ಬಾಂಗ್ಲಾದೇಶದ ಹೆಸರಲ್ಲಿ ವಿದೇಶಿ ಅಡಕೆ ಅಕ್ರಮ ಆಮದು ಪತ್ತೆ ; ₹2500 ಕೋಟಿ ನಷ್ಟದ ಶಂಕೆ : ನಮ್ಮ ಬೆಳೆಗಾರರ ಮೇಲೆ ಪರಿಣಾಮ ಏನು..?

ನವದೆಹಲಿ: ಆಗ್ನೇಯ ಏಷ್ಯಾದ ದೇಶಗಳಿಂದ ಭಾರತಕ್ಕೆ ಅಡಕೆ ಆಮದು ಮಾಡಿಕೊಂಡು, ಅದನ್ನು ಬಾಂಗ್ಲಾದೇಶ ಮೂಲದ ಅಡಕೆ ಎಂದು ಸುಳ್ಳು ಹೇಳಿ ವಂಚಿಸಿ ದಕ್ಷಿಣ ಏಷ್ಯಾ ಮುಕ್ತ ವ್ಯಾಪಾರ ಒಪ್ಪಂದ (SAFTA) ಅಡಿ ದೊರೆಯುವ ಕಸ್ಟಮ್ಸ್ ಸುಂಕ ವಿನಾಯಿತಿ ಪಡೆಯುತ್ತಿದ್ದರೆನ್ನಲಾದ ದೊಡ್ಡ ಜಾಲವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಭೇದಿಸಿದೆ. ಡಿಆರ್‌ಐ(DRI) ನಡೆಸಿದ ತನಿಖೆಯಲ್ಲಿ ಈ ಜಾಲದಿಂದ … Continued

ದೇಶದೊಳಕ್ಕೆ ಅಕ್ರಮವಾಗಿ ಅಡಿಕೆ ಬರುವುದನ್ನು ತಡೆಯಲು ಕ್ರಮ ; ನಿಯೋಗಕ್ಕೆ ಕೇಂದ್ರ ಸಚಿವ ಅಮಿತ್‌ ಶಾ ಭರವಸೆ

ನವದೆಹಲಿ : ಅಡಿಕೆ ಬೆಳೆಗಾರರು ಹಾಗೂ ಸಹಕಾರ ಸಂಸ್ಥೆಗಳು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಕುರಿತು ರಾಜ್ಯದ ಸಂಸದರು, ಶಾಸಕರು, ಕ್ಯಾಂಪ್ಕೋ ಹಾಗೂ ಅಡಿಕೆ ಮಹಾಮಂಡಳದ ಪ್ರತಿನಿಧಿಗಳನ್ನು ಒಳಗೊಂಡ ನಿಯೋಗವು ಶನಿವಾರ ನವದೆಹಲಿಯಲ್ಲಿ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿತು. … Continued

ಅಡಕೆ ತೋಟಗಳಿಗೆ ರಾಸಾಯನಿಕ ಸಿಂಪಡಣೆ : ಜೇನು ಸಂಕುಲಗಳು ನಾಶ

ಶಿರಸಿ: ಪಶ್ಚಿಮ ಘಟ್ಟಗಳ ಜೀವವೈವಿಧ್ಯದ ತವರೂರಾದ ಮಲೆನಾಡಿನಲ್ಲಿ ಪ್ರಕೃತಿ ಮತ್ತು ಕೃಷಿ ಒಂದಕ್ಕೊಂದು ಪೂರಕವಾಗಿ ಸಾಗುತ್ತಾ ಬಂದಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ಶಿರಸಿ ಸುತ್ತಮುತ್ತಲಿನ ಅನೇಕ ಕಡೆ ಜೇನುನೊಣಗಳ ಸಾಮೂಹಿಕ ಸಾವಿನ ಘಟನೆಗಳು ಕೃಷಿ ಮತ್ತು ಈ ಸೂಕ್ಷ್ಮ ಪರಿಸರ ವ್ಯವಸ್ಥೆಯ ಸಮತೋಲನ ಬಿಗಡಾಯಿಸುತ್ತಿರುವುದಕ್ಕೆ ಮುನ್ಸೂಚನೆಯಂತೆ ಕಂಡುಬರುತ್ತಿದೆ. ಅಡಕೆ ಮುಗುಳು (ಹೂಗೊಂಚಲು) ಉದುರದಂತೆ ತಡೆಯಲು ಮತ್ತು … Continued

ಅಡಕೆ ಎಂದು ಭಾವಿಸಿ ಜಜ್ಜಿದಾಗ ಸಿಡಿಮದ್ದು ಸ್ಫೋಟ, ಮಹಿಳೆಗೆ ತೀವ್ರ ಗಾಯ

ಮೈಸೂರು: ಮನೆ ಬಳಿ ರಸ್ತೆಯಲ್ಲಿ ಬಿದ್ದಿದ್ದ ಸಿಡಿಮದ್ದನ್ನು ಅಡಕೆ ಎಂದು ಭಾವಿಸಿ ಚೂರು ಮಾಡಲು ಕಲ್ಲಿನಿಂದ ಜಜ್ಜಿದಾಗ ಅದು ಸ್ಫೋಟಗೊಂಡು ಮಹಿಳೆಯೊಬ್ಬರು ತೀವ್ರ ಗಾಯಗೊಂಡ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಹುಲ್ಯಾಳು ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಗ್ರಾಮದ ಕಮಲಮ್ಮ (55) ಎಂಬವರು ಗಾಯಗೊಂಡವರು. ಶುಕ್ರವಾರ ಬೆಳಗ್ಗೆ ಜಮೀನಿನಿಂದ ಮನೆಗೆ ಬರುತ್ತಿದ್ದ ವೇಳೆ … Continued

ಮ್ಯಾನ್ಮಾರ್‌ ನಿಂದ ಭಾರತದ ಮಿಜೋರಾಂಗೆ ಅಡಕೆ ಕಳ್ಳಸಾಗಣೆ ; ಸಿಬಿಐ ತನಿಖೆಗೆ ಗುವಾಹತಿ ಹೈಕೋರ್ಟ್ ಆದೇಶ

ಐಜ್ವಾಲ್ :  ಮ್ಯಾನ್ಮಾರ್‌(ಬರ್ಮಾ)ನಿಂದ ಮಿಜೋರಾಂಗೆ ಅಡಕೆ ಕಳ್ಳಸಾಗಣೆ ನಡೆಯುತ್ತಿರುವ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಗುವಾಹತಿ ಹೈಕೋರ್ಟ್‌ನ ಐಜ್ವಾಲ್ ಪೀಠವು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ನಿರ್ದೇಶನ ನೀಡಿದೆ ಎಂದು ನ್ಯಾಯಾಲಯದ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. ರುವಾಟ್‌ಫೆಲಾ ನು ಎಂದು ಜನಪ್ರಿಯವಾಗಿರುವ ಸಾಮಾಜಿಕ ಕಾರ್ಯಕರ್ತ ವನ್ರಾಮ್‌ ಚುವಾಂಗಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ … Continued