ವಿಡಿಯೋ..| 3 ತಿಂಗಳ ಮಗುವನ್ನು 2 ತಾಸು ಒತ್ತೆ ಇರಿಸಿಕೊಂಡ ಮಂಗ : ಇದರ ಹಿಂದಿನ ಕಾರಣ ತಿಳಿದರೆ ಕಣ್ಣಾಲಿಗಳು ಒದ್ದೆಯಾಗುತ್ತವೆ…!

ಮನೆಯೊಳಗೆ ಇದ್ದ ಹಸುಗೂಸು, ಒಳಗೆ ನುಗ್ಗಿದ ಕೋತಿಯ ಕಪಿಮುಷ್ಠಿಯಲ್ಲಿ ಸಿಲುಕಿದರೆ ಹೇಗಿರುತ್ತದೆ? ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ನಡೆದ ಈ ಘಟನೆ ಕೇವಲ ಸುದ್ದಿಯಲ್ಲ, ಅದು ಆಶ್ಚರ್ಯಚಕಿತಗೊಳಿಸುವ ಮತ್ತು ಆತಂಕಕ್ಕೀಡು ಮಾಡುವ ಘಟನೆಯೊಂದು ನಡೆದಿದೆ. ಮಂಗವೊಂದು ಮನೆಯೊಳಗೆ ನುಗ್ಗಿ ಕೇವಲ ಮೂರು ತಿಂಗಳ ಹಸುಗೂಸಿನ ಬಳಿ ಸುಮಾರು ಎರಡು ಗಂಟೆಗಳ ಕಾಲ ಕಾಲ ಕಳೆದಿದ್ದು, ಇಡೀ ನಗರದಲ್ಲಿ … Continued

ವೀಡಿಯೊ…| ಬೇಜವಾಬ್ದಾರಿಯ ಪರಮಾವಧಿ : ಮಗುವನ್ನು ಸ್ಕೂಟರ್ ಡಿಕ್ಕಿಯಲ್ಲಿ ಮಲಗಿಸಿ ಲಾಕ್‌ ಮಾಡಿ ಗಾಡಿ ಓಡಿಸಿದ ಮಹಿಳೆ…!

ಮಹಿಳೆಯೊಬ್ಬರು ತನ್ನ ಮಗುವನ್ನು ಸ್ಕೂಟರ್‌ನ ಸೀಟ್ ಕೆಳಗಿನ ಸ್ಟೋರೇಜ್ ಕಂಪಾರ್ಟ್‌ಮೆಂಟ್ (ಡಿಕ್ಕಿ) ಒಳಗೆ ಮಲಗಿಸಿ, ಗಾಡಿ ಚಲಾಯಿಸಿಕೊಂಡು ಹೋಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ದೃಶ್ಯವನ್ನು ಕಂಡ ಹಲವರು ಮಹಿಳೆಯ ನಡೆಯನ್ನು ಖಂಡಿಸಿದ್ದಾರೆ. ವೈರಲ್ ಆಗಿರುವ ಈ ಕ್ಲಿಪ್‌ನಲ್ಲಿ, ಮಹಿಳೆಯೊಬ್ಬರು ಮನೆಯ ಪ್ರವೇಶ ದ್ವಾರದ ಬಳಿ ನಿಂತಿರುವುದು ಕಂಡುಬರುತ್ತದೆ. ಅವರ ಕೈಯಲ್ಲಿ … Continued

10 ದಿನದ ಮಗುವಿನೊಂದಿಗೆ 12ನೇ ತರಗತಿ ಪರೀಕ್ಷೆ ಬರೆದ ತಾಯಿ…! ಭಾರೀ ಪ್ರಶಂಸೆ

ನಾಂದೇಡ್: ಒಂದು ಕಡೆ ಹತ್ತು ದಿನದ ಹಸುಗೂಸು, ಮತ್ತೊಂದು ಕಡೆ ಭವಿಷ್ಯದ ಕನಸುಗಳನ್ನು ಹೊತ್ತ ಪರೀಕ್ಷೆ. ಈ ಎರಡರ ನಡುವೆ ಆಕೆ ಎದೆಗುಂದಲಿಲ್ಲ. ಹೆರಿಗೆಯಾಗಿ ಕೇವಲ ಹತ್ತೇ ದಿನಕ್ಕೆ ಕೈಯಲ್ಲಿ ಮಗುವನ್ನು ಹಿಡಿದು ಪರೀಕ್ಷಾ ಕೇಂದ್ರಕ್ಕೆ ಬಂದ ಈ ಯುವತಿಯ ದೃಢತೆ ಈಗ ಇಡೀ ದೇಶದ ಗಮನ ಸೆಳೆದಿದೆ. ಮಹಾರಾಷ್ಟ್ರದ ನಾಂದೇಡ್‌ನ ಶೀತಲ್ ಚಂದ್ರಕಾಂತ ಚಿತ್ತೆ … Continued

ತಾಯಿಯ ಕೈಯಲ್ಲಿದ್ದ 20 ದಿನದ ಶಿಶುವನ್ನು ಹೊತ್ತೊಯ್ದು ಬಾವಿಗೆ ಎಸೆದ ಮಂಗ ; ಮಗುವನ್ನು ಕಾಪಾಡಿದ ಡೈಪರ್‌…!

ರಾಯ್ಪುರ: ಛತ್ತೀಸ್‌ಗಢದ ಜಾಂಜ್‌ಗೀರ್-ಚಂಪಾ ಜಿಲ್ಲೆಯ ಸೆವ್ನಿ ಗ್ರಾಮದಲ್ಲಿ ಮೈಮನ ಜುಂ ಎನಿಸುವ ಘಟನೆಯೊಂದು ನಡೆದಿದೆ. ಮಂಗವೊಂದು ತಾಯಿಯ ಮಡಿಲಲ್ಲಿದ್ದ 20 ದಿನದ ಹಸುಗೂಸನ್ನು ಹೊತ್ತೊಯ್ದು ಬಾವಿಗೆ ಎಸೆದಿತ್ತು,  ಗ್ರಾಮಸ್ಥರ ಸಮಯಪ್ರಜ್ಞೆ ಮತ್ತು ನರ್ಸ್ ಒಬ್ಬರ ಸಮಯೋಚಿತ ಚಿಕಿತ್ಸೆಯಿಂದ ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದೆ.  ಬುಧವಾರ ಸುನೀತಾ ರಾಥೋಡ ಎಂಬ ಮಹಿಳೆ ತಮ್ಮ 20 ದಿನದ ಹೆಣ್ಣು … Continued

5.2 ಕೆ.ಜಿ ತೂಕದ ‘ಛೋಟಾ ಭೀಮ’ನ ಜನನ…ಇದು ಅಪರೂಪದ ಹೆರಿಗೆ

ಜಬಲ್ಪುರ : ಮಧ್ಯಪ್ರದೇಶದ ಜಬಲ್ಪುರದಲ್ಲಿ ಶುಭಾಂಗಿ ಯಾದವ್ ಎಂಬ ಮಹಿಳೆ ಬರೋಬ್ಬರಿ 5.2 ಕೆಜಿ ತೂಕದ ಆರೋಗ್ಯವಂತ ಗಂಡು ಶಿಶುವಿಗೆ ಜನ್ಮ ನೀಡಿದ್ದಾರೆ. ಸಾಮಾನ್ಯವಾಗಿ ನವಜಾತ ಶಿಶು 2.8ರಿಂದ 3.2 ಕೆಜಿ ತೂಕವಿರುತ್ತವೆ. ಆದರೆ ಈ ಮಹಿಳೆ 5.2 ಕೆಜಿ ತೂಕದ ಮಗುವಿಗೆ ಜನ್ಮಕೊಟ್ಟಿದ್ದಾರೆ. ಕುಟುಂಬದವರೆಲ್ಲರೂ ಇದು ಗಣೇಶನ ಆಶೀರ್ವಾದ ಎಂದು ಹೇಳುತ್ತಿದ್ದಾರೆ. ನವಜಾತ ಶಿಶುವಿನ … Continued

ಅಚ್ಚರಿಯ ಘಟನೆ..| ಸಮೀಪ ಬಂದ ನಾಗರಹಾವನ್ನು ಹಿಡಿದು ಕಚ್ಚಿ ಕೊಂದ ಒಂದು ವರ್ಷದ ಮಗು…!

ಪಾಟ್ನಾ: ಬಿಹಾರದ ಹಳ್ಳಿಯೊಂದರಲ್ಲಿ ಒಂದು ವರ್ಷದ ಮಗುವೊಂದು ಹಾವನ್ನು ಕಚ್ಚಿದ ನಂತರ ಅದು ಸಾವಿಗೀಡಾದ ವಿಚಿತ್ರ ಘಟನೆ ನಡೆದಿದೆ. ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಮೊಹಚ್ಚಿ ಬಂಕಟ್ವಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಂತರ ಪ್ರಜ್ಞೆ ತಪ್ಪಿದ್ದ ಗೋವಿಂದಕುಮಾರ ಎಂದು ಗುರುತಿಸಲಾದ ಒಂದು ವರ್ಷದ ಮಗುವನ್ನು ಚಿಕಿತ್ಸೆಗಾಗಿ ಆತನ ಕುಟುಂಬ ಸದಸ್ಯರು ಬೆಟ್ಟಿಯಾ ಪಟ್ಟಣದ ಸರ್ಕಾರಿ … Continued

ತಾಯಿಗೆ ಇದ್ದಕ್ಕಿದ್ದಂತೆ ಹೆರಿಗೆ ನೋವು ಕಾಣಿಸಿಕೊಂಡ ನಂತರ ಮನೆಯಲ್ಲಿಯೇ ಹೆರಿಗೆ ಮಾಡಿಸಿದ 13 ವರ್ಷದ ಬಾಲಕ…!

ತನ್ನ ತಾಯಿಗೆ ಅನಿರೀಕ್ಷಿತವಾಗಿ ಹೆರಿಗೆ ನೋವು ಕಾಣಿಸಿಕೊಂಡ ನಂತರ ಹೆದರದೆ 13 ವರ್ಷದ ಬಾಲಕ ಮನೆಯಲ್ಲಿಯೇ ತಾಯಿಗೆ ಹೆರಿಗೆ ಮಾಡಿಸಿದ್ದಾನೆ…! ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (SCMP) ಪ್ರಕಾರ, 13 ವರ್ಷದ ಬಾಲಕ ಫೋನ್ ಮೂಲಕ ವೈದ್ಯಕೀಯ ಸಿಬ್ಬಂದಿಯಿಂದ ಸರಿಯಾದ ಸೂಚನೆಗಳನ್ನು ಪಡೆದು ತಾಯಿಗೆ ಹೆರಿಗೆ ಮಾಡಲು ಸಹಾಯ ಮಾಡಿದ್ದಾನೆ. ಅಲ್ಲದೆ, ಆಸ್ಪತ್ರೆ ಆಂಬುಲೆನ್ಸ್‌ ಬರುವವರೆಗೂ … Continued

ಬೆಳಗಾವಿ | ಜನಿಸಿದ ತಕ್ಷಣ ನವಜಾತ ಶಿಶುವನ್ನು ಸಾಯಿಸಿ ತಿಪ್ಪೆಗುಂಡಿಯಲ್ಲಿ ಬಿಸಾಕಿ ಹೋದ ಪ್ರಕರಣ : ಪ್ರೇಮಿಗಳ ಬಂಧನ

ಬೆಳಗಾವಿ : ಮಗುವನ್ನು ಕೊಲೆ ಮಾಡಿ ತಿಪ್ಪೆಗುಂಡಿ ಬಳಿ ಬಿಸಾಡಿದ ಪ್ರಕರಣವನ್ನು ಭೇದಿಸಿರುವ ಪೊಲೀಸರು ಈ ಸಂಬಂಧ ಪ್ರೇಮಿಗಳನ್ನು ಬಂಧಿಸಿದ್ದಾರೆ. ಈ ಘಟನೆ ಬೆಳಗಾವಿ ಜಿಲ್ಲೆ ಚನ್ನಮ್ಮ ಅಂಬಡಗಟ್ಟಿ ಗ್ರಾಮದಲ್ಲಿ ನಡೆದಿದ್ದು, ಅವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಬಂಧಿತರನ್ನು ಅಂಬಡಗಟ್ಟಿಯ ಮಹಾಬಲೇಶ್ವರ ರುದ್ರಪ್ಪ ಕಾಮೋಜಿ (31) ಹಾಗೂ ಸಿಮ್ರನ್ ಮೌಲಾಸಾಬ್ ಮಾಣಿಕಬಾಯಿ (22) ಎಂದು … Continued

ಇದೆಂಥ ಮೂಢನಂಬಿಕೆ | ಅನಾರೋಗ್ಯವೆಂದು ಕೇವಲ 22 ದಿನಗಳ ಹಸುಳೆಗೆ 65 ಕಡೆ ಬರೆ ಹಾಕಿದರು…!

ಅಮರಾವತಿ: ಮೂಢನಂಬಿಕೆಯ ಅತಿರೇಕದ ಪ್ರಕರಣವೊಂದರಲ್ಲಿ 22 ದಿನಗಳ ಹಸುಳೆಗೆ 65 ಬಾರಿ ಬರೆ ಹಾಕಿದ ಪ್ರಕರಣವೊಂದು ಬೆಳಕಿಗೆ ಬಂದಿದೆ…!! ಈ ಘಟನೆ ಮಂಗಳವಾರ ಮಹಾರಾಷ್ಟ್ರದ ಅಮರಾವತಿಯ ಚಿಕಲ್ದಾರ ತಾಲೂಕಿನ ಸೀಮೋರಿ ಗ್ರಾಮದಲ್ಲಿ ನಡೆದಿದ್ದು, ಉಸಿರಾಟದ ತೊಂದರೆಗೆ ಸಾಂಪ್ರದಾಯಿಕ ಚಿಕಿತ್ಸೆ ನೀಡುವ ಹೆಸರಿನಲ್ಲಿ ಕುಡುಗೋಲು ಬಿಸಿ ಮಾಡಿ 65 ಬಾರಿ ಬರೆ ಹಾಕಲಾಗಿದೆ. ಈ ಅಮಾನವೀಯ ಕೃತ್ಯದಿಂದ … Continued

ಬೆಳಗಾವಿ : 2 ತಿಂಗಳ ಮಗುವನ್ನು ಕೆರೆಗೆ ಎಸೆದ ತಾಯಿ…!

ಬೆಳಗಾವಿ : ಹೆತ್ತ ತಾಯಿಯೇ ಎರಡು ತಿಂಗಳ ಮಗುವನ್ನು ತಾಯಿ (Mother) ಕೆರೆಗೆ ಎಸೆದ ಘಟನೆ ಬೆಳಗಾವಿ‌‌ ತಾಲೂಕಿನ ಕಣಬರಗಿ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ತಾಯಿ ಮಗುವನ್ನು ಕೆರೆಗೆ ಎಸೆಯುವುದನ್ನ ನೋಡಿದ ದನ, ಕರು ತೊಳೆಯುತ್ತಿದ್ದ ಯುವಕರು ತಕ್ಷಣವೇ ಕೆರೆಗೆ ಹಾರಿ ಮಗು ರಕ್ಷಣೆ ಮಾಡಿದ್ದಾರೆ. ಕಣಬರಗಿ ಗ್ರಾಮದ ನಿವಾಸಿ ಶಾಂತಾ ರಾಬರ್ಟ್‌ ಕರವಿನಕೊಪ್ಪ … Continued