ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಚನ್ನಗಿರಿ : ಕುರುಕಲು ತಿಂಡಿ ಪ್ಯಾಕೆಟಿನಲ್ಲಿದ್ದ ಆಟಿಕೆ ನುಂಗಿ 4 ವರ್ಷದ ಬಾಲಕಿ ಸಾವು

ದಾವಣಗೆರೆ: ಕುರುಕಲು ತಿಂಡಿಯ ಪ್ಯಾಕೆಟ್‌ನಲ್ಲಿದ್ದ ಪುಟ್ಟ ಆಟಿಕೆಯನ್ನು ನುಂಗಿ ನಾಲ್ಕು ವರ್ಷದ ಹೆಣ್ಣು ಮಗು ಮೃತಪಟ್ಟಿರುವ ಮನಕಲಕುವ ಘಟನೆ ಜಿಲ್ಲೆಯ ಚನ್ನಗಿರಿ ಪಟ್ಟಣದ ರಾಜಣ್ಣ ಬಡಾವಣೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಮೃತ ಮಗುವನ್ನು ಅಲಿಯಾ ಶೇಕ್ (4) ಎಂದು ಗುರುತಿಸಲಾಗಿದೆ. ಮನೆಯಿಂದ ಐದು ರೂಪಾಯಿ ಪಡೆದುಕೊಂಡ ಮಗು, ಮನೆಯ ಪಕ್ಕದ ಅಂಗಡಿಗೆ ತೆರಳಿ ಕುರುಕಲು ತಿಂಡಿಯ ಪ್ಯಾಕೆಟ್‌ ಖರೀದಿಸಿತ್ತು. ತಿಂಡಿ ತಿನ್ನುತ್ತಿದ್ದ ವೇಳೆ ಪ್ಯಾಕೆಟ್‌ನೊಳಗಿದ್ದ ಉಚಿತವಾಗಿ ನೀಡಲಾಗಿದ್ದ ಪ್ಲಾಸ್ಟಿಕ್‌ನ ಆಟಿಕೆಯನ್ನು ನುಂಗಿದ್ದು, ಅದು ಗಂಟಲಿನಲ್ಲಿ ಸಿಲುಕಿಕೊಂಡಿದೆ. ಇದರಿಂದ ಮಗುವಿಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡು ಅಸ್ವಸ್ಥಗೊಂಡಿದೆ.

ತಕ್ಷಣವೇ ಆಟಿಕೆಯನ್ನು ಹೊರತೆಗೆಯಲು ಕುಟುಂಬಸ್ಥರು ಪ್ರಯತ್ನಿಸಿದರೂ ಅದು ಸಾಧ್ಯವಾಗದೇ ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಮಗು ಮೃತಪಟ್ಟಿತ್ತು ಎನ್ನಲಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಚನ್ನಗಿರಿ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಈ ಘಟನೆಯಿಂದ ಮಕ್ಕಳ ಪೋಷಕರು ಎಚ್ಚೆತ್ತುಕೊಳ್ಳಬೇಕಿದ್ದು, ಇಂತಹ ಆಟಿಕೆಗಳನ್ನು ಒಳಗೊಂಡಿರುವ ತಿಂಡಿ ಪೊಟ್ಟಣಗಳನ್ನು ಮಕ್ಕಳಿಗೆ ನೀಡುವಾಗ ಎಚ್ಚರಿಕೆ ವಹಿಸಬೇಕಾಗಿದೆ.

ಪ್ರಮುಖ ಸುದ್ದಿ :-   ಜಾತಿಭೇದ ಮರೆತು ಸಂಘಟಿತರಾಗಿ: ಶಿರಸಿಯ ಹಿಂದೂ ಜಾಗೃತಿ ಸಮಾವೇಶದಲ್ಲಿ ಕಾಡಸಿದ್ದೇಶ್ವರ ಸ್ವಾಮೀಜಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement