ಬಾಂಗ್ಲಾದೇಶದಲ್ಲಿ ಅರಾಜಕತೆ: ಖ್ಯಾತ ಗಾಯಕ ಜೇಮ್ಸ್ ಸಂಗೀತ ಕಾರ್ಯಕ್ರಮದ ಮೇಲೆ ಗುಂಪಿನಿಂದ ದಾಳಿ

ಫರೀದಪುರ: ಬಾಂಗ್ಲಾದೇಶದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಮೇಲೆ ನಿರಂತರ ದಾಳಿಗಳು ನಡೆಯುತ್ತಿದ್ದು, ಇದೀಗ ಖ್ಯಾತ ರಾಕ್ ಸಂಗೀತಗಾರ ನಗರ ಬಾಲ್ ಜೇಮ್ಸ್ (Nagar Baul James) ಅವರ ಸಂಗೀತ ಕಾರ್ಯಕ್ರಮದ ಮೇಲೆ ಉದ್ರಿಕ್ತ ಗುಂಪೊಂದು ದಾಳಿ ಮಾಡಿದೆ. ಈ ಘಟನೆಯು ದೇಶದಲ್ಲಿ ಕಲಾವಿದರ ಸುರಕ್ಷತೆ ಮತ್ತು ಬೆಳೆಯುತ್ತಿರುವ ಅಸಹಿಷ್ಣುತೆಯ ಬಗ್ಗೆ ಆತಂಕ ಮೂಡಿಸಿದೆ. ಫರಿದಪುರದ ಶಾಲಾ ಆವರಣವೊಂದರಲ್ಲಿ … Continued

“ಬಾಂಗ್ಲಾದೇಶವು ಮುಸ್ಲಿಮರು, ಹಿಂದೂಗಳು, ಕ್ರೈಸ್ತರು…ಎಲ್ಲರಿಗಾಗಿ”: ಏಕತೆಗೆ ಮನವಿ ಮಾಡಿದ 17 ವರ್ಷಗಳ ಬಳಿಕ ದೇಶಕ್ಕೆ ಮರಳಿದ ತಾರಿಖ್ ರೆಹಮಾನ್

ಢಾಕಾ : ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್‌ಪಿ) ಕಾರ್ಯಾಧ್ಯಕ್ಷ ತಾರಿಖ್ ರೆಹಮಾನ್ ಅವರು 17 ವರ್ಷಗಳ ಸುದೀರ್ಘ ಅವಧಿಯ ನಂತರ ಇಂದು ಢಾಕಾ ತಲುಪಿದ್ದು, ಸಂಕಷ್ಟದಲ್ಲಿರುವ ತಮ್ಮ ರಾಷ್ಟ್ರದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ತರಲು ಒಗ್ಗೂಡಿ ಕೆಲಸ ಮಾಡುವಂತೆ ಜನತೆಗೆ ಕರೆ ನೀಡಿದ್ದಾರೆ. ಯುವ ನಾಯಕ ಶರೀಫ್ ಉಸ್ಮಾನ್ ಹಾದಿ ಅವರ ಹತ್ಯೆಯ ನಂತರ ಬಾಂಗ್ಲಾದೇಶದಲ್ಲಿ … Continued

ಭಾರತದ ಜೊತೆಗೆ ಸಂಘರ್ಷ ಮುಂದುವರಿಸಿದ್ರೆ ಅದು ಬಾಂಗ್ಲಾದೇಶವನ್ನು ಕತ್ತಲೆಗೆ ತಳ್ಳಬಹುದು…!

ನವದೆಹಲಿ: ಆರ್ಥಿಕ ಸಂಕಷ್ಟದಲ್ಲಿರುವ ಬಾಂಗ್ಲಾದೇಶವು ಭಾರತದ ಜೊತೆ ಉದ್ವಿಗ್ನತೆ ಹೆಚ್ಚಿಸಿಕೊಂಡರೆ ಬಾಂಗ್ಲಾದೇಶದ ಯೂನಸ್ ಸರ್ಕಾರಕ್ಕೆ ಭಾರಿ ಹೊಡೆತ ನೀಡುವ ಸಾಧ್ಯತೆಯಿದೆ. ಯಾಕೆಂದರೆ ಬಾಂಗ್ಲಾದೇಶದ ವಿದ್ಯುತ್ ಪೂರೈಕೆಯು ಭಾರತದ ಮೇಲೆ ಅವಲಂಬಿತವಾಗಿರುವ ಈ ಸಮಯದಲ್ಲಿ, ಇಂತಹ ನಡೆ ಬಾಂಗ್ಲಾದೇಶಕ್ಕೆ ಹಾನಿಕಾರಕವಾಗಿ ಪರಿಣಮಿಸಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಬಾಂಗ್ಲಾದೇಶದಲ್ಲಿ ತೀವ್ರ ಅನಿಲ ಕೊರತೆ, ಕಲ್ಲಿದ್ದಲು ವಿದ್ಯುತ್ ಸ್ಥಾವರಗಳ ನಿರ್ವಹಣಾ ಸಮಸ್ಯೆ … Continued

ಹಾದಿ ಹತ್ಯೆಯ ವಿರುದ್ಧ ನಡೆದ ಪ್ರತಿಭಟನೆ ವೇಳೆ ಬಾಂಗ್ಲಾದೇಶದ ಮತ್ತೊಬ್ಬ ವಿದ್ಯಾರ್ಥಿ ನಾಯಕನ ತಲೆಗೆ ಗುಂಡೇಟು

ಢಾಕಾ/ಖುಲ್ನಾ: ಬಾಂಗ್ಲಾದೇಶದಲ್ಲಿ ರಾಜಕೀಯ ಸಂಘರ್ಷ ತಾರಕಕ್ಕೇರಿದ್ದು, ವಿದ್ಯಾರ್ಥಿ ನಾಯಕ ಶರೀಫ್ ಉಸ್ಮಾನ್ ಹಾದಿ ಹತ್ಯೆಯ ಬೆನ್ನಲ್ಲೇ ಸೋಮವಾರ ಖುಲ್ನಾದಲ್ಲಿ ನ್ಯಾಷನಲ್ ಸಿಟಿಜನ್ಸ್ ಪಾರ್ಟಿಯ (NCP) ಹಿರಿಯ ಕಾರ್ಮಿಕ ಮುಖಂಡರೊಬ್ಬರ ಮೇಲೆ ಗುಂಡಿನ ದಾಳಿ ನಡೆದಿದೆ. ಈ ತಿಂಗಳಲ್ಲೇ ನಡೆದ ಎರಡನೇ ಹೈ-ಪ್ರೊಫೈಲ್ ಶೂಟೌಟ್ ಇದಾಗಿದ್ದು, ದೇಶಾದ್ಯಂತ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ನ್ಯಾಷನಲ್ ಸಿಟಿಜನ್ಸ್ ಪಾರ್ಟಿಯ (NCP) … Continued

ಬಾಂಗ್ಲಾದೇಶದಲ್ಲಿ ಹಿಂದೂ ವ್ಯಕ್ತಿಯ ಹತ್ಯೆ ಮಾಡಿ ಮೃತದೇಹಕ್ಕೆ ಬೆಂಕಿ ಹಚ್ಚಿದ ಮತಾಂಧರು…

ಢಾಕಾ:  ಬಾಂಗ್ಲಾದೇಶದಲ್ಲಿ ಧರ್ಮನಿಂದನೆಯ ಆರೋಪದ ಮೇಲೆ ಹಿಂದೂ ವ್ಯಕ್ತಿಯೊಬ್ಬನನ್ನು ಗುಂಪೊಂದು ಬರ್ಬರವಾಗಿ ಹೊಡೆದು ಕೊಂದಿರುವ ಘಟನೆ ಗುರುವಾರ ನಡೆದಿದೆ ಎಂದು ವರದಿಯಾಗಿದೆ. ಬಾಂಗ್ಲಾದೇಶದ ಮೈಮನ್‌ಸಿಂಗ್ ಜಿಲ್ಲೆಯ ಭಾಲುಕಾ ಉಪಜಿಲಾದಲ್ಲಿ ಈ ಘಟನೆ ನಡೆದಿದೆ ಎಂದು ಬಿಬಿಸಿ ಬಾಂಗ್ಲಾ ವರದಿ ಮಾಡಿದೆ. ಮೃತರನ್ನು ಸ್ಥಳೀಯ ಗಾರ್ಮೆಂಟ್ ಕಾರ್ಖಾನೆಯ ಉದ್ಯೋಗಿ ದೀಪುಚಂದ್ರ ದಾಸ್ ಎಂದು ಗುರುತಿಸಲಾಗಿದೆ. ಮತ್ತು ದುಬಾಲಿಯಾ … Continued

ವಿದ್ಯಾರ್ಥಿ ನಾಯಕ ಉಸ್ಮಾನ್ ಹಾದಿ ಸಾವು : ಬಾಂಗ್ಲಾದಲ್ಲಿ ಹಿಂಸಾಚಾರ, ಅವಾಮಿ ಲೀಗ್ ಕಚೇರಿ, ಪತ್ರಿಕಾ ಕಚೇರಿಗಳಿಗೆ ಬೆಂಕಿ

ಢಾಕಾ: ಜುಲೈ ದಂಗೆಯ ಪ್ರಮುಖ ಸಂಘಟಕ ಹಾಗೂ ‘ಇಂಕ್ವಿಲಾಬ್ ಮಂಚ’ದ ಸಂಚಾಲಕ ಶರೀಫ್ ಉಸ್ಮಾನ್ ಹಾದಿ ಅವರ ನಿಧನದ ಬೆನ್ನಲ್ಲೇ ಬಾಂಗ್ಲಾದೇಶದ ಢಾಕಾ ಮತ್ತು ಚತ್ತೋಗ್ರಾಮ ಸೇರಿದಂತೆ ಹಲವು ಭಾಗಗಳಲ್ಲಿ ಭಾರಿ ಹಿಂಸಾಚಾರ ಭುಗಿಲೆದ್ದಿದೆ. ಡಿಸೆಂಬರ್ 12 ರಂದು ಢಾಕಾದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾಗ ಶರೀಫ್ ಉಸ್ಮಾನ್ ಹಾದಿ ಅವರ ತಲೆಗೆ ಗುಂಡು ಹಾರಿಸಲಾಗಿತ್ತು. ಗಂಭೀರವಾಗಿ … Continued

1971ರ ನಂತರದ ಅತಿದೊಡ್ಡ ಸವಾಲು: ಬಾಂಗ್ಲಾದೇಶ ಬಿಕ್ಕಟ್ಟಿನಲ್ಲಿ ಚೀನಾ, ಪಾಕ್ ಪಾತ್ರದ ಬಗ್ಗೆ ಸಂಸದೀಯ ಸಮಿತಿ ಎಚ್ಚರಿಕೆ

ನವದೆಹಲಿ: ಬಾಂಗ್ಲಾದೇಶದಲ್ಲಿ ಬದಲಾಗುತ್ತಿರುವ ರಾಜಕೀಯ ಪರಿಸ್ಥಿತಿಯು 1971ರ ಬಾಂಗ್ಲಾ ವಿಮೋಚನಾ ಯುದ್ಧದ ನಂತರ ಭಾರತಕ್ಕೆ ಎದುರಾಗಿರುವ ಅತಿದೊಡ್ಡ ‘ವ್ಯೂಹಾತ್ಮಕ ಸವಾಲು’ ಎಂದು ವಿದೇಶಾಂಗ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯು ಗಂಭೀರ ಎಚ್ಚರಿಕೆ ನೀಡಿದೆ. ಶಶಿ ತರೂರ್ ನೇತೃತ್ವದ ಈ ಸಮಿತಿಯು ಸಂಸತ್ತಿನಲ್ಲಿ ಸಲ್ಲಿಸಿದ ವರದಿಯಲ್ಲಿ, ಬಾಂಗ್ಲಾದೇಶದಲ್ಲಿ ಇಸ್ಲಾಮಿಕ್ ಮೂಲಭೂತವಾದಿಗಳ ಪುನರುತ್ಥಾನ ಮತ್ತು ಚೀನಾ-ಪಾಕಿಸ್ತಾನದ ಹೆಚ್ಚುತ್ತಿರುವ ಹಸ್ತಕ್ಷೇಪದ … Continued

ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾಗೆ ಗಲ್ಲು ಶಿಕ್ಷೆ

ಢಾಕಾ: ಕಳೆದ ವರ್ಷ ನಡೆದ ವಿದ್ಯಾರ್ಥಿ ಬಂಡಾಯದಲ್ಲಿ ಹಲವರ ಹತ್ಯೆ ಸೇರಿದಂತೆ ಮಾನವೀಯತೆ ವಿರುದ್ಧದ ಅಪರಾಧಗಳನ್ನು ಎಸಗಿದ ಆರೋಪದ ಮೇಲೆ, ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ದೇಶದ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ (ICT) ಗಲ್ಲು ಶಿಕ್ಷೆ ವಿಧಿಸಿದೆ. ವಿದ್ಯಾರ್ಥಿ ದಂಗೆಯೇ ಅಂತಿಮವಾಗಿ ಅವರ ಸರ್ಕಾರದ ಪತನಕ್ಕೆ ಕಾರಣವಾಗಿತ್ತು. ತಿಂಗಳುಗಳ ಕಾಲ ಹಸೀನಾ ಅವರ … Continued

ಬಾಂಗ್ಲಾದಲ್ಲಿ ಹಸೀನಾ ಪದಚ್ಯುತಿಗೆ ಕ್ಲಿಂಟನ್‌ ದಂಪತಿ-ಸೊರೊಸ್ ಹಣಕಾಸು ನೆರವು, ಬೈಡನ್‌ ಬೆಂಬಲ : ಮಾಜಿ ಸಚಿವನ ಸ್ಫೋಟಕ ಹೇಳಿಕೆ

ಕಳೆದ ಆಗಸ್ಟ್ 2024 ರಲ್ಲಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರನ್ನು ಅಧಿಕಾರದಿಂದ ಪದಚ್ಯುತಗೊಳಿಸಿದ ಆಡಳಿತ ಬದಲಾವಣೆಯ ಹಿಂದೆ ಅಮೆರಿಕದ ‘ಡೀಪ್ ಸ್ಟೇಟ್’ (Deep State) ಕೈವಾಡವಿದೆ ಎಂಬ ವದಂತಿಗಳು ಬಹಳ ಕಾಲದಿಂದ ಹರಿದಾಡುತ್ತಿದ್ದವು. ಇದೀಗ, ಬಾಂಗ್ಲಾದೇಶದ ಮಾಜಿ ಸಚಿವ ಮೊಹಿಬುಲ್ ಹಸನ್ ಚೌಧರಿ ಅವರು ಈ ಆರೋಪವನ್ನು ದೃಢಪಡಿಸಿದ್ದಾರೆ. ಜುಲೈ-ಆಗಸ್ಟ್ 2024 ರ ಬಿಕ್ಕಟ್ಟಿನ … Continued

ಸೆಪ್ಟೆಂಬರ್ 30ರಿಂದ ಐಸಿಸಿ ಮಹಿಳಾ ಏಕದಿನ ಕ್ರಿಕೆಟ್‌ ವಿಶ್ವಕಪ್ 2025 ಆರಂಭ ; ಎಲ್ಲ 8 ತಂಡಗಳ ಆಟಗಾರರ ಪಟ್ಟಿ ಇಲ್ಲಿದೆ…

ನವದೆಹಲಿ:  ಸೆಪ್ಟೆಂಬರ್ 30 ರಂದು ಅಸ್ಸಾಂನ ಗುವಾಹತಿಯಲ್ಲಿ ಸಹ-ಆತಿಥೇಯ ಭಾರತ ಮತ್ತು ಶ್ರೀಲಂಕಾ ನಡುವಿನ ಪಂದ್ಯದೊಂದಿಗೆ ಪ್ರಾರಂಭವಾಗಲಿರುವ 2025 ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ನಲ್ಲಿ ಒಟ್ಟು ಎಂಟು ತಂಡಗಳು ಪರಸ್ಪರ ಹೋರಾಡಲಿವೆ. ಆಸ್ಟ್ರೇಲಿಯಾ (7 ಬಾರಿ), ಇಂಗ್ಲೆಂಡ್ (4 ಬಾರಿ) ಮತ್ತು ನ್ಯೂಜಿಲೆಂಡ್ (1 ಬಾರಿ) – ಇದುವರೆಗೆ 50-ಓವರ್ ಮಹಿಳಾ ವಿಶ್ವ … Continued