ವಿಡಿಯೋ: ಶಾಲಾ ಪ್ರಾರ್ಥನೆಯಲ್ಲಿ ಮಕ್ಕಳ ಜೊತೆ ಶಿಸ್ತಿನಿಂದ ನಿಂತು ಪ್ರಾರ್ಥನೆ ಮಾಡಿದ ನಾಯಿ…!

ಸಿಕ್ಕಿಂನ ಶಾಲೆಯೊಂದರಲ್ಲಿ ನಡೆದ ಹೃದಯಸ್ಪರ್ಶಿ ಘಟನೆಯೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಶಾಲೆಯ ಬೆಳಗಿನ ಪ್ರಾರ್ಥನೆಯಲ್ಲಿ ಅನಿರೀಕ್ಷಿತವಾಗಿ ಭಾಗಿಯಾದ ಬೀದಿ ನಾಯಿಯೊಂದು, ವಿದ್ಯಾರ್ಥಿಗಳ ನಡುವೆ ಯಾವುದೇ ಭಯವಿಲ್ಲದೆ ಪ್ರಾರ್ಥನೆಗೆ ನಿಂತು ಎಲ್ಲರ ಗಮನ ಸೆಳೆದಿದೆ. ಪ್ರಸನ್ನ ಪಖ್ರಿನ್ ಎಂಬುವವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಈಗ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ … Continued

ವಿಡಿಯೋ | ಬೆಚ್ಚಿಬೀಳಿಸುವ ದೃಶ್ಯ : ಭೀಕರ ಗಾಳಿ ರಭಸಕ್ಕೆ ತಗಡಿನ ಶೀಟ್‌ ಜೊತೆ 50 ಅಡಿ ಎತ್ತರಕ್ಕೆ ಹಾರಿಹೋಗಿ ಬಿದ್ದ ವ್ಯಕ್ತಿ

ಬರೇಲಿ/ಲಕ್ನೋ: ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಬುಧವಾರ ಅಪ್ಪಳಿಸಿದ ಪ್ರಬಲ ಚಂಡಮಾರುತ ಮತ್ತು ಮಳೆಗೆ ರಾಜ್ಯವೇ ತತ್ತರಿಸಿ ಹೋಗಿದೆ. ಬರೇಲಿ ಜಿಲ್ಲೆಯ ಬಮಿಯಾನಾ ಗ್ರಾಮದಲ್ಲಿ ಸಂಭವಿಸಿದ ಒಂದು ಘಟನೆ ಚಂಡಮಾರುತದ ತೀವ್ರತೆಗೆ ಸಾಕ್ಷಿಯಾಗಿದೆ. ಬಲವಾದ ಗಾಳಿಯ ವೇಗಕ್ಕೆ ವ್ಯಕ್ತಿಯೊಬ್ಬ ತಗಡಿನ ಶೀಟ್‌ನೊಂದಿಗೆ ಸುಮಾರು 50 ಅಡಿ ಎತ್ತರಕ್ಕೆ ಹಾರಿ ಹೋಗಿರುವ ಆಘಾತಕಾರಿ ದೃಶ್ಯಗಳು ಮುನ್ನೆಲೆಗೆ ಬಂದಿವೆ. … Continued

ಜೇನು ತೆಗೆಯಲು ಹೋಗಿ ಬಂಡೆಯ ಸಂದಿನಲ್ಲಿ ಸಿಲುಕಿದ ಬಾಲಕನ ತಲೆ : ಅಲ್ಲಿಯೇ ಇತ್ತು ದೊಡ್ಡ ವಿಷಪೂರಿತ ಹಾವು !

ನಯಾಗಢ (ಒಡಿಶಾ): ಜೇನುತುಪ್ಪ ಸಂಗ್ರಹಿಸಲು ಹೋಗಿದ್ದ ಬಾಲಕನೊಬ್ಬ ಆಕಸ್ಮಿಕವಾಗಿ ಬಂಡೆಯ ಸಂದಿನಲ್ಲಿ ಸಿಲುಕಿಕೊಂಡು ಹೊರಬರಲಾರದೆ ಒದ್ದಾಡಿದ ಘಟನೆ ಓಡಿಶಾದ ನಯಾಗಢ್ ಜಿಲ್ಲೆಯಲ್ಲಿ ನಡೆದಿದೆ. ವಿಶೇಷವೆಂದರೆ, ಬಾಲಕನ ತಲೆ ಸಿಲುಕಿದ್ದ ಅದೇ ಬಂಡೆಯ ಸಂದಿಯಲ್ಲಿ ವಿಷಪೂರಿತ ದೊಡ್ಡ ಹಾವೊಂದು ಕುಳಿತಿದ್ದು, ಬಾಲಕ ಅದರಿಂದ ಪವಾಡಸದೃಶವಾಗಿ ಪಾರಾಗಿದ್ದಾನೆ. ಬುಧವಾರ ನಡೆದ ಸುಮಾರು 8 ಗಂಟೆಗಳ ಸುದೀರ್ಘ ಕಾರ್ಯಾಚರಣೆಯ ನಂತರ … Continued

ಗೋದ್ರಾದಲ್ಲಿ ಐತಿಹಾಸಿಕ ದಾಖಲೆ : ಶೇ.100ರಷ್ಟು ಮುಸ್ಲಿಂ ಮತದಾರರಿರುವ ವಾರ್ಡ್‌ನಲ್ಲಿ ಹಿಂದೂ ಪಕ್ಷೇತರ ಅಭ್ಯರ್ಥಿಗೆ ಭರ್ಜರಿ ಜಯ !

ಸಾಮಾನ್ಯವಾಗಿ ಚುನಾವಣೆ ಎಂದರೆ ಅಲ್ಲಿ ರಾಜಕೀಯ ಆರೋಪ-ಪ್ರತ್ಯಾರೋಪಗಳು ಸಹಜ. ಆದರೆ, ಮಂಗಳವಾರ ಪ್ರಕಟವಾದ ಗುಜರಾತ್ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶವು ಕೋಮು ಸೌಹಾರ್ದತೆ ಮತ್ತು ಅಂತರ್ಗತ ರಾಜಕಾರಣಕ್ಕೆ ಒಂದು ಮೈಲಿಗಲ್ಲಾಗಿ ನಿಂತಿದೆ. ಗೋದ್ರಾ ನಗರಸಭೆಯ 7ನೇ ವಾರ್ಡ್‌ನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹಿಂದೂ ಮಹಿಳೆ ಅಪೇಕ್ಷಾಬೆನ್ ನೈನೇಷ್‌ಭಾಯಿ ಸೋನಿ ಅವರು ಭರ್ಜರಿ ಜಯ ದಾಖಲಿಸಿದ್ದಾರೆ. ವಿಶೇಷವೆಂದರೆ, … Continued

ತಾಯಿಯ ಕೈಯಲ್ಲಿದ್ದ 20 ದಿನದ ಶಿಶುವನ್ನು ಹೊತ್ತೊಯ್ದು ಬಾವಿಗೆ ಎಸೆದ ಮಂಗ ; ಮಗುವನ್ನು ಕಾಪಾಡಿದ ಡೈಪರ್‌…!

ರಾಯ್ಪುರ: ಛತ್ತೀಸ್‌ಗಢದ ಜಾಂಜ್‌ಗೀರ್-ಚಂಪಾ ಜಿಲ್ಲೆಯ ಸೆವ್ನಿ ಗ್ರಾಮದಲ್ಲಿ ಮೈಮನ ಜುಂ ಎನಿಸುವ ಘಟನೆಯೊಂದು ನಡೆದಿದೆ. ಮಂಗವೊಂದು ತಾಯಿಯ ಮಡಿಲಲ್ಲಿದ್ದ 20 ದಿನದ ಹಸುಗೂಸನ್ನು ಹೊತ್ತೊಯ್ದು ಬಾವಿಗೆ ಎಸೆದಿತ್ತು,  ಗ್ರಾಮಸ್ಥರ ಸಮಯಪ್ರಜ್ಞೆ ಮತ್ತು ನರ್ಸ್ ಒಬ್ಬರ ಸಮಯೋಚಿತ ಚಿಕಿತ್ಸೆಯಿಂದ ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದೆ.  ಬುಧವಾರ ಸುನೀತಾ ರಾಥೋಡ ಎಂಬ ಮಹಿಳೆ ತಮ್ಮ 20 ದಿನದ ಹೆಣ್ಣು … Continued

ಎಚ್ಚರಿಕೆ…| ಮುಖೇಶ ಅಂಬಾನಿ ಡೀಪ್‌ಫೇಕ್ ವೀಡಿಯೊ ಬಳಸಿದ ಜಾಹೀರಾತು ಆಮಿಷಕ್ಕೆ ₹7 ಲಕ್ಷ ಕಳೆದುಕೊಂಡ ವೈದ್ಯೆ…!

ಮುಂಬೈನ ಅಂಧೇರಿಯ 54 ವರ್ಷದ ಆಯುರ್ವೇದ ವೈದ್ಯರೊಬ್ಬರು ಕೈಗಾರಿಕೋದ್ಯಮಿ ಮುಖೇಶ ಅಂಬಾನಿಯವರ ಡೀಪ್‌ಫೇಕ್ ವೀಡಿಯೊವನ್ನು ಒಳಗೊಂಡ ಅತ್ಯಾಧುನಿಕ ಹಗರಣಕ್ಕೆ ಬಲಿಯಾಗಿದ್ದಾರೆ. ನಕಲಿ ಶೇರ್ ಟ್ರೇಡಿಂಗ್ ಅಕಾಡೆಮಿ ಪ್ರಚಾರ ಮಾಡುವ ವೀಡಿಯೊವನ್ನು ವಂಚಕರು ಬಳಸಿಕೊಂಡಿದ್ದಾರೆ. ಏಪ್ರಿಲ್‌ನಲ್ಲಿ, ಡಾ. ಪಾಟೀಲ್ ತಮ್ಮ Instagram ಫೀಡ್‌ನಲ್ಲಿ ಡೀಪ್‌ಫೇಕ್ ವೀಡಿಯೊವನ್ನು ನೋಡಿದ್ದಾರೆ. ಡೀಪ್‌ಫೇಕ್ ವೀಡಿಯೊದಲ್ಲಿ ರಾಜೀವ ಶರ್ಮಾ ಟ್ರೇಡ್ ಗ್ರೂಪ್ ಅನ್ನು … Continued

ಇನ್ನೊಮ್ಮೆ ಕಳಪೆ ಊಟ ಕೊಟ್ಟರೆ ವಾರ್ಡನ್ನಿಗೆ ತಿನ್ನಿಸಿ, ಚೆನ್ನಾಗಿ ಬಾರಿಸಿ: ಶಾಸಕರ ಹೇಳಿಕೆಯ ವೀಡಿಯೊ ವೈರಲ್

ಚಿತ್ರದುರ್ಗ: ಹಾಸ್ಟೆಲ್ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಭೇಟಿ ನೀಡಿದ್ದ ಶಾಸಕರೊಬ್ಬರು ವಿದ್ಯಾರ್ಥಿ ನಿಲಯದಲ್ಲಿ ಕಳಪೆ ಗುಣಮಟ್ಟದ ಊಟ-ತಿಂಡಿ ನೀಡಿದರೆ ಹಾಸ್ಟೆಲ್ ವಾರ್ಡನ್‍ನನ್ನು ರೂಮಿನಲ್ಲಿ ಕೂಡಿ ಹಾಕಿಕೊಂಡು ಚೆನ್ನಾಗಿ ಬಾರಿಸಿ’ ಎಂದು ಹೇಳಿದ್ದಾರೆ ಎನ್ನಲಾದ ವೀಡಿಯೊ ವೈರಲ್ ಆಗಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಪ್ರಚೋದನೆ ನೀಡಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದ್ದು, … Continued