ಪೊಲೀಸರು ಹಣೆಗೆ ಕುಂಕುಮ, ತಿಲಕ ಇಡಬಾರದೆಂದು ಹೇಳಿಲ್ಲ: ಗೃಹ ಸಚಿವ ಡಾ. ಪರಮೇಶ್ವರ ಸ್ಪಷ್ಟನೆ

ಬೆಂಗಳೂರು : ಪೊಲೀಸರು ಕುಂಕುಮ, ತಿಲಕ ಇಡಬಾರದು ಎಂದು ನಾನು ಯಾವ ಸಭೆಯಲ್ಲೂ ಸೂಚನೆ ಕೊಟ್ಟಿಲ್ಲ. ಆದರೆ ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡುವಂತೆ ಸೂಚಿಸಿದ್ದೇನೆ ಎಂದು ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ ಅವರು ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸುಳ್ಳು ವದಂತಿ ಹರಡುವುದು ಸರಿಯಲ್ಲ, ಕುಂಕುಮ ಬೊಟ್ಟು, ವಿಭೂತಿ, ತಿಲಕ ಏನು ಬೇಕಾದರೂ ಇಟ್ಟುಕೊಳ್ಳಬಹುದು. ಪೊಲೀಸರಿಗೆ ತಮ್ಮದೇ ಆದ ಇಲಾಖಾ ನಿಯಮ ಇವೆ. ಆ ನಿಯಮಗಳ ವ್ಯಾಪ್ತಿಯಲ್ಲಿ ಮಾಡಿಕೊಳ್ಳಬಹುದು. ಇದರಲ್ಲಿ ಯಾವುದೇ ರೀತಿಯ ಗೊಂದಲ ಸೃಷ್ಟಿಸುವುದು ಸರಿಯಲ್ಲ, ನಾನು ಯಾವುದೇ ಸೂಚನೆಯನ್ನೂ ನೀಡಿಲ್ಲ ಎಂದು ಹೇಳಿದ್ದಾರೆ. ಹಾಗೂ ಈ ಬಗ್ಗೆ ವದಂತಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಕೋಮುವಾದ ಎಂಬುದು ಒಂದು ಸಮುದಾಯಕ್ಕೆ ಸೇರಿದ್ದಲ್ಲ. ಎಲ್ಲಾ ಸಮುದಾಯದಲ್ಲೂ‌ ಇದೆ. ಕೋಮುವಾದ ತಡೆಗೆ ಹೊಸ ವಿಂಗ್‌ ರಚನೆ ಮಾಡುತ್ತೇವೆ. ಮಂಗಳೂರು ಭಾಗದಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್​ ಬೇಡಿಕೆ ಬಂದಿದೆ. ಅದಕ್ಕಾಗಿ ಅಲ್ಲಿ ಮಾಡಲಾಗುತ್ತಿದೆ. ಹೀಗಾಗಿ ಬೇರೆ ಕಡೆ ಇದನ್ನ ಮಾಡೋ‌ ಅಗತ್ಯತೆ‌ ಬಂದಿಲ್ಲ ಎಂದಿದ್ದಾರೆ.ಆ್ಯಂಟಿ ಕಮ್ಯುನಲ್ ವಿಂಗ್​ನಲ್ಲಿ ಸಮರ್ಥ ಅಧಿಕಾರಿಗಳು ಇರಲಿದ್ದಾರೆ. ಕೋಮು ಸೌಹಾರ್ದತೆಯನ್ನು ತರಲು ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| ಎಲ್ಲರೆದುರು ಸರ್ಪಕ್ಕೆ ಮುತ್ತಿಕ್ಕಿದ ಭೂಪ...ಆದ್ರೆ ನಂತರ ಆದದ್ದೇ ಬೇರೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement