ಚಂದ್ರಯಾನ-3 ಕುರಿತು ಅಪಹಾಸ್ಯ: ನಟ ಪ್ರಕಾಶ ರೈ ವಿರುದ್ಧ ದೂರು ದಾಖಲು

ಬೆಂಗಳೂರು: ಚಂದ್ರಯಾನ-3 ಮಿಷನ್ ಕುರಿತು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ ಎಂದು ಆರೋಪಿಸಿ ನಟ ಪ್ರಕಾಶ ರೈ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ ಎಂದು ವರದಿಯಾಗಿದೆ. ಹಿಂದೂ ಸಂಘಟನೆಗಳ ಮುಖಂಡರು ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ನಟ ಪ್ರಕಾಶ ರೈ ವಿರುದ್ಧ ದೂರು ದಾಖಲಿಸಿದ್ದು, ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಆಗಸ್ಟ್ 20 ರಂದು, ನಟ … Continued

5ನೇ ಸ್ನಾತಕೋತ್ತರ ಪರೀಕ್ಷೆ ಬರೆದ 81ರ ವೃದ್ಧ….!

ವಿಜಯಪುರ: ಕಲಿಕೆಗೆ ವಯಸ್ಸು ಎಂಬುದಿಲ್ಲ ಎಂಬುದನ್ನು 81 ವರ್ಷದ ಹಿರಿಯ ನಾಗರಿಕರೊಬ್ಬರು ತೋರಿಸಿಕೊಟ್ಟಿದ್ದಾರೆ. ವಿಜಯಪುರ ನಗರದ ಪ್ರತಿಷ್ಠಿತ ಬಿ. ಎಲ್. ಡಿ. ಇ ಸಂಸ್ಥೆಯ ನರ್ಸಿಂಗ್ ಕಾಲೇಜಿನಲ್ಲಿ ನಡೆಯುತ್ತಿರುವ ಇಗ್ನೋ ಪರೀಕ್ಷೆಯಲ್ಲಿ ನಿಂಗಯ್ಯ ಒಡೆಯರ ಎಂಬವರು ಇಂಗ್ಲಿಷ್‌ ಎಂಎ ಅಂತಿಮ ವರ್ಷದ ಪರೀಕ್ಷೆ ಬರೆಯುವ ಮೂಲಕ ಗಮನ ಸೆಳೆದಿದ್ದಾರೆ. ನಿಂಗಯ್ಯ ಒಡೆಯರ ಅವರ 5ನೇ ಸ್ನಾತಕೋತ್ತರ … Continued

ಬಾಗಲಕೋಟೆ: ದಾಖಲೆಯಿಲ್ಲದೆ ಸಾಗಿಸುತ್ತಿದ್ದ 5 ಕೋಟಿ ರೂ. ಹಣ ಜಪ್ತಿ

ಬಾಗಲಕೋಟೆ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 5 ಕೋಟಿ ರೂ. ಹಣವನ್ನು ಚುನಾವಣಾಧಿಕಾರಿಗಳು, ಫ್ಲೈಯಿಂಗ್‌ ಸ್ಕ್ವಾಡ್‌ (Flying Squad) ಹಾಗೂ ಲೋಕಾಪುರ ಪೊಲೀಸರು ಜಪ್ತಿ ಮಾಡಿದ್ದಾರೆ ಎಂದು ವರದಿಯಾಗಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಲಕ್ಷಾನಟ್ಟಿ ಚೆಕ್​ಪೋಸ್ಟ್​ನಲ್ಲಿ ಚುನಾವಣಾಧಿಕಾರಿಗಳು ಹಾಗೂ ಲೋಕಾಪುರ ಪೊಲೀಸರು ತಪಾಸಣೆ ನಡೆಸುತ್ತಿದ್ದಾಗ ಕಾರಿನಲ್ಲಿ ಐದು ಕೋಟಿ ಪತ್ತೆಯಾಗಿದೆ. ಹುಬ್ಬಳ್ಳಿಯಿಂದ ಮುಧೋಳಕ್ಕೆ ಈ ಹಣವನ್ನ … Continued

ಬಾಗಲಕೋಟೆ: ಸೇತುವೆಗೆ ಲಾರಿ ಡಿಕ್ಕಿ; ಒಂದೇ ಕುಟುಂಬದ ಮೂವರು ಸಾವು

ಬಾಗಲಕೋಟೆ : ಬಾಗಲಕೋಟೆ ಹೊರವಲಯದ ಹಾದಿ ಬಸವಣ್ಣ ಆಸರೆ ಕಾಲೋನಿ ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಮಿನಿ ಲಾರಿ ರಸ್ತೆ ಪಕ್ಕದ ಸೇತುವೆಗೆ ಡಿಕ್ಕಿ ಹೊಡೆದ ನಂತರ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ವಿಜಯಪುರದಲ್ಲಿ ನಡೆದ ಜವಳದ ಕಾರ್ಯಕ್ರಮ ಮುಗಿಸಿ ಭಾನುವಾರ ತಡ ರಾತ್ರಿ ಊರಿಗೆ ವಾಪಸ್ಸಾಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಮೃತರನ್ನು ಕುಷ್ಟಗಿ ತಾಲೂಕಿನ … Continued

ತಂದೆಯನ್ನ ಕೊಂದು ದೇಹ ತುಂಡು ತುಂಡು ಮಾಡಿ ಕೊಳವೆ ಬಾವಿಗೆ ಎಸೆದ ಮಗ

ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿರುವ ಕೊಲೆಯೊಂದು ಸಾರ್ವಜನಿಕರನ್ನ ಬೆಚ್ಚಿ ಬೀಳಿಸಿದೆ.ಬಾಗಲಕೋಟೆಯ ಮುಧೋಳ ನಗರದಲ್ಲಿ ಮಗ ತನ್ನ ತಂದೆಯನ್ನ ಕೊಂದು ತುಂಡುತುಂಡಾಗಿ ಕತ್ತರಿಸಿ, ಕೊಳವೆ ಬಾವಿಗೆ ಎಸೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೊಲೆಯಾದ ವ್ಯಕ್ತಿಯನ್ನು ಪರಶುರಾಮ ಕುಳಲಿ (54) ಎಂದು ಗುರುತಿಸಲಾಗಿದೆ. ಮಗ ವಿಠ್ಠಲ ಕುಳಲಿ(21) ಎಂಬಾತನೇ ತನ್ನ ತಂದೆಯನ್ನು ಕೊಲೆ ಮಾಡಿದ ಆರೋಪಿ. … Continued

ಮುಧೋಳ ನಾಯಿಗಳು ಪ್ರಧಾನಿ ಮೋದಿ ಭದ್ರತೆಗೆ ಸೇರ್ಪಡೆ ಬಹುತೇಕ ಖಚಿತ : ಎಸ್‌ಪಿಜಿಯಿಂದ ನಡೆಯುತ್ತಿದೆ ಪ್ರಯೋಗ

ಬೆಂಗಳೂರು: ರಾಜ್ಯದ ಬಾಗಲಕೋಟೆ ಜಿಲ್ಲೆಯ ಕಾರವಾನ್‌ ಹೌಂಡ್‌ ಎಂದು ಕರೆಯಲ್ಪಡುವ ಮುಧೋಳ ನಾಯಿಗಳು ಪ್ರಧಾನಿ ನರೇಂದ್ರ ಮೋದಿಯವರ ಭದ್ರತೆಯ ಹೊಣೆ ಹೊತ್ತಿರುವ ವಿಶೇಷ ರಕ್ಷಣಾ ಗುಂಪಿನ (ಎಸ್‌ಪಿಜಿ) ಭಾಗವಾಗುವ ಎಲ್ಲ ಸಾಧ್ಯೆತಗಳೂ ಇವೆ ಎಂದು ವರದಿಗಳು ತಿಳಿಸಿವೆ. ಈ ಬೆಳವಣಿಗೆಯನ್ನು ದೃಢೀಕರಿಸಿರುವ ತಿಮ್ಮಾಪುರದ ಕೋರೆಹಲ್ಲು ಸಂಶೋಧನೆ ಮತ್ತು ಮಾಹಿತಿ ಕೇಂದ್ರದ ಮುಖ್ಯಸ್ಥ ಡಾ ಸುಶಾಂತ್ ಹಂಡಗೆ … Continued

ಸಿದ್ದರಾಮಯ್ಯ ಕೊಟ್ಟ ಪರಿಹಾರದ ಹಣ ಕಾರಿನತ್ತ ಎಸೆದು ಮಹಿಳೆಯ ಆಕ್ರೋಶ

ಬಾಗಲಕೋಟೆ: ಬಾದಾಮಿಯ ಕೆರೂರು ಗುಂಪು ಘರ್ಷಣೆ ವೇಳೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದವರನ್ನು ಭೇಟಿಯಾಗಿ ಸಾಂತ್ವನ ಹೇಳಲು ಬಂದಿದ್ದ ರಾಜ್ಯ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಇರಿಸು ಮುರಿಸಾಗುವ ಪ್ರಸಂಗ ನಡೆಯಿತು. ಕೆರೂರ ಗುಂಪು ಘರ್ಷಣೆಯಲ್ಲಿ ಗಾಯಗೊಂಡಿದ್ದವರು ಬಾಗಲಕೋಟೆ ಬಳಿಯ ಆಶೀರ್ವಾದ ಆಸ್ಪತ್ರೆಗೆ ದಾಖಲಾಗಿದ್ದರು.ಈ ಹಿನ್ನೆಲೆಯಲ್ಲಿ ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿ, ಪರಿಹಾರ ನೀಡುವ ಸಲುವಾಗಿ … Continued

ಎರಡು ಗುಂಪುಗಳ ನಡುವೆ ಘರ್ಷಣೆ, ಚಾಕು ಇರಿತ : ನಿಷೇಧಾಜ್ಞೆ ಜಾರಿ

ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ಗುಂಪು ಘರ್ಷಣೆ ಸಂಭವಿಸಿದ್ದು, ಚೂರಿಯಿಂದ ಇರಿಯಲಾಗಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದ್ದು ಅವರನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಅರುಣ ಹಾಗೂ ಲಕ್ಷ್ಮಣ ಎಂಬವರಿಗೆ ಚೂರಿಯಿಂದ ಇರಿಯಲಾಗಿದೆ ಎಂದು ಹೇಳಲಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಯಮನೂರಿ ಎಂಬವರಿಗೂ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ … Continued

ಹಾವಿನ ರೂಪದಲ್ಲಿ ಪತಿ ಬಂದಿದ್ದಾನೆಂದು ತಿಳಿದು 4 ದಿನ ಚಾಪೆ ಮೇಲೆ ನಾಗರ ಹಾವಿನ ಜೊತೆ ಕಳೆದ ವೃದ್ಧೆ..!

ಬಾಗಲಕೋಟೆ : ಮೃತ ಗಂಡ ಹಾವಿನ ರೂಪದಲ್ಲಿ ಬಂದಿದ್ದಾನೆಂದು ಮನೆಯಲ್ಲಿ 4 ದಿನಗಳಿಂದ ಹಾವಿನ ಜೊತೆ ಅಜ್ಜಿ ಇದ್ದಾರೆ. ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಕುಲಹಳ್ಳಿಯಲ್ಲಿ ಈ ವಿಚಿತ್ರ ಘಟನೆ ನಡೆದ ಬಗ್ಗೆ ವರದಿಯಾಗಿದೆ. ಸಾರವ್ವ ಮೌನೇಶ್ ಕಂಬಾರ ಎನ್ನುವ ಮಹಿಳೆಯ ವಿಚಿತ್ರ ನಂಬಿಕೆಗೆ ಜನರೇ ಬೆರಗಾಗಿದ್ದಾರೆ. ನಾಲ್ಕು ದಿನಗಳ ಹಿಂದೆ ಮನೆಗೆ ನಾಗರಹಾವು ಬಂದಿದೆ. … Continued

ಬಾಗಲಕೋಟೆ: ತಲೆಗೂದಲಿಗೆ ಬಣ್ಣ ಹಾಕುವ ದರದ ವಿಚಾರದಲ್ಲಿ ಜಗಳ, ಗ್ರಾಹಕನ ಎದೆಗೆ ಇರಿದು ಕೊಲೆ ಮಾಡಿದ ಕ್ಷೌರಿಕ

ಬಾಗಲಕೋಟೆ: ಸಲೂನ್​​​ನಲ್ಲಿ ತಲೆ ಕೂದಲಿಗೆ ಕಲರ್ ಹಾಕುವ ಬೆಲೆಯ ವಿಚಾರವಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದಲ್ಲಿ ಗುರುವಾರ (ಮೇ 26) ಸಂಜೆ ನಡೆದ ಬಗ್ಗೆ ವರದಿಯಾಗಿದೆ. ಸಾಗರ ಅವಟಿ (22) ಕೊಲೆಯಾದ ಯುವಕ ಎಂದು ಗರುತಿಸಲಾಗಿದೆ. ಸದಾಶಿವ ನಾವಿ ಕೊಲೆ ಮಾಡಿದ ಕ್ಷೌರಿಕ ಎಂದು ಹೇಳಲಾಗಿದೆ. ಈ ಘಟನೆ … Continued