ವೀಸಾ ಅವಧಿ ಮುಗಿದರೂ ವಾಸ: ಇಸ್ರೇಲ್ ಪ್ರಜೆ ವಶಕ್ಕೆ

ಕಾರವಾರ : ವೀಸಾ ಅವಧಿ ಮುಕ್ತಾಯಗೊಂಡಿದ್ದರೂ ಭಾರತದಲ್ಲೇ ಉಳಿದುಕೊಂಡಿದ್ದ ಇಸ್ರೇಲ್ ಪ್ರಜೆಯೊಬ್ಬರನ್ನು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇಸ್ರೇಲ್ ಮೂಲದ ಮಾರ್ಚಾವಿ ಅಸ್ಸಾಪ್ ಎಂಬಾತನನ್ನು ಹೊನ್ನಾವರ ತಾಲೂಕಿನ ಹಳದಿಪುರದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ಇವರ ಭಾರತ ಪ್ರವಾಸದ ವೀಸಾ ಅವಧಿ 2025ರ ಏಪ್ರಿಲ್‌ನಲ್ಲೇ ಮುಕ್ತಾಯಗೊಂಡಿದ್ದರೂ ಅವರು … Continued

ಸೆ.12ರಂದು ಚಂದಾವರ ಹನುಮಂತ ದೇವಸ್ಥಾನದಲ್ಲಿ ರಾಮತಾರಕ ಮಂತ್ರ ಪಠಣ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಚಂದಾವರದ ಶ್ರೀ ಹನುಮಂತ ದೇವಸ್ಥಾನದಲ್ಲಿ ಸೆಪ್ಟೆಂಬರ್ 12ರಂದು ರಾಮತಾರಕ ಮಂತ್ರ ಪಠಣ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಸೆಪ್ಟೆಂಬರ್ 12ರಂದು ಬೆಳಿಗ್ಗೆ 8:30ರಿಂದ 9:30ರವರೆಗೆ ಸಾಮೂಹಿಕ ರಾಮತಾರಕ ಮಂತ್ರ ಪಠಣ ನಡೆಯಲಿದ್ದು, ಬಳಿಕ ಬೆಳಿಗ್ಗೆ 9:30ಕ್ಕೆ ಸಂಕಲ್ಪ ಹಾಗೂ ಯಜ್ಞ ಆರಂಭವಾಗಲಿದೆ. ಮಧ್ಯಾಹ್ನ 12:30ಕ್ಕೆ … Continued

ಹೆಂಡತಿಯನ್ನು ಕತ್ತು ಹಿಸುಕಿ ಕೊಂದು ಹೃದಯಾಘಾತದಿಂದ ಸತ್ತಿದ್ದಾಳೆ ಎಂದು ಕಥೆ ಕಟ್ಟಿದ್ದ ಪತಿ ಅರೆಸ್ಟ್‌

ಹೊನ್ನಾವರ: ಹೆಂಡತಿಯನ್ನು ಕೊಲೆ ಮಾಡಿ, ಹೃದಯಾಘಾತದಿಂದ ಮೃತಪಟ್ಟಿದ್ದಾಳೆ ಎಂದು ಕತೆ ಕಟ್ಟಿದ್ದ ಗಂಡನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಈ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಂಕಿ ಠಾಣೆ ವ್ಯಾಪ್ತಿಯ ದೊಡ್ಡಗುಂದೆಂಬಲ್ಲಿ ನಡೆದಿದೆ. ಹೊನ್ನಾವರ ತಾಲೂಕಿನ ದೊಡ್ಡಗುಂದ ಗ್ರಾಮದ ಗಣಪತಿ ನಾಯ್ಕ ಬಂಧಿತ ಆರೋಪಿಯಾಗಿದ್ದು, . ಆತನ ಪತ್ನಿ ಮಂಗಲಾ ನಾಯ್ಕ (28) ಕೊಲೆಯಾದ … Continued

ಯಕ್ಷಗಾನದ ಖ್ಯಾತ ಹಾಸ್ಯ ಕಲಾವಿದ ಶ್ರೀಧರ ಭಟ್‌ ಕಾಸರಕೋಡ ನಿಧನ

ಹೊನ್ನಾವರ : ಬಡಗುತಿಟ್ಟಿನ ಯಕ್ಷಗಾನ ರಂಗಭೂಮಿ ಕಂಡ ಅಪರೂಪದ ಹಾಸ್ಯ ಕಲಾವಿದ ಶ್ರೀಧರ ಭಟ್‌ ಕಾಸರಕೋಡ (52) ಅವರು ಶುಕ್ರವಾರ ನಿಧನರಾಗಿದ್ದಾರೆ. ಅವರು ಅಲ್ಪಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅನಾರೋಗ್ಯದ ಕಾರಣಕ್ಕೆ ಮಣಿಪಾಲ ಆಸ್ಪತ್ರೆಗೆ ಒಯ್ಯುವಾಗ ಮಾರ್ಗಮಧ್ಯೆಯೇ ನಿಧನರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮೂಲತಃ ಹೊನ್ನಾವರ ತಾಲ್ಲೂಕಿನ ಕಾಸರಕೋಡ ಗ್ರಾಮದವರಾದ ಅವರು, ಪ್ರಸ್ತುತ ಸಾಲ್ಕೋಡ್ ಗ್ರಾಮದ ಮುಲ್ಲೆಮಕ್ಕಿಯಲ್ಲಿ … Continued

ಹೊನ್ನಾವರದ ಪ್ರಕೃತಿಯ ‘ಮಾಯಾಲೋಕ’ಕ್ಕೆ ಆನಂದ ಮಹೀಂದ್ರಾ ಫಿದಾ ! ಕೇರಳದ ಹಿನ್ನೀರಿನಷ್ಟೇ ಸುಂದರ ಎಂದ ಉದ್ಯಮಿ

ಕಾರವಾರ : ದೇಶದ ಪ್ರಸಿದ್ಧ ಉದ್ಯಮಿ ಆನಂದ ಮಹೀಂದ್ರಾ ಅವರು ಮತ್ತೊಮ್ಮೆ ಭಾರತದ ಅಷ್ಟಾಗಿ ಪರಿಚಯವಿಲ್ಲದ, ಅಪರೂಪದ ಪ್ರವಾಸಿ ತಾಣಗಳತ್ತ ಜನರ ಗಮನ ಸೆಳೆದಿದ್ದಾರೆ. ಈ ಬಾರಿ ಅವರು ಕರ್ನಾಟಕದ ಉತ್ತರ ಕನ್ನ ಜಿಲ್ಲೆಯ ಕರಾವಳಿ ತೀರದ ಸುಂದರ ತಾಣ ‘ಹೊನ್ನಾವರ’ವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದು, ಇದನ್ನು ಪ್ರಕೃತಿಯ ಒಂದು ‘ಮಾಂತ್ರಿಕ ಭೂದೃಶ್ಯ’ (Magical Landscape) ಎಂದು … Continued

ಉತ್ತರ ಕನ್ನಡ : ಆಳ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ

ಕಾರವಾರ : ಉತ್ತರ ಕನ್ನ ಜಿಲ್ಲೆಯ ಆಳ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆಯಾದ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ಬೋಟ್‌ನಲ್ಲಿದ್ದ ಎಲ್ಲಾ 7 ಮೀನುಗಾರರನ್ನು ಸಕಾಲದಲ್ಲಿ ರಕ್ಷಿಸಲಾಗಿದೆ. ಮುಳುಗಡೆಯಾದ ಬೋಟ್ ‘ಶ್ರೀ ನವರತ್ನ’ ಅಂಕೋಲಾ ತಾಲೂನಿ ಬೆಳಂಬಾರದಿಂದ ಮೀನುಗಾರಿಕೆಗೆ ತೆರಳಿತ್ತು. ಇದು ಹಿಂತಿರುಗಿ ಬರುವಾಗ ಹೊನ್ನಾವರ ಹಾಗೂ ಕುಮಟಾ ವ್ಯಾಪ್ತಿಯ ಆಳ ಸಮುದ್ರದಲ್ಲಿ ಮುಳುಗಲು ಪ್ರಾರಂಭಿಸಿದೆ. … Continued

ಹೊನ್ನಾವರ : ಸಿಡಿಲು ಬಡಿದು ಸಾವು

ಹೊನ್ನಾವರ : ಸಿಡಿಲು ಬಡಿದು ಕಡಲತೀರದಲ್ಲಿದ್ದ ಮೀನುಗಾರನೊಬ್ಬ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಅಪ್ಸರಕೊಂಡದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಘಟನೆ ಶನಿವಾರ ತಡರಾತ್ರಿ ನಡೆದಿದೆ ಎನ್ನಲಾಗಿದ್ದು, ಮೃತ ಮೀನುಗಾರನನ್ನು ವಿನಾಯಕ ಖಾರ್ವಿ ಎಂದು ಗುರುತಿಸಲಾಗಿದೆ. ಮೀನುಗಾರಿಕಾ ಬೋಟ್‌ನಲ್ಲಿ ತೆರಳಿ ಅರಬ್ಬೀ ಸಮುದ್ರದಲ್ಲಿ ಮೀನು ಹಿಡಿದುಕೊಂಡು ಮರಳಿ ಬಂದ ನಂತರ ದೋಣಿಯನ್ನು ದಡಕ್ಕೆ … Continued

