ಚನ್ನಗಿರಿ : ಆನೆ ದಾಳಿಗೆ ಹುಡುಗಿ ಸಾವು

ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ಸೋಮ್ಲಾಪುರ ಎಂಬ ಗ್ರಾಮದ ಬಳಿ, ಕಾಡಾನೆ ದಾಳಿಯಲ್ಲಿ ಸೋಮ್ಲಾಪುರದ ನಿವಾಸಿಯಾದ ಕವನ (17) ಎಂಬ ಹುಡುಗಿ ಮೃತಪಟ್ಟಿದ್ದಾಳೆ.
ಜಮೀನಿನಲ್ಲಿ ಅವರೇಕಾಯಿ ಬಿಡಿಸಲು ಹೋಗಿದ್ದ ಕವನಳನ್ನು ಆನೆಯು ಅಟ್ಟಾಸಿಕೊಂಡು ತನ್ನ ಸೊಂಡಿಲಿನಿಂದ ದೂರಕ್ಕೆ ಎಸೆದಿದೆ ಎಂದು ಹೇಳಲಾಗಿದೆ.
ಸೋಮ್ಲಾಪುರ ಹಾಗೂ ಅದರ ಸಮೀಪವಿರುವ ಕಾಶೀಪುರದ ಸುತ್ತಮುತ್ತ ಶನಿವಾರ ಮುಂಜಾನೆ ಕಾಡಾನೆಯೊಂದು ಓಡಾಡಿದೆ. ಕವನ ಹಾಗೂ ಆಕೆಯ ಜೊತೆಗೆ ಅವರ ತಾಯಿ ಮಂಜುಳಾ (47) ಜೊತೆ ಜಮೀನಿಗೆ ಅವರೇಕಾಯಿ ಬಿಡಿಸಲು ಹೋಗಿದ್ದಾಗ ಆನೆಯು ಹಿಂದಿನಿಂದ ಇವರ ಮೇಲೆ ದಾಳಿ ನಡೆಸಿದೆ.
ಆಗ ಮಹಿಳೆಯರ ಕೂಗಾಟ ಕೇಳಿ, ಅಕ್ಕಪಕ್ಕದ ಜಮೀನುಗಳಲ್ಲಿದ್ದ ಕೆಲಸಗಾರರು ಧಾವಿಸಿದ್ದಾರೆ. ಅಷ್ಟರಲ್ಲಿ ಕವನ ಆನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದಳು. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ ಎನ್ನಲಾಗಿದೆ. ಗಾಯಗೊಂಡಿರುವ ಮಂಜುಳಾರನ್ನು ದಾವಣಗೆರೆಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಘಟನೆ ನಡೆದಿರುವ ಸೋಮ್ಲಾಪುರ ಹಾಗೂ ಸುತ್ತಮುತ್ತಲಿನ ಊರುಗಳ ಗ್ರಾಮಸ್ಥರು ಭೀತಿಗೆ ಒಳಗಾಗಿದ್ದಾರೆ. ಈ ಮೊದಲು ಹಳ್ಳಿಗಳಿಂದ ಸ್ವಲ್ಪ ದೂರದಲ್ಲಿರುವ ಕೆರಗೆಳು, ತೋಟಗಳು, ಗದ್ದೆಗಳು ಮುಂತಾದ ಹಸಿರು ಇರುವ ಕಡೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಆನೆ ಈಗ ಊರಿಗೇ ಬಂದಿರುವುದು ಈ ಆತಂಕಕ್ಕೆ ಕಾರಣವಾಗಿದೆ.

ಪ್ರಮುಖ ಸುದ್ದಿ :-   ತಾಳಿ ಕಟ್ಟುವ ವೇಳೆ ಮದುವೆಗೆ ನಿರಾಕರಿಸಿದ ವಧು : ಮಂಟಪದಲ್ಲೇ ಮುರಿದು ಬಿತ್ತು ಮದುವೆ…!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement