ನಾಳೆಯಿಂದ ಮೊಸರು, ಮಜ್ಜಿಗೆ, ಲಸ್ಸಿ ದರದಲ್ಲಿ ಹೆಚ್ಚಳ

ಬೆಂಗಳೂರು: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ(KMF)ಯು ನಂದಿನಿ ಮೊಸರು, ನಂದಿನಿ ಮಜ್ಜಿಗೆ ಮತ್ತು ನಂದಿನಿ ಲಸ್ಸಿ ದರಗಳನ್ನು ನಾಳೆಯಿಂದ ಹೆಚ್ಚಿಸಲು ನಿರ್ಧರಿಸಿದೆ.
ಕೇಂದ್ರ ಸರಕಾರದ ಹಣಕಾಸು ಸಚಿವಾಲಯವು ಮೊಸರು, ಮಜ್ಜಿಗೆ ಮತ್ತು ಸಿಹಿಲಸ್ಸಿ ಉತ್ಪನ್ನಗಳ ಮೇಲೆ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ವಿಧಿಸಿರುವುದರಿಂದ ನಂದಿನಿ ಮೊಸರು, ಮಜ್ಜಿಗೆ, ಲಸ್ಸಿ ಪಟ್ಟಣಗಳ ದರವನ್ನು ಪರಿಷ್ಕರಿಸಲಾಗಿದೆ ಎಂದು ಹಾಲು ಉತ್ಪಾದಕರ ಮಹಾಮಂಡಳಿಯು ತಿಳಿಸಿದೆ.
ಒಂದು ಲೀಟರ್‌ ಮೊಸರಿನ ಸ್ಯಾಚೆ ದರವನ್ನು 43 ರೂ.ನಿಂದ 46 ದರಕ್ಕೆ ಏರಿಸಲಾಗಿದೆ. ಮೊಸರು ಸ್ಯಾಚೆ 200 ಗ್ರಾಂ ದರವು ಈ ಹಿಂದೆ 10 ರೂ ಇತ್ತು. 12 ರೂ. ಆಗಲಿದೆ. ಮೊಸರು ಸ್ಯಾಚೆ 500 ಗ್ರಾಂ ದರವು 22 ರೂ.ನಿಂದ 24 ರೂ.ಗಳಿಗೆ ಏರಿಕೆಯಾಗಲಿದೆ.

ನಂದಿನಿ ಲಸ್ಸಿ ಎಷ್ಟು ದರದಲ್ಲಿಯೂ ಹೆಚ್ಚಳ….
ನಂದಿನಿ 200 ಮಿ.ಲೀ. ಸ್ಯಾಚೆ ದರವು 10 ರೂ.ನಿಂದ 11 ರೂ.ಗಳಿಗೆ, ಟೆಟ್ರಾ ಪ್ಯಾಕ್‌ 20 ರೂ.ನಿಂದ 21 ರೂ.ಗೆ, ಟೆಟ್ರಾ ಪ್ಯಾಕ್‌ ಮ್ಯಾಂಗೊ ದರವು 25 ರೂ.ಗಳಿಂದ 27 ರೂ.ಗಳಿಗೆ ಏರಿಕೆಯಾಗಲಿದೆ. ಪೆಟ್‌ ಬಾಟಲ್‌ (ಸಾದಾ) ದರವು 15 ರೂ.ಗಳಿಂದ 16 ರೂ.ಗಳಿಗೆ ಮತ್ತು ಪೆಟ್‌ ಬಾಟಲ್‌ ಮ್ಯಾಂಗೋ ದರವು 20 ರೂ.ನಿಂದ 12 ರೂ.ಗೆ ಏರಿಕೆ ಕಾಣಲಿದೆ.

ಪ್ರಮುಖ ಸುದ್ದಿ :-   ಸಿಎಂ ಸಿದ್ದರಾಮಯ್ಯ ಹೇಳಿಕೆಯಿಂದ ನಮ್ಮ ಮನೆತನದ ಗೌರವ ಹಾಳಾಗುತ್ತಿದೆ : ನೇಹಾ ತಂದೆ ನಿರಂಜನ ಹಿರೇಮಠ

ನಂದಿನಿ ಮಜ್ಜಿಗೆ ಎಷ್ಟು ದುಬಾರಿ?
ನಂದಿನಿ ಮಜ್ಜಿಗೆ ಸ್ಯಾಚೆ 200 ಮಿ.ಲೀ. ದರವು ಈಗಿನ 7 ರೂ.ನಿಂದ 8 ರೂ.ಗಳಿಗೆ, ಟೆಟ್ರಾ ಪ್ಯಾಕ್‌ ದರವು 200ಮಿ.ಲೀ.ಗೆ 10 ರೂ.ನಿಂದ 11 ರೂ.ಗೆ ಮತ್ತು ಪೆಟ್‌ ಬಾಟಲ್‌ ದರವು 12 ರೂ.ನಿಂದ 13 ರೂ.ಗೆ ಏರಿಕೆಯಾಗಿದೆ.
ಮೊಸರು ಮತ್ತು ಮಜ್ಜಿಗೆ ಪೊಟ್ಟಣಗಳ ಮೇಲೆ ಈಗಾಗಲೇ ಹಳೆ ದರವೇ ಮುಂದುವರೆಯಲಿದೆ. ಮುದ್ರಿತ ಪ್ಯಾಕ್‌ಗಳು ಮುಗಿಯುವವರೆಗೆ ಇದೇ ದರವೇ ಕಾಣಿಸಲಿದೆ. ಹೊಸ ಪ್ಯಾಕೇಟ್‌ಗಳಲ್ಲಿ ಹೊಸ ದರ ಇರಲಿದೆ. ಹೀಗಾಗಿ, ಹಾಲಿನ ಬೂತ್‌ನಲ್ಲಿ ಹೆಚ್ಚು ದರ ಕೇಳಿದರೆ ಹೆಚ್ಚು ಹಣ ನೀಡುವುದು ಅನಿವಾರ್ಯವಾಗಲಿದೆ.
ಕಳೆದ ತಿಂಗಳು ಕೇಂದ್ರ ಹಣಕಾಸು ಸಚಿವೆ ನಿರ್ಮಲಾಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ 47ನೇ ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ಹಾಲಿನ ಉತ್ಪನ್ನಗಳು ಹಾಗೂ ಆಹಾರಧಾನ್ಯಗಳಿಗೆ ನೀಡಿದ್ದ ವಿನಾಯಿತಿಯನ್ನು ತೆಗೆದು ಹಾಕುವ ಕುರಿತು ನಿರ್ಣಯ ಕೈಗೊಳ್ಳಲಾಗಿತ್ತು.

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement