ಪರಿಷತ್ತಿನಲ್ಲಿ‌ ಕಾಂಗ್ರೆಸ್‌ ಧರಣಿ ಮಧ್ಯೆಯೇ ಬಜೆಟ್ ಅಂಗೀಕಾರ, ಅಧಿವೇಶನ ಮುಂದೂಡಿಕೆ

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಮಂಡಿಸಿದ 2021ನೇ ಸಾಲಿನ ಬಜೆಟ್ ಮೇಲೆ ವಿಧಾನ ಪರಿಷತ್‍ನಲ್ಲಿ ಹೆಚ್ಚಿನ ಚರ್ಚೆ ನಡೆಯದೆ ಪ್ರತಿಪಕ್ಷ ಕಾಂಗ್ರೆಸ್‍ನ ಗದ್ದಲದ ನಡುವೆ ಧ್ವನಿಮತದ ಮೂಲಕ ಅಂಗೀಕಾರಗೊಂಡಿದೆ. ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಬಜೆಟ್ ಮೇಲೆ ವಿಧಾನ ಪರಿಷತ್‍ನಲ್ಲಿ ಬಹಳಷ್ಟು ಮಂದಿ ಮಾತನಾಡಿಲ್ಲ. ಖುದ್ದು ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಅವರೇ ಮಾತನಾಡಿರಲಿಲ್ಲ. ಬುಧವಾರ ಬೆಳಗ್ಗೆ ಪ್ರಶ್ನೋತ್ತರ … Continued

ಲಾಕ್‌ ಲ್ಯಾಂಡ್‌ ಭೂಮಿ ಮಾರಾಟಕ್ಕೆ ಸರ್ಕಾರದ ನಿರ್ಧಾರ: ಸಚಿವ ಅಶೋಕ

ಬೆಂಗಳೂರು: ಸರ್ಕಾರಿ ರಸ್ತೆ ಇಲ್ಲದೆ ಮಧ್ಯ ಸಿಲುಕಿರುವ ಲಾಕ್‍ಲ್ಯಾಂಡ್ ಭೂಮಿಯನ್ನು ಅಕ್ಕಪಕ್ಕದ ಜಮೀನಿನ ಮಾಲೀಕರಿಗೆ ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಪರಿಷತ್‍ನ ಪ್ರಶ್ನೋತ್ತರದ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಪಿ.ಆರ್.ರಮೇಶ್ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿರುವ ಬಿ-ಖರಾಬು ಭೂಮಿಗಳು ಹಾಗು ಬೆಂಗಳೂರಿನಲ್ಲಿ ಭೂ ಕಬಳಿಕೆ ಆಗಿರುವ ಜಮೀನುಗಳ ಕುರಿತು ವಿವರಣೆ … Continued

ಕರಾವಳಿ ಜಿಲ್ಲೆಗಳಿಗೆ ಲವಣಾಂಶ ರಹಿತ ಮರಳು ಪೂರೈಕೆ: ನಿರಾಣಿ

ಬೆಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಲವಣಾಂಶ ರಹಿತ ಮರಳನ್ನು ಪೂರೈಕೆ ಮಾಡುತ್ತಿದ್ದೇವೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಮುರುಗೇಶ್ ನಿರಾಣಿ ಹೇಳಿದರು. ಕಾಂಗ್ರೆಸ್‍ನ ಕೆ.ಪ್ರತಾಪ ಚಂದ್ರಶೆಟ್ಟಿ ಪ್ರಶ್ನೆಗೆ ಉತ್ತರಿಸಿದ ಅವರು, ಉಪ್ಪಿನಂಶ ಇರುವ ಮರಳು ಬಳಕೆಯಿಂದ ಗುಣಮಟ್ಟ ಹಾಳಾಗುತ್ತದೆ ಎಂದು ಸಮಿತಿಯು ನೀಡಿದ ವರದಿ ಆಧಾರದ ಹಿನ್ನೆಲೆಯಲ್ಲಿ ನಾವು ಈ ಕ್ರಮ ತೆಗೆದುಕೊಂಡಿದ್ದೇವೆ … Continued

ಜಿಎಸ್‍ಟಿ ನಷ್ಟ ಪರಿಹಾರದ ಕಾಯ್ದೆ ಮತ್ತೆ 5 ವರ್ಷ ಮುಂದುವರಿಸಿ

ಬೆಂಗಳೂರು: ಜಿಎಸ್‍ಟಿ ನಷ್ಟ ಪರಿಹಾರದ ಕಾಯ್ದೆಯನ್ನು ಮತ್ತೆ 5 ವರ್ಷಗಳ ಕಾಲ ಮುಂದುವರಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕೆಂದು ಜೆಡಿಎಸ್‍ನ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಒತ್ತಾಯಿಸಿದ್ದಾರೆ. ವಿಧಾನಪರಿಷತ್‍ನ ಪ್ರಶ್ನೋತ್ತರ ಅವಯಲ್ಲಿ ಪ್ರಶ್ನೆ ಕೇಳಿದ ಅವರು, ಜಿಎಸ್‍ಟಿ ಜಾರಿಗೆ ಬರುವ ಮೊದಲು ಕರ್ನಾಟಕದಲ್ಲಿ 36 ಸಾವಿರ ಕೋಟಿರೂ.ಗಳ ತೆರಿಗೆ ಸಂಗ್ರಹವಾಗುತ್ತಿತ್ತು. ಜಿಎಸ್‍ಟಿಯಿಂದ ಪ್ರತಿ ವರ್ಷ ಶೇ.14ರಷ್ಟು ತೆರಿಗೆ … Continued

ಮೇಲ್ಮನೆಯಲ್ಲಿ ಪ್ರತಿಧ್ವನಿಸಿದ ಹಿರೇನಾಗವಲ್ಲಿ ಸ್ಫೋಟ ಪ್ರಕರಣ

ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿ ಬಂಡೆಯ ಹಿರೇನಾಗವಲ್ಲಿ ಗ್ರಾಮದ ಬಳಿ ಜಿಲೆಟಿನ್ ಮತ್ತಿತರ ವಸ್ತು ಸ್ಫೋಟಗೊಂಡು 6 ಮಂದಿ ಮೃತಪಟ್ಟ ಘಟನೆ ವಿಧಾನ ಪರಿಷತ್‍ನಲ್ಲಿ ಗುರುವಾರ ಪ್ರತಿಧ್ವನಿಸಿತು.ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಒಂದು ತಿಂಗಳ ಅವಯಲ್ಲಿ ಎರಡು ಘಟನೆ ಸಂಭವಿಸಿದೆ. ಶಿವಮೊಗ್ಗದಲ್ಲಿ ಸ್ಫೋಟ ನಡೆದು ಐವರು ಅಮೂಲ್ಯ ಜೀವ ಕಳೆದುಕೊಂಡರು. ಈ ಬಗ್ಗೆ … Continued

ಗೋ ಹತ್ಯಾ ನಿಷೇಧ ಕಾನೂನು ಅಂಗೀಕಾರ ವಿರೋಧಿಸಿ ಮುಂದುವರಿದ ಕಾಂಗ್ರೆಸ್‌ ಗದ್ದಲ

ಬೆಂಗಳೂರು: ವಿಧಾನಪರಿಷತ್‍ನಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ (ಗೋಹತ್ಯೆ ನಿಷೇಧ ಕಾನೂನು) ಅಂಗೀಕಾರದ ವೇಳೆ ಕಾನೂನಿನ ತೊಡಕಾಗಿದೆ ಎಂಬ ಕಾರಣ ಮುಂದಿಟ್ಟು ವಿಧಾನಪರಿಷತ್‍ನಲ್ಲಿ ಮಂಗಳವಾರ ಕೂಡ ಕಾಂಗ್ರೆಸ್ ಸದಸ್ಯರುಧರಣಿ ನಡೆಸಿದರು. . ಕಾಂಗ್ರೆಸ್ ಸದಸ್ಯರ ಧರಣಿ, ಗದ್ದಲದ ನಡುವೆ ಸಭಾಪತಿಯವರ ಆಯ್ಕೆಗೆ ಚುನಾವಣೆ ನಡೆದು ಬಸವರಾಜ ಹೊರಟ್ಟಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ ಎಂದು … Continued

ವಿಪಕ್ಷಗಳ ಸಭಾತ್ಯಾಗದ ಮಧ್ಯೆ ಆಸ್ತಿ ತೆರಿಗೆ ವಿಧೇಯಕಕ್ಕೆ ಅಂಗೀಕಾರ

ಬೆಂಗಳೂರು: ಪ್ರಸಕ್ತ ಹಣಕಾಸು ವರ್ಷದಲ್ಲಿ ಆಸ್ತಿ ತೆರಿಗೆ ಪಾವತಿ ಮಾಡುವವರಿಗೆ ಶೇ. ೫ ರಷ್ಟು ರಿಯಾಯ್ತಿ ನೀಡುವ ವಿಧಾನಸಭೆಯಿಂದ ಅಂಗೀಕೃತವಾಗಿದ್ದ ಕರ್ನಾಟಕ ಪುರಸಭೆಗಳು ಮತ್ತು ಕೆಲವು ಇತರೆ ಕಾನೂನು ತಿದ್ದುಪಡಿಗಳ ವಿಧೇಯಕ-೨೦೨೧ಕ್ಕೆ ಕಾಂಗ್ರೆಸ್-ಜೆಡಿಎಸ್ ಸದಸ್ಯರು ಪರಿಷತ್‌ನಲ್ಲಿ ವಿರೋಧ ವ್ಯಕ್ತಪಡಿಸಿ ಸಭಾತ್ಯಾಗ ನಡೆಸಿದರು. ಎರಡೂ ಪಕ್ಷಗಳ ಸಭಾತ್ಯಾಗದ ನಡುವೆ ಯಾವುದೇ ಚರ್ಚೆ ಇಲ್ಲದೆ ಕರ್ನಾಟಕ ಪುರಸಭೆಗಳು ಮತ್ತು … Continued

ಸಭಾಪತಿ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಯಾಗಿ ನಸೀರ್ ಅಹಮ್ಮದ್ ..?

ಬೆಂಗಳೂರು: ವಿಧಾನಪರಿಷತ್‍ನ ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್ಫೆ.೯ರಂದು ನಡೆಯವ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಬಹುತೇಕ ನಿಚ್ಚಳವಾಗಿದೆ. ಪ್ರತಾಪ್‍ಚಂದ್ರಶೆಟ್ಟಿ ಅವರ ರಾಜೀನಾಮೆಯಿಂದ ತೆರವಾಗಿರುವ ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಸೋಮವಾರದಿಂದ ಚುನಾವಣಾ ಪ್ರಕ್ರಿಯೆಗಳು ಆರಂಭಗೊಳ್ಳಲಿದ್ದು, ಸೋಮವಾರ 12 ಗಂಟೆಯೊಳಗೆ ನಾಮಪತ್ರ ಸಲ್ಲಿಸಬೇಕಾಗಿದೆ. ಮಂಗಳವಾರ ನೂತನ ಸಭಾಪತಿ ಆಯ್ಕೆಗೆ ಚುನಾವಣೆ ನಡೆಯಲಿದೆ. ಬಹುತೇಕ ಸಂದರ್ಭಗಳಲ್ಲಿ ಸಭಾಪತಿಯವರನ್ನು ಅವಿರೋಧ ಆಯ್ಕೆ ಮಾಡುವ ಸಂಪ್ರದಾಯವಿದ್ದು, … Continued

೩ ಖಾಸಗಿ ವಿವಿ ಸ್ಥಾಪನೆಗೆ ಪರಿಷತ್ತಿನಲ್ಲೂ ಅಂಗೀಕಾರ

ಬೆಂಗಳೂರು: ಮೂರು ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅನುಮತಿ ನೀಡುವ ವಿಧೇಯಕಕ್ಕೆ ವಿಧಾನ ಪರಿಷತ್ ಧ್ವನಿಮತದ ಮೂಲಕ ಅಂಗೀಕಾರ ನೀಡಿದೆ. ಭೋಜನ  ವಿರಾಮದ ಬಳಿಕ ಉನ್ನತ ಶಿಕ್ಷಣ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ , ನ್ಯೂ ಹೊರೈಜನ್, ವಿದ್ಯಾಶಿಲ್ಷ್ ವಿಶ್ವವಿದ್ಯಾಲಯ, ಏಟ್ರಿಯಾ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅನುಮತಿ ನೀಡುವ ವಿಧೇಯಕ  ಮಂಡನೆ ಮಾಡಿದರು. ತಪ್ಪು ನಡೆದರೆ ಮಾನ್ಯತೆಯನ್ನೇ ರದ್ದು … Continued