ಹೊನ್ನಾವರ : ಸಿಡಿಲು ಬಡಿದು ಕಡಲತೀರದಲ್ಲಿದ್ದ ಮೀನುಗಾರನೊಬ್ಬ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಅಪ್ಸರಕೊಂಡದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಘಟನೆ ಶನಿವಾರ ತಡರಾತ್ರಿ ನಡೆದಿದೆ ಎನ್ನಲಾಗಿದ್ದು, ಮೃತ ಮೀನುಗಾರನನ್ನು ವಿನಾಯಕ ಖಾರ್ವಿ ಎಂದು ಗುರುತಿಸಲಾಗಿದೆ. ಮೀನುಗಾರಿಕಾ ಬೋಟ್‌ನಲ್ಲಿ ತೆರಳಿ ಅರಬ್ಬೀ ಸಮುದ್ರದಲ್ಲಿ ಮೀನು ಹಿಡಿದುಕೊಂಡು ಮರಳಿ ಬಂದ ನಂತರ ದೋಣಿಯನ್ನು ದಡಕ್ಕೆ ಹಾಕಲು ಎಳೆಯುತ್ತಿರುವಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪ್ಸರಕೊಂಡ ಬೀಚಿನ ಹತ್ತಿರದ ಎತ್ತರದ ಗುಡ್ಡ ಪ್ರದೇಶದಲ್ಲಿ ಪ್ರವಾಸಿಗನೋರ್ವನಿಗೂ ಸಿಡಿಲು ಬಡಿದಿದೆ ಎನ್ನಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