ವಿಡಿಯೋ | ತಾಳೆಮರ ಏರಲು ಹೊಸ ಮಾರ್ಗ ; 55 ಅಡಿ ಎತ್ತರದ ತಾಳೆಮರಕ್ಕೆ ಸುರುಳಿ ಮೆಟ್ಟಿಲು ನಿರ್ಮಿಸಿದ ರೈತ…!

ಚೆನ್ನೈ : ಹೊಸತನ (ಇನ್ನೋವೇಷನ್) ಎಂದರೆ ಯಾವಾಗಲೂ ಅತ್ಯಾಧುನಿಕ ಪ್ರಯೋಗಾಲಯಗಳು ಅಥವಾ ದುಬಾರಿ ಯಂತ್ರೋಪಕರಣಗಳಿಂದಲೇ ಆಗಬೇಕೆಂದಿಲ್ಲ. ದೈನಂದಿನ ಬದುಕಿನ ಸಮಸ್ಯೆಗೆ ಸರಳ ಪರಿಹಾರ ಕಂಡುಕೊಳ್ಳುವ ಒಂದು ಆಲೋಚನೆಯೇ ಕೆಲವೊಮ್ಮೆ ದೊಡ್ಡ ಬದಲಾವಣೆಗೆ ಕಾರಣವಾಗುತ್ತದೆ. ಇದಕ್ಕೆ ತಮಿಳುನಾಡಿನ ರೈತರೊಬ್ಬರು ಉತ್ತಮ ಉದಾಹರಣೆಯಾಗಿದ್ದು, 55 ಅಡಿ ಎತ್ತರದ ತಾಳೆಮರದ ಸುತ್ತ ಕಬ್ಬಿಣದ ಸುರುಳಿ (ಸ್ಪೈರಲ್) ಮೆಟ್ಟಿಲು ನಿರ್ಮಿಸಿ, ಪನೆರಾ … Continued

ಯಾವುದೇ ಅಪರಾಧ ಮಾಡದಿದ್ರೂ 11 ವರ್ಷ ಜೈಲಿನಲ್ಲಿ ಕಳೆದ ರೈತ…!

ಮೀರತ್: ಬುಲಂದಶಹರದ 60 ವರ್ಷದ ರೈತ ಸಂಜಯಕುಮಾರ, ತಾವು ಮಾಡದ ಅಪರಾಧಕ್ಕಾಗಿ ನ್ಯಾಯಕ್ಕಾಗಿ ಕಾಯುತ್ತಾ 11 ವರ್ಷ ಜೈಲಿನಲ್ಲಿ ಕಳೆದಿದ್ದಾರೆ. ಅವರಿಗೆ ವಕೀಲರನ್ನು ನೇಮಿಸಿಕೊಳ್ಳಲು ಸಾಧ್ಯವಾಗದೆ ಅವರು 11 ವರ್ಷಗಳ ಜೈಲಿನಲ್ಲಿ ಕಳೆಯಬೇಕಾಯಿತು. ಈಗ ನ್ಯಾಯಾಲಯವು ಅವರನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿದೆ. ಬುಧವಾರ, ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ (ADJ) ಮೊಹಮ್ಮದ್ ನಸೀಮ್ ಅವರ ನ್ಯಾಯಾಲಯವು ಸಂಜಯಕುಮಾರ … Continued

ವೀಡಿಯೊ..| ಬೆಳಗಿನ ಉಪಾಹಾರಕ್ಕೆ 10 ಕೆಜಿ ಮೆಣಸಿನಕಾಯಿ ತಿನ್ನುತ್ತಾನೆ ಮೇಘಾಲಯದ ಈ ವ್ಯಕ್ತಿ…! ಮೆಣಸಿನ ಪುಡಿ ಈತನಿಗೆ ಸಾಬೂನು…!!

ಮೇಘಾಲಯದ ದಟ್ಟ ಕಾಡುಗಳು ಮತ್ತು ಬೆಟ್ಟಗಳ ಮಧ್ಯೆ ಗಮನಾರ್ಹ ಕಥೆಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಗಮನ ಸೆಳೆಯುತ್ತಿದೆ. ಪೂರ್ವ ಜೈನ್ತಿಯಾ ಹಿಲ್ಸ್ ಜಿಲ್ಲೆಯ ಬಟಾವ್ ಗ್ರಾಮದ ರೈತ ರಾಮ್‌ ಪಿರ್ತುಹ್ ತನ್ನ ಅಸಾಧಾರಣ ಸಾಮರ್ಥ್ಯಗಳಿಗಾಗಿ ವಿಶ್ವಾದ್ಯಂತ ಖ್ಯಾತಿಯನ್ನು ಗಳಿಸಿದ್ದಾರೆ. ರಾಮ್ ಒಂದೇ ಬಾರಿಗೆ 10 ಕಿಲೋಗ್ರಾಂಗಳಷ್ಟು ಬಿಸಿಯಾದ ಒಣಗಿದ ಮೆಣಸಿನಕಾಯಿಗಳನ್ನು ಸೇವಿಸುವ ಹಳೆಯ ವೀಡಿಯೊ ಮತ್ತೆ ವೈರಲ್ … Continued

ಮನ ಕಲಕುವ ವೀಡಿಯೊ | ಅಕಾಲಿಕ ಮಳೆಯಿಂದ ಕೊಚ್ಚಿ ಹೋಗುತ್ತಿದ್ದ ಧಾನ್ಯ ಉಳಿಸಲು ರೈತನ ಹತಾಶ ಪ್ರಯತ್ನ ; ನಂತರ ಕೇಂದ್ರ ಸಚಿವರಿಂದ ಕರೆ

ನವದೆಹಲಿ: ಮಹಾರಾಷ್ಟ್ರದ ರೈತನೊಬ್ಬ ತನ್ನ ಬೆಳೆಯನ್ನು ಭಾರೀ ಮಳೆಯಲ್ಲಿ ಕೊಚ್ಚಿ ಹೋಗದಂತೆ ತಡೆಯಲು ಹತಾಶ ಪ್ರಯತ್ನ ನಡೆಸಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಮಹಾರಾಷ್ಟ್ರದ ಹಲವಾರು ಜಿಲ್ಲೆಗಳಲ್ಲಿ ಅಕಾಲಿಕ ಮಳೆಯಿಂದಾಗಿ ರೈತರು ಅನುಭವಿಸುತ್ತಿರುವ ನಷ್ಟವನ್ನು ಈ ವೀಡಿಯೊ ಪ್ರತಿಬಿಂಬಿಸುತ್ತದೆ. ವೀಡಿಯೊದಲ್ಲಿರುವ ರೈತ ಗೌರವ ಪನ್ವಾರ್ ಮಹಾರಾಷ್ಟ್ರದ ವಾಶಿಮ್‌ನ ಮಾರುಕಟ್ಟೆಗೆ ತನ್ನ ಕಡಲೆಕಾಯಿ ಬೆಳೆಯನ್ನು ತಂದಿದ್ದರು. … Continued

ಬೆಳಗಾವಿ | ಸಾಲದ ಬಾಧೆ ; ವಿಷ ಸೇವಿಸಿ ರೈತ ಆತ್ಮಹತ್ಯೆ

ಬೆಳಗಾವಿ :  ಕಿರುಕುಳ ತಾಳಲಾರದೇ ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ರಾಯಬಾಗ ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ಸೋಮವಾರ ನಡೆದಿದೆ ಎಂದು ವರದಿಯಾಗಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಅಳಗವಾಡಿಯ ಶಿವನಪ್ಪ ಧರ್ಮಟ್ಟಿ (66) ಎಂದು ಗುರುತಿಸಲಾಗಿದೆ. ಪತ್ನಿಯ ಕ್ಯಾನ್ಸರ್ ಚಿಕಿತ್ಸೆಗೆ ವಿವಿಧ ಫೈನಾನ್ಸ್ ಕಂಪನಿಯಲ್ಲಿ ಅವರು 10 ಲಕ್ಷ ರೂ. ಸಾಲ ಮಾಡಿದ್ದರು ಎನ್ನಲಾಗಿದೆ. … Continued

ಅಪ್ಪ ಸ್ಮಾರ್ಟ್‌ಫೋನ್ ಕೊಡಿಸಲಿಲ್ಲ ಎಂದು ಮಗ ಆತ್ಮಹತ್ಯೆ ; ಮನನೊಂದು ತಂದೆಯೂ ಅದೇ ಹಗ್ಗದಿಂದ ಬಿಗಿದುಕೊಂಡು ಆತ್ಮಹತ್ಯೆ…!

ಮುಂಬೈ : 16 ವರ್ಷದ ಹತ್ತನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ತಂದೆ ಮೊಬೈಲ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದು, ರೈತನಾಗಿರುವ ತಂದೆ ತನ್ನ ಮಗನ ಆಸೆ ಈಡೇರಿಸಲು ಸಾಧ್ಯವಾಗದ ಕಾರಣಕ್ಕೆ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ನೋವಿನಿಂದ ತಾನೂ ಅದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. … Continued

ಖಾನಾಪುರ ಅರಣ್ಯದಲ್ಲಿ ಕರಡಿ ದಾಳಿಯಿಂದ ತುಂಡಾಯ್ತು ರೈತನ ಕಾಲು

ಬೆಳಗಾವಿ : ಖಾನಾಪುರ ತಾಲೂಕಿನ ಮಾನ ಗ್ರಾಮದ ಹೊರವಲಯದ ಅರಣ್ಯ ಪ್ರದೇಶದಲ್ಲಿ ಸೋಮವಾರ ಕರಡಿ ದಾಳಿಯಿಂದ ರೈತನ ಕಾಲು ತುಂಡಾಗಿದೆ. ರೈತ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಾನ ಗ್ರಾಮದ ಸಖಾರಾಮ ಗಾಂವಕರ (62) ದಾಳಿಗೆ ಒಳಗಾದ ರೈತರಾಗಿದ್ದಾರೆ. ಅವರು ಪತ್ನಿಯೊಂದಿಗೆ ಜಾನುವಾರುಗಳ ಸಮೇತ ತಮ್ಮ ಹೊಲಕ್ಕೆ ಹೊರಟಿದ್ದರು. ದಾರಿಯಲ್ಲಿ ಕರಡಿ ಎದುರಾಗಿದೆ. ಅದನ್ನು ಕಂಡ ಸಖಾರಾಮ … Continued

ಬೀಳಗಿ : ಮೊಸಳೆ ದಾಳಿಯಿಂದ ಮಾಲೀಕನ ಪ್ರಾಣ ಉಳಿಸಿದ ಎತ್ತು…!

ಬಾಗಲಕೋಟೆ : ಮೊಸಳೆ ದಾಳಿಯಿಂದ ತನ್ನ ಮಾಲೀಕನನ್ನು ಎತ್ತು ಕಾಪಾಡಿದೆ. ಬಾಗಲಕೋಟೆ (Bagalkot) ‌ಜಿಲ್ಲೆ ಬೀಳಗಿ ತಾಲೂಕಿನ ಹೊನ್ಯಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದ್ದು, ಧರಿಯಪ್ಪ ಮೇಟಿ (32) ಎಂಬ ರೈತ ಎತ್ತಿನ ಮೈತೊಳೆಯಲು ಹೋದಾಗ ಈ ಘಟನೆ ನಡೆದಿದೆ. ಎತ್ತಿನ‌ ಮೈ ತೊಳೆಯಲು ಆಲಮಟ್ಟಿ ಜಲಾಶಯದ ಹಿನ್ನೀರು ಕೃಷ್ಣಾ ನದಿಗೆ ಧರಿಯಪ್ಪ … Continued

ಬೆಳೆಗಳ ಇಳುವರಿ-ಪೌಷ್ಠಿಕಾಂಶ ಹೆಚ್ಚಿಸುವ ಹವಾಮಾನ-ನಿರೋಧಕ 109 ಪ್ರಭೇದದ ಬೀಜಗಳನ್ನು ಬಿಡುಗಡೆ ಮಾಡಿದ ಪ್ರಧಾನಿ ಮೋದಿ

ನವದೆಹಲಿ  ಕೃಷಿ ಉತ್ಪಾದಕತೆ ಮತ್ತು ರೈತರ ಆದಾಯವನ್ನು ಹೆಚ್ಚಿಸುವ ಪ್ರಯತ್ನದಲ್ಲಿ ಅಧಿಕ ಇಳುವರಿ ನೀಡುವ, ಹವಾಮಾನ-ನಿರೋಧಕ ಮತ್ತು ಜೈವಿಕ ಬಲವರ್ಧಿತ ಬೀಜ ತಳಿಗಳ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ 109 ಪ್ರಭೇದಗಳ ಬೀಜಗಳನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಬಿಡುಗಡೆ ಮಾಡಿದ್ದಾರೆ. ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ (ICAR) ಅಭಿವೃದ್ಧಿಪಡಿಸಿದ ಈ ಪ್ರಭೇದಗಳು 34 … Continued

ಬೆಂಗಳೂರು: ಪಂಚೆ ಹಾಕ್ಕೊಂಡು ಬಂದಿದ್ದಕ್ಕೆ ಮಾಲ್‌ ನಲ್ಲಿ ಒಳಗೆ ಬಿಡದ ಸಿಬ್ಬಂದಿ..!

ಬೆಂಗಳೂರು: ಬೆಂಗಳೂರು ನಗರದ ಮಾಲ್‌ ಒಂದರಲ್ಲಿ ರೈತನಿಗೆ ಅವಮಾನ ಮಾಡಿದ ಗಂಭೀರ ಆರೋಪ ಕೇಳಿ ಬಂದಿದೆ. ಪಂಚೆ ಹಾಕೊಂಡು ಬಂದಿದ್ದಕ್ಕೆ ರೈತನನ್ನು ಒಳಗೆ ಬಿಟ್ಟಿಲ್ಲ ಎಂಬ ಆರೋಪ ಕೇಳಿಬಂದಿದೆ. ಹಾವೇರಿ ಮೂಲದ ನಾಗರಾಜ ಎಂಬವರು ಮಂಗಳವಾರ (ಜುಲೈ 16) ನಗರದ ಮಾಗಡಿ ರಸ್ತೆಯಲ್ಲಿರುವ ಜಿಟಿ ಮಾಲ್ ಗೆ ತಂದೆ ಕರೆದುಕೊಂಡು ಹೋಗಿದ್ದರು. ನಾಗರಾಜ ಸಿನೆಮಾ ತೋರಿಸಲು … Continued