ಸರಕು-ಸೇವಾ ತೆರಿಗೆ ಪರಿಹಾರ ಹಂಚಿಕೆಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಭಾರೀ ಅನ್ಯಾಯ: ಲದವಾ

ಹುಬ್ಬಳ್ಳಿ: ಜಿಎಸ್‌ಟಿ ಜಾರಿಯಿಂದ ರಾಜ್ಯಗಳಿಗೆ ಆಗಬಹುದಾದ ಆದಾಯ ನಷ್ಟ ಸರಿದೂಗಿಸಲು ಕೇಂದ್ರ ಸರಕಾರ ಜಿಎಸ್ಟಿ (ರಾಜ್ಯಗಳ ಪರಿಹಾರ ಸೆಸ್) ಕಾಯ್ದೆ ೨೦೧೭ ಜಾರಿಗೆ ತಂದಿತು. ಹಣಕಾಸು ಆಯೋಗದ ವರದಿ ಆಧಾರ ಪ್ರಕಾರ ರಾಜ್ಯಕ್ಕೆ ಆಗಬಹುದಾದ ೧೪% ಶೇಕಡಾ ಆದಾಯ ನಷ್ಟ ಸರಿದೂಗಿಸಲು ಕೇಂದ್ರ ಸರಕಾರ ವಿಶೇಷ ಕಾನೂನು ರಚಿಸಿ ಕೆಲ ವಿಶೇಷ ವಸ್ತುಗಳ ಮೇಲೆ ಸೆಸ್ ಆಕರಿಸಲು ಅಧಿಕಾರ ಪಡದಿತ್ತು. ಆದರೆ ಕೇಂದ್ರ ಸರಕಾರ ಸೆಸ್ ಸಂಗ್ರಹಿಸಿ ರಾಜ್ಯಕ್ಕೆ ನಿಯಮಿತ ಹಾಗೂ ನಿರ್ದಿಷ್ಟ ಪಡಿಸಿದ ಸೆಸ್ ವರ್ಗಾಯಿಸದೇ ರಾಜ್ಯಕ್ಕೆ ಭಾರೀ ಅನ್ಯಾಯ ಮಾಡಿದೆ ಎಂದು ಕಾಂಗ್ರೆಸ್‌ ವಕ್ತಾರ ವಸಂತ ಲದವಾ ತೀವ್ರವಾಗಿ ಟೀಕಿಸಿದ್ದಾರೆ.
ಇದು ರಾಜಕೀಯ ಟೀಕೆಯಲ್ಲ, ದೇಶದ ಸಂವಿಧಾನದ ವಿಧಿ ೧೪೮ರ ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯಗಳ ಸಮಗ್ರ ಲೆಕ್ಕ ಪರಿಶೋಧನೆಗಾಗಿಯೇ ರಚಿತಗೊಂಡ ಸಿಎಜಿ ತನ್ನ ವರದಿಯಲ್ಲಿ ಸ್ಪಷ್ಟಪಡಿಸಿದೆ. ಸರ್ವೋಚ್ಚ ಲೆಕ್ಕ ಪರಿಶೋಧನಾ ವರದಿಯ ೨.೮ರ ಪ್ರಕಾರ ಕೇಂದ್ರ ಸರಕಾರ ೨೦೧೭-೧೮ರಲ್ಲಿ ಒಟ್ಟು ಸಂಗ್ರಹಿಸಿದ ಸೆಸ್ . ೬೨,೬೧೨ ಕೋಟಿ ರೂ.ಗಳಲ್ಲಿ ಕೇವಲ ೫೬,೧೪೬ ಕೋಟಿ ರೂ.ಗಳನ್ನು ಮಾತ್ರ ರಾಜ್ಯಗಳಿಗೆ ವರ್ಗಾಯಿಸಿ ೬,೪೬೬ ಕೋಟಿ ರೂ.ಉಳಿಸಿಕೊಂಡಿತು. ಅದೇ ಪ್ರಕಾರ ೨೦೧೮-೧೯ರಲ್ಲಿ ೯೫,೦೮೧ ಕೋಟಿ ರೂ. ಸೆಸ್ ಸಂಗ್ರಹಿಸಿ ಕೇವಲ ೫೪,೨೭೫ ಕೋಟಿ ರೂ.ಗಳನ್ನು ರಾಜ್ಯಗಳಿಗೆ ವರ್ಗಾಯಿಸಿ ಈ ಎರಡು ವರ್ಷಗಳಲ್ಲಿ ಒಟ್ಟು ೪೦,೮೦೬ ಕೋಟಿ ರೂ. ಉಳಿಸಿಕೊಂಡು ಈ ಎರಡು ವರ್ಷಗಳಲ್ಲಿ ಒಟ್ಟು ೪೭,೨೭೨ ಕೋಟಿ ರೂ.ಗಳನ್ನು ರಾಜ್ಯಗಳಿಗೆ ಕಾನೂನು ಮತ್ತು ನಿಯಮಗಳ ಪ್ರಕಾರ ವರ್ಗಾಯಿಸದೇ ರಾಜ್ಯಕ್ಕೆ ಆರ್ಥಿಕ ಸಂಕಷ್ಟಕ್ಕೀಡು ಮಾಡಿದೆ.
ಕೇಂದ್ರ ಸರಕಾರ ರಾಜ್ಯದ ತೆರಿಗೆ ಪಾಲಿನ ಪೈಕಿ ೮,೫೩೮ಕೋಟಿ ರೂ. ಬರಬೇಕಾಗಿದೆ. ಜೊತೆಗೆ ಆಗಬಹುದಾದ ಹಾನಿಯ ಸೆಸ್ ಪಾಲು ಸಹ ಕಾನೂನು ಮೀರಿ ರಾಜ್ಯಕ್ಕೆ ವರ್ಗಾಯಿಸಿಲ್ಲ. ಕೇಂದ್ರ ಮಂತ್ರಿಗಳಾಗಲಿ ರಾಜ್ಯದ ಬಿಜೆಪಿ ಸಂಸದರು ರಾಜ್ಯಕ್ಕೆ ಬರಬೇಕಾದ ಪಾಲು ಪಡೆಯುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ವಸಂತ ಲದವಾ ಟೀಕಿಸಿದ್ದಾರೆ.
೨೦೨೧-೨೨ರ ಬಜೆಟ್ ಪ್ರಕಾರ ೧೯,೪೮೫ ಕೋಟಿ ರೂ.ಗಳ ರಾಜಸ್ವ ಕೊರತೆ ಇದ್ದರೂ ರಾಜ್ಯದ ಮೇಲೆ ಅತಿಯಾದ ಸಾಲದ ಹೊರೆ ಇದ್ದರೂ ರಾಜ್ಯ ಸರ್ಕಾರ ಕೇಂದ್ರ ಸರಕಾರದ ವರಿಷ್ಠರನ್ನುಮೆಚ್ಚಿಸುವಲ್ಲಿ ನಿರತವಾಗಿದೆಯೇ ಹೊರತು ಸಂಗ್ರಹಿಸಿದ ಸೆಸ್ ರಾಜ್ಯಕ್ಕೆ ವರ್ಗಾಯಿಸುವಂತೆ ಒತ್ತಡ ಹೇರಲು ಪ್ರಯತ್ನಿಸುತ್ತಿಲ್ಲ ರಾಜ್ಯದಲ್ಲಿರುವ ಕೇಂದ್ರ ಮಂತ್ರಿಗಳೂ ರಾಜ್ಯದ ಹಿತ ಕಾಪಾಡುವಲ್ಲಿ ವಿಫಲರಾಗಿ ಮೌನವಹಿಸಿದ್ದಾರೆ ಎಂದು ಲದವಾ ಟೀಕಿಸಿದ್ದಾರೆ.
ಸಿಎಜಿ ಲೆಕ್ಕ ಪರಿಶೋಧನಾ ವರದಿಯಲ್ಲಿ ಸಂಗ್ರಹಿಸಿದ ಸೆಸ್ ರಾಜ್ಯಕ್ಕೆ ವರ್ಗಾಯಿಸದೇ ಇರುವುದು ಜಿಎಸ್ಟಿ (ರಾಜ್ಯಗಳ ಪರಿಹಾರ ಸೆಸ್) ಕಾನೂನು ೨೦೧೭ರ ಉಲ್ಲಂಘನೆಯಾಗಿದೆ ಎಂದೂ ಸಿಎಜಿ ವರದಿ ಸಲ್ಲಿಸಿದ್ದರೂ ರಾಜ್ಯ ಸರ್ಕಾರ ರಾಜ್ಯದ ಹಿತಕಾಪಾಡಿ ಕಾನೂನು ಬದ್ಧವಾಗಿ ಬರಬೇಕಿದ್ದ ಪರಿಹಾರ ಪಡೆಯಲು ಪ್ರಯತ್ನಿಸುತ್ತಿಲ್ಲವೆಂದು ವಸಂತ ಲದವಾ ಟೀಕಿಸಿದ್ದಾರೆ.

ಪ್ರಮುಖ ಸುದ್ದಿ :-   ಮಂಗಳೂರಲ್ಲಿ ಅಭೂತಪೂರ್ವ ರೋಡ್ ಶೋ : ಕರಾವಳಿ ಜನರ ಬಗ್ಗೆ ಪ್ರಧಾನಿ ಮೋದಿ ಟ್ವೀಟ್‌

4.6 / 5. 9

ಶೇರ್ ಮಾಡಿ :

  1. Geek

    ಬಹಳ ಮುಖ್ಯವಾದ ಪ್ರಶ್ನೆಗಳನ್ನು ಎತ್ತಿದ್ದಾರೆ. ಸಂಪನ್ಮೂಲಗಳು ಕೇಂದ್ಪ ಸರಕಾರದ ನಿಯಂತ್ರಣಕ್ಕೆ ಹೆಚ್ಚು ಹೆಚ್ಚು ಒಳಪಡುತ್ತಿವೆ. ರಾಜ್ಯಗಳ ಅಧಿಕಾರ ದಿನೇ ದಿನೇ ಕಡಿಮೆಯಾಗುತ್ತಿದೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement