ಪರಿಷತ್ತಿನಲ್ಲಿ‌ ಕಾಂಗ್ರೆಸ್‌ ಧರಣಿ ಮಧ್ಯೆಯೇ ಬಜೆಟ್ ಅಂಗೀಕಾರ, ಅಧಿವೇಶನ ಮುಂದೂಡಿಕೆ

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಮಂಡಿಸಿದ 2021ನೇ ಸಾಲಿನ ಬಜೆಟ್ ಮೇಲೆ ವಿಧಾನ ಪರಿಷತ್‍ನಲ್ಲಿ ಹೆಚ್ಚಿನ ಚರ್ಚೆ ನಡೆಯದೆ ಪ್ರತಿಪಕ್ಷ ಕಾಂಗ್ರೆಸ್‍ನ ಗದ್ದಲದ ನಡುವೆ ಧ್ವನಿಮತದ ಮೂಲಕ ಅಂಗೀಕಾರಗೊಂಡಿದೆ. ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.
ಬಜೆಟ್ ಮೇಲೆ ವಿಧಾನ ಪರಿಷತ್‍ನಲ್ಲಿ ಬಹಳಷ್ಟು ಮಂದಿ ಮಾತನಾಡಿಲ್ಲ. ಖುದ್ದು ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಅವರೇ ಮಾತನಾಡಿರಲಿಲ್ಲ. ಬುಧವಾರ ಬೆಳಗ್ಗೆ ಪ್ರಶ್ನೋತ್ತರ ನಂತರ ಶೂನ್ಯವೇಳೆ ಕಲಾಪಗಳು ಯಾವುದೇ ತಡೆ ಇಲ್ಲದೆ ನಡೆದವು. ಬಳಿಕ ಸಭಾಪತಿಯವರು ವಿತ್ತಿಯ ಕಾರ್ಯಕಲಾಪ ಕೈಗೆತ್ತಿಕೊಂಡು ಬಜೆಟ್ ಮೇಲೆ ಚರ್ಚೆಗೆ ಆಡಳಿತ ಪಕ್ಷದ ಸದಸ್ಯ ಆಯನೂರು ಮಂಜುನಾಥ್ ಅವರಿಗೆ ಮಾತನಾಡಲು ಅವಕಾಶ ನೀಡಿದರು.
ಆಗ ಮಧ್ಯ ಪ್ರವೇಶ ಮಾಡಿದ ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್, ನಾವು ಕಳುಹಿಸಿದ ಸೂಚನಾ ಪತ್ರದ ಆಧಾರದ ಮೇಲೆ ನಿಲುವಳಿ ಸೂಚನೆಯನ್ನು ನಿಯಮ 68ಕ್ಕೆ ಪರಿವರ್ತನೆ ಮಾಡಿ, ಸಾರ್ವಜನಿಕ ಮಹತ್ವದ ವಿಷಯವನ್ನಾಗಿ ಚರ್ಚಿಸಲು ಅವಕಾಶ ನೀಡುವುದಾಗಿ ಭರವಸೆ ನೀಡಿದ್ದೀರಾ.ಈಗ ಎಲ್ಲಾ ವಿಚಾರಗಳನ್ನು ಬದಿಗೋತ್ತಿ ಸಿಡಿ ವಿಚಾರದ ಚರ್ಚೆಗೆ ಅವಕಾಶ ನೀಡಿ ಎಂದು ಮನವಿ ಮಾಡಿದರು. ಇವತ್ತಿನ ಅಜೆಂಡಾದಲ್ಲಿ ಸಿಡಿ ವಿಷಯ ಚರ್ಚೆಗೆ ಸಮಯ ನಿಗದಿ ಮಾಡಲಾಗಿದೆ, ಚರ್ಚೆಗೆ ಅವಕಾಶ ನೀಡುತ್ತೇನೆ. ಅಜೆಂಡಾದ ಪ್ರಕಾರ ಮೊದಲು ವಿತ್ತೀಯ ಕಲಾಪ ನಡೆಯಲಿ ಎಂದು ಸಭಾಪತಿ ಸಲಹೆ ನೀಡಿದರು.
ಇವತ್ತಿನ ಅಜೆಂಡಾದಲ್ಲಿ ವಿಷಯ ಸೇರ್ಪಡೆಯಾಗಿದೆ. ಸರ್ಕಾರವೂ ಚರ್ಚೆಗೆ ಸಿದ್ಧ ಇದೆ. ಎಲ್ಲದಕ್ಕೂ ಉತ್ತರ ನೀಡಲು ತಯಾರಿದ್ದೇವೆ. ಅದಕ್ಕೂ ಮೊದಲು ಅಜೆಂಡಾ ಪ್ರಕಾರ ಕಲಾಪ ನಡೆಯಲಿ ಎಂದರು.
ಇದನ್ನು ಒಪ್ಪದ ಕಾಂಗ್ರೆಸ್ ಸದಸ್ಯರು, ಚರ್ಚೆಗೆ ಅವಕಾಶ ನೀಡಿ ಎಂದು ಪಟ್ಟು ಹಿಡಿದರು. ಅದಕ್ಕೆ ಮನ್ನಣೆ ನೀಡದ ಸಭಾಪತಿಯವರು ಬಜೆಟ್ ಮೇಲೆ ಚರ್ಚೆಗೆ ಅವಕಾಶ ನೀಡಿದರು. ಆಗ ಕಾಂಗ್ರೆಸ್ ಸದಸ್ಯರು ಸಿಡಿ ಮೇಲೆ ಚರ್ಚೆಗೆ ಅವಕಾಶ ನೀಡುವಂತೆ ಪಟ್ಟು ಹಿಡಿದು ಬಾವಿಗೆ ಇಳಿದು ಧರಣಿ ಆರಂಭಿಸಿ ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಸದಸ್ಯರೂ ಘೋಷಣೆ ಕೂಗಿದರು. ಇದರಿಂದ ಗದ್ದಲದ ವಾತಾವರಣ ನಿರ್ಮಾಣವಾಯಿತು. ಅಜೆಂಡಾದ ಪ್ರಕಾರ ಕಲಾಪ ನಡೆಸಲು ಅವಕಾಶ ಕೊಡಿ. ಈ ರೀತಿ ಧರಣಿ, ಗದ್ದಲ ನಡೆಸುವುದು ಸರಿಯಲ್ಲ ಎಂದು ಸಭಾಪತಿ ಪದೇ ಪದೇ ಮನವಿ ಮಾಡಿದರು ಪ್ರಯೋಜನವಾಗಲಿಲ್ಲ. ಪರಿಸ್ಥಿತಿ ತಹಬದಿಗೆ ಬರದ ಹಿನ್ನೆಲೆಯಲ್ಲಿ ಸಭಾಪತಿ ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಿದರು.
ಕಲಾಪ ಸಮಾವೇಶಗೊಂಡಾಗಲೂ ಕಾಂಗ್ರೆಸ್ ಸದಸ್ಯರು ಧರಣಿ ಮುಂದುವರೆಸಿದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರು 2021ನೇ ಸಾಲಿನ ಕರ್ನಾಟಕ ಧನ ವಿನಿಯೋಗ ವಿಧೇಯಕ ಒಂದು ಮತ್ತು ಮೂರು, ಆರ್ಥಿಕ ಹೊಣೆಗಾರಿಕೆ ವಿಧೇಯಕಗಳನ್ನು ಮಂಡಿಸಿದರು.

ಪ್ರಮುಖ ಸುದ್ದಿ :-   ಕುಮಟಾ : ಬಾಡದಲ್ಲಿ ಚಿರತೆ ದಾಳಿಗೆ ಇಬ್ಬರಿಗೆ ಗಾಯ ; ಮನೆಯೊಳಗೆ ನುಗ್ಗಿ ಅವಿತುಕೊಂಡ ಚಿರತೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement