ವಿಡಿಯೋ | ಮಧ್ಯರಾತ್ರಿ ಬಾತ್‌ರೂಮಿಗೆ ಹೋದಾಗ 7 ಅಡಿ ಉದ್ದದ ಮೊಸಳೆ ಕಂಡು ಬೆಚ್ಚಿಬಿದ್ದ ವ್ಯಕ್ತಿ…!

ಆನಂದ್ (ಗುಜರಾತ್) : ಗುಜರಾತ್‌ನ ಆನಂದ್ ಜಿಲ್ಲೆಯಲ್ಲಿ ಕುಟುಂಬವೊಂದು ತಮ್ಮ ಮನೆಯ ಸ್ನಾನಗೃಹದಲ್ಲಿ ಏಳು ಅಡಿ ಉದ್ದದ ಮೊಸಳೆಯನ್ನು ಕಂಡು ಬೆಚ್ಚಿಬಿದ್ದ ಘಟನೆ ಈ ವಾರದ ಆರಂಭದಲ್ಲಿ ನಡೆದಿದೆ. ಮನೆಯ ಮಾಲೀಕ ಬಾಲಭಾಯಿ ಚೌಹಾಣ ಅವರು ಮಧ್ಯರಾತ್ರಿ ವೇಳೆ ಮನೆಯ ಹೊರಭಾಗದಲ್ಲಿ ನಾಯಿಗಳು ನಿರಂತರವಾಗಿ ಬೊಗಳುತ್ತಿದ್ದ ಕಾರಣ ಎಚ್ಚರಗೊಂಡರು. ನಾಯಿಗಳು ಏಕೆ ಬೊಗಳುತ್ತಿವೆ ಎಂಬುದನ್ನು ಪರಿಶೀಲಿಸಲು … Continued

ತಂದೆ-ತಾಯಿ ಕೊಂದಿದ್ದ ಆನೆಯಿಂದ ಪಾರಾಗಲು 2 ನದಿ ದಾಟಿ ಬಂದಿದ್ದ ಕುಟುಂಬ; 14 ವರ್ಷದ ಬಳಿಕ ಅಲ್ಲಿಗೂ ಬಂದು ಮತ್ತಿಬ್ಬರನ್ನು ಸಾಯಿಸಿದ ಅದೇ ಆನೆ !

ಕಠ್ಮಂಡು: ತಂದೆ-ತಾಯಿಯನ್ನು ಬಲಿ ಪಡೆದಿದ್ದ ಕಾಡಾನೆಯಿಂದ ತಪ್ಪಿಸಿಕೊಳ್ಳಲು ಮನೆ ಮಾರಾಟ ಮಾಡಿ, ಅದು ಜಾಡು ಹಿಡಿದು ಬರಬಾರದೆಂದು ಎರಡು ದೊಡ್ಡ ನದಿಗಳನ್ನು ದಾಟಿ ಕುಟುಂಬ ಸಮೇತ ವಲಸೆ ಹೋಗಿ ಬೇರೆ ಪ್ರದೇಶದಲ್ಲಿ ಹೊಸ ಜೀವನ ಆರಂಭಿಸಿದ್ದ ವ್ಯಕ್ತಿಗೆ ವಿಧಿ ಮತ್ತೊಮ್ಮೆ ಕ್ರೂರ ಮುಖ ತೋರಿಸಿದೆ. ಬರೋಬ್ಬರಿ 14 ವರ್ಷಗಳ ಬಳಿಕ ಅದೇ ಆನೆ ಇವರ ಹೊಸ … Continued

ವಿಡಿಯೋ ವೈರಲ್‌ | ದಿಢೀರನೆ ಬಂದು ನಾಯಿ ಮರಿ ಹೊತ್ತೊಯ್ದು ಮರ ಏರಿ ಕುಳಿತ ದೈತ್ಯ ಮಂಗ…! ಮುಂದೇನಾಯ್ತು ಗೊತ್ತೆ…?

ಪ್ರಕೃತಿಯಲ್ಲಿ ಪ್ರಾಣಿಗಳ ನಡುವಿನ ಪ್ರೀತಿ ಮತ್ತು ವಾತ್ಸಲ್ಯಕ್ಕೆ ಕೊನೆಯಿಲ್ಲ ಎಂಬುದಕ್ಕೆ ಸಾಕ್ಷಿಯಾದ ಅಪರೂಪದ ಘಟನೆಯೊಂದು ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಇಲ್ಲಿನ ರೇವಾಲ್ಸರ್ ಪ್ರದೇಶದಲ್ಲಿ ಕೋತಿಯೊಂದು ನಾಯಿ ಮರಿಯನ್ನು ಹೊತ್ತೊಯ್ದು ಮರದ ಮೇಲೆ ಕುಳಿತು ಪ್ರೀತಿಯಿಂದ ನೋಡಿಕೊಂಡ ದೃಶ್ಯ ಸ್ಥಳೀಯರ ಮನಗೆದ್ದಿದೆ. ಸ್ಥಳೀಯರು ನೀಡಿದ … Continued

ವಿಡಿಯೋ | ಭೀಕರ ಬೇಸಿಗೆಗೆ ತತ್ತರಿಸಿದ ವನ್ಯಜೀವಿಗಳು : ನೀರಿಗಾಗಿ ಸಾರಿಗೆ ಬಸ್ಸನ್ನೇ ತಡೆದು ನಿಲ್ಲಿಸಿದ ಕೋತಿಗಳ ಹಿಂಡು !

ಮಹಾರಾಷ್ಟ್ರದ ವಿದರ್ಭ ಪ್ರದೇಶದಲ್ಲಿ ನಡೆದ ಅತ್ಯಂತ ಹೃದಯವಿದ್ರಾವಕ ಘಟನೆಯೊಂದು, ತೀವ್ರ ಬೇಸಿಗೆಯ ಶಾಖವು ವನ್ಯಜೀವಿಗಳ ಮೇಲೆ ಬೀರುತ್ತಿರುವ ಭೀಕರ ಪರಿಣಾಮವನ್ನು ಕಣ್ಣಿಗೆ ಕಟ್ಟುವಂತೆ ಮಾಡಿದೆ. ಯವತ್ಮಾಲ್ ಜಿಲ್ಲೆಯ ಪುಸಾದ್ ಬಳಿಯ ಖಂಡಾಲಾ ಘಾಟ್‌ನಲ್ಲಿ, ಬಾಯಾರಿಕೆಯಿಂದ ತತ್ತರಿಸಿದ್ದ ಮಂಗಗಳು ನೀರಿಗಾಗಿ ಚಲಿಸುತ್ತಿದ್ದ ರಾಜ್ಯ ಸಾರಿಗೆ ಬಸ್ಸನ್ನು ತಡೆದು ನಿಲ್ಲಿಸಿದ ಘಟನೆ ಪ್ರಯಾಣಿಕರನ್ನು ಭಾವುಕರನ್ನಾಗಿಸಿದೆ. ಬುಧವಾರ ಮಧ್ಯಾಹ್ನ ಸುಮಾರು … Continued

ಪ್ರವಾಸಿಗರಿದ್ದ ಜೀಪ್ ಅನ್ನೇ ಮಗುಚಲು ಯತ್ನಿಸಿದ ಖಡ್ಗಮೃಗ ! ಮಾನಸ್‌ ರಾಷ್ಟ್ರೀಯ ಉದ್ಯಾನವನದ ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಅಸ್ಸಾಂನ ಮಾನಸ್ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರವಾಸಿಗರು ಪ್ರಯಾಣಿಸುತ್ತಿದ್ದ ಸಫಾರಿ ಜೀಪ್ ಮೇಲೆ ಖಡ್ಗಮೃಗವೊಂದು ಆಕ್ರಮಣಕಾರಿಯಾಗಿ ಮುನ್ನುಗ್ಗಿ ವಾಹನವನ್ನೇ ಎತ್ತಿದ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಬಾನ್ಸ್‌ಬಾರಿ ವಲಯದಲ್ಲಿ ನಡೆದಿರುವ ಈ ರೋಮಾಂಚನಕಾರಿ ಹಾಗೂ ಭಯಾನಕ ದೃಶ್ಯದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ವ್ಯಾಪಕ ಗಮನ ಸೆಳೆದಿದೆ. ವಿಶ್ವ ಪರಂಪರೆಯ ತಾಣವಾಗಿರುವ ಮಾನಸ್ ರಾಷ್ಟ್ರೀಯ … Continued

ವಿಡಿಯೋ | ಶ್ರೀನಗರ ಗಾಲ್ಫ್ ಮೈದಾನಕ್ಕೆ ನುಗ್ಗಿ ಬಾವುಟ ಹೊತ್ತೊಯ್ದ ಕರಡಿಗಳು…!

ಶ್ರೀನಗರ : ಗಾಲ್ಫ್ ಮೈದಾನ ಪ್ರವೇಶಿಸಿದ ಎರಡು ದೈತ್ಯ ಕರಡಿಗಳು, ಕ್ರೀಡಾಂಗಣವನ್ನೇ ತಮ್ಮ ಆಟದ ಮೈದಾನವನ್ನಾಗಿ ಮಾಡಿಕೊಂಡ ವಿಚಿತ್ರ ಹಾಗೂ ತಮಾಷೆಯ ಘಟನೆಯೊಂದು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದೆ. ಶ್ರೀನಗರದ ವಿಶ್ವಪ್ರಸಿದ್ಧ ರಾಯಲ್ ಸ್ಪ್ರಿಂಗ್ಸ್ ಗಾಲ್ಫ್ ಕೋರ್ಸ್ (RSGC) ನಲ್ಲಿ ಗಾಲ್ಫ್ ಆಟಗಾರರು ಆಟದಲ್ಲಿ ಮಗ್ನರಾಗಿದ್ದಾಗ, ಅನಿರೀಕ್ಷಿತವಾಗಿ ಎರಡು ಕರಡಿಗಳು ಗಾಲ್ಫ್‌ ಮೈದಾನದೊಳಗೆ ಪ್ರವೇಶಿಸಿವೆ. ಅಲ್ಲಿ … Continued

ಒಟ್ಟಿಗೆ ಮೂರು ಹಿಮ ಚಿರತೆಗಳ ಅಪರೂಪದ ದರ್ಶನ ; ಬೆರಗುಗೊಳಿಸುವ ದೃಶ್ಯದ ವೀಡಿಯೊ ವೈರಲ್‌

ನವದೆಹಲಿ: ಹಿಮಾಲಯದ  ಸೌಂದರ್ಯದ ನಡುವೆ, ಅತ್ಯಂತ ಅಪರೂಪದ ‘ಹಿಮ ಚಿರತೆ’ಗಳ (Snow Leopards) ಕುಟುಂಬವೊಂದು ಒಟ್ಟಾಗಿ ಸಾಗುತ್ತಿರುವ ದೃಶ್ಯವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಸಾಮಾನ್ಯವಾಗಿ ಏಕಾಂಗಿಯಾಗಿ ಜೀವಿಸುವ, ಮನುಷ್ಯರ ಕಣ್ಣಿಗೆ ಅಷ್ಟು ಸುಲಭವಾಗಿ ಬೀಳದ ಈ ಪ್ರಾಣಿಗಳನ್ನು ಒಂದೇ ಚೌಕಟ್ಟಿನಲ್ಲಿ ನೋಡುವುದೇ ಅಪರೂಪ. ʼಪರ್ವತಗಳ ಭೂತʼ ಎಂದೂ ಕರೆಯಲ್ಪಡುವ ಹಿಮ ಚಿರತೆಗಳು ಹಿಮಭರಿತ ಮತ್ತು … Continued

ವೀಡಿಯೊ | ಕಾಡಿನ ಬಾಯಾರಿಕೆ : ನೀರಿನ ಹೊಂಡದ ಬಳಿ ಸಿಂಹ-ಆನೆ ಮುಖಾಮುಖಿ ; ಮುಂದೇನಾಯ್ತು ನೋಡಿ…

ವನ್ಯಲೋಕ ಎನ್ನುವುದು ಬಣ್ಣಿಸಲಾಗದ ವಿಸ್ಮಯಗಳ ಗೂಡು. ಅಲ್ಲಿ ಹಸಿವು ಎಷ್ಟು ಸತ್ಯವೋ, ಬಾಯಾರಿಕೆಯೂ ಅಷ್ಟೇ ದೊಡ್ಡ ಸತ್ಯ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ನಿಸರ್ಗದ ವಿಚಿತ್ರ ಸ್ನೇಹ ಮತ್ತು ಶೌರ್ಯದ ಮುಖಾಮುಖಿಯನ್ನು ನಮಗೆ ಪರಿಚಯಿಸುತ್ತಿದೆ. ಆಫ್ರಿಕಾದ ಸುಡುಬಿಸಿಲಿನ ನಡುವೆ ಒಂದು ನೀರಿನ ಹೊಂಡ. ಅಲ್ಲಿಗೆ ಸುಸ್ತಾಗಿ ಬಂದ ಸಿಂಹಿಣಿಯೊಂದು ಹೊಂಡದ ಮರೆಯಲ್ಲಿ ಅಡಗಿ … Continued

ಮಗನನ್ನು ರಕ್ಷಿಸಲು ಕುಡಗೋಲಿನಿಂದ ಚಿರತೆಯನ್ನೇ ಬಡಿದು ಕೊಂದ 60 ವರ್ಷದ ವೃದ್ಧ…!

ಗಿರ್ ಸೋಮನಾಥ: ಗುಜರಾತಿನ ಗಿರ್ ಸೋಮನಾಥ್ ಜಿಲ್ಲೆಯ ಗಂಗ್ಡಾ ಗ್ರಾಮದ ಹೊರವಲಯದಲ್ಲಿ ಗುರುವಾರ ಮಧ್ಯಾಹ್ನ ಭೀಕರ ಘಟನೆಯೊಂದು ಸಂಭವಿಸಿದೆ. ದಾಳಿ ಮಾಡಲು ನುಗ್ಗಿ ಬಂದ ಚಿರತೆಗೆ ಹೆದರದ ವೃದ್ಧರೊಬ್ಬರು, ತಮ್ಮ ಮಗನ ಪ್ರಾಣ ಉಳಿಸಲು ಅದ್ಭುತ ಶೌರ್ಯ ತೋರಿ ಚಿರತೆಯನ್ನೇ ಸಾಯಿಸಿದ್ದಾರೆ….! ಸ್ಥಳೀಯ ಮೂಲಗಳ ಪ್ರಕಾರ, ಈ ಘಟನೆಯು ಬುಧವಾರ ಸಂಜೆ ಗಿರ್ ಸೋಮನಾಥ್‌ನ ಉನಾ ಎಂಬ … Continued

ವೀಡಿಯೊಗಳು..| ಕ್ರಿಸ್ಮಸ್ ಪರೇಡ್‌ ವೇಳೆ ನೂರಾರು ಜನರ ಮಧ್ಯೆ ಧೈರ್ಯದಿಂದ ನಡೆದುಕೊಂಡು ಹೋದ ದೈತ್ಯ ಕಪ್ಪು ಕರಡಿ !

ಟೆನ್ನೆಸ್ಸಿ: ಅಮೆರಿಕದ ಟೆನ್ನೆಸ್ಸಿಯ ಗ್ಯಾಟ್ಲಿನ್ ಬರ್ಗ್‌ನಲ್ಲಿ ನಡೆದ 50ನೇ ವಾರ್ಷಿಕ ‘ಫ್ಯಾಂಟಸಿ ಲೈಟ್ಸ್ ಕ್ರಿಸ್ಮಸ್ ಪರೇಡ್’ನಲ್ಲಿ ದೈತ್ಯಾಕಾರದ ಕಪ್ಪು ಕರಡಿಯೊಂದು ಅನಿರೀಕ್ಷಿತವಾಗಿ ಜನರಿಂದ ತುಂಬಿದ್ದ ರಸ್ತೆಯಲ್ಲಿ ಬಂದು ಆತಂಕ ಮೂಡಿಸಿತು. ಶುಕ್ರವಾರ (ಡಿಸೆಂಬರ್ 5) ರಾತ್ರಿ ಪರೇಡ್ ಮುಗಿದು ಜನರು ಚದುರುತ್ತಿದ್ದ ಸಂದರ್ಭದಲ್ಲಿ ನಡೆದ ಈ ಘಟನೆಯ ವೀಡಿಯೊ ಈಗ ವೈರಲ್‌ ಆಗಿದೆ. ಹಬ್ಬದ ಸಂಭ್ರಮ … Continued