ಐಫೋನ್‌ ಸಾಲದ ಕಂತಿನ ವಿಚಾರದ ಜಗಳ ದುರಂತದಲ್ಲಿ ಅಂತ್ಯ : ಬೆಟ್ಟದ ಪ್ರಪಾತಕ್ಕೆ ಬಿದ್ದು ಮಗ, ತಂದೆ-ತಾಯಿ ಸಾವು

ಛತ್ರಪತಿ ಸಂಭಾಜಿನಗರ: ಐಫೋನ್‌ ಖರೀದಿಯ ಕಂತು (EMI) ಪಾವತಿಸುವ ವಿಚಾರವಾಗಿ ತಂದೆ-ಮಗನ ನಡುವೆ ನಡೆದ ವಾಗ್ವಾದವು ಇಡೀ ಕುಟುಂಬದ ದುರಂತ ಅಂತ್ಯಕ್ಕೆ ಕಾರಣವಾದ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ. 18 ವರ್ಷದ ಕುನಾಲ್‌ ಚಾಂದ್‌ಗುಡೆ, ಆತನ ತಂದೆ ಮುರಳೀಧರ ಚಾಂದ್‌ಗುಡೆ ಹಾಗೂ ತಾಯಿ ಸಂಗೀತಾ ಚಾಂದ್‌ಗುಡೆ ಬೆಟ್ಟದಿಂದ ಆಳವಾದ ಕಂದಕಕ್ಕೆ ಬಿದ್ದು … Continued

ಚಮೋಲಿ ಜಲವಿದ್ಯುತ್ ಯೋಜನೆಯ ಸುರಂಗಕ್ಕೆ ನೀರು; 7 ಮಂದಿ ಸಾವು, 13 ಮಂದಿಗೆ ಗಾಯ

ಚಮೋಲಿ (ಉತ್ತರಾಖಂಡ): ಉತ್ತರಾಖಂಡದ ಚಮೋಲಿ ಜಿಲ್ಲೆಯ ಪಿಪಲ್ಕೋಟಿ ಪ್ರದೇಶದಲ್ಲಿರುವ ತೆಹ್ರಿ ಹೈಡ್ರೋ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್‌ (THDC)ನ ಜಲವಿದ್ಯುತ್ ಯೋಜನಾ ಸ್ಥಳದಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗಕ್ಕೆ ನೀರು ಏಕಾಏಕಿ ನುಗ್ಗಿದ ಪರಿಣಾಮ ಕನಿಷ್ಠ ಏಳು ಮಂದಿ ಮೃತಪಟ್ಟಿದ್ದು, 13 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಈ ಘಟನೆ ಗುರುವಾರ ಸಂಜೆ ನಡೆದಿದೆ.ಗುರುವಾರ ಸಂಜೆ … Continued

ಮಗನ ಅಪಘಾತದಿಂದ ನೊಂದು ದಂಪತಿಯ ದುರಂತ ಅಂತ್ಯ ; ತಾಯಿ-ತಂದೆ ಕಳೆದುಕೊಂಡ 10 ವರ್ಷದ ಬಾಲಕ ಅನಾಥ

ಕಾರವಾರ: ಕುಟುಂಬದಲ್ಲಿ ಸಂಭವಿಸಿದ ಅಪಘಾತವೊಂದು ಇಡೀ ಕುಟುಂಬವನ್ನೇ ದುರಂತಕ್ಕೆ ದೂಡಿದ ಕರುಣಾಜನಕ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಶಿರವಾಡದ ಬಂಗಾರಪ್ಪ ನಗರದಲ್ಲಿ ನಡೆದಿದೆ. ಮಗನಿಗೆ ಸಂಭವಿಸಿದ ಅಪಘಾತದಿಂದ ಆತನ ಆರೋಗ್ಯದ ಬಗ್ಗೆ ಆತಂಕಗೊಂಡ ತಾಯಿ ಆತ್ಮಹತ್ಯೆಗೆ ಶರಣಾದರೆ, ಪತ್ನಿಯ ಸಾವಿನ ಸುದ್ದಿ ಕೇಳಿ ಆಘಾತಕ್ಕೊಳಗಾದ ಪತಿಯೂ ಕಾಳಿ ನದಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ … Continued

ಭಟ್ಕಳ: ನದಿ ದುರಂತ ; ಸಾವಿನ ಸಂಖ್ಯೆ 11ಕ್ಕೆ ಏರಿಕೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಅಳ್ವೆಕೋಡಿ ಸಮುದ್ರ ತೀರ ಪ್ರದೇಶದಲ್ಲಿ ಕಪ್ಪೆಚಿಪ್ಪು ಸಂಗ್ರಹಿಸಲು ಹೋಗಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಕಪ್ಪೆಚಿಪ್ಪು (ಚಪ್ಪೆಕಲ್ಲು) ಆರಿಸಲು ಒಟ್ಟು 14 ಮಂದಿ ನದಿಗೆ ಇಳಿದಿದ್ದ ವೇಳೆ ನೀರಿನ ರಭಸಕ್ಕೆ ಸಿಲುಕಿ ಮುಳುಗಿದ್ದರು. ಈ ಪೈಕಿ ಮೊದಲಿಗೆ 8 ಮಂದಿ ಶವ ಪತ್ತೆಯಾಗಿತ್ತು, ನಂತರ ಇಬ್ಬರ ಮೃತದೇಹ … Continued

ಪತ್ನಿಯ ಅಕ್ರಮ ಸಂಬಂಧಕ್ಕೆ ಮನನೊಂದು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಗಂಡ

ತುಮಕೂರು :  ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಅಲ್ಕೆರೆ ಗ್ರಾಮದಲ್ಲಿ ಶನಿವಾರ ಅತ್ಯಂತ ಕರುಣಾಜನಕ ಹಾಗೂ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಅರ್ಚಕರೊಬ್ಬರು ತನ್ನ ಇಬ್ಬರು ಅಪ್ರಾಪ್ತ ಮಕ್ಕಳನ್ನು ಕೊಲೆ ಮಾಡಿ, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಅಲ್ಕೆರೆ ಗ್ರಾಮದ ನಿವಾಸಿ ಶಿವಣ್ಣ (40) ಮತ್ತು ಅವರ ಮಕ್ಕಳಾದ ಜೀವನ್ (10) ಹಾಗೂ ಪ್ರಾಣೇಶ (5) ಎಂದು … Continued

ಹುಲಿಕಲ್ ಘಾಟ್‌ನಲ್ಲಿ ಭೀಕರ ದುರಂತ: ಕಾಮಗಾರಿ ವೇಳೆ ಗುಡ್ಡ ಕುಸಿದು ಮೂವರು ಸಾವು

ಶಿವಮೊಗ್ಗ : ಜಿಲ್ಲೆಯ ಹೊಸನಗರ ತಾಲೂಕಿನ  ಹುಲಿಕಲ್‌ ಘಾಟ್‌ನಲ್ಲಿ (ಬಾಳೇಬರೆ) ತಡೆಗೋಡೆ ನಿರ್ಮಾಣ ಕಾಮಗಾರಿ ವೇಳೆ  ಕುಸಿತ (landslide) ಸಂಭವಿಸಿ ಮೂವರು ಕಾರ್ಮಿಕರು ಸಾವಿಗೀಡಾಗಿರುವ ಘಟನೆ ನಡೆದಿದೆ ಎಂದು ವರದಿಯಾಗಿದೆ.  ಕಾಮಗಾರಿ ಮೇಲ್ವಿಚಾರಕ ಸೇರಿ ಮೂವರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಮೃತರನ್ನು ಕಾಮಗಾರಿ ಮೇಲ್ವಿಚಾರಕ ಚಕ್ಕಾರು ಗ್ರಾಮದ ರಾಘವೇಂದ್ರ (37), ಕಾರ್ಮಿಕರಾದ ಹಾವೇರಿ ಜಿಲ್ಲೆಯ ನೆಲಗಲು … Continued

6ನೇ ವರ್ಷಕ್ಕೆ ಕತ್ತಲೆ ಕೋಣೆಯಲ್ಲಿ ಬಂಧಿಯಾದ ಹುಡುಗಿ; 20 ವರ್ಷದ ನಂತ್ರ ಬಿಡುಗಡೆ ಭಾಗ್ಯ, ದೃಷ್ಟಿಗೆ ಹಾನಿ : ಕಾರಣ..?

ಬಸ್ತಾರ್ (ಛತ್ತೀಸ್‌ಗಢ ) : ಜಗತ್ತು ಆಟವಾಡುತ್ತಿರುವಾಗ, ಆರು ವರ್ಷದ ಪುಟ್ಟ ಲೀಸಾಳ ಜೀವನ ಕತ್ತಲ ಕೋಣೆಯಲ್ಲಿ ಬಂಧಿಯಾಗಿತ್ತು.  6 ನೇ ವಯಸ್ಸಿನಲ್ಲಿ ಕೂಡಿ ಹಾಕಿದ ಕೋಣೆಯಲ್ಲೇ ಬದುಕುತ್ತಿದ್ದ ಲೀಸಾ, 20 ವರ್ಷಗಳ ನಂತರ ಬಾಗಿಲು ದಾಟಿ ಹೊರಬಂದಿದ್ದಾಳೆ.  ಆದರೆ ಬೆಳಕನ್ನು ನೋಡುವ ಸಾಮರ್ಥ್ಯವನ್ನು ಬಹುತೇಕ ಕಳೆದುಕೊಂಡಿದ್ದಾಳೆ.. ಕೆಲವು ಕಥೆಗಳು ಗಾಯದಂತೆ ತೆರೆದುಕೊಳ್ಳುತ್ತವೆ. ಲೀಸಾಳ ಜೀವನವೂ … Continued

ಶ್ರೀಕಾಕುಳಂ ಕಾಶಿಬುಗ್ಗ ವೆಂಕಟೇಶ್ವರ ದೇಗುಲದಲ್ಲಿ ಕಾಲ್ತುಳಿತ ; 9 ಮಂದಿ ಸಾವು

ಶ್ರೀಕಾಕುಳಂ: ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ ಒಂಬತ್ತು ಮಂದಿ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ, ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ. ಅಧಿಕಾರಿಗಳ ಪ್ರಕಾರ, ಏಕಾದಶಿಯ ಸಂದರ್ಭದಲ್ಲಿ ದೇವಾಲಯದಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರಿಂದ ಈ ಘಟನೆ ಸಂಭವಿಸಿದೆ, ಇದು ದೇಗುಲದ … Continued

ಕರೂರು ಕಾಲ್ತುಳಿತ ; ಅನುಮತಿ ಇರದಿದ್ರೂ ರೋಡ್​ ಶೋ ; ಕಾರ್ಯಕ್ರಮಕ್ಕೆ ನಟ ವಿಜಯ ತಡವಾಗಿ ಆಗಮಿಸಿದ್ದು ಘಟನೆಗೆ ಕಾರಣ; ಎಫ್‌ಐಆರ್‌ ಆರೋಪ

ಚೆನ್ನೈ: 41 ಜನರ ಸಾವಿಗೆ ಕಾರಣವಾದ ತಮಿಳುನಾಡಿನ ಕರೂರು ಕಾಲ್ತುಳಿತ ಘಟನೆಗೆ ನಟ-ರಾಜಕಾರಣಿ ವಿಜಯ ಅವರನ್ನು ಎಫ್‌ಐಆರ್‌ನಲ್ಲಿ ದೂಷಿಸಲಾಗಿದ್ದು, ಅವರು ಕಾರ್ಯಕ್ರಮಕ್ಕೆ ಬರುವುದನ್ನು ಉದ್ದೇಶಪೂರ್ವಕವಾಗಿ ವಿಳಂಬಗೊಳಿಸಿದರು ಮತ್ತು ಅನುಮತಿಯಿಲ್ಲದೆ ರೋಡ್ ಶೋ ನಡೆಸಿದರು ಎಂದು ಆರೋಪಿಸಲಾಗಿದೆ ಎಫ್‌ಐಆರ್ ಪ್ರಕಾರ, ಟಿವಿಕೆ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಥಿಯಜಗನ್ 10,000 ಜನರಿಗೆ ಅನುಮತಿ ಕೋರಿದ್ದರು, ಆದರೆ ವಿಜಯ ಭೇಟಿಯ … Continued

ಆಘಾತಕಾರಿ ವೀಡಿಯೊ | ಸಾಹಸ ದೃಶ್ಯ ಚಿತ್ರೀಕರಣದ ವೇಳೆ ಅವಘಡ ; ಸ್ಟಂಟ್ ಮ್ಯಾನ್ ಎಸ್.ಎಂ. ರಾಜು ಸಾವು

ಚೆನ್ನೈ: ತಮಿಳುನಾಡಿನಲ್ಲಿ ಭಾನುವಾರ ಬೆಳಿಗ್ಗೆ ಸಿನೆಮಾವೊಂದರ ಸಾಹಸದ ದೃಶ್ಯ ಚಿತ್ರೀಕರಣ ಮಾಡುವಾಗ ನಡೆದ ಅವಘಡದಲ್ಲಿ ಪ್ರಸಿದ್ಧ ಸಾಹಸ ಕಲಾವಿದ ಎಸ್.ಎಂ. ರಾಜು ಸಾವಿಗೀಡಾಗಿದ್ದಾರೆ. ಪಾ ರಂಜಿತ್ ನಿರ್ದೇಶನದ ತಮಿಳು ನಟ ಆರ್ಯ ಅವರ ಮುಂಬರುವ ಚಿತ್ರ ‘ವೆಟ್ಟುವನ್’ ಸಿನೆಮಾದ ಸಾಹಸದ ದೃಶ್ಯಗಳ ಚಿತ್ರೀಕರಣದ ವೇಳೆ ಈ ಅಪಘಾತ ಸಂಭವಿಸಿದೆ. ಅಪಘಾತದ ಮನಕಲಕುವ ದೃಶ್ಯಗಳು ಕಾಣಿಸಿಕೊಂಡಿದ್ದು, ರಾಜು … Continued