ಗ್ರೋಕ್ ಅಶ್ಲೀಲತೆ ವಿರುದ್ಧ ಕೇಂದ್ರದ ಗಡುವು : 3,500 ಪೋಸ್ಟ್‌, 600 ಖಾತೆ ಡಿಲೀಟ್ ಮಾಡಿದ ‘ಎಕ್ಸ್’

ನವದೆಹಲಿ: ಅಶ್ಲೀಲ ಹಾಗೂ ಅವಹೇಳನಕಾರಿ ವಿಷಯಗಳನ್ನು ಹಂಚಿಕೊಳ್ಳಲಾಗುತ್ತಿದೆ ಎಂಬ ಕಾರಣಕ್ಕೆ ಭಾರತ ಸರ್ಕಾರ ನೀಡಿದ ಕಟ್ಟುನಿಟ್ಟಿನ ಸೂಚನೆಯ ಬೆನ್ನಲ್ಲೇ, ಎಲೋನ್ ಮಸ್ಕ್ ಮಾಲೀಕತ್ವದ ಸಾಮಾಜಿಕ ಜಾಲತಾಣ ‘ಎಕ್ಸ್’ (ಹಿಂದಿನ ಟ್ವಿಟರ್), ಸುಮಾರು 3,500 ಪೋಸ್ಟ್‌ಗಳನ್ನು ತೆಗೆದುಹಾಕಿದ್ದು, 600ಕ್ಕೂ ಹೆಚ್ಚು ಖಾತೆಗಳನ್ನು ರದ್ದುಗೊಳಿಸಿದೆ. ಕೇಂದ್ರ ಸರ್ಕಾರದ ನೋಟಿಸ್‌ಗೆ ಪ್ರತಿಕ್ರಿಯಿಸಿರುವ ಎಕ್ಸ್ ಸಂಸ್ಥೆ, ತನ್ನ ಪ್ಲಾಟ್‌ಫಾರ್ಮ್‌ನಲ್ಲಿನ ಲೋಪದೋಷಗಳನ್ನು ಒಪ್ಪಿಕೊಂಡಿದೆ. … Continued

ಗ್ರೋಕ್‌ (Grok) ಎಐ ದುರ್ಬಳಕೆಗೆ ತೀವ್ರ ಆಕ್ಷೇಪ ; ಎಕ್ಸ್ ಸಂಸ್ಥೆಗೆ ಕೇಂದ್ರ ಸರ್ಕಾರದಿಂದ ಖಡಕ್ ನೋಟಿಸ್

ನವದೆಹಲಿ: ಮಹಿಳೆಯರ ವಿರುದ್ಧ ಅಶ್ಲೀಲ ಮತ್ತು ಅವಹೇಳನಕಾರಿ ವಿಷಯಗಳನ್ನು ಸೃಷ್ಟಿಸಲು ಗ್ರೋಕ್‌ (‘Grok)’ ಎಂಬ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಮೈಕ್ರೋಬ್ಲಾಗಿಂಗ್ ತಾಣ ‘X’ (ಹಿಂದಿನ ಟ್ವಿಟರ್) ಸಂಸ್ಥೆಗೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ಗಂಭೀರ ನೋಟಿಸ್ ನೀಡಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಮತ್ತು ಐಟಿ … Continued

ಭಾರತ ಸರ್ಕಾರ ವಿರುದ್ಧ ಹೈಕೋರ್ಟ್​​ನಲ್ಲಿ ಮೊಕದ್ದಮೆ ಹೂಡಿದ ಇಲಾನ್ ಮಸ್ಕ್ ಒಡೆತನದ ಎಕ್ಸ್‌

ಬೆಂಗಳೂರು : ಎಲಾನ್ ಮಸ್ಕ್ ಒಡೆತನದ ಎಕ್ಸ್‌ ವೆಬ್‌ಸೈಟ್‌ನಲ್ಲಿನ ಟ್ವೀಟ್ ಮತ್ತು ಇತರ ವಿಷಯವನ್ನು ತೆಗೆದುಹಾಕುವಂತೆ ಸೂಚಿಸಲು ಕೇಂದ್ರ ಸರ್ಕಾರವು ಮಾಹಿತಿ ತಂತ್ರಜ್ಞಾನ ಕಾಯ್ದೆ (ಐಟಿ ಆಕ್ಟ್) ಸೆಕ್ಷನ್ 79(3)(ಬಿ)ಯನ್ನು ಬಳಸುವ ವಿಧಾನವನ್ನು ಪ್ರಶ್ನಿಸಿ ಎಕ್ಸ್, ಭಾರತ ಸರ್ಕಾರದ ವಿರುದ್ಧ ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಭಾರತದಲ್ಲಿನ ಸರ್ಕಾರಿ ಅಧಿಕಾರಿಗಳು ಸರಿಯಾದ ಕಾನೂನು ಕಾರ್ಯವಿಧಾನಗಳನ್ನು ಬೈಪಾಸ್ … Continued

