ಈ ವಾರ ಅಯೋಧ್ಯೆ ರಾಮ ಮಂದಿರದ ಮೇಲೆ ದಾಳಿ : ಖಲಿಸ್ತಾನಿ ಭಯೋತ್ಪಾದಕ ಪನ್ನು ಬೆದರಿಕೆ

ನವದೆಹಲಿ: ಈ ವಾರದಲ್ಲಿ ಅಯೋಧ್ಯೆ ರಾಮಮಂದಿರ ಮತ್ತು ಕೆನಡಾದಲ್ಲಿನ ಹಲವು ಹಿಂದೂ ದೇಗುಲಗಳ ಮೇಲೆ ದಾಳಿ ನಡೆಸುವುದಾಗಿ ‘ಸಿಖ್‌ ಫಾರ್ ಜಸ್ಟಿಸ್‌’ ಸಂಘಟನೆಯ ನಾಯಕ, ಘೋಷಿತ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್‌ ಸಿಂಗ್‌ ಪನ್ನೂನ್‌ ಬೆದರಿಕೆ ಹಾಕಿದ್ದಾನೆ. ಅಲ್ಲದೆ ಕರ್ನಾಟಕ ಮೂಲದ ಕೆನಡಾ ಸಂಸದ ಚಂದ್ರ ಆರ್ಯ ಅವರಿಗೂ ಎಚ್ಚರಿಸಿದ್ದಾನೆ. ಖಲಿಸ್ತಾನಿ ಉಗ್ರರ ವಿಷಯ ಭಾರತ- ಕೆನಡಾ … Continued

ಭಾರತದ ಘೋಷಿತ ಭಯೋತ್ಪಾದಕ, ಉಗ್ರಗಾಮಿ ನಿಜ್ಜರನ ನಂಬಿಗಸ್ಥ ಬಂಟ ಅರ್ಶ್‌ ‘ದಲ್ಲಾ’ ಕೆನಡಾದಲ್ಲಿ ಬಂಧನ..?

ನವದೆಹಲಿ : ಭಾರತವು ಭಯೋತ್ಪಾದಕ ಎಂದು ಘೋಷಿಸಿರುವ ಖಲಿಸ್ತಾನಿ ಉಗ್ರ ಅರ್ಶದೀಪ್ ಸಿಂಗ್ ಗಿಲ್ ಅಲಿಯಾಸ್ ಅರ್ಶ್ ದಲ್ಲಾನನ್ನು ಕೆನಡಾದ ಒಂಟಾರಿಯೊ ಪ್ರಾಂತ್ಯದಲ್ಲಿ ಗುಂಡಿನ ದಾಳಿಯ ನಂತರ ಬಂಧಿಸಿರುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ. ಅಕ್ಟೋಬರ್ 28 ರಂದು ಮಿಲ್ಟನ್‌ನಲ್ಲಿ ಈ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ. ದಲ್ಲಾ, ನಿಷೇಧಿತ ಖಾಲಿಸ್ತಾನ ಟೈಗರ್‌ ಫೋರ್ಸ್‌ನೊಂದಿಗೆ (ಕೆಟಿಎಫ್‌) … Continued

ಬ್ರಾಂಪ್ಟನ್ ಹಿಂದೂ ದೇವಾಲಯದ ಮೇಲೆ ಖಲಿಸ್ತಾನಿಗಳ ದಾಳಿ ಪ್ರಕರಣ ; ಕೆನಡಾ ಪೊಲೀಸರಿಂದ ಮತ್ತೊಬ್ಬನ ಬಂಧನ

ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಹಿಂದೂ ದೇವಾಲಯದ ಮೇಲೆ ಖಲಿಸ್ತಾನಿಗಳು ನಡೆಸಿದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೀಲ್ ಪ್ರಾದೇಶಿಕ ಪೊಲೀಸರು ಮತ್ತೊಬ್ಬನನ್ನು ಬಂಧಿಸಿದ್ದಾರೆ. ಆರೋಪಿಯನ್ನು ಬ್ರಾಂಪ್ಟನ್‌ನ ಇಂದರ್‌ಜೀತ್ ಗೋಸಲ್ (35) ಎಂದು ಗುರುತಿಸಲಾಗಿದ್ದು, ಆತನ ಮೇಲೆ ಆಯುಧದಿಂದ ಹಲ್ಲೆ ನಡೆಸಿದ ಆರೋಪ ಹೊರಿಸಲಾಗಿದೆ. ಕಳೆದ ವಾರ, ಬ್ರಾಂಪ್ಟನ್‌ನ ಹಿಂದೂ ಮಂದಿರದಲ್ಲಿ ಭಾರತೀಯ ಅಧಿಕಾರಿಗಳು ಭಾಗವಹಿಸಿದ್ದ ದೂತಾವಾಸ ಕಾರ್ಯಕ್ರಮಕ್ಕೆ ಖಲಿಸ್ತಾನವನ್ನು … Continued

ಹಿಂದೂ ದೇವಾಲಯದ ಹೊರಗೆ ಖಲಿಸ್ತಾನಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕೆನಡಾ ಪೋಲೀಸ್‌ ಅಮಾನತು

ಬ್ರಾಂಪ್ಟನ್‌ನ ಹಿಂದೂ ಸಭಾ ಮಂದಿರದಲ್ಲಿ ಭಕ್ತರ ಮೇಲೆ ದಾಳಿ ನಡೆಸಿದ ಖಲಿಸ್ತಾನಿ ಪರ ಗುಂಪುಗಳ ಜೊತೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕೆನಡಾದ ಪೋಲೀಸರನ್ನು ಸೋಮವಾರ ಅಮಾನತುಗೊಳಿಸಲಾಗಿದೆ. ಹರಿಂದರ್ ಸೋಹಿ ಎಂದು ಗುರುತಿಸಲಾದ ಅಮಾನತುಗೊಂಡ ಪೋಲೀಸ್ ಆಗಿದ್ದಾನೆ. ಪ್ರತಿಭಟನೆಯಲ್ಲಿ ಇತರರು ಭಾರತ ವಿರೋಧಿ ಘೋಷಣೆಗಳನ್ನು ಕೂಗುತ್ತಿದ್ದಾಗ ಈತ ಖಲಿಸ್ತಾನ್ ಧ್ವಜವನ್ನು ಹಿಡಿದಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಅವರು ಪೀಲ್ ಪ್ರಾದೇಶಿಕ … Continued

ಖಲಿಸ್ತಾನಿಗಳು-ಟ್ರುಡೊ ವಿರುದ್ಧ ನಿರ್ಣಯ ಅಂಗೀಕರಿಸಿದ ಕೆನಡಾದ 36 ಹಿಂದೂ-ಸಿಖ್ ಗುಂಪುಗಳು…

ಕೆನಡಾದ ಹಿಂದೂ ಮತ್ತು ಸಿಖ್ ಗುಂಪುಗಳು ಖಲಿಸ್ತಾನಿ ಗುಂಪುಗಳ ವಿರುದ್ಧ ನಿರ್ಣಯವನ್ನು ಅಂಗೀಕರಿಸಲು ಸೋಮವಾರ ಒಗ್ಗೂಡಿ ಸಭೆ ನಡೆಸಿವೆ. ಮೂಲಗಳ ಪ್ರಕಾರ, ಖಾಲ್ಸಾ ದಿವಾನ್ ಸೊಸೈಟಿ ರಾಸ್ ಸ್ಟ್ರೀಟ್ ವ್ಯಾಂಕೋವರ್ ಗುರುದ್ವಾರದಿಂದ ಸಭೆಯನ್ನು ಆಯೋಜಿಸಲಾಗಿತ್ತು, ಅಲ್ಲಿ 36 ಹಿಂದೂ ಸೊಸೈಟಿಗಳು ಮತ್ತು ಸಿಖ್ ಗುಂಪುಗಳ ಸುಮಾರು 1,000 ಜನರು ಭಾಗವಹಿಸಿದ್ದರು. ಈ ಗುಂಪುಗಳು ಖಲಿಸ್ತಾನಿ ಉಗ್ರಗಾಮಿಗಳು … Continued

ವೀಡಿಯೊ | ದಾಳಿಕೋರರನ್ನು ಬಂಧಿಸುವ ಬದಲು ದೇವಸ್ಥಾನದ ದಾಳಿ ವಿರುದ್ಧ ಪ್ರತಿಭಟಿಸಿದ ಭಕ್ತರ ಮೇಲೆ ಹಲ್ಲೆ ನಡೆಸಿದ ಕೆನಡಾ ಪೊಲೀಸರು..!

ಭಾನುವಾರ ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಹಿಂದೂ ದೇವಾಲಯದ ಮೇಲೆ ಖಲಿಸ್ತಾನ್ ಪರ ಗುಂಪು ದಾಳಿ ಮಾಡಿದ ನಂತರ, ಪೊಲೀಸರು ದೇವಸ್ಥಾನಕ್ಕೆ ಹೋಗುವವರ ಜೊತೆ ಘರ್ಷಣೆ ನಡೆಸುತ್ತಿರುವ ವೀಡಿಯೊಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡವು. ಟೊರೊಂಟೊ ಬಳಿಯ ದೇವಸ್ಥಾನದ ಮೇಲೆ “ಭಾರತ ವಿರೋಧಿ” ಖಲಿಸ್ತಾನ ಪ್ರತ್ಯೇಕತಾವಾದಿಗಳು ದಾಳಿಯನ್ನು ಪ್ರತಿಭಟಿಸಿದ ಹಿಂದೂ ಭಕ್ತರ ಜೊತೆಯೇ ಕೆನಡಾದ ಪೊಲೀಸರು ಘರ್ಷಣೆ ನಡೆಸಿದರು. ಪೊಲೀಸರು ದೇವಾಲಯಕ್ಕೆ … Continued

ವೀಡಿಯೊ..| ಕೆನಡಾದ ಹಿಂದೂ ದೇವಾಲಯದಲ್ಲಿ ಭಕ್ತರ ಮೇಲೆ ದೊಣ್ಣೆಗಳಿಂದ ದಾಳಿ ನಡೆಸಿದ ಖಾಲಿಸ್ತಾನಿ ಪ್ರತ್ಯೇಕತಾವಾದಿಗಳು

ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಹಿಂದೂ ದೇವಾಲಯವೊಂದರಲ್ಲಿ ಖಾಲಿಸ್ತಾನಿ ಪ್ರತ್ಯೇಕವಾದಿಗಳ ಗುಂಪೊಂದು ಭಾನುವಾರ ಭಕ್ತರ ಮೇಲೆ ಹಲ್ಲೆ ನಡೆಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋಗಳಲ್ಲಿ, ಹಿಂದೂ ಸಭಾ ಮಂದಿರದ ಹೊರಗೆ ಖಲಿಸ್ತಾನಿ ಧ್ವಜಗಳನ್ನು ಹಿಡಿದಿರುವ ವ್ಯಕ್ತಿಗಳ ಗುಂಪೊಂದು ದೊಣ್ಣೆಗಳಿಂದ ಜನರನ್ನು ಥಳಿಸುತ್ತಿರುವುದನ್ನು ಕಾಣಬಹುದು. ಹಿಂಸಾಚಾರವನ್ನು ಖಂಡಿಸಿದ ಕೆನಡಾದ ಸಂಸತ್ ಸದಸ್ಯ ಚಂದ್ರ ಆರ್ಯ ಅವರು ಖಲಿಸ್ತಾನಿಗಳು “ಕೆಂಪು ಗೆರೆಯನ್ನು … Continued

ವೀಡಿಯೊ | ʼವಾಪಸ್‌ ಹೋಗಿʼ : ಕೆನಡಾದ ಟೊರೊಂಟೊದಲ್ಲಿ ನಡೆದ ಭಾರತ ದಿನದ ಮೆರವಣಿಗೆಗೆ ಖಲಿಸ್ತಾನ್ ಪರ ಪ್ರತಿಭಟನಾಕಾರರ ಅಡ್ಡಿ

ಕೆನಡಾದ ಟೊರೊಂಟೊದಲ್ಲಿ ಭಾನುವಾರ ನಡೆದ ಭಾರತದ ಸ್ವಾಂತ್ರ್ಯ ದಿನದ ಪರೇಡ್‌ಗೆ ಹತ್ತಾರು ಖಲಿಸ್ತಾನ್ ಪರ ಪ್ರತಿಭಟನಾಕಾರರು ಅಡ್ಡಿಪಡಿಸಿದರು. ಭಾರತೀಯ ಡಯಾಸ್ಪೊರಾ ಆಯೋಜಿಸಿದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಇದು ಕೆಲಕಾಲ ಉದ್ವಿಗ್ನತೆಗೆ ಕಾರಣವಾಯಿತು. ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗದ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವೈರಲ್ ವೀಡಿಯೊ, ದಲ್ಲಿ ಟೊರೊಂಟೊದ ನಾಥನ್ ಫಿಲಿಪ್ಸ್ ಸ್ಕ್ವೇರ್‌ನಲ್ಲಿ ಆಗಸ್ಟ್ 18 ರಂದು ಭಾರತದ … Continued

ಖಲಿಸ್ತಾನಿಗಳಿಂದ ಕೆನಡಾ ಕಲುಷಿತ ; ಬೆದರಿಕೆ ನಂತರ ಭಾರತೀಯ ಮೂಲದ ಕೆನಡಾ ಸಂಸದ ತಿರುಗೇಟು

ಒಟ್ಟಾವಾ: ಎಡ್ಮಂಟನ್‌ನಲ್ಲಿ ಹಿಂದೂ ದೇವಾಲಯಕ್ಕೆ ಹಾನಿ ಮಾಡಿದ ಕೆಲವೇ ದಿನಗಳ ನಂತರ, ಹಕ್ಕುಗಳ ಚಾರ್ಟರ್ ಅಡಿಯಲ್ಲಿ ಖಾತರಿಪಡಿಸುವ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳುವ ಖಲಿಸ್ತಾನಿ ಉಗ್ರಗಾಮಿಗಳಿಂದ ಕೆನಡಾವು “ಕಲುಷಿತಗೊಂಡಿದೆ” ಎಂದು ಭಾರತೀಯ ಮೂಲದ ಕೆನಡಾದ ಪ್ರಮುಖ ಸಂಸದರೊಬ್ಬರು ಬುಧವಾರ ಹೇಳಿದ್ದಾರೆ. ಕೆನಡಾದಲ್ಲಿ ಹೆಚ್ಚುತ್ತಿರುವ ಹಿಂದೂಫೋಬಿಯಾ ನಡುವೆ, ಇಲ್ಲಿಂದ ಸುಮಾರು 3,400 ಕಿ.ಮೀ.ಅಲ್ಬರ್ಟಾ ರಾಜ್ಯದ ಎಡ್ಮಂಟನ್‌ನಲ್ಲಿ ಸೋಮವಾರ ಬೆಳಗ್ಗೆ BAPS … Continued

ಖಲಿಸ್ತಾನಿ ಭಯೋತ್ಪಾದಕ ನಿಜ್ಜರ್ ಸ್ಮರಣಾರ್ಥ ಕೆನಡಾ ಸಂಸತ್ತಿನಲ್ಲಿ ಮೌನಾಚರಣೆ ; ‘ಕನಿಷ್ಕ ವಿಮಾನ ಸ್ಫೋಟʼ ಘಟನೆ ಸ್ಮರಣೆ ಮೂಲಕ ಭಾರತದ ಪ್ರತ್ಯುತ್ತರ…!

ನವದೆಹಲಿ : ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಸ್ಮರಣಾರ್ಥ ಕೆನಡಾ ಸಂಸತ್ತು ಮೌನ ಆಚರಿಸಿದ ನಂತರ ಭಾರತವು ಸ್ಪಷ್ಟ ಸಂದೇಶ ರವಾನಿಸುವ ಮೂಲಕ ತಿರುಗೇಟು ನೀಡಿದ್ದು, ವ್ಯಾಂಕೋವರ್‌ನಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ 1985ರ ಏರ್ ಇಂಡಿಯಾ ಕನಿಷ್ಕ ವಿಮಾನದಲ್ಲಿ ಖಲಿಸ್ತಾನಿ ಬಾಂಬ್ ಸ್ಫೋಟದಿಂದ ಮೃತಪಟ್ಟ 329 ಜನರ ಸ್ಮರಣಾರ್ಥ ಕಾರ್ಯಕ್ರಮ ನಡೆಸುವುದಾಗಿ ಪ್ರಕಟಿಸಿದೆ. “ಭಾರತವು … Continued