ಕೃಷ್ಣಾ ನದಿ ಸೇತುವೆ ಮೇಲೆ ಬಾಯಿಗೆ ಹಗ್ಗ ಕಟ್ಟಿದ ಸ್ಥಿತಿಯಲ್ಲಿ ಮೊಸಳೆ ಪ್ರತ್ಯಕ್ಷ..

ವಿಜಯಪುರ: ಜಿಲ್ಲೆಯ ಕೊಲ್ಹಾರ ಪಟ್ಟಣದ ವಿಜಯಪುರ- ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯ ಕೃಷ್ಣಾ ನದಿ ಸೇತುವೆ ಮೇಲೆ ಬಾಯಿಗೆ ಹಗ್ಗ ಕಟ್ಟಿದ ಸ್ಥಿತಿಯಲ್ಲಿ ಮೊಸಳೆಯೊಂದು ಶನಿವಾರ ಕಾಣಿಸಿಕೊಂಡಿದೆ. ಮೊಸಳೆ ಬಾಯಿಗೆ ಹಗ್ಗದಿಂದ ಕಟ್ಟಿದ್ದರಿಂದ ಆಹಾರ ಸೇವಿಸಲಾಗದ ಮೊಸಳೆ ದಿಕ್ಕು ತೋಚದೆ ಹೆದ್ದಾರಿಗೆ ಬಂದಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಜನವಸತಿ ಪ್ರದೇಶ ಅಥವಾ ಕಬ್ಬಿನ ಗದ್ದೆಗಳಲ್ಲಿ ಮೊಸಳೆ ಕಂಡು … Continued

ಬೈಲಹೊಂಗಲ: ಹೊಸೂರಲ್ಲಿ ಮೊಸಳೆ ಪ್ರತ್ಯಕ್ಷ, ಆಹಾರವಾಯ್ತು ನಾಯಿ

ಬೈಲಹೊಂಗಲ : ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಸಮೀಪದ ಹೊಸೂರ ಗ್ರಾಮದ ರೈತರ ಜಮೀನಿನಲ್ಲಿ ಮೊಸಳೆ ಪ್ರತ್ಯಕ್ಷವಾಗಿದೆ. ಎರಡು-ಮೂರು ದಿನಗಳ ಹಿಂದೆ ಭಾರೀ ಮಳೆಯಿಂದಾಗಿ ಗ್ರಾಮದ ಸೇತುವೆ ಮೇಲೆ ಮಲಪ್ರಭಾ ನದಿ ನೀರು ಹರಿದಿತ್ತು. ನದಿ ನೀರು ಉಕ್ಕಿದ ಪರಿಣಾಮ ನದಿಯಲ್ಲಿದ್ದ ಮೊಸಳೆ ರೈತರ ಜಮೀನಿಗೆ ಬಂದಿದೆ. ಬೆಳಗಿನ ಜಾವ ರೈತನ ಹೊಲದಲ್ಲಿ ಕಟ್ಟಿದ್ದ ನಾಯಿಯೊಂದು ಜೋರಾಗಿ … Continued

ದಾಂಡೇಲಿ: ಕಾಳಿ ನದಿಗೆ ಕೈ ತೊಳೆಯಲು ಹೋದಾಗ ಯುವಕನನ್ನು ಎಳೆದೊಯ್ದ ಮೊಸಳೆ..!

ಕಾರವಾರ: ಜಿಲ್ಲೆಯ ದಾಂಡೇಲಿಯ ಕಾಳಿ ನದಿಯಲ್ಲಿ ಯುವಕನೊಬ್ಬನನ್ನು ಮೊಸಳೆ ಎಳೆದೊಯ್ದ ಘಟನೆ ನಡೆದಿದೆ. ಕಾಳಿ ನದಿಯಲ್ಲಿ ಕೈ ತೊಳೆಯಲು ಹೋದಾಗ ಈ ದುರ್ಘಟನೆ ಸಂಭವಿಸಿದೆ. ಮೃತನನ್ನು ಅರ್ಷದ್ ಖಾನ್ (22) ಎಂದು ಗುರುತಿಸಲಾಗಿದೆ. ಈತದಾಂಡೇಲಿಯ ಪಟೇಲ್ ನಗರದ ನಿವಾಸಿಯಾಗಿದ್ದಾನೆ ಎಂದು ಹೇಳಲಾಗಿದೆ. ಈತ ದಿನನಿತ್ಯದ ಕೆಲಸ ಮುಗಿಸಿ ಕೈ ಕಾಲು ತೊಳೆಯಲು ಕಾಳಿ ನದಿ ದಡಕ್ಕೆ … Continued

ಕಾಳಿ ನದಿಯಲ್ಲಿ ಮೊಸಳೆಯೊಂದಿಗೆ ಪತ್ತೆಯಾದ ಮೃತದೇಹ..!

ದಾಂಡೇಲಿ : ನಗರದ ಕುಳಗಿ ರಸ್ತೆಯಯಲ್ಲಿ ಸೇತುವೆಯ ಕೆಳಗಿನಿಂದ ಮೊಸಳೆಯ ಜೊತೆ ತೇಲಿಕೊಂಡು ಹೋಗುತ್ತಿದ್ದ ಮೃತದೇಹವನ್ನು ಪತ್ತೆ ಹಚ್ಚಿ ಮೊಸಳೆಯ ಬಾಯಿಂದ ಬಿಡಿಸಿ ದಡಕ್ಕೆ ತೆಗೆದುಕೊಂಡು ಬಂದ ವಿದ್ಯಮಾನ ಸಮೀಪದ ಕೋಗಿಲಬನದ ಹತ್ತಿರದಲ್ಲಿ ದಬದಬೆ ಎಂಬಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ. ಇಂದು ಬೆಳ್ಳಂ ಬೆಳಗ್ಗೆ ಸುಮಾರು ೨೫ ರಿಂದ ೩೫ ವರ್ಷ ಅಂದಾಜು ವಯಸ್ಸಿನ ಯುವಕನ … Continued