ತಂದೆ-ತಾಯಿ ಕೊಂದಿದ್ದ ಆನೆಯಿಂದ ಪಾರಾಗಲು 2 ನದಿ ದಾಟಿ ಬಂದಿದ್ದ ಕುಟುಂಬ; 14 ವರ್ಷದ ಬಳಿಕ ಅಲ್ಲಿಗೂ ಬಂದು ಮತ್ತಿಬ್ಬರನ್ನು ಸಾಯಿಸಿದ ಅದೇ ಆನೆ !

ಕಠ್ಮಂಡು: ತಂದೆ-ತಾಯಿಯನ್ನು ಬಲಿ ಪಡೆದಿದ್ದ ಕಾಡಾನೆಯಿಂದ ತಪ್ಪಿಸಿಕೊಳ್ಳಲು ಮನೆ ಮಾರಾಟ ಮಾಡಿ, ಅದು ಜಾಡು ಹಿಡಿದು ಬರಬಾರದೆಂದು ಎರಡು ದೊಡ್ಡ ನದಿಗಳನ್ನು ದಾಟಿ ಕುಟುಂಬ ಸಮೇತ ವಲಸೆ ಹೋಗಿ ಬೇರೆ ಪ್ರದೇಶದಲ್ಲಿ ಹೊಸ ಜೀವನ ಆರಂಭಿಸಿದ್ದ ವ್ಯಕ್ತಿಗೆ ವಿಧಿ ಮತ್ತೊಮ್ಮೆ ಕ್ರೂರ ಮುಖ ತೋರಿಸಿದೆ. ಬರೋಬ್ಬರಿ 14 ವರ್ಷಗಳ ಬಳಿಕ ಅದೇ ಆನೆ ಇವರ ಹೊಸ … Continued

ವಿಡಿಯೊಗಳು | ಕನಕಪುರ : ರೈಲ್ವೆ ಬ್ಯಾರಿಕೇಡ್ ನಡುವೆ ಸಿಲುಕಿ ಒದ್ದಾಡಿದ ಕಾಡಾನೆ ; ಸುರಕ್ಷಿತವಾಗಿ ರಕ್ಷಣೆ

ರಾಮನಗರ: ಆಹಾರ ಅರಸಿ ಕಾಡಿನಿಂದ ನಾಡಿಗೆ ಬರಲು ಯತ್ನಿಸಿದ ಕಾಡಾನೆಯೊಂದು(Wild Elephant) ರೈಲ್ವೆ ಹಳಿಗಳ ಬ್ಯಾರಿಕೇಡ್ ಕಬ್ಬಿಣದ ಕಂಬಗಳ ನಡುವೆ ಸಿಲುಕಿ ತೀವ್ರವಾಗಿ ಪರದಾಡಿದ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ (Kanakapura) ತಾಲೂಕಿನ ಅರೆಕೊಪ್ಪ ಗ್ರಾಮದ ಬಳಿ ಬುಧವಾರ ನಡೆದಿದೆ ಎಂದು ವರದಿಯಾಗಿದೆ. ಅರೆಕೊಪ್ಪ ಗ್ರಾಮವು ಕಾವೇರಿ ವನ್ಯಜೀವಿ ವಲಯದ ಮುಗ್ಗೂರು ಅರಣ್ಯದ ಕಾಡಂಚಿನಲ್ಲಿದೆ. … Continued

