ಹಳೇಹುಬ್ಬಳ್ಳಿ ಹಿಂಸಾಚಾರದ ಹಿಂದೆ ಮತೀಯ ಸಂಘಟನೆಗಳಿದ್ದರೆ ತನಿಖೆಯಲ್ಲಿ ಹೊರಗೆ ಬಂದೇ ಬರುತ್ತದೆ: ಗೃಹ ಸಚಿವ ಅರಗ ಜ್ಞಾನೇಂದ್ರ

ಹುಬ್ಬಳ್ಳಿ: ಶನಿವಾರ ಒಂದು ದೊಡ್ಡ ಗುಂಪು ಕಾನೂನು ಕೈಗೆ ತಗೆದುಕೊಂಡಿದೆ. ಪೊಲೀಸರ ಮೇಲೆ ಹಲ್ಲೆ ಮಾಡಿ, ವಾಹನಗಳನ್ನು ಜಖಂ ಮಾಡಿದೆ. ಓಣಿಯಲ್ಲಿ ಕಲ್ಲು ಎಸೆದು ಅರಾಜಕತೆ ಸೃಷ್ಟಿ ಮಾಡಿದನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ನಗರದ ದಿಡ್ಡಿಕೇರಿ ಓಣಿಯಲ್ಲಿರುವ ಹನುಮಂತನ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಗುಂಪಿನಲ್ಲಿ ನಾವು ಏನೋ ಮಾಡಿದ್ದೇವೆ ಎಂದುಕೊಂಡರೆ ಅದು ನಮ್ಮ ಸರ್ಕಾರದಲ್ಲಿ ನಡೆಯುವುದಿಲ್ಲ. ಕಾನೂನು ಪಾಲನೆ, ಸಂವಿಧಾನ ಪಾಲನೆ ಮಾಡುವುದು ನಮಗಲ್ಲ ಅಂದುಕೊಂಡರೆ ಅಂಥವರು ಈ ದೇಶದ ನಾಗರಿಕರಾಗಲು ಸಾಧ್ಯವಿಲ್ಲ ಎಂದು ಹೇಳಿದರು.

ಹಳೇಹುಬ್ಬಳ್ಳಿ ಹಿಂಸಾಚಾರದ ಹಿಂದೆ ಮತೀಯ ಸಂಘಟನೆಗಳಿದ್ದರೆ ಅದು ತನಿಖೆ ಹೊರಗೆ ಬಂದೇ ಬರುತ್ತದೆ. ಹಿಂದಿನ ಸರ್ಕಾರ ಅಂತಹ ಸಂಘಟನೆಗಳನ್ನು ತುಷ್ಟೀಕರಣ ಮಾಡಿವೆ‌. ಕಾಂಗ್ರೆಸ್​ನವರಿಗೆ ಹುಬ್ಬಳ್ಳಿಯಲ್ಲಿ ಇಂತಹ ಘಟನೆ ನಡೆದರೂ ಖಂಡಿಸುವ ಸೌಜನ್ಯ ಇಲ್ಲ. ಡಿಜೆ ಕೆಜಿ ಹಳ್ಳಿಗೂ ಈ ಘಟನೆಗೂ ಸಾಮ್ಯತೆ ಇದೆ. ಅದರ ಹಿಂದೆ ಯಾರೇ ಇದ್ದರೂ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದು ಖಡಕ್‌ ಎಚ್ಚರಿಕೆ ನೀಡಿದರು.
ಸಚಿವ ಅರಗ ಜ್ಞಾನೇಂದ್ರ, ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆಯುತ್ತಿರುವ ಇನ್ಸ್ಪೆಕ್ಟರ್ ಕಾಡದೇವರಮಠ ಮತ್ತು ಪೇದೆ ಗುರುಪಾದಪ್ಪ ಸ್ವಾದಿ ಆರೋಗ್ಯ ವಿಚಾರಿಸಿದರು. ಎಡಿಜಿಪಿ ಪ್ರತಾಪ್ ರೆಡ್ಡಿ ಜೊತೆ ಹಿಂಸಾಚಾರದ ಬಗ್ಗೆ ಮಾಹಿತಿ ಪಡೆದುಕೊಂಡರು.

ಪ್ರಮುಖ ಸುದ್ದಿ :-   ಶ್ರೀರಂಗಪಟ್ಟಣ: ಐಸ್‌ ಕ್ರೀಂ ತಿಂದ ಬಳಿಕ ಅವಳಿ ಮಕ್ಕಳ ಸಾವು

ಹುಬ್ಬಳ್ಳಿ ನಗರದ ದಿಡ್ಡಿಕೇರಿ ಓಣಿಯಲ್ಲಿರುವ ಹನುಮಂತನ ದೇವಸ್ಥಾನಕ್ಕೆ ಪ್ರಹ್ಲಾದ್ ಜೋಶಿ, ಅರಗ ಜ್ಞಾನೇಂದ್ರ ಭೇಟಿ ನೀಡಿದರು. ನಿನ್ನೆ ರಾತ್ರಿ ಹನುಮಂತನ ದೇವಸ್ಥಾನದ ಮೇಲೆ ಕಲ್ಲು ತೂರಿದ್ದು, ಪ್ರಹ್ಲಾದ್ ಜೋಶಿ, ಅರಗ ಜ್ಞಾನೇಂದ್ರ, ಶೆಟ್ಟರ್ ದೇಗುಲ ಪರಿಶೀಲಿಸಿದ್ದಾರೆ. ಹನುಮಂತ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅರಗ ಜ್ಞಾನೇಂದ್ರ, ಬಳಿಕ ಹಳೇ ಹುಬ್ಬಳ್ಳಿ ಠಾಣೆಗೆ ಭೇಟಿ ನೀಡಿ ಹು-ಧಾ ನಗರ ಪೊಲೀಸರಿಂದ ಮಾಹಿತಿ ಪಡೆದುಕೊಂಡರು.

 

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement