ಕಾಂಗ್ರೆಸ್‌ ಶಾಸಕ ಶಿವಗಂಗಾ ಬಸವರಾಜುಗೆ ಶೋಕಾಸ್ ನೋಟಿಸ್

ಬೆಂಗಳೂರು: ಪದೇ ಪದೇ ಮುಖ್ಯಮಂತ್ರಿ ಬದಲಾವಣೆಯ ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರ ಉಂಟುಮಾಡಿದ ಕಾರಣಕ್ಕೆ ಶಾಸಕ ಬಸವರಾಜು ಶಿವಗಂಗಾ (Basavaraj Shivaganga) ಅವರಿಗೆ ಕಾರಣ ಕೇಳಿ ಕೆಪಿಸಿಸಿ ಶಿಸ್ತು ಸಮಿತಿ ನೋಟಿಸ್ (KPCC) ನೀಡಿದೆ. ಇವರು ಚನ್ನಗಿರಿಯ ಕಾಂಗ್ರೆಸ್ ಶಾಸಕರಾಗಿದ್ದು, ಡಿಕೆ ಶಿವಕುಮಾರ ಅವರ ಆಪ್ತಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಚನ್ನಗಿರಿ ಕಾಂಗ್ರೆಸ್ ಶಾಸಕ ಬಸವರಾಜು ಶಿವಗಂಗಾ ಅವರಿಗೆ … Continued

ಸಾಲ ಮರುಪಾವತಿಸುವ ವಿಚಾರದಲ್ಲಿ ಜಗಳ: ಪತ್ನಿಯ ಮೂಗು ಕಚ್ಚಿ ತುಂಡರಿಸಿದ ಪತಿ…!

ದಾವಣಗೆರೆ : ಸಾಲ ಮರುಪಾವತಿಸುವ ವಿಚಾರದಲ್ಲಿ ನಡೆದ ಜಗಳದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ಮೂಗನ್ನೇ ಕಚ್ಚಿ ತುಂಡರಿಸಿದ ಘಟನೆ ದಾವಣೆಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ನಡೆದಿದೆ ಎಂದು ವರದಿಯಾಗಿದೆ. ವ್ಯಕ್ತಿ ತನ್ನ ಪತ್ನಿಯನ್ನು ನಿಂದಿಸಿ, ಆಕೆಯ ಮೂಗಿನ ತುದಿಯನ್ನು ಕಚ್ಚಿ ಕತ್ತರಿಸಿದ್ದಾನೆ. ಆಕೆಯ ಸ್ಥಿತಿ ಈಗ ಸ್ಥಿರವಾಗಿದೆ. ಈ ಘಟನೆ ಚನ್ನಗಿರಿ ತಾಲೂಕಿನ ಮಂಟರಘಟ್ಟ ಗ್ರಾಮದಲ್ಲಿ … Continued

ಚನ್ನಗಿರಿ | ಬಟ್ಟೆ ತೊಳೆಯಲು ಹೋಗಿದ್ದ ಮೂವರು ಮಹಿಳೆಯರು ನೀರು ಪಾಲು

ದಾವಣಗೆರೆ:  ಬಟ್ಟೆ ತೊಳೆಯಲು ಹೋಗಿದ್ದ ಮೂವರು ಮಹಿಳೆಯರು ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಲಕ್ಷ್ಮೀಸಾಗರ ಗ್ರಾಮದ ಬಳಿ ನಡೆದಿದೆ ಎಂದು ವರದಿಯಾಗಿದೆ ಮೃತರನ್ನು ದೀಪಾ(28), ದಿವ್ಯಾ (26) ಹಾಗೂ ಚಂದನಾ(19) ಎಂದು ಹೇಳಲಾಗಿದೆ. ಲಕ್ಷ್ಮೀ ಸಾಗರ ಗ್ರಾಮದ ಹೊಸ ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ಅವಘಡ ಸಂಭವಿಸಿದೆ. ಚನ್ನಗಿರಿ … Continued

ದಾವಣಗೆರೆ : ಚಿರತೆ ದಾಳಿಯಿಂದ ತನ್ನ ಮಾಲೀಕನ ಕಾಪಾಡಿದ ಹಸು…!

ದಾವಣಗೆರೆ : ತನ್ನ ಮಾಲೀಕನ ಮೇಲೆ ಚಿರತೆ ದಾಳಿ ಮಾಡಿದಾಗ ರಕ್ಷಣೆಗೆ ಧಾವಿಸಿದ ಹಸು ಮಾಲೀಕನ ಜೀವ ಉಳಿಸಿದ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದ ವರದಿಯಾಗಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ಈ ಘಟನೆ ನಡೆದಿದೆ. ಚನ್ನಗಿರಿ ತಾಲ್ಲೂಕಿನ ಉಬ್ರಾಣಿ ಹೋಬಳಿಯ ಕೊಡಗೀಕೆರೆ ಗ್ರಾಮದಲ್ಲಿ ಮೂರು ದಿನಗಳ ಹಿಂದೆ ಘಟನೆ ನಡೆದಿದೆ ಎಂದು ವರದಿಯಾಗಿದ್ದು, ಚಿರತೆಯಿಂದ … Continued

ಚನ್ನಗಿರಿ : ಆನೆ ದಾಳಿಗೆ ಹುಡುಗಿ ಸಾವು

ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ಸೋಮ್ಲಾಪುರ ಎಂಬ ಗ್ರಾಮದ ಬಳಿ, ಕಾಡಾನೆ ದಾಳಿಯಲ್ಲಿ ಸೋಮ್ಲಾಪುರದ ನಿವಾಸಿಯಾದ ಕವನ (17) ಎಂಬ ಹುಡುಗಿ ಮೃತಪಟ್ಟಿದ್ದಾಳೆ. ಜಮೀನಿನಲ್ಲಿ ಅವರೇಕಾಯಿ ಬಿಡಿಸಲು ಹೋಗಿದ್ದ ಕವನಳನ್ನು ಆನೆಯು ಅಟ್ಟಾಸಿಕೊಂಡು ತನ್ನ ಸೊಂಡಿಲಿನಿಂದ ದೂರಕ್ಕೆ ಎಸೆದಿದೆ ಎಂದು ಹೇಳಲಾಗಿದೆ. ಸೋಮ್ಲಾಪುರ ಹಾಗೂ ಅದರ ಸಮೀಪವಿರುವ ಕಾಶೀಪುರದ ಸುತ್ತಮುತ್ತ ಶನಿವಾರ ಮುಂಜಾನೆ ಕಾಡಾನೆಯೊಂದು ಓಡಾಡಿದೆ. … Continued