ಕಬಡ್ಡಿ ಪಂದ್ಯಾವಳಿಯಲ್ಲಿ ಬೆಟ್ಟಿಂಗ್: ಗೃಹ ಸಚಿವ ಪರಮೇಶ್ವರ ವಿರುದ್ಧ ಎಫ್‌ಐಆರ್‌ಗೆ ಕೋರ್ಟ್‌ ಆದೇಶ

ಬೆಂಗಳೂರು : ತುಮಕೂರು ನಗರದಲ್ಲಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಡೆದಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ಕಾನೂನುಬಾಹಿರ ಬೆಟ್ಟಿಂಗ್‌ನಲ್ಲಿ ತೊಡಗಿಸಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಜಿ ಪರಮೇಶ್ವರ ವಿರುದ್ಧ ಎಫ್ಐ‌ಆರ್ ದಾಖಲಿಸಿ ತನಿಖೆ ನಡೆಸುವಂತೆ ಜನಪ್ರತಿ‌ನಿಧಿಗಳ ವಿಶೇಷ‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಮಂಗಳವಾರ ಆದೇಶಿಸಿದೆ. ಎಚ್ ಆರ್ ನಾಗಭೂಷಣ ಅವರು ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ ಬೆಂಗಳೂರಿನ … Continued

ಪ್ರತಿಭಟನೆ ವೇಳೆ 19 ಮಂದಿ ಸಾವು : ನೇಪಾಳ ಗೃಹ ಸಚಿವ ರಮೇಶ ಲೇಖಕ್ ರಾಜೀನಾಮೆ

ಕಠ್ಮಂಡು : ಸೋಮವಾರ ನಡೆದ ಹಿಂಸಾತ್ಮಕ ಜನರಲ್-ಝಡ್ ಪ್ರತಿಭಟನೆಗಳಲ್ಲಿ 19 ಜನರ ಜನರು ಸಾವಿಗೀಡಾದ ಘಟನೆಗೆ ನೈತಿಕ ಹೊಣೆ ಹೊತ್ತು ನೇಪಾಳದ ಗೃಹ ಸಚಿವ ರಮೇಶ ಲೇಖಕ್ ರಾಜೀನಾಮೆ ನೀಡಿದ್ದಾರೆ. ಸೋಮವಾರ ಸಂಜೆ ನಡೆದ ಸಂಪುಟ ಸಭೆಯಲ್ಲಿ ಅವರು ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ ಎಂದು ಹಿರಿಯ ಸಚಿವರೊಬ್ಬರು ತಿಳಿಸಿದ್ದಾರೆ. … Continued

ಧರ್ಮಸ್ಥಳದಲ್ಲಿ ಶವ ಶೋಧ ಕಾರ್ಯ ತಾತ್ಕಾಲಿಕ ಸ್ಥಗಿತ : ಗೃಹ ಸಚಿವ ಡಾ. ಪರಮೇಶ್ವರ

ಬೆಂಗಳೂರು : ಧರ್ಮಸ್ಥಳದಲ್ಲಿ ನಡೆಯುತ್ತಿದ್ದ ಶವ ಶೋಧ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಪ್ರಕಟಿಸಿದ್ದಾರೆ. ಧರ್ಮಸ್ಥಳದಲ್ಲಿ ಶವ ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಮಾತನಾಡಿದ ಅವರು, ದೂರುದಾರನ ಮನವಿಯಂತೆ ಧರ್ಮಸ್ಥಳದ 13 ಸ್ಥಳಗಳಲ್ಲಿ ಗುಂಡಿ ತಗೆದು ಶೋಧ ನಡೆಸಲಾಗಿದೆ. ಅವುಗಳಲ್ಲಿ ಎರಡು ಕಡೆ ಮಾನವನ ಮೂಳೆಗಳು ಸಿಕ್ಕಿವೆ. ಅವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ … Continued

ಗೃಹ ಸಚಿವ ಜಿ.ಪರಮೇಶ್ವರ ಒಡೆತನದ ‘ಸಿದ್ದಾರ್ಥ ಶಿಕ್ಷಣ ಸಂಸ್ಥೆ’ ಮೇಲೆ ಇಡಿ ದಾಳಿ

ತುಮಕೂರು: ರಾಜ್ಯ ಗೃಹ ಸಚಿವ ಜಿ.ಪರಮೇಶ್ವರ ಅವರ ಒಡೆತನದ ‘ಸಿದ್ದಾರ್ಥ ಶಿಕ್ಷಣ ಸಂಸ್ಥೆ, ಮೇಲೆ ಜಾರಿ ನಿರ್ದೇಶನಾಲಯ(ED)ದ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದು, ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. ಹೆಗ್ಗೆರೆ ಬಳಿಯಿರುವ ಸಿದ್ದಾರ್ಥ ಮೆಡಿಕಲ್ ಕಾಲೇಜು, ತುಮಕೂರಿನ ಎಸ್ಎಸ್ಐಟಿ ಕಾಲೇಜು ಸೇರಿದಂತೆ ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಅಲ್ಲದೆ, ನೆಲಮಂಗಲದ … Continued

ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಪ್ರಕರಣ ; ಸಿಐಡಿ ತನಿಖೆಗೆ ಆದೇಶ

ಬೆಂಗಳೂರು: ಬಿಜೆಪಿ ಕಾರ್ಯಕರ್ತ ಶಿವಕುಮಾರ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿದೆ. ತುಮಕೂರಿನಲ್ಲಿ ಈ ಬಗ್ಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ ಅವರು, ಬಿಜೆಪಿ ಕಾರ್ಯಕರ್ತ ಶಿವಕುಮಾರ ಪೂಜಾರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆಗೆ ಆದೇಶಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರು ಭಾಗಿಯಾಗಿದ್ದಾರೆ. ಯಾರೆ ಕೈವಾಡವಿದೆ ಎಂಬುದು ತನಿಖೆ ನಂತರ … Continued

ಪೊಲೀಸರು ಹಣೆಗೆ ಕುಂಕುಮ, ತಿಲಕ ಇಡಬಾರದೆಂದು ಹೇಳಿಲ್ಲ: ಗೃಹ ಸಚಿವ ಡಾ. ಪರಮೇಶ್ವರ ಸ್ಪಷ್ಟನೆ

ಬೆಂಗಳೂರು : ಪೊಲೀಸರು ಕುಂಕುಮ, ತಿಲಕ ಇಡಬಾರದು ಎಂದು ನಾನು ಯಾವ ಸಭೆಯಲ್ಲೂ ಸೂಚನೆ ಕೊಟ್ಟಿಲ್ಲ. ಆದರೆ ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡುವಂತೆ ಸೂಚಿಸಿದ್ದೇನೆ ಎಂದು ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ ಅವರು ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸುಳ್ಳು ವದಂತಿ ಹರಡುವುದು ಸರಿಯಲ್ಲ, ಕುಂಕುಮ ಬೊಟ್ಟು, ವಿಭೂತಿ, ತಿಲಕ ಏನು ಬೇಕಾದರೂ ಇಟ್ಟುಕೊಳ್ಳಬಹುದು. … Continued

ಹಳೇಹುಬ್ಬಳ್ಳಿ ಹಿಂಸಾಚಾರದ ಹಿಂದೆ ಮತೀಯ ಸಂಘಟನೆಗಳಿದ್ದರೆ ತನಿಖೆಯಲ್ಲಿ ಹೊರಗೆ ಬಂದೇ ಬರುತ್ತದೆ: ಗೃಹ ಸಚಿವ ಅರಗ ಜ್ಞಾನೇಂದ್ರ

ಹುಬ್ಬಳ್ಳಿ: ಶನಿವಾರ ಒಂದು ದೊಡ್ಡ ಗುಂಪು ಕಾನೂನು ಕೈಗೆ ತಗೆದುಕೊಂಡಿದೆ. ಪೊಲೀಸರ ಮೇಲೆ ಹಲ್ಲೆ ಮಾಡಿ, ವಾಹನಗಳನ್ನು ಜಖಂ ಮಾಡಿದೆ. ಓಣಿಯಲ್ಲಿ ಕಲ್ಲು ಎಸೆದು ಅರಾಜಕತೆ ಸೃಷ್ಟಿ ಮಾಡಿದನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ನಗರದ ದಿಡ್ಡಿಕೇರಿ ಓಣಿಯಲ್ಲಿರುವ ಹನುಮಂತನ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮದವರ ಜೊತೆ … Continued

ಪ್ರಕರಣ ಹೊರಬಂದು 8 ತಿಂಗಳಾದ್ರೂ ಮಾತಾಡದ ಕಾಂಗ್ರೆಸ್‌ನವರಿಗೆ ಈಗ ಶ್ರೀಕಿ ಬಂಧಿಸಿದ್ದು ನೋವಾಗಿದ್ಯಾ..?: ಅರಗ ಜ್ಞಾನೇಂದ್ರ ಪ್ರಶ್ನೆ

ಶಿವಮೊಗ್ಗ:ಬಿಟ್‌ ಕಾಯಿನ್‌  ಪ್ರಕರಣ ಹೊರಗೆಬಂದು 8 ತಿಂಗಳಾದರೂ ಮಾತನಾಡದ ಕಾಂಗ್ರೆಸ್ಸಿನವರು ಅಧಿವೇಶನದಲ್ಲೂ ಸಹ ಮಾತಾಡಿಲ್ಲ. ಆದರೆ ಶ್ರೀಕಿ ಬಂಧಿಸಿದ ನಂತರ ಅವರ ಮಾತು ಶುರುವಾಗಿದೆ. ಶ್ರೀಕಿ ಬಂಧಿಸಿದ್ದು ಕಾಂಗ್ರೆಸ್ಸಿಗೆ ನೋವಾಗಿದೆಯಾ ಎಂದು ರಾಜ್ಯದ ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರಶ್ನಿಸಿದರು. 2018ರಲ್ಲಿಯೇ ಹ್ಯಾಕರ್‌ ಶ್ರೀಕಿ ಬಗ್ಗೆ ಮಾಹಿತಿ ಗೊತ್ತಿದ್ದರೂ ಕಾಂಗ್ರೆಸ್‌ನವರು ಆಗ ಸುಮ್ಮನೆ ಕುಳಿತರು. ನಾವು … Continued