ಅಡಕೆ ತೋಟಗಳಿಗೆ ರಾಸಾಯನಿಕ ಸಿಂಪಡಣೆ : ಜೇನು ಸಂಕುಲಗಳು ನಾಶ

ಶಿರಸಿ: ಪಶ್ಚಿಮ ಘಟ್ಟಗಳ ಜೀವವೈವಿಧ್ಯದ ತವರೂರಾದ ಮಲೆನಾಡಿನಲ್ಲಿ ಪ್ರಕೃತಿ ಮತ್ತು ಕೃಷಿ ಒಂದಕ್ಕೊಂದು ಪೂರಕವಾಗಿ ಸಾಗುತ್ತಾ ಬಂದಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ಶಿರಸಿ ಸುತ್ತಮುತ್ತಲಿನ ಅನೇಕ ಕಡೆ ಜೇನುನೊಣಗಳ ಸಾಮೂಹಿಕ ಸಾವಿನ ಘಟನೆಗಳು ಕೃಷಿ ಮತ್ತು ಈ ಸೂಕ್ಷ್ಮ ಪರಿಸರ ವ್ಯವಸ್ಥೆಯ ಸಮತೋಲನ ಬಿಗಡಾಯಿಸುತ್ತಿರುವುದಕ್ಕೆ ಮುನ್ಸೂಚನೆಯಂತೆ ಕಂಡುಬರುತ್ತಿದೆ. ಅಡಕೆ ಮುಗುಳು (ಹೂಗೊಂಚಲು) ಉದುರದಂತೆ ತಡೆಯಲು ಮತ್ತು … Continued

ರಂಜಾನ್ ಪ್ರಾರ್ಥನೆ ವೇಳೆ ಹೆಜ್ಜೇನು ದಾಳಿ: 25ಕ್ಕೂ ಹೆಚ್ಚು ಮಂದಿಗೆ ಗಾಯ

ದಾವಣಗೆರೆ: ರಂಜಾನ್ ಹಬ್ಬದ ಹಿನ್ನೆಲೆ ಸಾಮೂಹಿಕ ಪ್ರಾರ್ಥನೆ ನಡೆಯುತ್ತಿದ್ದ ವೇಳೆ ಹೆಜ್ಜೇನು ದಾಳಿ ನಡೆಸಿ 25ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಶನಿವಾರ ಆನಗೋಡು ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಆನಗೋಡು ಗ್ರಾಮದ ಈದ್ಗಾ ಮೈದಾನದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಹೆಜ್ಜೇನುಗಳ ಗುಂಪು ದಾಳಿ ನಡೆಸಿದೆ. ಇದರಿಂದ ಪ್ರಾರ್ಥನೆಗೆ … Continued

ಶಿರಸಿ : ಬೆಣಗಿಯಲ್ಲಿ ಜೇನು ಹಬ್ಬ ; ಪ್ರಾತ್ಯಕ್ಷಿಕೆ-ಸಂಭ್ರಮಪಟ್ಟ ಮಕ್ಕಳು

ಶಿರಸಿ : ತಾಲೂಕಿನ ಬೆಣಗಿಯಲ್ಲಿ ಶನಿವಾರ ಜೇನು ಹಬ್ಬ ಕಾರ್ಯಕ್ರಮ ನಡೆಯಿತು. ಇದರಲ್ಲಿ ಶಾಲಾ ಮಕ್ಕಳು ಪಾಲ್ಗೊಂಡು ಅವರೇ ಜೇನು ಹಬ್ಬ ಉದ್ಘಾಟಿಸಿ ಅದರಲ್ಲಿ ಪಾಲ್ಗೊಂಡು ಸಂಭ್ರಮಪಟ್ಟರು. ಪ್ರಕೃತಿ ಸಂಸ್ಥೆ, ಪೇವಾರ್ಡ್‌ ಸಂಸ್ಥೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಡೇಬೈಲ್ ಶಾಲೆ, ವನಗಿರಿ ಇಕೋ ಕ್ಲಬ್‌, ರಾಷ್ಟ್ರೀಯ ಹಸಿರು ಪಡೆ ಸಹಯೋಗದಲ್ಲಿ ಬೆಣಗಿಯ ನಾಗರಾಜ ಹೆಗಡೆ … Continued

ಹೊನ್ನಾವರ : ಹೆಜ್ಜೇನು ದಾಳಿಗೆ ವ್ಯಕ್ತಿ ಸಾವು

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ತಾಲೂಕಿನ ಅನಿಲಗೋಡ ಶಾಲೆಯ‌ ಸಮೀಪ ಹೆಜ್ಜೇನು ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ ಎಂದು ವರದಿಯಾಗಿದೆ. ಹೊನ್ನಾವರ ತಾಲೂಕಿನ ಅನಿಲಗೋಡದ ನಿವಾಸಿ ಮಂಜುನಾಥ ಗಣಪ ಅಂಬಿಗ (53) ಎಂಬವರು ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಕೆಲಸಕ್ಕೆಂದು ಬೇರಂಕಿಯ ಸಮೀಪ ನಡೆದುಕೊಂಡು ಹೋಗುತ್ತಿರುವಾಗ ಅನಿಲಗೋಡ ಜನತಾ ವಿದ್ಯಾಲಯದ ಹಿಂಭಾಗದಲ್ಲಿ … Continued