ವೀಡಿಯೊ..| ಜಗನ್ನಾಥ ರಥಯಾತ್ರೆಯ ವೇಳೆ ಹುಚ್ಚೆದ್ದು ಓಡಿದ ಆನೆಗಳು ; ಭಯಭೀತರಾಗಿ ಓಡಿದ ಭಕ್ತರು

ಅಹಮದಾಬಾದ್‌ನಲ್ಲಿ ನಡೆದ ಜಗನ್ನಾಥ ರಥಯಾತ್ರೆ ಮೆರವಣಿಗೆಗೆ ಕರೆತರಲಾದ ಆನೆಗಳ ಗುಂಪು ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿದ್ದರಿಂದ ಕೆಲಕಾಲ ಆತಂಕ ನಿರ್ಮಾಣವಾಗಿತ್ತು. ಅನಿರೀಕ್ಷಿತ ಘಟನೆಯಿಂದಾಗಿ ಹಲವಾರು ಭಕ್ತರು ಮತ್ತು ಪಕ್ಕದಲ್ಲಿದ್ದವರು ಹೆದರಿಕೊಂಡು ಅಲ್ಲಿಂದ ಓಡಿಹೋದರು. ಆನೆಗಳು ಜನರಿಂದ ತುಂಬಿಹೋಗಿದ್ದ ರಸ್ತೆಗಳಿಗೆ ನುಗ್ಗಿತ್ತು. ಜನರು ಸುರಕ್ಷತೆಗಾಗಿ ಅಲ್ಲಿಂದ ಓಡುತ್ತಿದ್ದರು. ಸುದ್ದಿ ಸಂಸ್ಥೆ ಪಿಟಿಐ ಹಂಚಿಕೊಂಡಿರುವ ಭಯಾನಕ ಕ್ಷಣದ ವೀಡಿಯೊ ಅವ್ಯವಸ್ಥೆ … Continued

ಮನ ಮಿಡಿಯುವ ಘಟನೆ ; ಮೃತ ಆನೆ ಕಳೆಬರಕ್ಕೆ ಗೌರವ ಸಲ್ಲಿಸಲು ದೂರದಿಂದ ಬಂದ ಆನೆಗಳ ದೊಡ್ಡ ಹಿಂಡು…!

ಚಿಕ್ಕಮಗಳೂರು : ಪ್ರಾಣಿಗಳಲ್ಲೂ ಭಾವನೆಗಳಿವೆ. ಅವು ಕಷ್ಟ, ಸುಖ, ದುಃಖಗಳಲ್ಲಿ ಒಂದಾಗುತ್ತವೆ. ತಮ್ಮ ಮೂಕ ಭಾಷೆಗಳಲ್ಲಿ ಭಾವನೆಗಳನ್ನು ವ್ಯಕ್ತಪಡಿಸುತ್ತವೆ. ಅದರಲ್ಲಿಯೂ ಆನೆಗಳು ಇನ್ನೂ ಹೆಚ್ಚು ಭಾವುಕ ಜೀವಿಗಳು. ಅವುಗಳು ಯಾವುದೇ ಆನೆಗಳು ಮೃತಪಟ್ಟರೂ ಅದರ ಕಳೆಬರ ಕಂಡರೆ ಅದಕ್ಕೆ ಗೌರವ ಸೂಚಿಸಿಯೇ ಮುಂದಕ್ಕೆ ಸಾಗುತ್ತವೆ ಎಂದು ಹೇಳಾಗುತ್ತಿದೆ. ಇಂಥದ್ದೇ ನಿದರ್ಶನ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿರುವುದು ವರದಿಯಾಗಿದೆ. … Continued

ಜನರ ಹಸಿವು ನೀಗಿಸಲು 200 ಆನೆಗಳ ಹತ್ಯೆಗೆ ಮುಂದಾದ ಜಿಂಬಾಬ್ವೆ…!

ನಾಲ್ಕು ದಶಕಗಳ ನಂತರ ಕಾಣಿಸಿಕೊಂಡ ಭೀಕರ ಬರಗಾಲದ ನಂತರ ತೀವ್ರ ಹಸಿವಿನಿಂದ ಬಳಲುತ್ತಿರುವ ಸಮುದಾಯಗಳಿಗೆ ಆಹಾರವನ್ನು ನೀಡಲು ಜಿಂಬಾಬ್ವೆ ತನ್ನ ದೇಶದ 200 ಆನೆಗಳನ್ನು ಸಾಯಿಸಲು ಯೋಜಿಸಿದೆ ಎಂದು ವನ್ಯಜೀವಿ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಎಲ್ ನಿನೊ-ಪ್ರೇರಿತ ಭೀಕರ ಬರಗಾಲವು ಆಫ್ರಿಕಾದ ದಕ್ಷಿಣದ ದೇಶಗಳ ಬೆಳೆಗಳನ್ನು ಸಂಪೂರ್ಣವಾಗಿ ಹಾನಿಗೊಳಿಸಿದೆ ಮತ್ತು ಈ ಪ್ರದೇಶದಾದ್ಯಂತ ಆಹಾರದ ಕೊರತೆಯನ್ನು … Continued

