ಜೇನು ತೆಗೆಯಲು ಹೋಗಿ ಬಂಡೆಯ ಸಂದಿನಲ್ಲಿ ಸಿಲುಕಿದ ಬಾಲಕನ ತಲೆ : ಅಲ್ಲಿಯೇ ಇತ್ತು ದೊಡ್ಡ ವಿಷಪೂರಿತ ಹಾವು !

ನಯಾಗಢ (ಒಡಿಶಾ): ಜೇನುತುಪ್ಪ ಸಂಗ್ರಹಿಸಲು ಹೋಗಿದ್ದ ಬಾಲಕನೊಬ್ಬ ಆಕಸ್ಮಿಕವಾಗಿ ಬಂಡೆಯ ಸಂದಿನಲ್ಲಿ ಸಿಲುಕಿಕೊಂಡು ಹೊರಬರಲಾರದೆ ಒದ್ದಾಡಿದ ಘಟನೆ ಓಡಿಶಾದ ನಯಾಗಢ್ ಜಿಲ್ಲೆಯಲ್ಲಿ ನಡೆದಿದೆ. ವಿಶೇಷವೆಂದರೆ, ಬಾಲಕನ ತಲೆ ಸಿಲುಕಿದ್ದ ಅದೇ ಬಂಡೆಯ ಸಂದಿಯಲ್ಲಿ ವಿಷಪೂರಿತ ದೊಡ್ಡ ಹಾವೊಂದು ಕುಳಿತಿದ್ದು, ಬಾಲಕ ಅದರಿಂದ ಪವಾಡಸದೃಶವಾಗಿ ಪಾರಾಗಿದ್ದಾನೆ. ಬುಧವಾರ ನಡೆದ ಸುಮಾರು 8 ಗಂಟೆಗಳ ಸುದೀರ್ಘ ಕಾರ್ಯಾಚರಣೆಯ ನಂತರ … Continued

ಗದಗ : ಜಾತ್ರೆಯಲ್ಲಿ ಅವಘಡ ; ಬ್ರೇಕ್ ಡ್ಯಾನ್ಸ್ ತೊಟ್ಟಿಲು ಮುರಿದುಬಿದ್ದು ಹಲವರಿಗೆ ಗಾಯ

ಗದಗ : ನಗರದ ತೋಂಟದಾರ್ಯ ಮಠದ ಆವರಣದಲ್ಲಿ ನಡೆದಿರುವ ಜಾತ್ರೆಯಲ್ಲಿನ  ಬ್ರೇಕ್ ಡ್ಯಾನ್ಸ್  ತೊಟ್ಟಿಲು ಕಟ್ ಆಗಿ ಕೆಳಗೆ ಬಿದ್ದಿದ್ದು, ಹಲವರು ಗಾಯಗೊಂಡ ಘಟನೆ ಭಾನುವಾರ ರಾತ್ರಿ ನಡೆದಿದೆ ಎಂದು ವರದಿಯಾಗಿದೆ. ಈ ಘಟನೆ ಭಾನುವಾರ ರಾತ್ರಿ 9ರ ಸುಮಾರಿಗೆ ನಡೆದಿದೆ ಎನ್ನಲಾಗಿದ್ದು, ಜಾತ್ರೆಯಲ್ಲಿ ಡ್ಯಾನ್ಸಿಂಗ್ ಫ್ಲೈ ತೊಟ್ಟಿಲಿನಲ್ಲಿ ಏಕಾಏಕಿ ದೊಡ್ಡ ಪ್ರಮಾಣದಲ್ಲಿ ಸದ್ದು ಕೇಳಿದೆ. … Continued