ಪೈಪ್‌ ಸೋರಿಕೆಯಿಂದ ಶರಾವತಿ ಜಲವಿದ್ಯುತ್‌ ಕೇಂದ್ರದ ಒಳಗೆ ತುಂಬಿದ ನೀರು

ಶಿವಮೊಗ್ಗ : ಜಿಲ್ಲೆಯ ಸಾಗರ ತಾಲೂಕಿನ ಕಾರ್ಗಲ್ ಸಮೀಪದ ಶರಾವತಿ ಜಲವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ಗುರುವಾರ (ಜೂನ್ 25) ನಿಯಮಿತ ನಿರ್ವಹಣಾ ಕಾರ್ಯದ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಲಿಂಗನಮಕ್ಕಿ ಜಲಾಶಯದ ವ್ಯಾಪ್ತಿಗೆ ಒಳಪಡುವ ಈ ವಿದ್ಯುತ್ ಕೇಂದ್ರದ 7ನೇ ಘಟಕದಲ್ಲಿ (Unit 7) ನಿರ್ವಹಣಾ ಕೆಲಸ ನಡೆಯುತ್ತಿದ್ದಾಗ ದಿಢೀರನೆ … Continued

ಸಾಗರ : ಶಾಲೆಯಲ್ಲಿ ಹೃದಯಾಘಾತದಿಂದ 1ನೇ ತರಗತಿ ವಿದ್ಯಾರ್ಥಿ ಸಾವು

ಶಿವಮೊಗ್ಗ : ಜಿಲ್ಲೆಯ ಸಾಗರ ತಾಲೂಕಿನ ಕರೂರು ಹೋಬಳಿ ಹಾಳಸಸಿ ಗ್ರಾಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ (heart attack) ಮೃತಪಟ್ಟ ಘಟನೆ ನಡೆದಿದೆ ಎಂದುವರದಿಯಾಗಿದೆ. ಬಾಲಕ ಹೃದಯಾಘಾತದಿಂದ ಶನಿವಾರ ಮೃತಪಟ್ಟಿದ್ದಾನೆ ಎನ್ನಲಾಗಿದೆ.  ಕೊಡನವಳ್ಳಿ ಗ್ರಾಮದ ಗೌತಮ ಜೈನ್ ಹಾಗೂ ಶಿಲ್ಪಾ ದಂಪತಿ ಪುತ್ರ ತ್ರಿಲೋ (6) ಮೃತ ಬಾಲಕ … Continued

ಜಿ.ಆರ್.ಪಂಡಿತರ ಯಕ್ಷಗಾನದ ಚೌಕಿಮನೆ ಛಾಯಾಚಿತ್ರಕ್ಕೆ ಅಂತಾರಾಷ್ಟ್ರೀಯ ಬಹುಮಾನ

ಶಿರಸಿ : ಸಾಗರದ ಜಿ.ಆರ್.ಪಂಡಿತ ಅವರು ತೆಗೆದ ಯಕ್ಷಗಾನದ ಒಂದು ಮೇಕಪ್ ಫೋಟೋಕ್ಕೆ ಅಂತಾರಾಷ್ಟ್ರೀಯ ಬಹುಮಾನಕ್ಕೆ ಪಾತ್ರವಾಗಿದೆ. ಇದೇ ಏಪ್ರಿಲ್ ನಲ್ಲಿ ಯುರೋಪಿನ ಸರ್ಬಿಯಾ ದೇಶದ ನೊವಿಸಡ್ ನಗರದ ಸ್ಟರಿಜಿನೊ ಪೊಜೊರ್ಜೆ ಎಂಬ ಖ್ಯಾತ ಛಾಯಾಗ್ರಹಣ ಸಂಸ್ಥೆಯು ಆಯೋಜಿಸಿದ್ದ 18ನೇ “ಟ್ರೈಯೇನಿಯಲ್ ಫೋಟೋಗ್ರಫಿಕ್ ಆರ್ಟ್ ನಲ್ಲಿ ಥಿಯೇಟರ್” ಎಂಬ ಹೆಸರಿನ ಜಾಗತಿಕ ಮಟ್ಟದ ಸ್ಪರ್ಧೆಯಲ್ಲಿ 13 … Continued