ವೀಡಿಯೊ..| ಅನಾರೋಗ್ಯ ಪೀಡಿತ ತನ್ನ ʼಕೇರ್‌ ಟೇಕರ್‌ʼ ನೋಡಲು ಆಸ್ಪತ್ರೆಗೆ ಬಂದ ಆನೆ : ಅದು ಮಂಡಿಯೂರಿ ತೋರಿದ ಪ್ರೀತಿ ಭಾವುಕರನ್ನಾಗಿಸದೇ ಇರದು

ಕೆಲವು ಪ್ರಾಣಿಗಳು ತುಂಬಾ ಸ್ನೇಹಪರವಾಗಿರುತ್ತವೆ. ಅವುಗಳಲ್ಲಿ ಆನೆಯೂ ಒಂದು. ಆನೆಗಳಿಗೆ ಸಂಬಂಧಿಸಿದ ಇಂತಹ ಹಲವು ವೀಡಿಯೋಗಳನ್ನು ನೀವು ಇಂಟರ್ನೆಟ್‌ನಲ್ಲಿ ನೋಡಿರಬೇಕು, ಅದರಲ್ಲಿ ಕೆಲವೊಮ್ಮೆ ಅವುಗಳ ತುಂಟಾಟ ಮತ್ತು ಕೆಲವೊಮ್ಮೆ ಅವುಗಳ ಮುದ್ದಾದ ನಡೆಗಳು ಮನ ಗೆಲ್ಲುತ್ತವೆ. ಆನೆಗಳಿಗೆ ಸಂಬಂಧಿಸಿದ ಇಂಥದ್ದೇ ವೀಡಿಯೊವೊದು ಜನರ ಗಮನ ಸೆಳೆಯುತ್ತಿದ್ದು, ದೊಡ್ಡ ಆನೆಯೊಂದು ಜೀವಮಾನವಿಡೀ ತನ್ನನ್ನು ನೋಡಿಕೊಳ್ಳುತ್ತಿದ್ದ ಈಗ ಸಾಯುವ … Continued

ಕಾಡಾನೆ ದಾಳಿಯಿಂದ ಬೆಳೆ ಹಾನಿಯಾದರೆ ಪರಿಹಾರ ಹೆಚ್ಚಳ : ಸಿಎಂ ಬೊಮ್ಮಾಯಿ

ಬೆಂಗಳೂರು: ಕಾಡಾನೆ ದಾಳಿಯಿಂದಾದ ಬೆಳೆ ಹಾನಿ ಪರಿಹಾರ ಹೆಚ್ಚಳ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅವರು ಬುಧವಾರ ವಿಧಾನಸಭೆಯ ಸದನದಲ್ಲಿ ನಿಯಮ 69 ಅಡಿಯಲ್ಲಿ ಹಾಸನ ಜಿಲ್ಲೆಯಲ್ಲಿ ಕಾಡಾನೆ ಹಾವಳಿ ವಿಚಾರವಾಗಿ ನಡೆದ ಚರ್ಚೆಯ ಸಂದರ್ಭದಲ್ಲಿ ಅವರು ಉತ್ತರಿಸಿದರು. ಸಕಲೇಶಪುರ ಶಾಸಕ ಎಚ್. ಕೆ. ಕುಮಾರಸ್ವಾಮಿ ಅವರು ಸರ್ಕಾರದ ಗಮನ ಸೆಳೆದು ಆನೆ … Continued