‘ದೇವಾಲಯಗಳು ಪಿಕ್ನಿಕ್ ಸ್ಪಾಟ್ ಅಲ್ಲ’: ಪಳನಿ ದೇವಸ್ಥಾನಕ್ಕೆ ಹಿಂದೂಯೇತರರ ಪ್ರವೇಶ ನಿರ್ಬಂಧಿಸುವಂತೆ ಮದ್ರಾಸ್‌ ಹೈಕೋರ್ಟ್ ಸೂಚನೆ

ಚೆನ್ನೈ: ತಮಿಳುನಾಡು ಸರ್ಕಾರ ಮತ್ತು ರಾಜ್ಯ ಹಿಂದೂ ಧಾರ್ಮಿಕ ಮತ್ತು ದತ್ತಿ (HR&CE) ಇಲಾಖೆಗೆ ನಿರ್ದೇಶನ ನೀಡಿರುವ ಮದ್ರಾಸ್ ಹೈಕೋರ್ಟ್ ಪಳನಿ ದೇವಸ್ಥಾನ ಮತ್ತು ಅದರ ಉಪ ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸುವಂತೆ ಸೂಚನೆ ನೀಡಿದೆ. ಈ ಸ್ಥಳಗಳು “ಪಿಕ್ನಿಕ್ ಅಥವಾ ಪ್ರವಾಸಿ ತಾಣವಲ್ಲ” ಎಂದು ಒತ್ತಿಹೇಳಿರುವ ನ್ಯಾಯಮೂರ್ತಿ ಎಸ್. ಶ್ರೀಮತಿ ಅವರ ನೇತೃತ್ವದ ಪೀಠವು … Continued

‘ಹಿಂದೂಗಳು ಸಹಿಷ್ಣುಗಳು…ಅವರ ಜೀವನ ವಿಧಾನದಿಂದ ನಾವು ಕಲಿತಿದ್ದೇವೆ, ಭಗವಾನ್ ರಾಮ ನಮ್ಮ ಸಂಸ್ಕೃತಿ-ನಾಗರಿಕತೆಯ ಭಾಗ : ಜಾವೇದ್ ಅಖ್ತರ್

ಮುಂಬೈ :   ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಗೀತರಚನೆಕಾರ ಜಾವೇದ್ ಅಖ್ತರ್ ಅವರು ಹಿಂದೂ ಸಂಸ್ಕೃತಿಯನ್ನು ಹೊಗಳಿದ್ದಾರೆ ಮತ್ತು ಅವರು ಹಿಂದೂಗಳು ಯಾವಾಗಲೂ ಸಹಿಷ್ಣುಗಳು ಎಂದು ಹೇಳಿದ್ದಾರೆ. ಮುಂಬೈನಲ್ಲಿ ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಆಯೋಜಿಸಿದ್ದ ದೀಪೋತ್ಸವ ಕಾರ್ಯಕ್ರಮದಲ್ಲಿ. ಠಾಕ್ರೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಹಿಂದೂ ಧರ್ಮದ ಸಾಂಸ್ಕೃತಿಕ ಮಹತ್ವವನ್ನು ಒತ್ತಿ ಹೇಳಿದ ಅವರು, … Continued

ಹಿಂದೂ-ಮುಸ್ಲಿಮರ ನಡುವೆ ಜಗಳ ತಂದಿದ್ದೇ ಬ್ರಿಟಿಷರು: ಮೋಹನ್ ಭಾಗವತ್

ಮುಂಬೈ: ಹಿಂದೂಗಳು ಮತ್ತು ಮುಸ್ಲಿಮರ ನಡುವೆ ತಪ್ಪು ಕಲ್ಪನೆ ಸೃಷ್ಟಿಸುವ ಮೂಲಕ ಇಬ್ಬರೂ ಕಿತ್ತಾಡುವಂತೆ ಮಾಡಿದವರು ಬ್ರಿಟಿಷರು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್)ದ ಮುಖ್ಯಸ್ಥ ಮೋಹನ್ ಭಾಗವತ್ ಸೋಮವಾರ ಹೇಳಿದ್ದಾರೆ. ಮುಂಬೈನ ಪಂಚತಾರಾ ಹೋಟೆಲ್‌ನಲ್ಲಿ ಮುಸ್ಲಿಂ ಸಮುದಾಯದ ಬುದ್ಧಿಜೀವಿಗಳನ್ನು ಭೇಟಿ ಮಾಡಿದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ , ಬ್ರಿಟಿಷರು ಮುಸ್ಲಿಮರಿಗೆ ಬಹುಸಂಖ್ಯಾತ ಹಿಂದೂ … Continued

ಬಾಂಗ್ಲಾದೇಶ: ವ್ಯಕ್ತಿ ನಿಂದನೆ ಖಂಡಿಸಿ ೮೦ಕ್ಕೂ ಹೆಚ್ಚು ಹಿಂದೂಗಳ ಮನೆಗಳ ಮೇಲೆ ದಾಳಿ

ಹಿಂದೂ ಯುವಕನೊಬ್ಬ ಮುಸ್ಲಿಂ ಮುಖಂಡರೊಬ್ಬರನ್ನುಟೀಕಿಸಿದ್ದನ್ನು ಖಂಡಿಸಿ ಬಾಂಗ್ಲಾದೇಶದ ಸುನಮ್‌ಗಂಜ್‌ ಗ್ರಾಮದ ೮೦ಕ್ಕೂ ಹೆಚ್ಚು ಹಿಂದೂ ಬಾಂಧವರ ಮನೆಗಳ ಮೇಲೆ ಉಗ್ರಗಾಮಿ ಸಂಘಟನೆ ಹೆಫಜತ್‌-ಎ-ಇಸ್ಲಾಂ ಬೆಂಬಲಿಗರು ದಾಳಿ ನಡೆಸಿದ್ದಾರೆ. ಹಿಂದೂ ಯುವಕನೊಬ್ಬ ಫೇಸ್‌ಬುಕ್‌ನಲ್ಲಿ ಮೌಲಾನಾ ಮುಫ್ತಿ ಮಾಮುನಲ್‌ ಹಕ್‌ ಅವರನ್ನು ಟೀಕಿಸಿದ್ದನ್ನು ಖಂಡಿಸಿ ದಾಳಿ ನಡೆಸಲಾಗಿದ್ದು, ಮನೆಗಳಲ್ಲಿನ ಸಾಮಗ್ರಿಗಳನ್ನು ಧ್ವಂಸ ಮಾಡಿದರೆ, ಇನ್ನು ಕೆಲವರು ಮನೆಗಳಲ್ಲಿನ ಸಾಮಗ್ರಿಗಳನ್ನು … Continued