ಹ್ಯಾರಿಯರ್ ಕಾರು, ನಕಲಿ ಎನ್‌ಎಸ್‌ಜಿ ಕಮಾಂಡೋಗಳು ! ಸೇನೆಯ ಬ್ರಿಗೇಡಿಯರ್ ಸೋಗಿನಲ್ಲಿ ಓಡಾಡುತ್ತಿದ್ದ ಯುವಕ ಬಲೆಗೆ ಬಿದ್ದಿದ್ದೇ ರೋಚಕ

ಶಹಾಜಹಾನಪುರ (ಉತ್ತರ ಪ್ರದೇಶ): ಭಾರತೀಯ ಸೇನೆಯ ಹಿರಿಯ ಅಧಿಕಾರಿ ‘ಬ್ರಿಗೇಡಿಯರ್’ ಸೋಗಿನಲ್ಲಿ ರಾಜಾರೋಷವಾಗಿ ಓಡಾಡುತ್ತಿದ್ದ 21 ವರ್ಷದ ಯುವಕನೊಬ್ಬ ಕೊನೆಗೂ ಸೇನಾ ಅಧಿಕಾರಿಗಳು ಹೆಣೆದ ತಂತ್ರಕ್ಕೆ ಸಿಲುಕಿ ರೆಡ್-ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಮಿಲಿಟರಿ ಶೈಲಿಯ ಐಷಾರಾಮಿ ಎಸ್‌ಯುವಿ ಕಾರು, ಬೌನ್ಸರ್‌ಗಳ ಸೆಕ್ಯುರಿಟಿಯೊಂದಿಗೆ ಬಂದಿದ್ದ ಈ ನಕಲಿ ಅಧಿಕಾರಿಯನ್ನು ಉತ್ತರ ಪ್ರದೇಶದ ಶಹಾಜಹಾನಪುರದಲ್ಲಿ ಸೇನೆ ಬಂಧಿಸಿದೆ. ಬಂಧಿತ … Continued

ಮದುವೆಯಾಗಿ ವಧುವು ಗಂಡನ ಮನೆಗೆ ಹೋದ 20 ನಿಮಿಷಗಳಲ್ಲೇ ವಿಚ್ಛೇದನ…!

ದೇವರಿಯಾ : ಉತ್ತರ ಪ್ರದೇಶದ ದೇವರಿಯಾದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಆಗಷ್ಟೇ ಮದುವೆಯಾದ ಜೋಡಿಯ ಜೀವನದ ಅತ್ಯಂತ ಸಂತೋಷದ ಮತ್ತು ಸ್ಮರಣೀಯ ದಿನವು ಒಂದು ದುಃಸ್ವಪ್ನದಂತೆ ಬದಲಾಗಿದೆ. ಮದುವೆಯ ನಂತರ ವಧು ಗಂಡನ ಮನೆಗೆ ತಲುಪಿದ ಕೆಲವೇ ನಿಮಿಷಗಳಲ್ಲಿ ನಡೆದ ಮದುವೆ ಮುರಿದು ಬಿದ್ದಿದೆ. ನವೆಂಬರ್ 25 ರಂದು ವಿವಾಹವಾದ ಇವರ ವಿವಾಹ ಸಂಪ್ರದಾಯಗಳು … Continued

ಇಟ್ಟಿಗೆ ಗೂಡಿನಲ್ಲಿ ಕಪ್ಪು ಚಿರತೆ ಜೊತೆ ಸೆಣಸಾಡಿ ಅದನ್ನೇ ನಿಗ್ರಹಿಸಿದ ಯುವಕ..! ದೃಶ್ಯ ವೀಡಿಯೊದಲ್ಲಿ ಸೆರೆ-ವೀಕ್ಷಿಸಿ

ಸೋಮವಾರ ಉತ್ತರಪ್ರದೇಶದ ಲಖಿಂಪುರ ಖೇರಿಯ ಧೌರಪುರ ಅರಣ್ಯ ಪ್ರದೇಶದ ಜುಗ್ನುಪುರದ ಇಟ್ಟಂಗಿ ತಯಾರಿಕೆ ಘಟಕದ ಕೆಲಸಗಾರರ ಮೇಲೆ ಕಪ್ಪು ಚಿರತೆಯೊಂದು ದಾಳಿ ನಡೆಸಿದೆ. ನಾಟಕೀಯ ಹಾಗೂ ಅಪರೂಪದ ವಿದ್ಯಮಾನದಲ್ಲಿ ಹೆದರದ ಯುವಕನೊಬ್ಬ ಚಿರತೆಯನ್ನು ಕೆಡವಿ ಬಾಯಿಯನ್ನು ಹಿಡಿದು ನೆಲಕ್ಕೆ ಒತ್ತಿ ಹಿಡಿದು ಅದನ್ನು ನಿಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾನೆ. ಗದ್ದಲದಿಂದ ಎಚ್ಚೆತ್ತ ಗ್ರಾಮಸ್ಥರು ಒಟ್ಟುಗೂಡಿ ಚಿರತೆಯ ಮೇಲೆ ಇಟ್ಟಿಗೆಗಳು … Continued