ಸಾಗರ : ಮಾರಿಕಾಂಬೆ ದರ್ಶನದ ವೇಳೆ ಕಾಗೋಡು ತಿಮ್ಮಪ್ಪ ಅಸ್ವಸ್ಥ

ಶಿವಮೊಗ್ಗ : ಜಿಲ್ಲೆಯ ಸಾಗರ ಮಾರಿಕಾಂಬ ದೇವಿ ಜಾತ್ರೆ ಮಂಗಳವಾರದಿಂದ ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ದೇವಿಯ ದರ್ಶನಕ್ಕೆ ತೆರಳಿದ್ದ  ಹಿರಿಯ ರಾಜಕಾರಣಿ ಹಾಗೂ ಮಾಜಿ ಸಚಿವ ಕಾಗೋಡು ತಿಮ್ಮಪ್ಪ (Kagodu Thimmappa) ಅವರು ಕುಸಿದು ಬಿದ್ದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಮಾರಿಕಾಂಬ ದೇವಿಯ ದರ್ಶನಕ್ಕೆ ತೆರಳಿದ್ದ ವೇಳೆ ಅಸ್ವಸ್ಥತೆಯಿಂದಾಗಿ ಕುಸಿದು ಬಿದ್ದಿದ್ದಾರೆ ಎಂದು ಹೇಳಲಾಗಿದೆ.. … Continued

ವೀಡಿಯೊ…| ಕಾರು ಗುದ್ದಿದ ಸಿಟ್ಟಿಗೆ ನಾಯಿ ಸೇಡು ತೀರಿಸಿಕೊಂಡಿದ್ದು ಹೇಗೆ ನೋಡಿ

ಬಾಲಿವುಡ್ ಚಲನಚಿತ್ರ ತೇರಿ ಮೆಹರ್‌ ಬಾನಿಯಾ ಅನ್ನು ನೆನಪಿಸಿಕೊಳ್ಳಿ, ಇದರಲ್ಲಿ ನಾಯಿಯೊಂದು ತನ್ನ ಮಾಲೀಕನ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುತ್ತದೆ. ಮಧ್ಯಪ್ರದೇಶದ ಬುಂದೇಲ್‌ಖಂಡ್ ಪ್ರದೇಶದ ಸಾಗರ ಎಂಬಲ್ಲಿ ನಾಯಿ ಸೇಡಿನ ಸಂಚು ಬೆಳಕಿಗೆ ಬಂದಿದೆ. ಸಾಗರ ನಿವಾಸಿ ಪ್ರಹ್ಲಾದ ಸಿಂಗ್ ಘೋಶಿ ಎಂಬವರು ತಮ್ಮ ಕಾರನ್ನು ತಿರುಗಿಸುತ್ತಿದ್ದಾಗ ಆಕಸ್ಮಿಕವಾಗಿ ಕಾರು ನಾಯಿಗೆ ಡಿಕ್ಕಿ ಹೊಡೆದಿದೆ. ನಾಯಿಗೆ ಯಾವುದೇ … Continued

ಹಿರಿಯ ಸಾಹಿತಿ, ಕತೆಗಾರ ನಾ. ಡಿಸೋಜ ನಿಧನ

ಶಿವಮೊಗ್ಗ: ಹಿರಿಯ ಸಾಹಿತಿ ನಾ.ಡಿಸೋಜ (87) (Na. D’Souza) ಅವರು ಅನಾರೋಗ್ಯದಿಂದ ಮಂಗಳೂರಿನ ಫಾದರ್‌ ಮುಲ್ಲರ್‌ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾದರು. ಪರಿಸರ ಕಾಳಜಿಯುಳ್ಳ ಮಹತ್ವದ ಕಥೆಗಾರರೆನಿಸಿರುವ ಇವರು ಕನ್ನಡ ಸಾಹಿತ್ಯ ಲೋಕದಲ್ಲಿ ಮಕ್ಕಳ ಸಾಹಿತ್ಯವನ್ನು ಒಳಗೊಂಡಂತೆ ಅಪಾರವಾದ ಕೃಷಿ ನಡೆಸಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತರಾಗಿದ್ದ ನಾ.ಡಿಸೋಜಾ ಅವರು ಮಡಿಕೇರಿಯಲ್ಲಿ ನಡೆದ 80ನೇ ಕನ್ನಡ ಸಾಹಿತ್ಯ … Continued

ವೀಡಿಯೊ..| ಸಾಗರ : ಬಾಳೆಹಳ್ಳಿಯಲ್ಲಿ ಮನೆಯಂಗಳಕ್ಕೇ ಬಂದು ವಿಹರಿಸಿದ ಕಾಡೆಮ್ಮೆಗಳ ಹಿಂಡು ; ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಸಾಗರ: ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ವರದಹಳ್ಳಿ ಸಮೀಪದ ಬಾಳೆಹಳ್ಳಿಯಲ್ಲಿ ಮನೆಯ ಅಂಗಳಕ್ಕೇ ಕಾಡೆಮ್ಮೆಗಳ ಹಿಂಡು ಸೋಮವಾರ ಬೆಳಗಿನ ಜಾವ ಆಗಮಿಸಿದ್ದವು. ಸಾಗರ ತಾಲೂಕಿನ ಕರ್ಕಿಕೊಪ್ಪದ ಬಾಳೆಹಳ್ಳಿಯ ರವೀಂದ್ರಮೂರ್ತಿ ಅವರ ಮನೆ ಅಂಗಳದಲ್ಲಿ ಸೋಮವಾರ ಬೆಳಿಗ್ಗೆ ೪:೩೦ರ ಸುಮಾರಿಗೆ ಕಾಡೆಮ್ಮೆಗಳ ಗುಂಪು ಕಾಣಿಸಿಕೊಂಡಿವೆ. ಗುಂಪಿನಲ್ಲಿ ದೊಡ್ಡದು-ಸಣ್ಣದು ಸೇರಿ ಸುಮಾರು ೮-೧೦- ಕಾಡೆಮ್ಮೆ-ಕಾಡುಕೋಣಗಳು ಇದ್ದವು. ಈ ಗುಂಪು … Continued

ನಟಿ ಅನುಗೌಡ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಶಿವಮೊಗ್ಗ: ಜಮೀನು ವಿವಾದ ಸಂಬಂಧ ಕಿರುತೆರೆ ಮತ್ತು ಚಲನಚಿತ್ರ ನಟಿ ಅನುಗೌಡ ಅವರ ಮೇಲೆ ಹಲ್ಲೆ ನಡೆದಿದೆ ಎಂದು ವರದಿಯಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾ‌ಲೂಕಿನ ಉಳ್ಳೂರು ಗ್ರಾಮ ಪಂಚಾಯತ ವ್ಯಾಪ್ತಿಯ ಕಾಸ್ಪಾಡಿಯಲ್ಲಿ ನಟಿ ಅನೂಗೌಡ ಅವರ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದ್ದು, ಸಾಗರದ ಉಪವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಜಮೀನಿನ ವಿವಾದದ … Continued

ಕಾಂಗ್ರೆಸ್‌ಗೆ ಮತ್ತೊಂದು ಶಾಕ್‌…: ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಪುತ್ರಿ ಬಿಜೆಪಿ ಸೇರ್ಪಡೆ…!

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕಾವು ಜೋರಾಗಿದ್ದು, ಟಿಕೆಟ್​ ಕೈ ತಪ್ಪಿದ ಕಾರಣ ಬಂಡಾಯದ ಅಲೆಯೂ ಎದ್ದಿದೆ. ಇದೀಗ ಕಾಂಗ್ರೆಸ್​ಗೆ ಮತ್ತೊಂದು ಆಘಾತವಾಗಿದೆ. ಟಿಕೆಟ್​ ಸಿಗದ ಕಾರಣ ಪಕ್ಷದ ಹಿರಿಯ ನಾಯಕ, ಮಾಜಿ ಸಭಾಪತಿ ಕಾಗೋಡು ತಿಮ್ಮಪ್ಪ ಅವರ ಪುತ್ರಿ ಡಾ. ರಾಜನಂದಿನಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರ ನೇತೃತ್ವದಲ್ಲಿ … Continued

ತಾಳಗುಪ್ಪ : ಖಾಸಗಿ ಬಸ್ – ಕಾರ್ ನಡುವೆ ಭೀಕರ ಅಪಘಾತ: ಸ್ಥಳದಲ್ಲೇ ಚಾಲಕ ಸಾವು, 6 ಮಂದಿಗೆ ಗಾಯ

ತಾಳಗುಪ್ಪ : ಮಾರುತಿ ಇಕೋ ಕಾರು ಮತ್ತು ಹಾಗೂ ಪ್ರವಾಸಿ ಬಸ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಕಾರಿನ ಚಾಲಕ ಸ್ಥಳದಲ್ಲೇ ಮೃತಪಟ್ಟು ಆರು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ತಾಳಗುಪ್ಪ ಸಮೀಪದ ಆಲಳ್ಳಿಯಲ್ಲಿ ಸೋಮವಾರ ಸಂಜೆ ನಡೆದಿದೆ. ಜೋಗದಿಂದ ಸಾಗರದ ಕಡೆ ಬರುತ್ತಿದ್ದ ಕಾರು ಪ್ರವಾಸಿ ಬಸ್ಸಿಗೆ ಗುದ್ದಿ … Continued