ಭಾರತಕ್ಕೆ ಕಚ್ಚಾ ತೈಲ ನೀಡಿ ಮತ್ತೆ ಭಾರತದಿಂದಲೇ ಪೆಟ್ರೋಲ್‌ ಖರೀದಿಸುತ್ತಿರುವ ರಷ್ಯಾ…! ಇದಕ್ಕೆ ಕಾರಣ…?

ನವದೆಹಲಿ : ಉಕ್ರೇನ್ ನಡೆಸುತ್ತಿರುವ ಡ್ರೋನ್ ದಾಳಿಗಳಿಂದ ತನ್ನ ಇಂಧನ ಉತ್ಪಾದನಾ ಘಟಕಕ್ಕೆ ಉಂಟಾದ ಹಾನಿಯ   ಪರಿಣಾಮವಾಗಿ ಎದುರಾಗಿರುವ ಪೆಟ್ರೋಲ್ ಕೊರತೆಯನ್ನು ನಿವಾರಿಸಲು ರಷ್ಯಾವು ಸಮುದ್ರ ಮಾರ್ಗದ ಮೂಲಕ ಭಾರತದಿಂದ ಪೆಟ್ರೋಲ್ (ಗ್ಯಾಸೋಲಿನ್) ಆಮದು ಮಾಡಿಕೊಳ್ಳಲು ಆರಂಭಿಸಿದೆ ಎಂದು ಕೈಗಾರಿಕಾ ವಲಯದ ಮೂಲಗಳನ್ನು ಉಲ್ಲೇಖಿಸಿಹಲವಾರು ವರದಿಗಳು ತಿಳಿಸಿವೆ. ರಷ್ಯಾದ ಹಲವು ಪ್ರದೇಶಗಳಲ್ಲಿ ಇತ್ತೀಚೆಗೆ ಪೆಟ್ರೋಲ್ ಕೊರತೆ … Continued

ಪೆಟ್ರೋಲ್, ಡೀಸೆಲ್, ಸಿಎನ್‌ಜಿ ಬೆಲೆ ಮತ್ತೆ ಹೆಚ್ಚಳ

ನವದೆಹಲಿ: ದೇಶದಲ್ಲಿ ಮತ್ತೆ ತೈಲ ಬೆಲೆಏರಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಳ ಹಾಗೂ ರೂಪಾಯಿ ಮೌಲ್ಯದ ಕುಸಿತದ ಹಿನ್ನೆಲೆಯಲ್ಲಿ, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪ್ರತಿ ಲೀಟರ್‌ಗೆ ₹2.61 ರಿಂದ ₹2.71 ವರೆಗೆ ಹೆಚ್ಚಿಸಿವೆ. ಕಳೆದ ಎರಡು ವಾರಗಳಿಗಿಂತ ಕಡಿಮೆ ಅವಧಿಯಲ್ಲಿ ನಡೆದಿರುವ ನಾಲ್ಕನೇ ದರ ಪರಿಷ್ಕರಣೆ … Continued

10 ದಿನಗಳಲ್ಲಿ 3ನೇ ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವುದು ಮತ್ತು ಪಶ್ಚಿಮ ಏಷ್ಯಾದಲ್ಲಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಸಾರ್ವಜನಿಕ ವಲಯದ ತೈಲ ಕಂಪನಿಗಳು ಶನಿವಾರ ದೇಶಾದ್ಯಂತ ಇಂಧನ ದರಗಳನ್ನು ಮತ್ತೊಮ್ಮೆ ಪರಿಷ್ಕರಿಸಿವೆ. ಈ ತಿಂಗಳಲ್ಲೇ ನಡೆದಿರುವ ಮೂರನೇ ಬೆಲೆ ಏರಿಕೆ ಇದಾಗಿದ್ದು, ಲೀಟರ್ ಪೆಟ್ರೋಲ್ ದರದಲ್ಲಿ 87 ಪೈಸೆ ಹಾಗೂ ಡೀಸೆಲ್ ದರದಲ್ಲಿ … Continued

ಭಾರತಕ್ಕೂ ತಟ್ಟಿದ ಮಧ್ಯಪ್ರಾಚ್ಯ ಸಂಘರ್ಷದ ಬಿಸಿ : ದೇಶಾದ್ಯಂತ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳ

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಮುಂದುವರಿದಿರುವ ಯುದ್ಧ ಹಾಗೂ ಉದ್ವಿಗ್ನ ಪರಿಸ್ಥಿತಿ ಪರಿಣಾಮ ಇದೀಗ ಭಾರತಕ್ಕೂ ತಟ್ಟಿದ್ದು, ದೇಶದಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪ್ರತಿ ಲೀಟರ್‌ಗೆ 3 ರೂಪಾಯಿ ಹೆಚ್ಚಳ ಮಾಡಲಾಗಿದೆ. ಈ ದರ ಏರಿಕೆಗಳು ಇಂದಿನಿಂದಲೇ ಜಾರಿಯಾಗಿವೆ. ನಾಲ್ಕು ವರ್ಷಗಳ ಬಳಿಕ ಸರ್ಕಾರಿ ತೈಲ … Continued

ಬಾಟಲಿ, ಕ್ಯಾನ್‌ಗಳಲ್ಲಿ ಪೆಟ್ರೋಲ್-ಡೀಸೆಲ್ ಮಾರಾಟ ನಿಷೇಧ

ಬೆಂಗಳೂರು :  ಕರ್ನಾಟಕ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ಮತ್ತು ವಿತರಣೆಗೆ ಸಂಬಂಧಿಸಿದಂತೆ ಪೆಟ್ರೋಲ್ ಬಂಕ್‌ಗಳಿಗೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಿದೆ. ಗ್ರಾಹಕರ ಹಿತದೃಷ್ಟಿಯಿಂದ ಹಾಗೂ ಸುರಕ್ಷತೆಯ ಕಾರಣಗಳಿಗಾಗಿ ನಿಯಂತ್ರಿತ ಇಂಧನ ವಿತರಣಾ ಪದ್ಧತಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಇಲಾಖೆ ಎಲ್ಲಾ ಇಂಧನ ಕೇಂದ್ರಗಳಿಗೆ ನಿರ್ದೇಶನ ನೀಡಿದೆ ಮಾರ್ಗಸೂಚಿಯ ಪ್ರಕಾರ, … Continued

ಇರಾನ್ ಯುದ್ಧದ ಮಧ್ಯೆಯೇ ‘ಒಪೆಕ್’ಗೆ ಗುಡ್‌ಬೈ ಹೇಳಿದ ಯುಎಇ : ತೈಲ ಮಾರುಕಟ್ಟೆಯಲ್ಲಿ ಭಾರಿ ಸಂಚಲನ

ಅಬುಧಾಬಿ : ಜಾಗತಿಕ ಇಂಧನ ಕ್ಷೇತ್ರದಲ್ಲಿ ಭಾರಿ ಭೌಗೋಳಿಕ ಬದಲಾವಣೆಯೊಂದು ಸಂಭವಿಸಿದೆ. ವಿಶ್ವದ ಪ್ರಮುಖ ತೈಲ ಉತ್ಪಾದಕ ರಾಷ್ಟ್ರವಾದ ಯುನೈಟೆಡ್ ಅರಬ್ ಎಮಿರೇಟ್ಸ್ (UAE), ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಒಕ್ಕೂಟವಾದ ‘ಒಪೆಕ್’ (OPEC) ಮತ್ತು ‘ಒಪೆಕ್ ಪ್ಲಸ್’ (OPEC+) ಮೈತ್ರಿಕೂಟದಿಂದ ಅಧಿಕೃತವಾಗಿ ಹೊರಬರುವುದಾಗಿ ಘೋಷಿಸಿದೆ. ಮಂಗಳವಾರ ಈ ನಿರ್ಧಾರ ಹೊರಬಿದ್ದಿದ್ದು, ಮೇ 1, 2026 … Continued

ಪೆಟ್ರೋಲ್, ಡೀಸೆಲ್‌ ಅಭಾವದಿಂದ ಕಂಗೆಟ್ಟ ಪಾಕಿಸ್ತಾನ: ಗಣರಾಜ್ಯೋತ್ಸವ ಪರೇಡ್‌, ಸಂಭ್ರಮಾಚರಣೆ ರದ್ದುಗೊಳಿಸಿದ ಪಾಕ್‌…!

ಇಸ್ಲಾಮಾಬಾದ್‌ : ಮಧ್ಯಪ್ರಾಚ್ಯದಲ್ಲಿ ಇರಾನ್ ಯುದ್ಧದಿಂದ ಉಂಟಾಗಿರುವ ಇಂಧನ ಬಿಕ್ಕಟ್ಟು ಈಗ ಪಾಕಿಸ್ತಾನಕ್ಕೆ ಹೊಸ ಸಮಸ್ಯೆ ತಂದೊಡ್ಡಿದೆ. ವರದಿಗಳ ಪ್ರಕಾರ, ಮಾರ್ಚ್ 23 ರಂದು ನಡೆಯಬೇಕಿದ್ದ ಪಾಕಿಸ್ತಾನದ ‘ಗಣರಾಜ್ಯೋತ್ಸವ’ದ (Republic Day) ಮಿಲಿಟರಿ ಪರೇಡ್ ಮತ್ತು ಔಪಚಾರಿಕ ನಡಾವಳಿಗಳನ್ನು ರದ್ದುಗೊಳಿಸಲು ಪಾಕಿಸ್ತಾನದ ಪ್ರಧಾನ ಮಂತ್ರಿ ಕಾರ್ಯಾಲಯ ಮಂಗಳವಾರ ನಿರ್ಧರಿಸಿದೆ. ಪ್ರಧಾನಿ ಶೆಹಬಾಜ್ ಶರೀಫ್ ಅವರ ಕಚೇರಿಯು, … Continued

ಉಡುಪಿ : ರಸ್ತೆಯಲ್ಲೇ ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಯುವಕ

ಉಡುಪಿ : ಯುವಕನೊಬ್ಬ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಉಡುಪಿಯ ಜನನಿಬಿಡ ಕಲ್ಸಂಕ ವೃತ್ತದ ಬಳಿ ಭಾನುವಾರ ಸಂಜೆ ಸಂಭವಿಸಿದೆ ಎಂದು ವರದಿಯಾಗಿದೆ. ಯುವಕನನ್ನು ತಕ್ಷಣವೇ ರಕ್ಷಿಸಲಾಗಿದೆ. ಬಾಟಲಿಯಲ್ಲಿ ಪೆಟ್ರೋಲ್ ಹಿಡಿದು ಬಂದಿದ್ದ ವ್ಯಕ್ತಿ, ಕಲ್ಸಂಕ ವೃತ್ತದ ಬಳಿ ಕಿರುಚಾಡುತ್ತ ಮೈಮೇಲೆ ಪೆಟ್ರೋಲ್ ಸುರಿದುಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಅಲ್ಲಿಯೇ … Continued

ಬಾಂಗ್ಲಾದೇಶ: ಪೆಟ್ರೋಲ್ ಹಣ ಕೇಳಿದ್ದಕ್ಕೆ ಹಿಂದೂ ಯುವಕನ ಮೇಲೆ ಕಾರು ಹರಿಸಿ ಹತ್ಯೆ

ಢಾಕಾ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರಿದಿದ್ದು, ಪೆಟ್ರೋಲ್ ಹಾಕಿಸಿಕೊಂಡು ಹಣ ನೀಡದೆ ಪರಾರಿಯಾಗಲು ಯತ್ನಿಸಿದ ಎಸ್‌ಯುವಿ (SUV) ಕಾರನ್ನು ತಡೆಯಲು ಯತ್ನಿಸಿದ ಹಿಂದೂ ಯುವಕನನ್ನು ಕಾರು ಓಡಿಸಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಮೃತ ಯುವಕನನ್ನು 30 ವರ್ಷದ ರಿಪಾನ್ ಸಹಾ ಎಂದು ಗುರುತಿಸಲಾಗಿದೆ. ಈತ ರಾಜಬರಿ ಜಿಲ್ಲೆಯ ಗೋವಾಲಂದ ಮೋರ್‌ನಲ್ಲಿರುವ ಕರೀಂ ಫಿಲ್ಲಿಂಗ್ … Continued

ಬೆಂಗಳೂರು | ಅಟ್ಟಿಸಿಕೊಂಡು ಹೋಗಿ ಲಿವ್‌ ಇನ್‌ ಗೆಳತಿಯ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಕೊಂದ

ಬೆಂಗಳೂರು: ಅನೈತಿಕ ಸಂಬಂಧದ ಶಂಕೆಯಿಂದ ವ್ಯಕ್ತಿಯೋರ್ವ ತನ್ನ ಲಿವ್ ಇನ್ ಗೆಳತಿಯನ್ನು ಅಟ್ಟಿಸಿಕೊಂಡು ಹೋಗಿ ಪೆಟ್ರೋಲ್ ಸುರಿದು ಸುಟ್ಟುಹಾಕಿರುವ ಭೀಕರ ಘಟನೆ ಬೆಂಗಳೂರು ನಗರದ ಹೊರವಲಯದ ಹುಳಿಮಾವು ಬಳಿ ನಡೆದಿದೆ ಎಂದು ವರದಿಯಾಗಿದೆ. ಮೃತ ಮಹಿಳೆಯನ್ನು ವನಜಾಕ್ಷಿ (35 ) ಎಂದು ಗುರುತಿಸಲಾಗಿದ್ದು, ಕೊಲೆ ಆರೋಪಿ ವಿಠ್ಠಲ (52) ಎಂದು ಹೇಳಲಾಗಿದೆ. ಈತ ಕ್ಯಾಬ್‌ ಚಾಲಕನಾಗಿದ್ದ. … Continued