ದಾವಣಗೆರೆ : ಖಾಸಗಿ ಕ್ಷಣದ ವೀಡಿಯೊ ವೈರಲ್ ; ಮನನೊಂದು ವಿದ್ಯಾರ್ಥಿಗಳಿಬ್ಬರ ಆತ್ಮಹತ್ಯೆ

ದಾವಣಗೆರೆ: ವಿದ್ಯಾರ್ಥಿಗಳಿಬ್ಬರ ಖಾಸಗಿ ಕ್ಷಣಗಳ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಂತರ ಮನನೊಂದ ವಿದ್ಯಾರ್ಥಿಗಳಿಬ್ಬರು ಸಾವಿನ ಹಿಡಿದ ಘಟನೆ ದಾವಣಗೆರೆಯಲ್ಲಿ ನಡೆದ ವರದಿಯಾಗಿದೆ. ಮೃತರನ್ನು ಆಲೂರಟ್ಟಿ ತಾಂಡಾದ ರತನ್ (20) ಮತ್ತು ಜಗಳೂರು ತಾಲೂಕಿನ ಗ್ರಾಮವೊಂದರ ಯುವತಿ ಎಂದು ಹೇಳಲಾಗಿದೆ. ಇಬ್ಬರೂ ದಾವಣಗೆರೆಯ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಕಾಂ ವಿದ್ಯಾರ್ಥಿಗಳಾಗಿದ್ದರು ಹಾಗೂ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. … Continued

ನಿರಂತರ ಮಳೆಗೆ ಮನೆಗೋಡೆ ಕುಸಿದು 1 ವರ್ಷದ ಹೆಣ್ಣು ಮಗು ಸಾವು

ದಾವಣಗೆರೆ: ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮನೆಗೋಡೆ ಕುಸಿದು ಬಿದ್ದು ಒಂದು ವರ್ಷದ ಹೆಣ್ಣು ಮಗು ಮೃತಪಟ್ಟಿರುವ ಘಟನೆ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಕುಂಬಳೂರು ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮಗುವನ್ನು ಸ್ಫೂರ್ತಿ ಎಂದು ಗುರುತಿಸಲಾಗಿದೆ. ಸ್ಫೂರ್ತಿ ತಂದೆ ಕೆಂಚಪ್ಪ ಅವರಿಗೆ ಗಾಯವಾಗಿದ್ದು, ಅವರನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ನಿರಂತರ ಮಳೆಯಿಂದಾಗಿ ಮನೆಯ … Continued

ದಾವಣಗೆರೆ : ಚಿರತೆ ದಾಳಿಯಿಂದ ತನ್ನ ಮಾಲೀಕನ ಕಾಪಾಡಿದ ಹಸು…!

ದಾವಣಗೆರೆ : ತನ್ನ ಮಾಲೀಕನ ಮೇಲೆ ಚಿರತೆ ದಾಳಿ ಮಾಡಿದಾಗ ರಕ್ಷಣೆಗೆ ಧಾವಿಸಿದ ಹಸು ಮಾಲೀಕನ ಜೀವ ಉಳಿಸಿದ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದ ವರದಿಯಾಗಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ಈ ಘಟನೆ ನಡೆದಿದೆ. ಚನ್ನಗಿರಿ ತಾಲ್ಲೂಕಿನ ಉಬ್ರಾಣಿ ಹೋಬಳಿಯ ಕೊಡಗೀಕೆರೆ ಗ್ರಾಮದಲ್ಲಿ ಮೂರು ದಿನಗಳ ಹಿಂದೆ ಘಟನೆ ನಡೆದಿದೆ ಎಂದು ವರದಿಯಾಗಿದ್ದು, ಚಿರತೆಯಿಂದ … Continued

ಕಾರಿನಲ್ಲಿ ಕರೆದೊಯ್ದು ಅವಳಿ ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆಗೈದ ತಂದೆ

ದಾವಣಗೆರೆ: ತಂದೆಯೇ ತನ್ನ ಅವಳಿ ಮಕ್ಕಳನ್ನು ಕಾರಿನಲ್ಲಿ ಕರೆದೊಯ್ದ ಅವರ ಮುಖಕ್ಕೆ ಟೆಕ್ಸೋ ಟೇಪ್ ಅಂಟಿಸಿ ಉಸಿರುಗಟ್ಟಿಸಿ ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಟೋಲ್ ಗೇಟ್ ಬಳಿ ನಡೆದ ವರದಿಯಾಗಿದೆ. ಮೃತ ಮಕ್ಕಳನ್ನು ಅದ್ವೈತ್ (4), ಅನ್ವಿತ್‌ (4 ಎಂದು ಗುರುತಿಸಲಾಗಿದೆ. ತಂದೆ ಅಮರ ಕಿತ್ತೂರು ಎಂಬವರು ಪತ್ನಿ ತವರಿಗೆ ವಿಜಯಪುರಕ್ಕೆ … Continued

ತುಂಗಭದ್ರಾ ನದಿಯಲ್ಲಿ ಮೂವರು ಹುಡುಗರು ನೀರುಪಾಲು

ದಾವಣಗೆರೆ : ತುಂಗಭದ್ರಾ ನದಿಯಲ್ಲಿ ಮೂವರು ಹುಡುಗರು ನೀರು ಪಾಲಾಗಿರುವ ಘಟನೆ ಭಾನುವಾರ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹಿರೇಗೋಣಿಗೆರೆ ಗ್ರಾಮದಲ್ಲಿ ಭಾನುವಾರ ನಡೆದಿದೆ. ಗ್ರಾಮದ ಪವನ (16), ಕಿರಣ (14) ಹಾಗೂ ವರುಣ (15) ನೀರು ಪಾಲಾದವರು ಎಂದು ಹೇಳಲಾಗಿದೆ. ಭಾನುವಾರ ಬೆಳಿಗ್ಗೆ ಹೊಲದಲ್ಲಿ ಬೇಸಾಯ ಮುಗಿಸಿದ ನಂತರ ತುಂಗಭದ್ರಾ ನದಿಯಲ್ಲಿ ಎತ್ತುಗಳಿಗೆ ನೀರು ಕುಡಿಸಲು … Continued

ಚನ್ನಗಿರಿ : ಆನೆ ದಾಳಿಗೆ ಹುಡುಗಿ ಸಾವು

ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ಸೋಮ್ಲಾಪುರ ಎಂಬ ಗ್ರಾಮದ ಬಳಿ, ಕಾಡಾನೆ ದಾಳಿಯಲ್ಲಿ ಸೋಮ್ಲಾಪುರದ ನಿವಾಸಿಯಾದ ಕವನ (17) ಎಂಬ ಹುಡುಗಿ ಮೃತಪಟ್ಟಿದ್ದಾಳೆ. ಜಮೀನಿನಲ್ಲಿ ಅವರೇಕಾಯಿ ಬಿಡಿಸಲು ಹೋಗಿದ್ದ ಕವನಳನ್ನು ಆನೆಯು ಅಟ್ಟಾಸಿಕೊಂಡು ತನ್ನ ಸೊಂಡಿಲಿನಿಂದ ದೂರಕ್ಕೆ ಎಸೆದಿದೆ ಎಂದು ಹೇಳಲಾಗಿದೆ. ಸೋಮ್ಲಾಪುರ ಹಾಗೂ ಅದರ ಸಮೀಪವಿರುವ ಕಾಶೀಪುರದ ಸುತ್ತಮುತ್ತ ಶನಿವಾರ ಮುಂಜಾನೆ ಕಾಡಾನೆಯೊಂದು ಓಡಾಡಿದೆ. … Continued

ವೀಡಿಯೊ | ದಾವಣಗೆರೆಯಲ್ಲಿ ರೋಡ್‌ ಶೋ ವೇಳೆ ಪ್ರಧಾನಿ ಮೋದಿ ಭದ್ರತೆಯಲ್ಲಿ ಲೋಪ : ವಾಹನದತ್ತ ನುಗ್ಗಿದ ವ್ಯಕ್ತಿ

ದಾವಣಗೆರೆ : ಶನಿವಾರ ದಾವಣಗೆರೆಯಲ್ಲಿ ಚುನಾವಣಾ ರ್ಯಾಲಿ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯನ್ನು ವ್ಯಕ್ತಿಯೊಬ್ಬ ಉಲ್ಲಂಘಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವ್ಯಕ್ತಿಯೊಬ್ಬ ಬ್ಯಾರಿಕೇಡ್ ಮೇಲೆ ಹಾರಿ ಪ್ರಧಾನಿಯ ಬಳಿಗೆ ಹೋಗಲು ಪ್ರಯತ್ನಿಸಿದ್ದಾನೆ. ಆತ ಭದ್ರತಾ ಕ್ರಮಗಳನ್ನು ಉಲ್ಲಂಘಿಸಿ ಪ್ರಧಾನಿ ವಾಹನದತ್ತ ಧಾವಿಸುತ್ತಿರುವಾಗ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಧಾವಿಸಿ ತಕ್ಷಣವೇ ಆತನನ್ನು ತಡೆದಿದ್ದಾರೆ. … Continued

ದೇಶದಲ್ಲಿದ್ದ ‘ಗ್ರಹಿಕೆ ರಾಜಕಾರಣ’ವನ್ನು ʼಕಾರ್ಯನಿರ್ವಹಣೆ ರಾಜಕಾರಣʼವನ್ನಾಗಿ ಬದಲಾಯಿಸಿದ್ದು ಬಿಜೆಪಿ ಸರ್ಕಾರ: ಪ್ರಧಾನಿ ಮೋದಿ ಪ್ರತಿಪಾದನೆ

ದಾವಣಗೆರೆ : ಬಿಜೆಪಿಯು ದೇಶದಲ್ಲಿನ ‘ಗ್ರಹಿಕೆಯ ರಾಜಕೀಯ’ವನ್ನು ‘ಕಾರ್ಯನಿರ್ವಹಣೆʼಯ ರಾಜಕೀಯವಾಗಿ ಪರಿವರ್ತಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಲೋಕಸಭೆಯ ಸದಸ್ಯತ್ವದಿಂದ ಶುಕ್ರವಾರ ಅನರ್ಹಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಂಬಲಕ್ಕೆ ಪ್ರತಿಪಕ್ಷಗಳ ನಾಯಕರು ರ್ಯಾಲಿ ಮಾಡಲು ಪ್ರಯತ್ನಿಸುತ್ತಿರುವುದರ ನಡುವೆ, ಪ್ರಧಾನಿ ನರೇಂದ್ರ ಮೋದಿ ಶನಿವಾರ ದಾವಣಗೆರೆಯಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಮಹಾ … Continued

8 ಕೋಟಿ ಅಕ್ರಮ ಹಣ ಸಿಕ್ಕರೂ ಶಾಸಕ ವಿರೂಪಾಕ್ಷಪ್ಪ ಅವರನ್ನು ಯಾಕೆ ಬಂಧಿಸಿಲ್ಲ : ಬಿಜೆಪಿಗೆ ಕೇಜ್ರಿವಾಲ್‌ ಪ್ರಶ್ನೆ

 ದಾವಣಗೆರೆ: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ ಬಂಧನಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶನಿವಾರ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ ವಿರೂಪಾಕ್ಷಪ್ಪ ಅವರ ನಿವಾಸದಿಂದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಕೋಟ್ಯಂತರ ರೂಪಾಯಿ ವಶ ಪಡಿಸಿಕೊಂಡ ನಂತರವೂ … Continued

ಕಾರ್ಯಕ್ರಮದ ವೇಳೆ ಕುಸಿದುಬಿದ್ದ ಸಾಹಿತಿ ಬರಗೂರು ರಾಮಚಂದ್ರಪ್ಪ

ದಾವಣಗೆರೆ: ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಅಸ್ವಸ್ಥರಾಗಿ ಆಸ್ಪತ್ರೆ ದಾಖಲಾಗಿರುವ ಘಟನೆ ಭಾನುವಾರ ದಾವಣಗೆರೆಯ ಹರಿಹರದ ಕಾರ್ಯಕ್ರಮದ ವೇಳೆ ನಡೆದಿದೆ. ಬರಗೂರು ರಾಮಚಂದ್ರಪ್ಪ ಅವರು ಕಾರ್ಯಕ್ರಮ ಮುಗಿಸಿ ಪೋಸ್ಟರ್‌ ಒದನ್ನು ಉದ್ಘಾಟಿಸಲು ತೆರಳಿದ ವೇಳೆ ಅವರು ಅಸ್ವಸ್ಥರಾಗಿ ಕುಸಿದು ಕುಳಿತಿದ್ದಾರೆ ಎಂದು ಹೇಳಲಾಗಿದೆ. ತಕ್ಷಣವೇ ಅವರನ್ನು ಅಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ರಾಮಚಂದ್ರಪ್ಪ ಆರೋಗ್ಯದಲ್ಲಿ ಚೇತರಿಕೆ … Continued