ಬೆಂಗಳೂರು | ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿದ ಚಿರತೆ ಕೂಡಿ ಹಾಕಿದ ದಂಪತಿ ; 5 ತಾಸು ಕಾರ್ಯಾಚರಣೆ ನಂತರ ಸೆರೆ

 ಬೆಂಗಳೂರು: ತಮ್ಮ ಮನೆಯೊಳಗೆ ನುಗ್ಗಿದ ಚಿರತೆಯನ್ನು ದಂಪತಿ ಮನೆಯೊಳಗೆ ಕೂಡಿ ಹಾಕಿದ ನಂತರ ತಕ್ಷಣವೇ ಕಟ್ಟಡದಿಂದ ಹೊರಬಂದು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ನಂತರ ಐದು ಗಂಟೆಗಳ ಕಾರ್ಯಾಚರಣೆಯ ನಂತರ ಚಿರತೆಯನ್ನು ಸೆರೆ ಹಿಡಿದು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಕೊಂಡೊಯ್ಯಲಾಯಿತು. ಬೆಂಗಲೂರು ನಗರದ ಹೊರವಲಯದ ಜಿಗಣಿಯಲ್ಲಿರುವ ಕುಂಟ್ಲು ರೆಡ್ಡಿ ಲೇಔಟ್‌ನಲ್ಲಿ ಈ ಘಟನೆ ನಡೆದಿದೆ. ಮಂಜುನಾಥ … Continued

ವೀಡಿಯೊ | ಭಾರಿ ಮಳೆ ; ಜಲಾವೃತಗೊಂಡ ಮನೆ ಮೇಲೆ ಮೊಸಳೆ ಪ್ರತ್ಯಕ್ಷ….!

ಗುಜರಾತಿನ ವಡೋದರಾದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ನದಿಗಳಲ್ಲಿ ಪ್ರವಾಹ ಹೆಚ್ಚಾಗಿದೆ. ರಾಜ್ಯದಾದ್ಯಂತ ಸುಮಾರು 140 ಜಲಾಶಯಗಳು, 24 ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ವಡೋದರದ ಅಕೋಟ ಕ್ರೀಡಾಂಗಣ ಪ್ರದೇಶ ಜಲಾವೃತವಾಗಿದ್ದು, ಇಲ್ಲಿನ ಮನೆಯೊಂದರ ಮೇಲ್ಛಾವಣಿಯಲ್ಲಿ ಮೊಸಳೆ ಕಾಣಿಸಿಕೊಂಡಿದೆ.ಇದರ ವೀಡಿಯೊ ವೈರಲ್ ಆಗಿದೆ. ಬಹುತೇಕ ಮುಳುಗಿರುವ ಮನೆಯ ಮೇಲ್ಛಾವಣಿಯ ಮೇಲೆ ಮೊಸಳೆ ಇರುವುದು ಕಂಡುಬಂದಿದೆ. ಪ್ರವಾಹದಲ್ಲಿ ಕನಿಷ್ಠ … Continued

ಮಾಜಿ ಕಾರ್ಪೊರೇಟರ್ ಸಂಬಂಧಿ ಮನೆ ಮೇಲೆ ಐಟಿ ದಾಳಿ: 40 ಕೋಟಿ ರೂ. ಗಳಿಗೂ ಅಧಿಕ ಹಣ ಪತ್ತೆ

ಬೆಂಗಳೂರು : ಆರ್​ಟಿ ನಗರದ ಎರಡು ಸ್ಥಳಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಆತ್ಮಾನಂದ ಕಾಲೋನಿಯ ಮನೆಯೊಂದರ ಕೊಠಡಿಯಲ್ಲಿ ಮಂಚದಡಿ ಬಚ್ಚಿಟ್ಟಿದ್ದ ಕೋಟ್ಯಂತರ ರೂಪಾಯಿ ಕಂತೆ ಕಂತೆ ನೋಟುಗಳು ಪತ್ತೆಯಾಗಿದೆ ಎಂದು ವರದಿಯಾಗಿದೆ. ಆರ್​​.ಟಿ.ನಗರದ ಮಾಜಿ ಕಾರ್ಪೊರೇಟರ್ ಅಶ್ವತ್ಥಮ್ಮ ಅವರ ಬಾಮೈದ ಪ್ರದೀಪ​​ ಅವರ ಫ್ಯ್ಲಾಟ್​​​​​​ ಮೇಲೆ ದಾಳಿ ಮಾಡಿದ ಐಟಿ … Continued

ಒಬ್ಬಂಟಿಯಾಗಿದ್ದ ಶಾಸ್ತ್ರ ಹೇಳುವವನ ಮನೆಯಲ್ಲಿತ್ತು 30 ಲಕ್ಷ ರೂ: ಸಾವಿನ ನಂತರ ಪತ್ತೆಯಾಯ್ತು ಇಷ್ಟೊಂದು ಸಂಪತ್ತು…!

ಚಿತ್ರದುರ್ಗ: ವಿವಾಹವಾಗದೇ ಒಂಟಿಯಾಗಿ ಜೀವನ ನಡೆಸುತ್ತಿದ್ದ ಅರ್ಚಕರೊಬ್ಬರು ವಾರದ ಹಿಂದಷ್ಟೇ ಮೃತಪಟ್ಟಿದ್ದರು. ಇದೀಗ ಅವರ ಮನೆಯಲ್ಲಿ ಲಕ್ಷಾಂತರ ರೂಪಾಯಿ ಸಿಕ್ಕಿದೆ ಎಂದು ವರದಿಯಾಗಿದೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದ ನಿವಾಸಿ ಗಂಗಾಧರ ಶಾಸ್ತ್ರೀ (70) ಎಂಬವರು ವಾರದ ಹಿಂದೆ ಮೃತರಾಗಿದ್ದರು. ಸಣ್ಣ ಮನೆಯೊಂದರಲ್ಲಿ ಒಬ್ಬರೇ ಇದ್ದ ಅವರು ಶಾಸ್ತ್ರ ಹೇಳುವುದು ಹಾಗೂ ಶುಭ ಕಾರ್ಯದಲ್ಲಿ ಪೂಜೆ … Continued

2 ಬಲ್ಬ್‌‌ ಇರುವ ವೃದ್ಧೆ ಮನೆಗೆ ಬರೋಬ್ಬರಿ 1 ಲಕ್ಷ ರೂ. ಕರೆಂಟ್ ಬಿಲ್ ..!

ಕೊಪ್ಪಳ : ಗೃಹಜ್ಯೋತಿ ಯೋಜನೆ ಅಡಿಯಲ್ಲಿ 200 ಯುನಿಟ್‌ ವಿದ್ಯುತ್‌ ಉಚಿತವಾಗಿ ನೀಡಲಾಗುವುದು ಎಂದು ಘೋಷಣೆ ಮಾಡಿದ ಬೆನ್ನಲ್ಲೇ ರಾಜ್ಯದ ಹಲವೆಡೆ ಗ್ರಾಹರಕಿಗೆ ಹೆಚ್ಚಿನ ವಿದ್ಯುತ್‌ ಬಿಲ್‌ ಬರುತ್ತಿರುವ ಬಗ್ಗೆ ವರದಿಗಳಾಗುತ್ತಿವೆ. ಈಗ ಕೊಪ್ಪಳದಲ್ಲಿ ಶೆಡ್‌ನಲ್ಲಿ ವಾಸವಾಗಿರುವ ವೃದ್ಧೆಗೆ ಬರೋಬ್ಬರಿ 1ಲಕ್ಷ ರೂಪಾಯಿ ಬಿಲ್‌ ಬಂದಿದೆ…! ಬಿಲ್‌ ಕಂಡು ವೃದ್ಧೆ ಕಂಗಾಲಾಗಿದ್ದಾರೆ. ಕೊಪ್ಪಳದ ಭಾಗ್ಯನಗರದಲ್ಲಿ ಸಣ್ಣ … Continued

ಮನೆಯ ಅಟ್ಟದಲ್ಲಿ ಅಡಗಿದ್ದ ಬೃಹತ್‌ ಕಾಳಿಂಗ ಸರ್ಪ ಹಿಡಿದ ಉರಗ ತಜ್ಞ ಪವನ್, ವಿಡಿಯೋದಲ್ಲಿ ಸೆರೆ..

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಯಾಣದಲ್ಲಿ ಮನೆಯೊಂದರ ಅಟ್ಟದ ಮೇಲೆ ಸೇರಿಕೊಂಡಿದ್ದ ಕಾಳಿಂಗ ಹಾವನ್ನು ಸೆರೆ ಹಿಡಿಯಲಾಗಿದೆ. ಉರಗ ತಜ್ಞ ಪವನ್ ನಾಯ್ಕ ಮನೆಯೊಳಗೆ ಸೇರಿಕೊಂಡಿದ್ದ ಬೃಹತ್‌ ಕಾಳಿಂಗ ಸರ್ಪವನ್ನು ಸೆರೆ ಹಿಡಿದಿದ್ದಾರೆ. ಇದು ಸುಮಾರು 8ರಿಂದ 10 ಅಡಿಗಳಷ್ಟು ಉದ್ದವಿರಬಹುದು. ಮನೆ ಮೂಲೆಯಲ್ಲಿ ಸಾಮಾನು ಸರಂಜಾಮುಗಳ ಮಧ್ಯೆ ಸೇರಿಕೊಂಡಿದ್ದ ಹಾವನ್ನು … Continued

ಕುಡಿದ ಅಮಲಿನಲ್ಲಿ ಮನೆಗೆ ಬೆಂಕಿ ಹಚ್ಚಿ 7 ಜನರ ದಹನ ಮಾಡಿದ್ದ ಆರೋಪಿ ಶವವಾಗಿ ಪತ್ತೆ..!

ಮಡಿಕೇರಿ: ಕುಡಿದ ಅಮಲಿನಲ್ಲಿ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ನಾಲ್ವರು ಮಕ್ಕಳು ಸೇರಿದಂತೆ 7 ಜನರ ಸಾವಿಗೆ ಕಾರಣನಾಗಿದ್ದ ಆರೋಪಿ ಶವವಾಗಿ ಪತ್ತೆಯಾಗಿದ್ದಾನೆ. ಘಟನೆ ನಂತರ ನಾಪತ್ತೆಯಾಗಿದ್ದ ಆರೋಪಿ ಬೋಜ(55)ನ ಶವ ಈಗ ಪತ್ತೆಯಾಗಿದೆ. ಕೊಡಗು ಜಿಲ್ಲೆ, ಪೊನ್ನಂಪೇಟೆ ತಾಲ್ಲೂಕಿನ ಕಾನೂರು ಗ್ರಾಮದ ಬೋಜ ಕುಡಿದ ಅಮಲಿನಲ್ಲಿ ಮನೆಗೆ ಪೆಟ್ರೋಲ್‌ ಸುರಿದು ಬೆಂಕಿ ಇಟ್ಟಿದ್ದ, … Continued

ಮನೆ ಕಟ್ಟಲು ಕೂಡಿಟ್ಟಿದ್ದ ೫ ಲಕ್ಷ ರೂ. ಗೆದ್ದಲು ಪಾಲು

ಹೈದರಾಬಾದ್‌: ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿನ ಉದ್ಯಮಿಯೊಬ್ಬರು ಮನೆಕಟ್ಟಲು ಟ್ರಂಕ್‌ನಲ್ಲಿ ಕೂಡಿಟ್ಟಿದ್ದ ಸುಮಾರು ಐದು ಲಕ್ಷ ನಗದು ಹಣ ಗೆದ್ದಲು ತಿಂದು ಹರಿದು ಚಿಂದಿಯಾಗಿ ಬಳಕೆಗೆ ಬಾರದಂತಾಗಿದೆ. ಹಂದಿ ವ್ಯಾಪಾರಿಯಾಗಿರುವ ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಮೈಲಾವರಮ್‌ ಗ್ರಾಮದ ನಿವಾಸಿಯಾಗಿರುವ ಬಿಜಿಲ್‌ ಜಮಾಲಯ್ಯ ಎಂಬಾತ ತಾನು ದುಡಿದ ಹಣವನ್ನು ಬ್ಯಾಂಕ್‌ನಲ್ಲಿ ಇಡುವ ಬದಲು, ಕಬ್ಬಿಣದ ಟ್ರಂಕ್‌ನಲ್ಲಿ … Continued