ವಿಶ್ವದಾದ್ಯಂತ ಹಲವೆಡೆ ʼಎಕ್ಸ್ʼ ಸ್ಥಗಿತ ; ಫೀಡ್ ಪ್ರವೇಶಿಸಲು ಬಳಕೆದಾರರಿಗೆ ಸಾಧ್ಯವಾಗುತ್ತಿಲ್ಲ

ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಎಕ್ಸ್ ಸೋಮವಾರ ಅನೇಕ ಸ್ಥಗಿತಗಳಿಗೆ ಸಾಕ್ಷಿಯಾಗಿದೆ. ಪ್ರಪಂಚದಾದ್ಯಂತ ಬಳಕೆದಾರರು ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ವಿಷಯವನ್ನು ಪೋಸ್ಟ್‌ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವರದಿ ಮಾಡಿದ್ದಾರೆ. ಹಲವಾರು ಬಳಕೆದಾರರು ತಮ್ಮ X ಫೀಡ್ ಅನ್ನು ಪ್ರವೇಶಿಸುವಾಗ ಸೋಮವಾರ ಕನಿಷ್ಠ ಮೂರು ಬಾರಿ ಸಮಸ್ಯೆಗಳಾಗಿವೆ ಎಂದು ಹೇಳಿದ್ದಾರೆ. X ಸುಮಾರು ಮಧ್ಯಾಹ್ನ 3 … Continued

ಕರ್ನಾಟಕ ಬಿಜೆಪಿ ಹಂಚಿಕೊಂಡ ಅನಿಮೇಟೆಡ್ ವೀಡಿಯೊ ತೆಗೆದುಹಾಕಿ ; ಎಕ್ಸ್​ ಗೆ ಚುನಾವಣಾ ಆಯೋಗ ಸೂಚನೆ

ನವದೆಹಲಿ: ಮುಸ್ಲಿಂ ಸಮುದಾಯದ ಮೀಸಲಾತಿಗೆ ಸಂಬಂಧಿಸಿದಂತೆ ಬಿಜೆಪಿ ಕರ್ನಾಟಕ ಘಟಕ ಹಂಚಿಕೊಂಡಿರುವ ಅನಿಮೇಟೆಡ್ ಕಾರ್ಟೂನ್ ವೀಡಿಯೊವನ್ನು ‘ತಕ್ಷಣ’ ತೆಗೆದುಹಾಕುವಂತೆ ಕೇಂದ್ರ ಚುನಾವಣಾ ಆಯೋಗ ಮಂಗಳವಾರ ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ ಗೆ ಸೂಚನೆ ನೀಡಿದೆ. ಈ ಸಂಬಂಧ ‘X’ ನ ನೋಡಲ್ ಅಧಿಕಾರಿಗೆ ಚುನಾವಣಾ ಆಯೋಗವು ಬರೆದ ಪತ್ರದಲ್ಲಿ, ಕರ್ನಾಟಕ ಬಿಜೆಪಿ ಘಟಕ ಮಾಡಿರುವ ಪೋಸ್ಟ್ … Continued

X’ ನಲ್ಲಿ 2 ಹೊಸ ಚಂದಾದಾರಿಕೆ ಯೋಜನೆ ಪ್ರಕಟಿಸಿದ ಎಲೋನ್ ಮಸ್ಕ್ : ಮಾಹಿತಿ ಇಲ್ಲಿದೆ

ಎಕ್ಸ್ (ಹಿಂದೆ ಟ್ವಿಟರ್) ಶೀಘ್ರದಲ್ಲೇ ಎರಡು ಹೊಸ ಚಂದಾದಾರಿಕೆ ಶ್ರೇಣಿಗಳನ್ನು ಪರಿಚಯಿಸಲಿದೆ ಎಂದು ಎಲೋನ್ ಮಸ್ಕ್ ಪ್ರಕಟಿಸಿದ್ದಾರೆ. ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ ಫಾರ್ಮ್ ಎರಡು ಆಯ್ಕೆಗಳಲ್ಲಿ ಒಂದು ಕಡಿಮೆ-ವೆಚ್ಚದ ಆಯ್ಕೆಯನ್ನು ಪರಿಚಯಿಸುತ್ತದೆ, ಅದು ಎಲ್ಲಾ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ, ಆದರೆ ಜಾಹೀರಾತುಗಳೊಂದಿಗೆ ಇರಲಿದೆ.ಮತ್ತೊಂದೆಡೆ, ಹೆಚ್ಚು ದುಬಾರಿ ಶುಲ್ಕದ ಯೋಜನೆಯಾಗಿದ್ದು, ಇದು ನಿಮ್ಮ ಫೀಡ್‌ನಲ್ಲಿ ಜಾಹೀರಾತುಗಳನ್ನು ತೋರಿಸುವುದನ್ನು ತಡೆಯುತ್ತದೆ. … Continued