ಬಾಂಗ್ಲಾದೇಶ | ಬಂಧಿತ ಹಿಂದೂ ಸ್ವಾಮೀಜಿಯ ವಕೀಲರ ಮೇಲೆ ದಾಳಿ ; ಐಸಿಯುನಲ್ಲಿ ಚಿಕಿತ್ಸೆ : ಇಸ್ಕಾನ್

ನವದೆಹಲಿ: ಬಂಧಿತ ಹಿಂದೂ ಸನ್ಯಾಸಿ ಚಿನ್ಮಯ ಕೃಷ್ಣ ದಾಸ್ ಬ್ರಹ್ಮಚಾರಿಯ ಪರ ವಾದಿಸುತ್ತಿರುವ ಬಾಂಗ್ಲಾದೇಶದ ವಕೀಲರ ಮೇಲೆ “ಇಸ್ಲಾಮಿಸ್ಟ್‌ಗಳು ಅವರ ಮನೆಯಲ್ಲಿ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ” ಮತ್ತು ಪ್ರಸ್ತುತ ಅವರು ತೀವ್ರ ನಿಗಾ ಘಟಕದಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ ಎಂದು ಇಸ್ಕಾನ್ ಇಂಡಿಯಾ ಹೇಳಿಕೊಂಡಿದೆ. ದೇಶದ್ರೋಹದ ಆರೋಪದ ಮೇಲೆ ಸನ್ಯಾಸಿಯ ಬಂಧನದ ಹಿನ್ನೆಲೆಯಲ್ಲಿ ಬಾಂಗ್ಲಾದೇಶದಲ್ಲಿ ಹಿಂಸಾಚಾರದ … Continued

ಮಗುವಾಗಿದ್ದಾಗ ತನ್ನ ಅಪಹರಣ ಮಾಡಿದ್ದ ಆರೋಪಿಗಳಿಗೆ 17 ವರ್ಷಗಳ ನಂತರ ಶಿಕ್ಷೆ ಕೊಡಿಸಿದ ವಕೀಲ…!

ಆಗ್ರಾ: ಅದೃಷ್ಟದ ಕುತೂಹಲಕಾರಿ ತಿರುವಿನಲ್ಲಿ, ತಾನು ಏಳು ವರ್ಷದವನಿದ್ದಾಗ ತನ್ನನ್ನು ಅಪಹರಿಸಿದ್ದ ದರೋಡೆಕೋರರಿಗೆ ಈಗ ವಕೀಲನಾದ ಅದೇ ಹುಡುಗ 17 ವರ್ಷಗಳ ನಂತರ ಶಿಕ್ಷೆ ಕೊಡಿಸಿದ ವಿದ್ಯಮಾನ ಉತ್ತರ ಪ್ರದೇಶದಲ್ಲಿ ನಡೆದಿದೆ..! ಉತ್ತರ ಪ್ರದೇಶದ ಆಗ್ರಾದ ಖೀರಗಢ ಪಟ್ಟಣದಲ್ಲಿ ಏಳು ವರ್ಷದ ಬಾಲಕನನ್ನು ಆತನ ತಂದೆ ಮತ್ತು ಚಿಕ್ಕಪ್ಪ ಪಟ್ಟದ ಔಷಧದ ಅಂಗಡಿಯಿಂದ ದರೋಡೆಕೋರರು ಅಪಹರಿಸಿದ್ದರು. … Continued

ಖ್ಯಾತ ಕಾನೂನು ಪಟು ಫಾಲಿ ಎಸ್ ನಾರಿಮನ್ ನಿಧನ

ನವದೆಹಲಿ: ಪ್ರಖ್ಯಾತ ಸಾಂವಿಧಾನಿಕ ನ್ಯಾಯಶಾಸ್ತ್ರಜ್ಞ ಮತ್ತು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಫಾಲಿ ಎಸ್. ನಾರಿಮನ್ ಅವರು ಬುಧವಾರ ನವದೆಹಲಿಯಲ್ಲಿ 95 ನೇ ವಯಸ್ಸಿನಲ್ಲಿ ನಿಧನರಾದರು. ಭಾರತದ ಕಾನೂನು ಕ್ಷೇತ್ರದಲ್ಲಿ ಅಪ್ರತಿಮ ವ್ಯಕ್ತಿಯಾಗಿದ್ದ ನಾರಿಮನ್ ಅವರು ಕಾನೂನು ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ. ಅವರು ಕೃಷ್ಣಾ ಜಲವಿವಾದ ಸೇರಿದಂತೆ ಹಲವಾರು ಜಲ ವಿವಾದಗಳಲ್ಲಿ ಕರ್ನಾಟಕದ ಪರ ವಾದಿಸಿ … Continued

ಟಿವಿ, ಸಿನಿಮಾದಲ್ಲಿ ತಂಬಾಕು ವಿರೋಧಿ ಎಚ್ಚರಿಕೆ ಸಂದೇಶ ಪ್ರಶ್ನಿಸಿ ಅರ್ಜಿ : ವಿಷಾದ ಸೂಚಿಸಿ ಅಫಿಡವಿಟ್ ಸಲ್ಲಿಸಲು ವಕೀಲನಿಗೆ ದೆಹಲಿ ಹೈಕೋರ್ಟ್ ಸೂಚನೆ

ನವದೆಹಲಿ: ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ತಂಬಾಕು ವಿರೋಧಿ ಎಚ್ಚರಿಕೆ ಸಂದೇಶ ಪ್ರದರ್ಶಿಸುವುದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ವಕೀಲರೊಬ್ಬರನ್ನು ದೆಹಲಿ ಹೈಕೋರ್ಟ್ ಮಂಗಳವಾರ ತರಾಟೆಗೆ ತೆಗೆದುಕೊಂಡಿದ್ದು ಎರಡು ದಿನಗಳಲ್ಲಿ ವಿಷಾದ ಸೂಚಿಸಿ ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿದೆ. ಎರಡು ದಿನಗಳಲ್ಲಿ, ಕ್ಷಮೆಯಾಚಿಸಿರುವ ಪ್ರಮಾಣಪತ್ರ ಸಲ್ಲಿಸುವಂತೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮಿನಿ ಪುಷ್ಕರ್ಣ ಅವರಿದ್ದ … Continued

ವಕೀಲೆ, ಭಾರತೀಯ ಮೂಲದ ಸುಯೆಲ್ಲಾ ಬ್ರಾವರ್‌ಮನ್‌ ಬ್ರಿಟನ್‌ನ ನೂತನ ಗೃಹ ಕಾರ್ಯದರ್ಶಿ

ಲಂಡನ್‌: ಬ್ರಿಟಿಷ್ ಪ್ರಧಾನಿ ಲಿಜ್ ಟ್ರಸ್ ಅವರು ಮಂಗಳವಾರ ಭಾರತೀಯ ಮೂಲದ ಬ್ಯಾರಿಸ್ಟರ್ ಸುಯೆಲ್ಲಾ ಬ್ರಾವರ್‌ಮನ್ ಅವರನ್ನು ಬ್ರಿಟನ್‌ನ ಹೊಸ ಗೃಹ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ . ಮತ್ತು ಅವರು ಭಾರತೀಯ ಮೂಲದ ಪ್ರೀತಿ ಪಟೇಲ್ ಅವರ ಸಹೋದ್ಯೋಗಿ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. 42 ವರ್ಷದ ಸುಯೆಲ್ಲಾ ಬ್ರಾವರ್‌ಮನ್ ಅವರು ಆಗ್ನೇಯ ಇಂಗ್ಲೆಂಡ್‌ನ ಫರೆಹ್ಯಾಮ್‌ನ ಕನ್ಸರ್ವೇಟಿವ್ ಪಕ್ಷದ … Continued