ಮೇ ತಿಂಗಳಲ್ಲಿ ₹1.94 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ: ಶೇ. 3.2 ರಷ್ಟು ಪ್ರಗತಿ

ನವದೆಹಲಿ: ದೇಶದ ಆರ್ಥಿಕತೆಯ ಸದೃಢತೆಯನ್ನು ಬಿಂಬಿಸುವಂತೆ, ಮೇ 2026ರ ಅವಧಿಯಲ್ಲಿ ಭಾರತದ ಒಟ್ಟು ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಸಂಗ್ರಹವು ವರ್ಷದಿಂದ ವರ್ಷಕ್ಕೆ (YoY) ಶೇಕಡಾ 3.2 ರಷ್ಟು ಹೆಚ್ಚಳವಾಗಿದ್ದು, ₹1.94 ಲಕ್ಷ ಕೋಟಿಗೆ ತಲುಪಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ, ಅಂದರೆ ಮೇ 2025 ರಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹವು ₹1.88 ಲಕ್ಷ … Continued

ಇಂದಿನಿಂದ ಜಿಎಸ್‌ ಟಿ 2.0 ಜಾರಿ : ಯಾವುದು ಅಗ್ಗವಾಗಲಿದೆ..? ಯಾವುದು ತುಟ್ಟಿಯಾಗಲಿದೆ..? ಇಲ್ಲಿದೆ ಪಟ್ಟಿ

ನವದೆಹಲಿ : ಸರಕು ಮತ್ತು ಸೇವಾ ತೆರಿಗೆ (GST) ಸುಧಾರಣೆ 2.0 ಇಂದಿನಿಂದ (ಸೆಪ್ಟೆಂಬರ್ 22) ಅಧಿಕೃತವಾಗಿ ಜಾರಿಗೆ ಬರಲಿದೆ. ಇದು ದೇಶದ ಪರೋಕ್ಷ ತೆರಿಗೆಯಲ್ಲಿ ಐತಿಹಾಸಿಕ ಬದಲಾವಣೆಗೆ ಕಾರಣವಾಗಲಿದೆ. ಇದರಲ್ಲಿ ಶೇಕಡಾ 5 ಮತ್ತು 18 ರ ಎರಡು ಸ್ಲ್ಯಾಬ್‌ಗಳು ಮತ್ತು ಪಾಪದ ಸರಕು(sin goods)ಗಳಿಗೆ ಶೇಕಡಾ 40 ರ ವಿಶೇಷ ಸ್ಲ್ಯಾಬ್ ಸೇರಿವೆ. … Continued

33 ಜೀವ ರಕ್ಷಕ ಔಷಧಿಗಳ ಮೇಲಿನ ತೆರಿಗೆ ಸಂಪೂರ್ಣ ತೆಗೆದುಹಾಕಿದ ಜಿಎಸ್‌ಟಿ ಮಂಡಳಿ

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯ ಪ್ರಮುಖ ಬದಲಾವಣೆ ಘೋಷಿಸಿದ್ದು, ಇದು ಜನಸಾಮಾನ್ಯರಿಗೆ ಹೆಚ್ಚಿನ ಅನುಕೂಲನ ನೀಡಿದೆ. ಜಿಎಸ್‌ಟಿ ಆಡಳಿತವು ಈಗ ಶೇ. 5 ಮತ್ತು ಶೇ. 18 ಎರಡು ತೆರಿಗೆ ಸ್ಲ್ಯಾಬ್‌ಗಳನ್ನು ಮಾತ್ರ ನಿಗದಿಪಡಿಸಿದ್ದು, ಸೂಪರ್ ಐಷಾರಾಮಿ ಮತ್ತು ಸಿನ್‌ ವಸ್ತುಗಳಿಗೆ ಶೇ. 40 ವಿಶೇಷ … Continued

ಸೆಪ್ಟೆಂಬರ್ 22ರಿಂದ ಆರೋಗ್ಯ, ಜೀವ ವಿಮಾ ಪಾಲಿಸಿಗಳ ಮೇಲೆ ಜಿಎಸ್‌ಟಿ ಇಲ್ಲ ; ಕಡಿಮೆಯಾಗಲಿವೆ ಪ್ರೀಮಿಯಂಗಳು

ನವದೆಹಲಿ: ಆರೋಗ್ಯ ಮತ್ತು ವಿಮಾ ಪಾಲಿಸಿಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಶೇ. 18 ರಷ್ಟಿತ್ತು, ಇದನ್ನು ಬುಧವಾರ ವಿಮಾ ಕಂತುಗಳ ತೆರಿಗೆಯನ್ನು ಶೂನ್ಯಕ್ಕೆ ಇಳಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ. ಜಿಎಸ್‌ಟಿ ಮಂಡಳಿ ಈ ನಿರ್ಧಾರವನ್ನು ಸಂಪೂರ್ಣ ಒಮ್ಮತದಿಂದ ತೆಗೆದುಕೊಂಡಿದೆ ಮತ್ತು ಎಲ್ಲಾ ಸಚಿವರು ಇದನ್ನು ಬೆಂಬಲಿಸಿದ್ದಾರೆ ಎಂದು … Continued

ಜಿಎಸ್‌ಟಿ ಹೊಸ ತೆರಿಗೆ ಸ್ಲ್ಯಾಬ್‌ ; ಯಾವುದು ಅಗ್ಗ..? ಯಾವುದು ದುಬಾರಿ..? ಪೂರ್ಣ ಪಟ್ಟಿ

ನವದೆಹಲಿ: ಜಿಎಸ್‌ಟಿ ಕೌನ್ಸಿಲ್ ತನ್ನ 56 ನೇ ಸಭೆಯಲ್ಲಿ ಪರೋಕ್ಷ ತೆರಿಗೆಗಳಲ್ಲಿ ವ್ಯಾಪಕ ಬದಲಾವಣೆಗಳಿಗೆ ಅನುಮೋದನೆ ನೀಡಿದ ನಂತರ ದಿನಸಿ ಮತ್ತು ಔಷಧಿಗಳಿಂದ ಹಿಡಿದು ಸಿಮೆಂಟ್ ಮತ್ತು ಸಣ್ಣ ಕಾರುಗಳವರೆಗೆ, ವಿವಿಧ ರೀತಿಯ ಅಗತ್ಯ ವಸ್ತುಗಳ ಬೆಲೆಗಳು ಕಡಿಮೆಯಾಗಲಿವೆ. ಅದೇ ಸಮಯದಲ್ಲಿ, ಜಿಎಸ್‌ಟಿ ಕೌನ್ಸಿಲ್ ತಂಬಾಕು, ಫಿಜ್ಜಿ ಪಾನೀಯಗಳು ಮತ್ತು ದುಬಾರಿ ವಾಹನಗಳ ಮೇಲಿನ ದರಗಳನ್ನು … Continued

ಸೆ.22 ರಿಂದ ಹೊಸ ಜಿಎಸ್‌ಟಿ ವ್ಯವಸ್ಥೆ : 5%, 18%ರ ಎರಡು ಸ್ಲ್ಯಾಬ್ ರಚನೆಗೆ ಒಪ್ಪಿಗೆ ನೀಡಿದ ಜಿಎಸ್‌ಟಿ ಮಂಡಳಿ ; ಸಿನ್‌ ಸರಕುಗಳಿಗೆ 40% ತೆರಿಗೆ ನಿಗದಿ

ನವದೆಹಲಿ: ಬುಧವಾರ ನಡೆದ 56ನೇ ಜಿಎಸ್‌ಟಿ ಕೌನ್ಸಿಲ್ ಸಭೆಯ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಪರೋಕ್ಷ ತೆರಿಗೆ ರಚನೆಯನ್ನು 5% ಮತ್ತು 18% ರ ಎರಡು ಸ್ಲ್ಯಾಬ್‌ಗೆ ತರುವ ಕೇಂದ್ರದ ಪ್ರಸ್ತಾವನೆಯನ್ನು ಕೌನ್ಸಿಲ್ ಅನುಮೋದಿಸಿದೆ ಎಂದು ಪ್ರಕಟಿಸಿದರು. ಇದರಲ್ಲಿ ಸಿನ್‌ ಸರಕುಗಳು ಮತ್ತು ಐಷಾರಾಮಿ ಸರಕುಗಳಿಗೆ ಮಾತ್ರ ವಿಶೇಷ 40% ಸ್ಲ್ಯಾಬ್ … Continued

5%, 18% ಎರಡು ಜಿಎಸ್‌ಟಿ ಸ್ಲ್ಯಾಬ್‌ಗಳನ್ನು ಪ್ರಸ್ತಾಪಿಸಿದ ಸರ್ಕಾರ; ಹಾನಿಕಾರಕ ವಸ್ತುಗಳಿಗೆ 40% ಜಿಎಸ್‌ಟಿ ಸಾಧ್ಯತೆ: ಮೂಲಗಳು

ನವದೆಹಲಿ : ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಗೆ ಕೇವಲ ಎರಡು ಸ್ಲ್ಯಾಬ್‌ಗಳಾದ 5% ಮತ್ತು 18% ಮಾತ್ರ ಉಳಿಸಿಕೊಳ್ಳಲು ಕೇಂದ್ರವು ಪ್ರಸ್ತಾಪಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿದ ವರದಿಗಳು ತಿಳಿಸಿವೆ. ಈ ಪ್ರಸ್ತಾವನೆಯಡಿಯಲ್ಲಿ, 28% ರಲ್ಲಿರುವ ಶೇಕಡಾ 90 ರಷ್ಟು ವಸ್ತುಗಳನ್ನು 18%ರ ಸ್ಲ್ಯಾಬ್‌ಗೆ ತರಲಾಗುತ್ತದೆ, ಶೇಕಡಾ 12 ರಷ್ಟು ಸ್ಲ್ಯಾಬ್‌ನಲ್ಲಿರುವ ಶೇಕಡಾ 99 ರಷ್ಟು … Continued

ಸಣ್ಣ ವ್ಯಾಪಾರಿಗಳಿಗೆ ರಿಲೀಫ್‌ | 3 ವರ್ಷದ ಬಾಕಿ ತೆರಿಗೆ ವಸೂಲಿ ಮಾಡಲ್ಲ: ಸಿಎಂ ಸಿದ್ದರಾಮಯ್ಯ ಘೋಷಣೆ

ಬೆಂಗಳೂರು : ಜಿಎಸ್‌ಟಿ ನೋಟಿಸ್‌ ಪಡೆದ ಸಣ್ಣ ವ್ಯಾಪಾರಿಗಳಿಂದ 3 ವರ್ಷದ ತೆರಿಗೆ ಬಾಕಿ ವಸೂಲಾತಿ ಮಾಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ. ಇದರ ಬೆನ್ನಲ್ಲೇ ಸಣ್ಣ ವ್ಯಾಪಾರಿಗಳು ಪ್ರತಿಭಟನೆ ಹಿಂಪಡೆದಿದ್ದಾರೆ. 40 ಲಕ್ಷ ರೂ. ಮೇಲ್ಪಟ್ಟು ವ್ಯವಹಾರ ನಡೆಸಿದ ಸಣ್ಣ ವರ್ತಕರಿಗೆ ರಾಜ್ಯ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆಯ ನೋಟಿಸ್‌ ಜಾರಿ ಮಾಡಿದ್ದಕ್ಕೆ ಭಾರೀ … Continued

ಕ್ಯಾನ್ಸರ್ ಔಷಧಗಳ ಮೇಲಿನ ಜಿಎಸ್‌ಟಿ ಇಳಿಕೆ

ನವದೆಹಲಿ: ಕ್ಯಾನ್ಸರ್ ಔಷಧಿಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್ಟಿ) 12% ರಿಂದ 5% ಕ್ಕೆ ಇಳಿಸಲು ಜಿಎಸ್‌ಟಿ (GST) ಕೌನ್ಸಿಲ್ ನಿರ್ಧರಿಸಿದೆ. ಸೋಮವಾರ ದೆಹಲಿಯಲ್ಲಿ ನಡೆದ 54ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಹಣಕಾಸು ಖಾತೆ ರಾಜ್ಯ … Continued

ಜೀವ ಮತ್ತು ಆರೋಗ್ಯ ವಿಮೆ ಮೇಲಿನ ಜಿಎಸ್‌ಟಿ ಸಂಪೂರ್ಣ ತೆಗೆದುಹಾಕಿ ; ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಗೆ ಪತ್ರ ಬರೆದ ನಿತಿನ್ ಗಡ್ಕರಿ

ನವದೆಹಲಿ: ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದು, ಜೀವ ಮತ್ತು ವೈದ್ಯಕೀಯ ವಿಮೆ (life and medical insurance) ಮೇಲಿನ ಸರಕು ಮತ್ತು ಸೇವಾ ತೆರಿಗೆಯನ್ನು (GST) ತೆಗೆದುಹಾಕುವುದನ್ನು ಪರಿಗಣಿಸುವಂತೆ ಒತ್ತಾಯಿಸಿದ್ದಾರೆ. ವೈದ್ಯಕೀಯ ವಿಮೆಗೆ ತೆರಿಗೆ ವಿಧಿಸುವುದರಿಂದ ಸಾಮಾಜಿಕವಾಗಿ ಮಹತ್ವದ ಈ … Continued