ಉಪಚುನಾವಣೆ : ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳು ಘೋಷಣೆ

ಬೆಂಗಳೂರು : ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರಗಳಿಗೆ ಕಾಂಗ್ರೆಸ್​​ ಕೊನೆಗೂ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಬಾಗಲಕೋಟೆ ಕ್ಷೇತ್ರದಿಂದ ಉಮೇಶ ಮೇಟಿ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಶಾಮನೂರು ಕುಟುಂಬದ ಸಮರ್ಥ ಶಾಮನೂರು ಅವರಿಗೆ ಟಿಕೆಟ್‌ ನೀಡಲಾಗಿದೆ. ​​ ಈ ಎರಡೂ ಕ್ಷೇತ್ರಗಳಲ್ಲಿ ಟಿಕೆಟ್​​ಗಾಗಿ ತೀವ್ರ ಪೈಪೋಟಿ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕರು ಸಭೆಗಳನ್ನು … Continued

ಸಹಪಾಠಿಗಳಿಂದ ರ‍್ಯಾಗಿಂಗ್‌ ; ಡೆತ್‌ ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ

ಬಾಗಲಕೋಟೆ : ಸಹಪಾಠಿಗಳ ರ‍್ಯಾಗಿಂಗ್‌ಗೆ ಮನನೊಂದು ಬಿಎ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಜಿಲ್ಲೆಯ ಗುಳೇದಗುಡ್ಡ ಪಟ್ಟಣದ ಖಾಸಗಿ ಕಾಲೇಜಿನ ಬಿಎ ಅಂತಿಮ ವರ್ಷದ ವಿದ್ಯಾರ್ಥಿನಿ ಅಂಜಲಿ ಮುಂಡಾಸ (21) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿದೆ. ಶುಕ್ರವಾರ ಕಾಲೇಜಿನಲ್ಲಿ ಸಹಪಾಠಿಗಳು ವಿದ್ಯಾರ್ಥಿನಿಗೆ ರ‍್ಯಾಗಿಂಗ್ ಮಾಡಿದ್ದು, … Continued

ಬಾಗಲಕೋಟೆ ಹುಡುಗಿಯ ವಿದ್ಯಾಭ್ಯಾಸಕ್ಕೆ ನೆರವಾದ ಕ್ರಿಕೆಟಿಗ ರಿಷಭ್‌ ಪಂತ

ಬೆಂಗಳೂರು : ಕರ್ನಾಟಕದ ಬಡ ಕುಟುಂಬದ ವಿದ್ಯಾರ್ಥಿನಿಯೊಬ್ಬಳಿಗೆ ಅಂತಾರಾಷ್ಟ್ರೀಯ ಕ್ರಿಕೆಟಿಗ ರಿಷಭ್ ಪಂತ್ ಸಹಾಯ ಹಸ್ತ ಚಾಚಿದ್ದಾರೆ ಎಂದು ವರದಿಯಾಗಿದೆ. ಬಾಗಲಕೋಟೆ ಜಿಲ್ಲೆಯ ಬಿಳಗಿ ತಾಲ್ಲೂಕಿನ ರಬಕವಿ ಗ್ರಾಮದ ವಿದ್ಯಾರ್ಥಿನಿ ಜ್ಯೋತಿ ಕಣಬೂರ ಅವರು ಜಮಖಂಡಿಯ ಬಿಎಲ್‌ಡಿ ಕಾಲೇಜಿನಲ್ಲಿ ಬಿಸಿಎ ಕೋರ್ಸ್‌ನ ಮೊದಲ ಸೆಮಿಸ್ಟರ್‌ಗೆ ಪ್ರವೇಶ ಪಡೆದಿದ್ದರು. ಪಿಯುಸಿಯಲ್ಲಿ ಶೇ. 85 ರಷ್ಟು ಅಂಕ ಗಳಿಸಿದ್ದರೂ, … Continued

ಬುದ್ಧಿವಾದ ಹೇಳಿದ್ದಕ್ಕೆ 3 ವರ್ಷದ ಅಣ್ಣನ ಮಗನನ್ನೇ ಕೊಲೆ ಮಾಡಿದ ತಮ್ಮ

ಬಾಗಲಕೋಟೆ: ಅಣ್ಣ ಬುದ್ಧಿವಾದ ಹೇಳಿದ್ದಕ್ಕೆ ಕೋಪಗೊಂಡು ಈತ 3 ವರ್ಷದ ಅಣ್ಣನ ಮಗುವಿಗೆ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಬೆನಕನವಾಡಿ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಕೊಲೆಯಾದ ಬಾಲಕನನ್ನು ಬೆನಕನವಾಡಿ ಗ್ರಾಮದ ಮಾರುತಿ ವಾಲಿಕಾರ ಎಂಬವರ 3 ವರ್ಷದ ಮಗ ಮಧುಕುಮಾರ ಎಂದು ಗುರುತಿಸಲಾಗಿದೆ. ಈ ಮಗುವಿನ … Continued

ಭಾರತ-ಪಾಕ್ ಯುದ್ಧ, ಪ್ರಕೃತಿ ವಿಕೋಪ, ನಾಲ್ಕು ಸುನಾಮಿಗಳ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು

ಬಾಗಲಕೋಟೆ: ಪಹಲ್ಗಾಮ್ ದಾಳಿಯ (Pahalgam Terror Attack) ಬಳಿಕ ಭಾರತ-ಪಾಕಿಸ್ತಾನ ನಡುವೆ ಯುದ್ಧದ ಕಾರ್ಮೋಡ ಕವಿದಿರುವ ಸಂದರ್ಭದಲ್ಲಿ ಭಾರತ-ಪಾಕಿಸ್ತಾನ ಸಂಘರ್ಷದ ಕುರಿತು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಪಹಲ್ಗಾಮ್‌ ದಾಳಿ‌ ಹಿನ್ನೆಲೆಯಲ್ಲಿ ಯುದ್ಧ ಅಲ್ಲಗಳೆಯುವಂತಿಲ್ಲ. ಮತೀಯ ಮತಾಂಧತೆ ಗೊಂದಲ ಹೆಚ್ಚಾಗುತ್ತದೆ ಯುದ್ಧದ ಭೀತಿ‌‌ ಇದೆ ಎಂದು ಅವರು ಹೇಳಿದ್ದಾರೆ. ಯುದ್ಧ ಮಾಡುವವರು ತಯಾರಿದ್ದಾರೆ. ಯುದ್ಧಮಾಡಿಸಿಕೊಳ್ಳುವವರು ಹೆದರುತ್ತಿದ್ದಾರೆ. … Continued

ಬೀಳಗಿ : ಮೊಸಳೆ ದಾಳಿಯಿಂದ ಮಾಲೀಕನ ಪ್ರಾಣ ಉಳಿಸಿದ ಎತ್ತು…!

ಬಾಗಲಕೋಟೆ : ಮೊಸಳೆ ದಾಳಿಯಿಂದ ತನ್ನ ಮಾಲೀಕನನ್ನು ಎತ್ತು ಕಾಪಾಡಿದೆ. ಬಾಗಲಕೋಟೆ (Bagalkot) ‌ಜಿಲ್ಲೆ ಬೀಳಗಿ ತಾಲೂಕಿನ ಹೊನ್ಯಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದ್ದು, ಧರಿಯಪ್ಪ ಮೇಟಿ (32) ಎಂಬ ರೈತ ಎತ್ತಿನ ಮೈತೊಳೆಯಲು ಹೋದಾಗ ಈ ಘಟನೆ ನಡೆದಿದೆ. ಎತ್ತಿನ‌ ಮೈ ತೊಳೆಯಲು ಆಲಮಟ್ಟಿ ಜಲಾಶಯದ ಹಿನ್ನೀರು ಕೃಷ್ಣಾ ನದಿಗೆ ಧರಿಯಪ್ಪ … Continued

ಹುನಗುಂದ | ಭೀಕರ ಅಪಘಾತ ; ನಾಲ್ವರು ಸಾವು

ಬಾಗಲಕೋಟೆ: ಜಿಲ್ಲೆಯ ಹುನಗುಂದ ತಾಲೂಕು ದನ್ನೂರು ಟೋಲ್ ನಾಕಾ ಸನಿಹ ಗುರುವಾರ ಬೆಳ್ಳಂಬೆಳಗ್ಗೆ ಸಂಭವಿಸಿದ ಲಾರಿ ಮತ್ತು ಕಾರಿನ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ. ಬೆಳಗಿನ ಜಾವ ಹೊಸಪೇಟೆ ಸನಿಹದ ಹುಲಿಗೆಮ್ಮ ದೇವಸ್ಥಾನದ ದೇವರ ದರ್ಶನ ಮುಗಿಸಿಕೊಂಡು ಊರಿಗೆ ವಾಪಸ್ ಆಗುವಾಗ ಕಾರು … Continued

ಮನೆಗೆ ಹೋಗುತ್ತಿದ್ದವರ ಮೇಲೆ ಬಿದ್ದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು

ಬಾಗಲಕೋಟೆ: ಜಿಲ್ಲೆಯ ಬೀಳಗಿ ತಾಲೂಕಿನ ಹೊನ್ನಿಹಾಳ ಸಮೀಪದ ಕಟ್ಟಿಗ್ಯಾನಮಡ್ಡಿ ಸಮೀಪದಲ್ಲಿ ಯತ್ನಟ್ಟಿ ಕ್ರಾಸ್ ಬಳಿ ರಸ್ತೆಯಲ್ಲಿ ಹೋಗುತ್ತಿದ್ದವರಿಗೆ ಟಿಪ್ಪರ್ ಮಗುಚಿ ಒಂದೇ ಕುಟುಂಬದ ಐವರು ಮೃತಪಟ್ಟ ಘಟನೆ ನಡೆದಿದೆ ಎಂದು ವರದಿಯಾಗಿದೆ. ಮೃತರನ್ನು ಬಾದರದಿನ್ನಿ ಗ್ರಾಮದ ವೆಂಕಪ್ಪ ಶಿವಪ್ಪ ತೋಳಮಟ್ಟಿ(70) ಯಲ್ಲವ್ವ ವೆಂಕಪ್ಪ ತೋಳಮಟ್ಟಿ(60) ಪುಂಡಲೀಕ ತೋಳಮಟ್ಟಿ(35), ಗಿರಿಸಾಗತ ನಿವಾಸಿ ಅಶೋಕ ಬೊಮ್ಮಣ್ಣವರ( 45) ಅಶೋಕ … Continued

ʼರಾಜನೇ ಮರಳಿ ರಾಜನಾಗುವ ಯೋಗ’; ಗುಳೇದಗುಡ್ಡದ ಇಲಾಳ ಮೇಳದ ಭವಿಷ್ಯವಾಣಿ

ಬಾಗಲಕೋಟೆ : ರಾಜ ಬಲಿಷ್ಠ ಆಗಿದ್ದಾನೆ, ಹೀಗಾಗಿ ರಾಜನೇ ಮರಳಿ ರಾಜನಾಗುವ ಯೋಗ ಇದೆ ಎಂದು ಪ್ರಸಿದ್ಧ ಗುಳೇದಗುಡ್ಡದ ಇಲಾಳ ಮೇಳದ ರಾಜಕೀಯ ಭವಿಷ್ಯವಾಣಿ ತಿಳಿಸಿದೆ. ಗುಳೇದಗುಡ್ಡ ಪಟ್ಟಣದ ಮಾರವಾಡಿ ಬಗೀಚ್​ದಲ್ಲಿ ನಡೆಯುವ ಇಲಾಳ ಮೇಳದಲ್ಲಿ ಪ್ರತಿ ವರ್ಷ ಯುಗಾದಿ (Ugadi) ಪಾಡ್ಯದಂದು ಇಲಾಳ ಮೇಳದ ಭವಿಷ್ಯ ನುಡಿಯಲಾಗುತ್ತದೆ. ಇಲ್ಲಿ, ರಾಜಕೀಯ, ಮಳೆ ಮತ್ತು ಬೆಳೆ … Continued

ಅಯೋಧ್ಯೆ ರಾಮ ಮಂದಿರದ ಮಂಡಲಾರಾಧನೆ ಪೂಜೆಗೆ ಮುಧೋಳ ಅರ್ಚಕ ಆಯ್ಕೆ

ಬಾಗಲಕೋಟೆ: ಅಯೋಧ್ಯೆ ರಾಮ ಮಂದಿರದ ಮಂಡಲಾರಾಧನೆ ಪೂಜೆಗೆ ಜಿಲ್ಲೆಯ ಮುಧೋಳ (Mudhol) ಮೂಲದ ಅರ್ಚಕ ಗುರುನಾಥ ಜೋಶಿ ಅವರು ಆಯ್ಕೆಯಾಗಿದ್ದಾರೆ. ಅರ್ಚಕ ಗುರುನಾಥ ಜೋಶಿ ಅವರು ಮುರಗೋಡ ಚಿದಂಬರ ವೇದ ಸಂಸ್ಕೃತ ಪಾಠಶಾಲೆಯಲ್ಲಿ ಶುಕ್ಲ ಯಜುರ್ವೇದ ಅಧ್ಯಯನ‌ ಮಾಡಿರುವ ಅವರು, ಮೂಲತಃ ಮುಧೋಳ ತಾಲೂಕಿನ ಮಾಚಕನೂರು ನಿವಾಸಿ. ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಗಳು ಗುರುನಾಥ … Continued