ಪಟ್ಟಣದಲ್ಲಿ ಫೆಂಗಲ್ ಚಂಡಮಾರುತದ ನಂತರ ಮಣ್ಣು ಕುಸಿದಿರುವ ಸಿಸಿಟಿವಿ ದೃಶ್ಯಾವಳಿಗಳು ಹೊರಬಂದಿವೆ. ವೀಡಿಯೊದಲ್ಲಿ ಕೆಸರು, ನೀರು ಮತ್ತು ಅವಶೇಷಗಳ ಮಿಶ್ರಣವು ಮೆಟ್ಟಿಲುಗಳ ಕೆಳಗೆ ಹರಿಯುವುದು ಮತ್ತು ಜನರ ಮನೆಗಳಿಗೆ ಪ್ರವೇಶಿಸುವುದು ಕಂಡುಬಂದಿದೆ. ಕೆಸರು ನೀರಿನ ಪ್ರವಾಹ ದುರ್ಬಲಗೊಳ್ಳುವ ವರೆಗೂ ಅದು ತನ್ನ ದಾರಿಯಲ್ಲಿ ಬರುವ ಪ್ರತಿಯೊಂದು ವಸ್ತುವನ್ನು ತನ್ನೊಂದಿಗೆ ಎಳೆದೊಯ್ಯುವುದನ್ನು ಕಾಣಬಹುದು. … Continued