ಮುಂಗಾರು ಕೊರತೆ : ಡ್ಯಾಂನಲ್ಲಿ ನೀರಿಲ್ಲ ; ಇದರ ನೀರು ನಂಬಿಕೊಂಡು ಬೆಳೆ ಬೆಳೆಯಬೇಡಿ; ಸಿಎಂ ಶಿವಕುಮಾರ

ಬೆಂಗಳೂರು: ಈ ವರ್ಷ ದೇಶದಲ್ಲಿ ತೀವ್ರ ಮಳೆ ಕೊರತೆ ಎದುರಾಗುವ ಮುನ್ಸೂಚನೆ ಇದೆ. ರಾಜ್ಯದ ಬಹುತೇಕ ಅಣೆಕಟ್ಟುಗಳಲ್ಲಿ ನೀರಿನ ಒಳಹರಿವು ಶೂನ್ಯಕ್ಕೆ ತಲುಪಿದೆ. ಹೀಗಾಗಿ ರೈತರು ಅಣೆಕಟ್ಟು ನೀರನ್ನೇ ನಂಬಿಕೊಂಡು ಬೆಳೆ ಬೆಳೆಯುವುದುಬೇಡ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಗುರುವಾರ ರೈತರಿಗೆ ಸಲಹೆ ನೀಡಿದ್ದಾರೆ. ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ … Continued

ಅಡಕೆ ತೋಟಗಳಿಗೆ ರಾಸಾಯನಿಕ ಸಿಂಪಡಣೆ : ಜೇನು ಸಂಕುಲಗಳು ನಾಶ

ಶಿರಸಿ: ಪಶ್ಚಿಮ ಘಟ್ಟಗಳ ಜೀವವೈವಿಧ್ಯದ ತವರೂರಾದ ಮಲೆನಾಡಿನಲ್ಲಿ ಪ್ರಕೃತಿ ಮತ್ತು ಕೃಷಿ ಒಂದಕ್ಕೊಂದು ಪೂರಕವಾಗಿ ಸಾಗುತ್ತಾ ಬಂದಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ಶಿರಸಿ ಸುತ್ತಮುತ್ತಲಿನ ಅನೇಕ ಕಡೆ ಜೇನುನೊಣಗಳ ಸಾಮೂಹಿಕ ಸಾವಿನ ಘಟನೆಗಳು ಕೃಷಿ ಮತ್ತು ಈ ಸೂಕ್ಷ್ಮ ಪರಿಸರ ವ್ಯವಸ್ಥೆಯ ಸಮತೋಲನ ಬಿಗಡಾಯಿಸುತ್ತಿರುವುದಕ್ಕೆ ಮುನ್ಸೂಚನೆಯಂತೆ ಕಂಡುಬರುತ್ತಿದೆ. ಅಡಕೆ ಮುಗುಳು (ಹೂಗೊಂಚಲು) ಉದುರದಂತೆ ತಡೆಯಲು ಮತ್ತು … Continued

ರೈತರಿಗೆ ಸಿಹಿ ಸುದ್ದಿ ; 14 ಬೆಳೆಗಳ ಕನಿಷ್ಠ ಬೆಂಬಲ ಹೆಚ್ಚಳಕ್ಕೆ ಕೇಂದ್ರ ಸಂಪುಟ ಒಪ್ಪಿಗೆ

ನವದೆಹಲಿ: ಕೃಷಿ ಮತ್ತು ಮೂಲಸೌಕರ್ಯದ ಮೇಲೆ ಪರಿಣಾಮ ಬೀರುವ ಹಲವಾರು ಮಹತ್ವದ ಕ್ರಮಗಳಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ, ಇದರಲ್ಲಿ ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳಲ್ಲಿ (MSP) ಹೆಚ್ಚಳ, ರೈತರಿಗೆ ಬಡ್ಡಿ ಸಬ್ಸಿಡಿ ಯೋಜನೆಯ ಮುಂದುವರಿಕೆ ಮತ್ತು ಆಂಧ್ರಪ್ರದೇಶ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಾದ್ಯಂತ ಪ್ರಮುಖ ರಸ್ತೆ ಮತ್ತು ರೈಲು ಯೋಜನೆಗಳಿಗೆ ಹಸಿರು ನಿಶಾನೆ … Continued