ಟಿ20 ವಿಶ್ವಕಪ್‌ 2026 ; ಹೈ-ವೋಲ್ಟೇಜ್ ಪಂದ್ಯದಲ್ಲಿ ಇಂಗ್ಲೆಂಡ್‌ ಸೋಲಿಸಿ ಭಾರತ ಫೈನಲ್‌ಗೆ

ಮುಂಬೈ: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಹೈ-ವೋಲ್ಟೇಜ್ ಸೆಮಿ ಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 7 ರನ್‌ಗಳಿಂದ ಮಣಿಸಿದ ಟೀಮ್ ಇಂಡಿಯಾ, 2026ರ ಟಿ20 ವಿಶ್ವಕಪ್‌ನ ಫೈನಲ್‌ಗೆ ಪ್ರವೇಶಿಸಿದೆ. ಈ ಗೆಲುವಿನೊಂದಿಗೆ ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಟಿ20 ವಿಶ್ವಕಪ್ ಇತಿಹಾಸದ … Continued

ಟಿ20 ವಿಶ್ವಕಪ್‌ | ಬ್ರೂಕ್ ಬ್ಯಾಟಿಂಗ್ ಅಬ್ಬರ: ಪಾಕಿಸ್ತಾನ ಮಣಿಸಿ ಸೆಮಿಫೈನಲ್‌ ಪ್ರವೇಶಿಸಿದ ಇಂಗ್ಲೆಂಡ್

ಕ್ಯಾಂಡಿ (ಶ್ರೀಲಂಕಾ): ಟಿ20 ವಿಶ್ವಕಪ್‌ನ ಸೂಪರ್-8 ಹಂತದ ರೋಚಕ ಪಂದ್ಯದಲ್ಲಿ ಹ್ಯಾರಿ ಬ್ರೂಕ್ ಸಿಡಿಸಿದ ಮನಮೋಹಕ ಶತಕದ ನೆರವಿನಿಂದ ಇಂಗ್ಲೆಂಡ್ ತಂಡ ಪಾಕಿಸ್ತಾನದ ವಿರುದ್ಧ 2 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಇಂಗ್ಲೆಂಡ್ ಪ್ರಸಕ್ತ ಕೂಟದಲ್ಲಿ ಸೆಮಿಫೈನಲ್ ಪ್ರವೇಶಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬ್ರೂಕ್ ಸಿಡಿಲಬ್ಬರದ ಶತಕ 165 ರನ್‌ಗಳ … Continued

ಟಿ20 ವಿಶ್ವಕಪ್ 2026 : ಸೂಪರ್ 8ರ ಪಂದ್ಯಗಳ ವೇಳಾಪಟ್ಟಿಯ ವಿವರ

ಕೊಲಂಬೊ: ಬುಧವಾರ ಕೊಲಂಬೊದಲ್ಲಿ ನಡೆದ ತನ್ನ ಕೊನೆಯ ಗ್ರೂಪ್ ಎ ಪಂದ್ಯದಲ್ಲಿ ಪಾಕಿಸ್ತಾನ ತಂಡವು ನಮೀಬಿಯಾವನ್ನು ಸೋಲಿಸಿದ ನಂತರ ಟಿ20 ವಿಶ್ವಕಪ್ ಸೂಪರ್ 8 ಹಂತ ಪ್ರವೇಶಿಸಿದ ತಂಡಗಳು ನಿರ್ಧಾರವಾಗಿದೆ. ಗ್ರೂಪ್ ಎ ಯಿಂದ,  ಹಾಲಿ ಚಾಂಪಿಯನ್ ಭಾರತ ಮತ್ತು ಪಾಕಿಸ್ತಾನ ಸೂಪರ್‌ 8ರ ಹಂತ ಪ್ರವೇಶಿವೆ. ಗ್ರೂಪ್ ಬಿ ಯಿಂದ ಶ್ರೀಲಂಕಾ ಮತ್ತು ಜಿಂಬಾಬ್ವೆ … Continued

ಅಂಡರ್-19 ವಿಶ್ವಕಪ್ ; ವೈಭವ್ ಸೂರ್ಯವಂಶಿ ಅಬ್ಬರ : ಭಾರತಕ್ಕೆ 6ನೇ ಬಾರಿ ಚಾಂಪಿಯನ್‌ ಕಿರೀಟ

ಹರಾರೆ: ಜಿಂಬಾಬ್ವೆಯ ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 100 ರನ್‌ಗಳಿಂದ ಸೋಲಿಸಿದ ಭಾರತದ 19 ವರ್ಷದೊಳಗಿನವರ (U19) ತಂಡ, ಆರನೇ ಬಾರಿಗೆ ವಿಶ್ವಕಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಆಯುಷ್ ಮ್ಹಾತ್ರೆ ನೇತೃತ್ವದ ಭಾರತ ತಂಡವು ಟೂರ್ನಿಯುದ್ದಕ್ಕೂ ಅಜೇಯವಾಗಿ ಉಳಿದು ಫೈನಲ್ ತಲುಪಿತ್ತು. ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿ ಬಂದಿದ್ದ ಬಲಿಷ್ಠ ಇಂಗ್ಲೆಂಡ್ … Continued

ಸೆಪ್ಟೆಂಬರ್ 30ರಿಂದ ಐಸಿಸಿ ಮಹಿಳಾ ಏಕದಿನ ಕ್ರಿಕೆಟ್‌ ವಿಶ್ವಕಪ್ 2025 ಆರಂಭ ; ಎಲ್ಲ 8 ತಂಡಗಳ ಆಟಗಾರರ ಪಟ್ಟಿ ಇಲ್ಲಿದೆ…

ನವದೆಹಲಿ:  ಸೆಪ್ಟೆಂಬರ್ 30 ರಂದು ಅಸ್ಸಾಂನ ಗುವಾಹತಿಯಲ್ಲಿ ಸಹ-ಆತಿಥೇಯ ಭಾರತ ಮತ್ತು ಶ್ರೀಲಂಕಾ ನಡುವಿನ ಪಂದ್ಯದೊಂದಿಗೆ ಪ್ರಾರಂಭವಾಗಲಿರುವ 2025 ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ನಲ್ಲಿ ಒಟ್ಟು ಎಂಟು ತಂಡಗಳು ಪರಸ್ಪರ ಹೋರಾಡಲಿವೆ. ಆಸ್ಟ್ರೇಲಿಯಾ (7 ಬಾರಿ), ಇಂಗ್ಲೆಂಡ್ (4 ಬಾರಿ) ಮತ್ತು ನ್ಯೂಜಿಲೆಂಡ್ (1 ಬಾರಿ) – ಇದುವರೆಗೆ 50-ಓವರ್ ಮಹಿಳಾ ವಿಶ್ವ … Continued

ಅತ್ಯಾಚಾರ ಆರೋಪದ ಮೇಲೆ ಇಂಗ್ಲೆಂಡಿನಲ್ಲಿ ಪಾಕಿಸ್ತಾನ ಕ್ರಿಕೆಟಿಗ ಹೈದರ್ ಅಲಿ ಬಂಧನ

ಅತ್ಯಾಚಾರ ಆರೋಪದ ಮೇಲೆ ಪಾಕಿಸ್ತಾನದ ಕ್ರಿಕೆಟರ್‌ ಹೈದರ್ ಅಲಿಯನ್ನು ಗ್ರೇಟರ್ ಮ್ಯಾಂಚೆಸ್ಟರ್ ಪೊಲೀಸರು ಬಂಧಿಸಿದ್ದು, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಈತನನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ. ಪೊಲೀಸರ ಪ್ರಕಾರ, ಈ ದುರದೃಷ್ಟಕರ ಘಟನೆ ಜುಲೈ 23, 2025 ರಂದು ಮ್ಯಾಂಚೆಸ್ಟರ್‌ನ ಆವರಣದಲ್ಲಿ ನಡೆದಿದೆ ಎನ್ನಲಾಗಿದೆ. 24 ವರ್ಷದ ಹೈದರ್ ಅಲಿಯನ್ನು ಆಗಸ್ಟ್ 4 ರಂದು ಪೊಲೀಸರು ಹೋವ್‌ನಲ್ಲಿ … Continued

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ 15 ಜನರ ಭಾರತದ ಕ್ರಿಕೆಟ್‌ ತಂಡ ಪ್ರಕಟ; ತಂಡಕ್ಕೆ ಮರಳಿದ ಶಮಿ

ನವದೆಹಲಿ: ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಐದು ಪಂದ್ಯಗಳ ಸರಣಿಯು ಜನವರಿ 22 ರಿಂದ ನಡೆಯಲಿದೆ. ಹಾಲಿ ವಿಶ್ವ ಟಿ20 ಚಾಂಪಿಯನ್ ಆಗಿರುವ ಭಾರತದ ತಂಡವು ಬಾರ್ಬಡೋಸ್‌ನಲ್ಲಿ ಟ್ರೋಫಿ ಗೆದ್ದ ನಂತರ ಇದುವರೆಗೆ ಯಾವುದೇ ಸರಣಿಯನ್ನು ಕಳೆದುಕೊಂಡಿಲ್ಲ. ಐದು … Continued

37 ಜನರನ್ನು ಕೊಂದು ತಿನ್ನಲಾಗಿತ್ತು ಎಂದ ಇಂಗ್ಲೆಂಡಿನ 4000 ವರ್ಷಗಳ ಹಳೆಯ ಹತ್ಯಾಕಾಂಡದ ಹೊಸ ಸಂಶೋಧನೆ..!

ನೈಋತ್ಯ ಇಂಗ್ಲೆಂಡ್‌ನಲ್ಲಿ 4,000 ವರ್ಷಗಳಷ್ಟು ಹಳೆಯದಾದ ಹತ್ಯಾಕಾಂಡವು ಸಂಭವನೀಯ ನರಮಾಂಸ ಭಕ್ಷಣೆಗೆ ಸಂಬಂಧಿಸಿದೆ ಎಂದು ಹೊಸ ಸಂಶೋಧನೆಯೊಂದು ಹೇಳಿದೆ.ಚಾರ್ಟರ್‌ಹೌಸ್ ವಾರೆನ್ ಫಾರ್ಮ್‌ನಲ್ಲಿ 50-ಅಡಿ ಆಳದ ಶಾಫ್ಟ್‌ನಲ್ಲಿ ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಿ ಕನಿಷ್ಠ 37 ವ್ಯಕ್ತಿಗಳ ಛಿದ್ರಗೊಂಡ ಎಲುಬುಗಳು, ತಲೆಬುರುಡೆಗಳು ಮತ್ತು ಸ್ಲೈಸಿಂಗ್ ತುಂಡುಗಳು ಪತ್ತೆಯಾಗಿತ್ತು. ಹಬ್ಬದ ಸಮಯದಲ್ಲಿ ತಿನ್ನಬಹುದೆಂದು ಇವರನ್ನು ಹತ್ಯೆಗೈಯಲಾಗಿದೆ ಎಂದು … Continued

ಟಿ 20 ವಿಶ್ವಕಪ್‌ 2024 : ಇಂಗ್ಲೆಂಡ್‌ ಸೋಲಿಸಿ 10 ವರ್ಷಗಳ ನಂತರ ಫೈನಲ್‌ ಪ್ರವೇಶಿಸಿದ ಭಾರತ

ಗುರುವಾರ ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಅನ್ನು 68 ರನ್‌ಗಳಿಂದ ಸೋಲಿಸುವ ಮೂಲಕ ಫೈನಲ್‌ ಪ್ರವೇಶಿಸಿದ ಭಾರತ ಇದೇ ವೇಳೆ 2022ರ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಸೋಲಿಗೆ ಸೇಡು ತೀರಿಸಿಕೊಂಡಿದೆ. ಫೈನಲ್‌ ಪ್ರವೇಶಿಸಿದ ಭಾರತದ ಕ್ರಿಕೆಟ್‌ ತಂಡವು 2024 ರ ಟಿ20 ವಿಶ್ವಕಪ್‌ ಪ್ರಶಸ್ತಿಗಾಗಿ ಶನಿವಾರ (ಜೂನ್‌ ೨೯) ದಕ್ಷಿಣ ಆಫ್ರಿಕಾದ … Continued

ವೀಡಿಯೊ..| ಒಂದೇ ಓವರಿನಲ್ಲಿ 43 ರನ್ ಚಚ್ಚಿಸಿಕೊಂಡ ಇಂಗ್ಲೆಂಡ್ ವೇಗದ ಬೌಲರ್ ; ವೀಕ್ಷಿಸಿ

ಇಂಗ್ಲೆಂಡ್ ವೇಗದ ಬೌಲರ್ ಒಲ್ಲಿ ರಾಬಿನ್ಸನ್ ಕೌಂಟಿ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ 43 ರನ್‌ಗಳನ್ನು ಚಚ್ಚಿಸಿಕೊಳ್ಳುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲಿ ಎರಡನೇ ಅತ್ಯಂತ ದುಬಾರಿ ಓವರ್ ಬೌಲಿಂಗ್ ದಾಖಲೆ ಮಾಡಿದ್ದಾರೆ. 2021ರಲ್ಲಿ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಬಲಗೈ ಬೌಲರ್ ರಾಬಿನ್ಸನ್ ಇಂಗ್ಲೆಂಡ್ ಪರ 20 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 76 … Continued