“ಈ ವರ್ಷವೇ ನನ್ನ ದೇಶಕ್ಕೆ ಮರಳುತ್ತೇನೆ” ; ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಘೋಷಣೆ

ನವದೆಹಲಿ: ಸುಮಾರು ಎರಡು ವರ್ಷಗಳಿಂದ ಭಾರತದಲ್ಲಿ ದೇಶಾಂತರದ ಜೀವನ ನಡೆಸುತ್ತಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ, “ಈ ವರ್ಷವೇ ನಾನು ನನ್ನ ದೇಶಕ್ಕೆ ಮರಳುತ್ತೇನೆ” ಎಂದು ಪ್ರಕಟಿಸುವ ಮೂಲಕ ತಮ್ಮ ದೇಶಾಂತರದ ಅಂತ್ಯಕ್ಕೆ ಸೂಚನೆ ನೀಡಿದ್ದಾರೆ. 2024ರ ಆಗಸ್ಟ್ 5ರಂದು ವಿದ್ಯಾರ್ಥಿ ನೇತೃತ್ವದ ಭಾರಿ ಜನಾಂದೋಲನದ ಬಳಿಕ ಅಧಿಕಾರ ಕಳೆದುಕೊಂಡು ಭಾರತಕ್ಕೆ ಬಂದಿದ್ದ ಹಸೀನಾ, … Continued

ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾಗೆ ಗಲ್ಲು ಶಿಕ್ಷೆ

ಢಾಕಾ: ಕಳೆದ ವರ್ಷ ನಡೆದ ವಿದ್ಯಾರ್ಥಿ ಬಂಡಾಯದಲ್ಲಿ ಹಲವರ ಹತ್ಯೆ ಸೇರಿದಂತೆ ಮಾನವೀಯತೆ ವಿರುದ್ಧದ ಅಪರಾಧಗಳನ್ನು ಎಸಗಿದ ಆರೋಪದ ಮೇಲೆ, ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ದೇಶದ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ (ICT) ಗಲ್ಲು ಶಿಕ್ಷೆ ವಿಧಿಸಿದೆ. ವಿದ್ಯಾರ್ಥಿ ದಂಗೆಯೇ ಅಂತಿಮವಾಗಿ ಅವರ ಸರ್ಕಾರದ ಪತನಕ್ಕೆ ಕಾರಣವಾಗಿತ್ತು. ತಿಂಗಳುಗಳ ಕಾಲ ಹಸೀನಾ ಅವರ … Continued

ಬಾಂಗ್ಲಾದಲ್ಲಿ ಹಸೀನಾ ಪದಚ್ಯುತಿಗೆ ಕ್ಲಿಂಟನ್‌ ದಂಪತಿ-ಸೊರೊಸ್ ಹಣಕಾಸು ನೆರವು, ಬೈಡನ್‌ ಬೆಂಬಲ : ಮಾಜಿ ಸಚಿವನ ಸ್ಫೋಟಕ ಹೇಳಿಕೆ

ಕಳೆದ ಆಗಸ್ಟ್ 2024 ರಲ್ಲಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರನ್ನು ಅಧಿಕಾರದಿಂದ ಪದಚ್ಯುತಗೊಳಿಸಿದ ಆಡಳಿತ ಬದಲಾವಣೆಯ ಹಿಂದೆ ಅಮೆರಿಕದ ‘ಡೀಪ್ ಸ್ಟೇಟ್’ (Deep State) ಕೈವಾಡವಿದೆ ಎಂಬ ವದಂತಿಗಳು ಬಹಳ ಕಾಲದಿಂದ ಹರಿದಾಡುತ್ತಿದ್ದವು. ಇದೀಗ, ಬಾಂಗ್ಲಾದೇಶದ ಮಾಜಿ ಸಚಿವ ಮೊಹಿಬುಲ್ ಹಸನ್ ಚೌಧರಿ ಅವರು ಈ ಆರೋಪವನ್ನು ದೃಢಪಡಿಸಿದ್ದಾರೆ. ಜುಲೈ-ಆಗಸ್ಟ್ 2024 ರ ಬಿಕ್ಕಟ್ಟಿನ … Continued

“ಅಮೆರಿಕಕ್ಕೆ ಬಾಂಗ್ಲಾದೇಶವನ್ನೇ ಮಾರಾಟ ಮಾಡಿದ…”: ಮುಹಮ್ಮದ್ ಯೂನಸ್ ವಿರುದ್ಧ ಶೇಖ್ ಹಸೀನಾ ಗಂಭೀರ ಆರೋಪ

ಢಾಕಾ: ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ “ಅಮೆರಿಕಕ್ಕೆ ದೇಶವನ್ನು ಮಾರಾಟ ಮಾಡಿದ್ದಾರೆ” ಎಂದು ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್ ಹಸೀನಾ ಆರೋಪಿಸಿದ್ದಾರೆ. ಇತ್ತೀಚೆಗೆ ತಮ್ಮ ಅವಾಮಿ ಲೀಗ್ ಪಕ್ಷದ ಮೇಲೆ ನಿಷೇಧ ಹೇರಿದ್ದನ್ನು ಖಂಡಿಸಿದ ಅವರು, ಅದನ್ನು ಸಂವಿಧಾನಬಾಹಿರ ಎಂದು ಕರೆದಿದ್ದಾರೆ. ತಮ್ಮ ಪಕ್ಷದ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಲಾದ ಧ್ವನಿ ಸಂದೇಶದಲ್ಲಿ, … Continued

ಪದಚ್ಯುತ ಮಾಜಿ ಪ್ರಧಾನಿ ಹಸೀನಾ ಪಕ್ಷ ಅವಾಮಿ ಲೀಗ್‌ ನಿಷೇಧಕ್ಕೆ ಮುಂದಾದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರ

ಢಾಕಾ : ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಅನ್ನು ನಿಷೇಧಿಸುವ ಬಗ್ಗೆ “ತ್ವರಿತ ನಿರ್ಧಾರ” ತೆಗೆದುಕೊಳ್ಳುವುದಾಗಿ ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಶುಕ್ರವಾರ ಹೇಳಿದೆ. ಹಸೀನಾ ಅವರ ಪಕ್ಷವನ್ನು ವಿಸರ್ಜಿಸುವಂತೆ ಒತ್ತಾಯಿಸಿ ವಿದ್ಯಾರ್ಥಿ ನೇತೃತ್ವದ ಹೊಸದಾಗಿ ರಚನೆಯಾದ ರಾಷ್ಟ್ರೀಯ ನಾಗರಿಕ ಪಕ್ಷದ (ಎನ್‌ಸಿಪಿ) ಕಾರ್ಯಕರ್ತರು ರಾತ್ರೋರಾತ್ರಿ ಅವರ ಅಧಿಕೃತ ನಿವಾಸದ ಮುಂದೆ ರ್ಯಾಲಿ … Continued

ಬಾಂಗ್ಲಾದೇಶ ಸೇನಾ ಮುಖ್ಯಸ್ಥರ ಪದಚ್ಯುತಿಗೆ ಪಾಕಿಸ್ತಾನದಿಂದ ಯತ್ನ : ದಂಗೆ ವಿಫಲಗೊಳಿಸಿ ಸೇನಾ ಮುಖ್ಯಸ್ಥರನ್ನು ಕಾಪಾಡಿದ ಭಾರತ…!

ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ಜನರಲ್ ವಾಕರ್-ಉಜ್-ಝಮಾನ್ ಅವರನ್ನು ಪದಚ್ಯತಗೊಳಿಸುವ ಪಾಕಿಸ್ತಾನದ ಪ್ರಯತ್ನಕ್ಕೆ ಭಾರತ ಬಲವಾದ ಪೆಟ್ಟು ನೀಡಿದೆ…! ಜನರಲ್ ವಾಕರ್-ಉಜ್-ಝಮಾನ್ ಅವರನ್ನು ಪದಚ್ಯುತಗೊಳಿಸಲು ಪಾಕಿಸ್ತಾನ ಪ್ರೇರಿತ ಇತ್ತೀಚಿನ ದಂಗೆಯ ಪ್ರಯತ್ನವನ್ನು ಭಾರತದ ನೆರವಿನೊಂದಿಗೆ ಯಶಸ್ವಿಯಾಗಿ ವಿಫಲಗೊಳಿಸಲಾಗಿದೆ. ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ಆರಂಭಿಸಿದ ಈ ಸಂಚಿನ ಪ್ರಕಾರ, ಜನರಲ್ ವಾಕರ್-ಉಜ್-ಝಮಾನ್ ಅವರ ಬದಲಿಗೆ ಜಮಾತ್-ಎ-ಇಸ್ಲಾಮಿಗೆ ನಿಕಟವಾಗಿರುವ … Continued

ಬಾಂಗ್ಲಾದೇಶದ ಹಂಗಾಮಿ ಮುಖ್ಯಸ್ಥ “ಮುಹಮ್ಮದ್ ಯೂನಸ್ ಅಲ್ಪಸಂಖ್ಯಾತರ ನರಮೇಧದಲ್ಲಿ ಭಾಗಿ”: ಪದಚ್ಯುತಿ ನಂತರ ಶೇಖ್ ಹಸೀನಾ ಮೊದಲ ಭಾಷಣ

ನವದೆಹಲಿ: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ದೇಶದ ಹಂಗಾಮಿ ನಾಯಕ ಮುಹಮ್ಮದ್ ಯೂನಸ್ ಅವರೇ ಕಾರಣ ಎಂದು ಆರೋಪಿಸಿದ್ದಾರೆ. ನ್ಯೂಯಾರ್ಕ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವರ್ಚುವಲ್ ಮೂಲಕ ಮಾತನಾಡಿದ ಶೇಖ್ ಹಸೀನಾ ಅವರು ಮುಹಮ್ಮದ್ ಯೂನಸ್ “ಹತ್ಯಾಕಾಂಡ” ನಡೆಸುತ್ತಿದ್ದಾರೆ ಮತ್ತು ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತರನ್ನು ರಕ್ಷಿಸಲು ವಿಫಲರಾಗಿದ್ದಾರೆ ಎಂದು … Continued

ಬಾಂಗ್ಲಾದೇಶ ಬಿಕ್ಕಟ್ಟು | ಹಂಗಾಮಿ ಸರ್ಕಾರ ಚುನಾವಣೆ ನಡೆಸಲು ನಿರ್ಧರಿಸಿದಾಗ ಶೇಖ್ ಹಸೀನಾ ಬಾಂಗ್ಲಾದೇಶಕ್ಕೆ ಹಿಂತಿರುಗುತ್ತಾರೆ ; ಹಸೀನಾ ಪುತ್ರ

ನವದೆಹಲಿ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಬಾಂಗ್ಲಾದೇಶದಲ್ಲಿ ಚುನಾವಣೆ ನಡೆಸಲು ನಿರ್ಧರಿಸಿದಾಗ ಅವರು ತಮ್ಮ ದೇಶಕ್ಕೆ ಹಿಂದಿರುಗಲಿದ್ದಾರೆ ಎಂದು ಅವರ ಮಗ ಹೇಳಿದ್ದಾರೆ. ವಾರಗಳ ಮಾರಣಾಂತಿಕ ಪ್ರತಿಭಟನೆಗಳ ನಂತರ ಹಸೀನಾ ಸೋಮವಾರ ಭಾರತಕ್ಕೆ ಪಲಾಯನ ಮಾಡಿದ್ದರು. ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಯೂನಸ್ ನೇತೃತ್ವದ ಉಸ್ತುವಾರಿ ಸರ್ಕಾರವು ಗುರುವಾರ ಪ್ರಮಾಣ ವಚನ … Continued

ಬಾಂಗ್ಲಾದೇಶ ಬಿಕ್ಕಟ್ಟು : ನೊಬೆಲ್ ಪುರಸ್ಕೃತ 84 ವರ್ಷದ ಮೊಹಮ್ಮದ್ ಯೂನಸ್ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ರಚನೆ

ನವದೆಹಲಿ : ಭಾರೀ ಪ್ರತಿಭಟನೆಗಳ ನಡುವೆ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಿದ ನಂತರ ಬಾಂಗ್ಲಾದೇಶದ ನೊಬೆಲ್ ಪ್ರಶಸ್ತಿ ಪುರಸ್ಕೃತ ಕಿರು ಹಣಕಾಸು ಪ್ರವರ್ತಕ ಮುಹಮ್ಮದ್ ಯೂನಸ್ ಅವರನ್ನು ಮಿಲಿಟರಿ ಬೆಂಬಲಿತ ಮಧ್ಯಂತರ ಸರ್ಕಾರದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಹಸೀನಾ ಅವರ ಪದಚ್ಯುತಿಯಲ್ಲಿ ಪ್ರತಿಭಟನೆ ಅಂತ್ಯಗೊಂಡ ನಂತರ ವಿದ್ಯಾರ್ಥಿ ಮುಖಂಡರು ಮಂಗಳವಾರ ಸಂಜೆ ಸೇನಾ ಮುಖ್ಯಸ್ಥ ಜನರಲ್ ವಾಕರ್-ಉಜ್-ಜಮಾನ್ … Continued

ಶೇಖ್ ಹಸೀನಾ ವಿರುದ್ಧ ಸಂಚು | ಖಲೀದಾ ಜಿಯಾ ಪುತ್ರ-ಪಾಕಿಸ್ತಾನದ ಐಎಸ್‌ಐ ಸಭೆ-ಲಂಡನ್ ನಲ್ಲಿ ಯೋಜನೆ-ಢಾಕಾದಲ್ಲಿ ಕಾರ್ಯರೂಪ: ಬಾಂಗ್ಲಾದೇಶ ಗುಪ್ತಚರ ವರದಿ

ಗುಪ್ತಚರ ವರದಿಗಳ ಪ್ರಕಾರ, ಶೇಖ್ ಹಸೀನಾ ಸರ್ಕಾರದ ಪತನಕ್ಕೆ ಕಾರಣವಾದ ಮೀಸಲಾತಿ ವ್ಯವಸ್ಥೆಯ ವಿರುದ್ಧ ಭಾರಿ ಪ್ರತಿಭಟನೆಗಳಿಗೆ ಸಾಕ್ಷಿಯಾದ ಬಾಂಗ್ಲಾದೇಶದಲ್ಲಿ ಆಡಳಿತ ಬದಲಾವಣೆಯ ನೀಲನಕ್ಷೆಯನ್ನು ಲಂಡನ್‌ನಲ್ಲಿ ಪಾಕಿಸ್ತಾನದ ಐಎಸ್‌ಐ ಸಹಯೋಗದೊಂದಿಗೆ ರಚಿಸಲಾಗಿತ್ತು ಎಂದು ವರದಿಯೊಂದು ಹೇಳಿದೆ. ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿಯ (ಬಿಎನ್‌ಪಿ) ಹಂಗಾಮಿ ಮುಖ್ಯಸ್ಥ ಹಾಗೂ ಖಲೀದಾ ಜಿಯಾ ಅವರ ಪುತ್ರ ತಾರಿಕ್ ರೆಹಮಾನ್ ಮತ್ತು … Continued