ಹೊನ್ನಾವರ : ಯಕ್ಷಗಾನದ ಖ್ಯಾತ ಭಾಗವತ ಕಪ್ಪೆಕೆರೆ ಸುಬ್ರಾಯ ಹೆಗಡೆ ಇನ್ನಿಲ್ಲ

ಹೊನ್ನಾವರ : ಲಯಬ್ರಹ್ಮರೆಂದೇ ಖ್ಯಾತರಾಗಿದ್ದ ಬಡಗುತಿಟ್ಟು ಯಕ್ಷಗಾನದ ಅಗ್ರಮಾನ್ಯ ಸಾಂಪ್ರದಾಯಿಕ ಭಾಗವತ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಡಿನಬಾಳದ ಕಪ್ಪೆಕೆರೆ ಸುಬ್ರಾಯ  ಹೆಗಡೆ (79) ಬುಧವಾರ (ಮೇ 13) ನಿಧನರಾಗಿದ್ದಾರೆ. ಅವರು ಅನಾರೋಗ್ಯದಿಂದ ಬಳಲುತ್ತಿದ್ದರು.  ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ. 1947೭ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ … Continued

ಜಿ.ಆರ್.ಪಂಡಿತರ ಯಕ್ಷಗಾನದ ಚೌಕಿಮನೆ ಛಾಯಾಚಿತ್ರಕ್ಕೆ ಅಂತಾರಾಷ್ಟ್ರೀಯ ಬಹುಮಾನ

ಶಿರಸಿ : ಸಾಗರದ ಜಿ.ಆರ್.ಪಂಡಿತ ಅವರು ತೆಗೆದ ಯಕ್ಷಗಾನದ ಒಂದು ಮೇಕಪ್ ಫೋಟೋಕ್ಕೆ ಅಂತಾರಾಷ್ಟ್ರೀಯ ಬಹುಮಾನಕ್ಕೆ ಪಾತ್ರವಾಗಿದೆ. ಇದೇ ಏಪ್ರಿಲ್ ನಲ್ಲಿ ಯುರೋಪಿನ ಸರ್ಬಿಯಾ ದೇಶದ ನೊವಿಸಡ್ ನಗರದ ಸ್ಟರಿಜಿನೊ ಪೊಜೊರ್ಜೆ ಎಂಬ ಖ್ಯಾತ ಛಾಯಾಗ್ರಹಣ ಸಂಸ್ಥೆಯು ಆಯೋಜಿಸಿದ್ದ 18ನೇ “ಟ್ರೈಯೇನಿಯಲ್ ಫೋಟೋಗ್ರಫಿಕ್ ಆರ್ಟ್ ನಲ್ಲಿ ಥಿಯೇಟರ್” ಎಂಬ ಹೆಸರಿನ ಜಾಗತಿಕ ಮಟ್ಟದ ಸ್ಪರ್ಧೆಯಲ್ಲಿ 13 … Continued

ಹೊನ್ನಾವರ : ಪಂಪ್ ಸೆಟ್ಟಿನ ವಿದ್ಯುತ್ ತಂತಿ ತಗುಲಿ 5 ವರ್ಷದ ಮಗು ಸಾವು

ಹೊನ್ನಾವರ : ಪಂಪ್ ಸೆಟ್ಟಿನ ವಿದ್ಯುತ್ ತಂತಿ ತಗುಲಿ ಐದು ವರ್ಷದ ಮಗು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ (Honnavar)ಹೊಸಪಟ್ಟಣದಲ್ಲಿ ಗುರುವಾರ ನಡೆದಿದೆ ಎಂದು ವರದಿಯಾಗಿದೆ. ಮೃತ ಬಾಲಕಿಯನ್ನು ಆಶಿಕಾ  ನಾಯ್ಕ ಎಂದು ಗುರುತಿಸಲಾಗಿದೆ. ಗುರುವಾರ ಸಂಜೆ ಪಂಪ್‌ಸೆಟ್‌ ಸ್ಟಾರ್ಟ್‌ ಮಾಡಿ ಮನೆ ಬಳಕೆಗೆ ನೀರು ತುಂಬಿಸುತ್ತಿರುವಾಗ ವಿದ್ಯುತ್ ತಂತಿಗೆ ಕಾಲು … Continued