ಸಿದ್ದರಾಮಯ್ಯ ಕೊಟ್ಟ ಪರಿಹಾರದ ಹಣ ಕಾರಿನತ್ತ ಎಸೆದು ಮಹಿಳೆಯ ಆಕ್ರೋಶ

ಬಾಗಲಕೋಟೆ: ಬಾದಾಮಿಯ ಕೆರೂರು ಗುಂಪು ಘರ್ಷಣೆ ವೇಳೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದವರನ್ನು ಭೇಟಿಯಾಗಿ ಸಾಂತ್ವನ ಹೇಳಲು ಬಂದಿದ್ದ ರಾಜ್ಯ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಇರಿಸು ಮುರಿಸಾಗುವ ಪ್ರಸಂಗ ನಡೆಯಿತು.
ಕೆರೂರ ಗುಂಪು ಘರ್ಷಣೆಯಲ್ಲಿ ಗಾಯಗೊಂಡಿದ್ದವರು ಬಾಗಲಕೋಟೆ ಬಳಿಯ ಆಶೀರ್ವಾದ ಆಸ್ಪತ್ರೆಗೆ ದಾಖಲಾಗಿದ್ದರು.ಈ ಹಿನ್ನೆಲೆಯಲ್ಲಿ ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿ, ಪರಿಹಾರ ನೀಡುವ ಸಲುವಾಗಿ ಇಂದು, ಶುಕ್ರವಾರ ಸಿದ್ದರಾಮಯ್ಯ ಆಸ್ಪತ್ರೆಗೆ ಭೇಟಿ ನೀಡಿದ್ದರು.

ಗಾಯಾಳುಗಳಾದ ಹನೀಫ್, ರಾಜೇಸಾಬ್, ರಫೀಕ್, ದಾವಲ್ ಮಲೀಕ್ ಅವರಿಗೆ ಪರಿಹಾರವೆಂದು ತಲಾ 50 ಸಾವಿರ ರೂ.ನಂತೆ ಅವರ ಸಂಬಂಧಿಕರಿಗೆ ಒಟ್ಟು 2 ಲಕ್ಷ ರೂಪಾಯಿ ಹಣ ನೀಡಿದರು. ನಿಮ್ಮ ವಾಪಸ್​ ಹಣ ತೆಗೆದುಕೊಳ್ಳಿ ಎಂದು ಸಂಬಂಧಿಕರು ಹೇಳಿದರೂ ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದರು. ಸಿಟ್ಟಾದ ಮಹಿಳೆ ಹಿಂಬಾಲಿಕೊಂಡು ಬಂದು ‘ನಿಮ್ಮ ಹಣ ಬೇಡ, ನಮಗೆ ಶಾಂತಿ ಬೇಕು. ಹಿಂದೂ ಮುಸ್ಲಿಂ ಇಬ್ಬರೂ ನೆಮ್ಮದಿಯಿಂದ ಬದುಕುವ ವಾತಾವರಣ ಬೇಕು’ ಎಂದು ಆಕ್ರೋಶ ಹೊರಹಾಕಿದರು. ಸಿದ್ದರಾಮಯ್ಯ ವಾಹನ ಮುಂದಕ್ಕೆ ಚಲಿಸುತ್ತಿದ್ದಂತೆಯೇ ವಾಹನದತ್ತ ಹಣ ಎಸೆದರು.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ 2024: ಕರ್ನಾಟಕದ 14 ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

ಇದಕ್ಕೂ ಮೊದಲು ಕೆರೂರ ಗುಂಪು ಘರ್ಷಣೆಯ ವೇಳೆ ಗಾಯಗೊಂಡ ಹಿಂದೂ ಸಂಘಟನೆಯ ಗಾಯಾಳುಗಳು ಸಿದ್ದರಾಮಯ್ಯ ಭೇಟಿ ಮಾಡಲು ಯೋಚಿಸಿದ್ದರು. ಆದರೆ ಅವರು ಸಿದ್ದರಾಮಯ್ಯ ಭೇಟಿಗೆ ನಿರಾಕರಿಸಿದ್ದಾರೆ ಎಂದು ಹೇಳಲಾಗಿದೆ.
ಘರ್ಷಣೆಯಲ್ಲಿ ಗಾಯಗೊಂಡ ಗಾಯಾಳುಗಳ ಯೋಗ ಕ್ಷೇಮ ವಿಚಾರಿಸಲು ಬಾದಾಮಿ ಕ್ಷೇತ್ರದ ಶಾಸಕ, ಮಾಜಿ ಮುಖ್ಯ ಸಿದ್ದರಾಮಯ್ಯ ಅವರು ಖಾಸಗಿ ಆಸ್ಪತ್ರೆಗೆ ಭೇಟಿ ನೀಡಲು ಮುಂದಾಗಿದ್ದರು. ಆದರೆ ಸಿದ್ದರಾಮಯ್ಯ ಭೇಟಿಗೆ ಬರುತ್ತಿದ್ದಾರೆ ಎಂಬ ವಿಚಾರ ತಿಳಿದ ಹಿಂದೂ ಸಂಘಟನೆಯ ಗಾಯಾಳುಗಳು ನಮ್ಮನ್ನು ನೋಡಲು ಸಿದ್ದರಾಮಯ್ಯ ಬರುವುದು ಬೇಡ ಎಂದು ಬಾಗಲಕೋಟೆ ಎಸ್‌ಪಿಗೆ ಫೋನ್ ಮಾಡಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಹಿಂದೂ ಸಂಘಟನೆಯ ಕಾರ್ಯಕರ್ತರ ಭೇಟಿಯನ್ನು ರದ್ದು ಮಾಡಿದರು ಎನ್ನಲಾಗಿದೆ.
ಜುಲೈ 6 ರಂದು ಕೆರೂರ ಪಟ್ಟಣದಲ್ಲಿ ಕ್ಷುಲ್ಲಕ ಕಾರಣಕ್ಕೆ ಗುಂಪು ಘರ್ಷಣೆ, ಚಾಕು ಇರಿತ ನಡೆದಿತ್ತು.

5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement