ಮುಧೋಳ | ಭುಗಿಲೆದ್ದ ರೈತರ ಆಕ್ರೋಶ ; ಕಬ್ಬು ತುಂಬಿದ್ದ ಹಲವಾರು ಟ್ರ್ಯಾಕ್ಟರ್‌ಗಳಿಗೆ ಬೆಂಕಿ ; ಲೋಡ್‌ ಗಟ್ಟಲೆ ಕಬ್ಬು ಸುಟ್ಟು ಕರಕಲು

ಬಾಗಲಕೋಟೆ: ಪ್ರತಿ ಟನ್​​ ಕಬ್ಬಿಗೆ 3,500 ರೂ.ಗಳನ್ನು ನೀಡುವಂತೆ ಆಗ್ರಹಿಸಿ ಕಬ್ಬು ಬೆಳೆಗಾರರು ನಡೆಸಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಜಿಲ್ಲೆಯ ಮುಧೋಳ ತಾಲೂಕಿನ ಸೈದಾಪುರ ಗ್ರಾಮದ ಸಮೀರವಾಡಿಯ ಗೋದಾವರಿ ಕಾರ್ಖಾನೆ ಬಳಿ ನಿಲ್ಲಿಸಿದ್ದ ಹಲವಾರು ಟ್ರ್ಯಾಕ್ಟರ್ ಟ್ರಾಲಿಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸುತ್ತಿದ್ದರೂ ಕಾರ್ಖಾನೆ ಮಾಲೀಕರು ಮಾತುಕತೆಗೆ ಬಾರದ … Continued

ಅಯೋಧ್ಯೆ ರಾಮ ಮಂದಿರದ ಮಂಡಲಾರಾಧನೆ ಪೂಜೆಗೆ ಮುಧೋಳ ಅರ್ಚಕ ಆಯ್ಕೆ

ಬಾಗಲಕೋಟೆ: ಅಯೋಧ್ಯೆ ರಾಮ ಮಂದಿರದ ಮಂಡಲಾರಾಧನೆ ಪೂಜೆಗೆ ಜಿಲ್ಲೆಯ ಮುಧೋಳ (Mudhol) ಮೂಲದ ಅರ್ಚಕ ಗುರುನಾಥ ಜೋಶಿ ಅವರು ಆಯ್ಕೆಯಾಗಿದ್ದಾರೆ. ಅರ್ಚಕ ಗುರುನಾಥ ಜೋಶಿ ಅವರು ಮುರಗೋಡ ಚಿದಂಬರ ವೇದ ಸಂಸ್ಕೃತ ಪಾಠಶಾಲೆಯಲ್ಲಿ ಶುಕ್ಲ ಯಜುರ್ವೇದ ಅಧ್ಯಯನ‌ ಮಾಡಿರುವ ಅವರು, ಮೂಲತಃ ಮುಧೋಳ ತಾಲೂಕಿನ ಮಾಚಕನೂರು ನಿವಾಸಿ. ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಗಳು ಗುರುನಾಥ … Continued

ತಂದೆಯನ್ನ ಕೊಂದು ದೇಹ ತುಂಡು ತುಂಡು ಮಾಡಿ ಕೊಳವೆ ಬಾವಿಗೆ ಎಸೆದ ಮಗ

ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿರುವ ಕೊಲೆಯೊಂದು ಸಾರ್ವಜನಿಕರನ್ನ ಬೆಚ್ಚಿ ಬೀಳಿಸಿದೆ.ಬಾಗಲಕೋಟೆಯ ಮುಧೋಳ ನಗರದಲ್ಲಿ ಮಗ ತನ್ನ ತಂದೆಯನ್ನ ಕೊಂದು ತುಂಡುತುಂಡಾಗಿ ಕತ್ತರಿಸಿ, ಕೊಳವೆ ಬಾವಿಗೆ ಎಸೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೊಲೆಯಾದ ವ್ಯಕ್ತಿಯನ್ನು ಪರಶುರಾಮ ಕುಳಲಿ (54) ಎಂದು ಗುರುತಿಸಲಾಗಿದೆ. ಮಗ ವಿಠ್ಠಲ ಕುಳಲಿ(21) ಎಂಬಾತನೇ ತನ್ನ ತಂದೆಯನ್ನು ಕೊಲೆ ಮಾಡಿದ ಆರೋಪಿ. … Continued