ವಿಶ್ವದ ಎಲ್ಲ ದೇಶಗಳಿಗೂ ಭೇಟಿ ನೀಡಿ ದಾಖಲೆ ಬರೆದ ಬೆಂಗಳೂರು ಮೂಲದ ಗಿಟಾರ್‌ ವಾದಕ ಬೆನ್ನಿ ಪ್ರಸಾದ…!

ಬೆಂಗಳೂರು ಮೂಲದ ಹೆಸರಾಂತ ಗಿಟಾರ್ ವಾದಕ ಮತ್ತು ಜಾಗತಿಕ ಪ್ರವಾಸಿ ಬೆನ್ನಿ ಪ್ರಸಾದ (Benny Prasad) ಅವರು ತಮ್ಮ ಜೀವಮಾನದ ಅಪರೂಪದ ಪ್ರವಾಸದ ದಾಖಲೆಯನ್ನು ಹಂಚಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಜಗತ್ತಿನ ಒಟ್ಟು 245 ದೇಶ ಹಾಗೂ ಪ್ರಾಂತ್ಯಗಳಿಗೆ ಭೇಟಿ ನೀಡಿರುವ ಅವರು, ಅದಕ್ಕೆ ಪುರಾವೆಯಾಗಿ ವೀಸಾ ಮತ್ತು ಸೀಲ್‌ಗಳಿಂದ ತುಂಬಿ … Continued

ನೀಟ್ 2026 ಮರುಪರೀಕ್ಷೆ ; ಟೆಲಿಗ್ರಾಂ ತಾತ್ಕಾಲಿಕ ನಿರ್ಬಂಧ : ಕೇಂದ್ರದ ನಿರ್ಧಾರ ಎತ್ತಿ ಹಿಡಿದ ದೆಹಲಿ ಹೈಕೋರ್ಟ್

ನವದೆಹಲಿ : 2026ರ ನೀಟ್ (NEET-UG) ಮರುಪರೀಕ್ಷೆಗೂ ಮುನ್ನ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ತಪ್ಪುಮಾಹಿತಿ ಹರಡುವುದನ್ನು ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಟೆಲಿಗ್ರಾಂ ಮೆಸೆಜಿಂಗ್‌ ಪ್ಲಾಟ್‌ಫಾರ್ಮ್‌ (messaging platform) ಜೂನ್ 22ರವರೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಿರುವ ಕ್ರಮವನ್ನುಪ್ರಶ್ನಿಸಿ ಟೆಲಿಗ್ರಾಂ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ನ್ಯಾಯಮೂರ್ತಿ ತೇಜಸ್ ಕಾರಿಯಾ ಅವರು ತೀರ್ಪು ಪ್ರಕಟಿಸಿ, ಮಾಹಿತಿ ತಂತ್ರಜ್ಞಾನ ಕಾಯ್ದೆಯ … Continued

ಮಕ್ಕಳ ಆನ್‌ಲೈನ್ ಸುರಕ್ಷತೆಗೆ ಬ್ರಿಟನ್ ಮಹತ್ವದ ಹೆಜ್ಜೆ: 16 ವರ್ಷದ ಒಳಗಿನವರಿಗೆ ಸಾಮಾಜಿಕ ಜಾಲತಾಣ ನಿಷೇಧ…!

ಲಂಡನ್ : ಮಕ್ಕಳ ಸುರಕ್ಷತೆ ಮತ್ತು ಮಾನಸಿಕ ಆರೋಗ್ಯದ ಹಿತದೃಷ್ಟಿಯಿಂದ ಬ್ರಿಟನ್ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು (ಸೋಷಿಯಲ್ ಮೀಡಿಯಾ) ಬಳಸುವುದನ್ನು ದೇಶಾದ್ಯಂತ ಸಂಪೂರ್ಣವಾಗಿ ನಿಷೇಧಿಸುವುದಾಗಿ  ಬ್ರಿಟನ್‌ ಪ್ರಧಾನಿ ಕೀರ್ ಸ್ಟಾರ್ಮರ್ ಸೋಮವಾರ ಘೋಷಿಸಿದ್ದಾರೆ.  ಈಗ ಆಸ್ಟ್ರೇಲಿಯಾ, ಇಂಡೋನೇಷ್ಯಾ ಮತ್ತು ಮಲೇಷ್ಯಾ ನಂತರ ಇಂತಹ ನಿರ್ಬಂಧ ಹೇರಿದ ವಿಶ್ವದ … Continued

2026ರ ಕರ್ನಾಟಕ ಬಜೆಟ್‌ | 16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್‌ ಮೀಡಿಯಾ ಬಳಕೆ ನಿಷೇಧ: ಸಿಎಂ ಘೋಷಣೆ

ಬೆಂಗಳೂರು: ರಾಜ್ಯದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ (Social Media Ban) ಬಳಕೆ ನಿಷೇಧಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. 2026-27ನೇ ಸಾಲಿನ ಬಜೆಟ್‌ ಮಂಡನೆ ವೇಳೆ ಮಾತನಾಡಿದ ಅವರು,  ಮೊಬೈಲ್‌ ಅತಿಯಾದ ಬಳಕೆಯಿಂದ ಮಕ್ಕಳ ಮೇಲೆ ಬೀರುವ ಅಡ್ಡಪರಿಣಾಮಗಳನ್ನು ತಡೆಗಟ್ಟುವ ಉದ್ದೇಶದಿಂದ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣದ ಬಳಕೆಯನ್ನು ನಿಷೇಧಿಸಲಾಗುವುದು ಎಂದು … Continued

ಸರ್ಕಾರದ ನಿರ್ದೇಶನದ ಬೆನ್ನಲ್ಲೇ ಎಕ್ಸ್ ಹ್ಯಾಂಡಲ್‌ನಿಂದ ‘ಹುರಿಯತ್ ಚೇರ್ಮನ್‌’ ಕೈಬಿಟ್ಟ ಮಿರ್ವೈಜ್ ಉಮರ್ ಫಾರೂಕ್

ಶ್ರೀನಗರ: ಕಾಶ್ಮೀರದ ಪ್ರಮುಖ ಧಾರ್ಮಿಕ ನಾಯಕ ಮತ್ತು ಪ್ರತ್ಯೇಕತಾವಾದಿ ಮುಖಂಡ ಮಿರ್ವೈಜ್ ಉಮರ್ ಫಾರೂಕ್ ಅವರು ತಮ್ಮ ‘ಎಕ್ಸ್’ (X) ಖಾತೆಯಲ್ಲಿದ್ದ ‘ಹುರಿಯತ್ ಅಧ್ಯಕ್ಷ’ ಎಂಬ ಶೀರ್ಷಿಕೆಯನ್ನು ತೆಗೆದುಹಾಕಿದ್ದಾರೆ. ಸರ್ಕಾರದ “ಅಧಿಕೃತ ಎಚ್ಚರಿಕೆ”ಯ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದು, ಜಮ್ಮು-ಕಾಶ್ಮೀರದಲ್ಲಿ ಇದು ತೀವ್ರ ಚರ್ಚೆಗೆ ಕಾರಣವಾಗಿದೆ. ತಮ್ಮ ನಿರ್ಧಾರದ ಕುರಿತು ಎಕ್ಸ್‌ನಲ್ಲಿ ಮಾಹಿತಿ ನೀಡಿರುವ … Continued

16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ನಿಷೇಧ ; ಕೇಂದ್ರಕ್ಕೆ ಮದ್ರಾಸ್ ಹೈಕೋರ್ಟ್ ಸಲಹೆ

ಚೆನ್ನೈ: ಆಸ್ಟ್ರೇಲಿಯಾ ಮಾದರಿಯಲ್ಲಿ ಭಾರತದಲ್ಲೂ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳನ್ನು (Social Media) ನಿಷೇಧಿಸುವ ಕಾನೂನು ಜಾರಿಗೆ ತರುವ ಸಾಧ್ಯತೆಗಳನ್ನು ಪರಿಶೀಲಿಸುವಂತೆ ಮದ್ರಾಸ್ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ. ಸಮಾಜದ ಮೇಲೆ, ವಿಶೇಷವಾಗಿ ಮಕ್ಕಳ ಮೇಲೆ ಇಂಟರ್ನೆಟ್ ಬೀರುತ್ತಿರುವ ವ್ಯತಿರಿಕ್ತ ಪರಿಣಾಮಗಳನ್ನು ಗಮನಿಸಿ ನ್ಯಾಯಾಲಯ ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ … Continued

ಇದೇ ಮೊದಲ ಬಾರಿಗೆ ಮನುಷ್ಯರ ಬಳಿ ಸಲಹೆ ಕೇಳಿದ ಭಾರತದ ಮೊದಲ AI ಪ್ರಭಾವಿ ನೈನಾ ; ಅದು ಯಾವುದು ಗೊತ್ತೆ..?

ವೈಯಕ್ತಿಕ ಸಮಸ್ಯೆಗಳು, ಆರ್ಥಿಕ ತೊಂದರೆಗಳು, ಪ್ರೀತಿ, ಆಘಾತ, ಮಾಹಿತಿಗಳು, ಅತ್ಯುತ್ತಮ ಸಲಹೆಗಳು ಇತ್ಯಾದಿಗಳ ಬಗ್ಗೆ ನಾವು ಈಗ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ (AI) ಬಳಿ ಹಂಚಿಕೊಳ್ಳುತ್ತೇವೆ ಅಥವಾ ಸಲಹೆ ಕೇಳುತ್ತೇವೆ. ಈಗ ಬಹಳಷ್ಟು ಜನರು ವೈದ್ಯಕೀಯ ನೆರವನ್ನೂ AI ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ (AI) ಬಳಿಯೇ ಕೇಳುತ್ತಿದ್ದಾರೆ ಎಂಬುದು ಸಹ ವರದಿಯಾಗುತ್ತಿದೆ. ಆದರೆ ಮೊದಲ ಬಾರಿಗೆ, ಕೃತಕ ಬುದ್ಧಿಮತ್ತೆ(AI)ಯೇ … Continued

ಧರ್ಮಸ್ಥಳದಲ್ಲಿ ಶವ ಶೋಧ ಕಾರ್ಯ ತಾತ್ಕಾಲಿಕ ಸ್ಥಗಿತ : ಗೃಹ ಸಚಿವ ಡಾ. ಪರಮೇಶ್ವರ

ಬೆಂಗಳೂರು : ಧರ್ಮಸ್ಥಳದಲ್ಲಿ ನಡೆಯುತ್ತಿದ್ದ ಶವ ಶೋಧ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಪ್ರಕಟಿಸಿದ್ದಾರೆ. ಧರ್ಮಸ್ಥಳದಲ್ಲಿ ಶವ ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಮಾತನಾಡಿದ ಅವರು, ದೂರುದಾರನ ಮನವಿಯಂತೆ ಧರ್ಮಸ್ಥಳದ 13 ಸ್ಥಳಗಳಲ್ಲಿ ಗುಂಡಿ ತಗೆದು ಶೋಧ ನಡೆಸಲಾಗಿದೆ. ಅವುಗಳಲ್ಲಿ ಎರಡು ಕಡೆ ಮಾನವನ ಮೂಳೆಗಳು ಸಿಕ್ಕಿವೆ. ಅವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ … Continued

ಸಾಮಾಜಿಕ ಜಾಲತಾಣದಲ್ಲಿ ಅಶಾಂತಿ ಪ್ರೇರೇಪಿಸುವ ಹೇಳಿಕೆ ; ಮೂವರ ಮೇಲೆ ಪ್ರಕರಣ ದಾಖಲು

ಮಂಗಳೂರು : ಸಾಮಾಜಿಕ ಜಾಲತಾಣದಲ್ಲಿ ದ್ವೇಷವನ್ನು ಪ್ರೇರೇಪಿಸುವಂತಹ ಹೇಳಿಕೆ ನೀಡಿದ್ದಕ್ಕಾಗಿ ಮತ್ತು ಅಶ್ಲೀಲವಾಗಿ ಮಾತನಾಡಿದ ವೀಡಿಯೊವನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ಮೂವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ಮಹೇಶ ಶೆಟ್ಟಿ ತಿಮರೋಡಿ, ಗಿರೀಶ ಮಟ್ಟಣ್ಣವರ, ಪುನೀತ ಕೆರೆಹಳ್ಳಿ ವಿರುದ್ಧ ಪ್ರಕರಣ ದಾಖಲಾಗಿದೆ ಎಂದ ಮಾಹಿತಿ ಲಭ್ಯವಾಗಿದೆ. ‘ಅಪರಾಧ ಕೃತ್ಯಗಳನ್ನು ನಡೆಸಲು ಪ್ರೇರಣೆಯಾಗುವಂತಹ ಮತ್ತು … Continued