ನವೆಂಬರ್ 19ರಂದು ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಬೇಡಿ, ಪ್ರಯಾಣಿಸಿದರೆ….: ವೀಡಿಯೊ ಮೂಲಕ ಬೆದರಿಕೆ ಹಾಕಿದ ಖಲಿಸ್ತಾನಿ ಭಯೋತ್ಪಾದಕ | ವೀಕ್ಷಿಸಿ

ಖಲಿಸ್ತಾನಿ ಭಯೋತ್ಪಾದಕ ಗುರುಪತ್‌ವಂತ್ ಸಿಂಗ್ ಪನ್ನುನ್ ಎಂಬಾತನ ಹೊಸ ವೀಡಿಯೊ ಕಾಣಿಸಿಕೊಂಡಿದೆ, ಇದರಲ್ಲಿ ಆತ ನವೆಂಬರ್ 19 ರಂದು ಏರ್ ಇಂಡಿಯಾ ಮೂಲಕ ಪ್ರಯಾಣಿಸಲು ಯೋಜಿಸುತ್ತಿರುವ ಜನರಿಗೆ ತಮ್ಮ “ಜೀವಕ್ಕೆ ಅಪಾಯವಿದೆ” ಎಂದು ಬೆದರಿಕೆ ಹಾಕಿದ್ದಾನೆ.
“ನಾವು ಸಿಖ್ ಜನರನ್ನು ನವೆಂಬರ್ 19 ರಂದು ಏರ್ ಇಂಡಿಯಾ ಮೂಲಕ ಪ್ರಯಾಣ ಮಾಡಬೇಡಿ ಎಂದು ಕೇಳುತ್ತಿದ್ದೇವೆ. ಜಾಗತಿಕ ದಿಗ್ಬಂಧನ ನಡೆಯಲಿದೆ. ನವೆಂಬರ್ 19 ರಂದು ಏರ್ ಇಂಡಿಯಾದಲ್ಲಿ ಪ್ರಯಾಣಿಸಬೇಡಿ, ನಿಮ್ಮ ಜೀವಕ್ಕೆ ಅಪಾಯವಿದೆ” ಎಂದು ಪನ್ನುನ್ ವೀಡಿಯೊದಲ್ಲಿ ಹೇಳಿ ಬೆದರಿಕೆ ಹಾಕಿರುವುದು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ.
ನವೆಂಬರ್ 19 ರಂದು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣವನ್ನು ಮುಚ್ಚಲಾಗುವುದು ಮತ್ತು ಅದರ ಹೆಸರನ್ನು ಬದಲಾಯಿಸಲಾಗುವುದು ಎಂದು ಪನ್ನುನ್ ಹೇಳಿಕೊಂಡಿದ್ದಾನೆ.
ನಡೆಯುತ್ತಿರುವ ಕ್ರಿಕೆಟ್ ವಿಶ್ವಕಪ್‌ನ ಅಂತಿಮ ಪಂದ್ಯ ಇದೇ ದಿನ ನಡೆಯಲಿದೆ ಎಂದು ಖಲಿಸ್ತಾನಿ ಭಯೋತ್ಪಾದಕ ಹೈಲೈಟ್ ಮಾಡಿದ್ದಾನೆ.

ನವೆಂಬರ್ 19 ರಂದು ಇಂದಿರಾ ಗಾಂಧಿ ವಿಮಾನ ನಿಲ್ದಾಣವನ್ನು ಮುಚ್ಚಲಾಗುವುದು ಎಂದು ಆತ ಭಾರತ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾನೆ. “ಈ ನವೆಂಬರ್ 19 ವಿಶ್ವ ಭಯೋತ್ಪಾದಕ ಕಪ್‌ನ ಫೈನಲ್‌ಗೆ ಹೊಂದಿಕೆಯಾಗುತ್ತದೆ” ಎಂದು ಪನ್ನುನ್ ಅವರು ಕ್ರಿಕೆಟ್ ವಿಶ್ವಕಪ್ 2023 ರ ಫೈನಲ್ ಅನ್ನು ಉಲ್ಲೇಖಿಸಿ ಪ್ರಸ್ತಾಪಿಸಿದ್ದಾನೆ. ಅದೇ ದಿನ ಅಹಮದಾಬಾದ್‌ನಲ್ಲಿ ವಿಶ್ವಕಪ್‌ ಅಂತಿಮ ಪಂದ್ಯ ನಡೆಯುತ್ತದೆ.
“ಅಂದು, ಸಿಖ್ ಸಮುದಾಯದ ಮೇಲೆ ಭಾರತದ ದಬ್ಬಾಳಿಕೆಗೆ ಜಗತ್ತು ಸಾಕ್ಷಿಯಾಗಲಿದೆ ಮತ್ತು ಪಂಜಾಬ್ ಸ್ವಾತಂತ್ರ್ಯ ಸಾಧಿಸಿದ ನಂತರ ವಿಮಾನ ನಿಲ್ದಾಣದ ಹೆಸರನ್ನು ಶಾಹಿದ್ ಬಿಯಾಂತ್ ಸಿಂಗ್, ಶಾಹಿದ್ ಸತ್ವಂತ್ ಸಿಂಗ್ ಖಲಿಸ್ತಾನ್ ವಿಮಾನ ನಿಲ್ದಾಣ ಎಂದು ಬದಲಾಯಿಸಲಾಗುತ್ತದೆ” ಎಂದು ಆತ ಹೇಳಿದ್ದಾನೆ.
ಬಿಯಾಂತ್ ಸಿಂಗ್ ಮತ್ತು ಸತ್ವಂತ್ ಸಿಂಗ್ ಅಕ್ಟೋಬರ್ 31, 1984 ರಂದು ನವದೆಹಲಿಯ ಪ್ರಧಾನಿಯವರ ನಿವಾಸದಲ್ಲಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆ ಮಾಡಿದ ಅಂಗರಕ್ಷಕರಾಗಿದ್ದಾರೆ.
ಪಂಜಾಬ್‌ನ ಸ್ವಾತಂತ್ರ್ಯಕ್ಕಾಗಿ ಹೋರಾಟವು ಈಗಾಗಲೇ ಖಾಲಿಸ್ತಾನ್ ಜನಾಭಿಪ್ರಾಯ ಸಂಗ್ರಹಣೆಯೊಂದಿಗೆ ಪ್ರಾರಂಭವಾಗಿದೆ ಎಂದು ಪನ್ನುನ್ ಪ್ರತಿಪಾದಿಸಿದ್ದಾನೆ.

ಪ್ರಮುಖ ಸುದ್ದಿ :-   ವೀಡಿಯೊ...| ವಂದೇ ಭಾರತ ರೈಲಿನಡಿ ಸಿಲುಕಿದ ಹಸು ; ಪ್ರಾಣಾಪಾಯದಿಂದ ಪಾರಾಗಿದ್ದೇ ಒಂದು ವಿಸ್ಮಯ..

ಪನ್ನುನ್ ಈ ಹಿಂದೆ ಮೋದಿ ಸ್ಟೇಡಿಯಂ ಅನ್ನು ಗುರಿಯಾಗಿಸಿಕೊಂಡು ಬೆದರಿಕೆ ಹಾಕಿದ್ದ. ಹರ್ದೀಪ್ ಸಿಂಗ್ ನಿಜ್ಜರ್ ಸಾವು ಮತ್ತು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರಿಗೆ ಅಗೌರವ ತೋರಲಾಗಿದೆ ಎಂದು ಆಪಾದಿಸಿ ಗುರುಪತ್ವಂತ್ ಸಿಂಗ್ ಪನ್ನುನ್ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಹಿಂದೆ ಬೆದರಿಕೆ ಹಾಕಿದ್ದ. ಆತ ಸಿಖ್ಸ್ ಫಾರ್ ಜಸ್ಟೀಸ್ (SFJ) ಸಂಘಟನೆಯ ಪರವಾಗಿ ತೀವ್ರ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿದ್ದ. ಅಕ್ಟೋಬರ್ 5 ರಂದು ಐಸಿಸಿ ವಿಶ್ವಕಪ್ 2023 ರ ಮೊದಲ ಪಂದ್ಯ ನಡೆದ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದ ಮೇಲೆ ದಾಳಿ ನಡೆಸಲು ತಾನು ಯೋಜಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದ.
ಅಮೃತಸರ ಮೂಲದ ಪನ್ನುನ್ 2019 ರಿಂದ ರಾಷ್ಟ್ರೀಯ ತನಿಖಾ ಸಂಸ್ಥೆಯ (NIA) ಸ್ಕ್ಯಾನರ್‌ನಲ್ಲಿದ್ದಾನೆ, ತನಿಖಾ ಸಂಸ್ಥೆಯು ಆತನ ವಿರುದ್ಧ ಪ್ರಕರಣವನ್ನು ದಾಖಲಿಸಿದೆ. ಫೆಬ್ರವರಿ 3, 2021 ರಂದು ವಿಶೇಷ NIA ನ್ಯಾಯಾಲಯವು ಪನ್ನುನ್ ವಿರುದ್ಧ ಜಾಮೀನು ರಹಿತ ಬಂಧನದ ವಾರಂಟ್‌ಗಳನ್ನು ಹೊರಡಿಸಿತು ಮತ್ತು ಕಳೆದ ವರ್ಷ ನವೆಂಬರ್ 29 ರಂದು ಅವರನ್ನು “ಘೋಷಿತ ಅಪರಾಧಿ” (PO) ಎಂದು ಘೋಷಿಸಲಾಯಿತು.

ಪ್ರಮುಖ ಸುದ್ದಿ :-   ಖರ್ಗೆ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತಪಾಸಣೆ: ಚುನಾವಣಾಧಿಕಾರಿಗಳ ವಿರುದ್ಧ ಕಾಂಗ್ರೆಸ್‌ ಕಿಡಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement