1000 ವರ್ಷಗಳ ಹಳೆಯ ಚೋಳರ ಕಾಲದ ತಾಮ್ರದ ಶಾಸನಗಳನ್ನು ಭಾರತಕ್ಕೆ ಮರಳಿ ನೀಡಿದ ನೆದರ್ಲ್ಯಾಂಡ್ಸ್

ನವದೆಹಲಿ/ಆಮ್ಸ್ಟರ್‌ಡ್ಯಾಮ್: ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಮರಳಿ ತರುವ ನಿಟ್ಟಿನಲ್ಲಿ ಮತ್ತೊಂದು ಐತಿಹಾಸಿಕ ಯಶಸ್ಸು ಸಿಕ್ಕಿದೆ. ನೆದರ್ಲ್ಯಾಂಡ್ಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ, 11ನೇ ಶತಮಾನದ ಚೋಳರ ಕಾಲದ ಅತ್ಯಂತ ಅಪರೂಪದ ತಾಮ್ರದ ಶಾಸನಗಳನ್ನು (ಕಾಪರ್ ಪ್ಲೇಟ್ಸ್) ನೆದರ್ಲ್ಯಾಂಡ್ಸ್ ಸರ್ಕಾರವು ಶನಿವಾರ ಅಧಿಕೃತವಾಗಿ ಭಾರತಕ್ಕೆ ಹಸ್ತಾಂತರಿಸಿದೆ. ಐರೋಪ್ಯ ದೇಶಗಳಲ್ಲಿ ‘ಲೈಡನ್ ಪ್ಲೇಟ್ಸ್’ (Leiden Plates) … Continued

ಹೆತ್ತ ತಾಯಿಯ ಹುಡುಕಾಟಕ್ಕಾಗಿ 40 ವರ್ಷಗಳ ನಂತರ ಭಾರತಕ್ಕೆ ಬಂದ ನೆದರ್ಲ್ಯಾಂಡ್ಸ್ ನಗರದ ಮೇಯರ್…!

ನಾಗಪುರ: ಅದು 1985ರ ಫೆಬ್ರವರಿ ತಿಂಗಳು. ಮಹಾರಾಷ್ಟ್ರದ ನಾಗಪುರದ ಅಂಬಾಜರಿ ರಸ್ತೆಯಲ್ಲಿರುವ ‘ಮಾತೃ ಸೇವಾ ಸಂಘ’ದ ಮುಂದೆ 21 ವರ್ಷದ ಯುವತಿಯೊಬ್ಬಳು ತನ್ನ ಮೂರೇ ದಿನದ ಕಂದಮ್ಮನನ್ನು ಬಿಟ್ಟು ನಾಪತ್ತೆಯಾಗಿದ್ದರು. ಅವಿವಾಹಿತೆಯಾಗಿದ್ದ ಆಕೆಗೆ ಅಂದು ಅಸಹಾಯಕತೆ ಮತ್ತು ಸಾಮಾಜಿಕ ಒತ್ತಡಗಳೇ ದೊಡ್ಡದಾಗಿದ್ದರಿಂದ ಆಕೆ ಹೀಗೆ ಮಾಡಿದ್ದಿರಬಹುದು. ಇಂದು ಅದೇ ಮಗು 40 ವರ್ಷಗಳ ನಂತರ ದೂರದ … Continued

ವಿಸ್ಮಯಕಾರಿ ವೈದ್ಯಕೀಯ ಪ್ರಕರಣ : ಮೊಣಕಾಲು ಶಸ್ತ್ರಚಿಕಿತ್ಸೆ ನಂತ್ರ ತನ್ನ ಭಾಷೆ ಮರೆತು ಇಂಗ್ಲಿಷ್ ಮಾತ್ರ ಮಾತನಾಡತೊಡಗಿದ ಹುಡುಗ !

ನೆದರ್ಲ್ಯಾಂಡ್ಸ್: ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆಯ ನಂತರ ರೋಗಿಗಳು ಪ್ರಜ್ಞೆ ಬಂದಾಗ ನೋವಿನ ಬಗ್ಗೆಯೋ ಅಥವಾ ಮನೆಯವರ ಬಗ್ಗೆಯೋ ವಿಚಾರಿಸುತ್ತಾರೆ. ಆದರೆ ನೆದರ್ಲ್ಯಾಂಡ್ಸ್‌ನಲ್ಲಿ 17 ವರ್ಷದ ಹುಡುಗನೊಬ್ಬ ಮೊಣಕಾಲು ಶಸ್ತ್ರಚಿಕಿತ್ಸೆಯ ನಂತರ ಎಚ್ಚರಗೊಂಡಾಗ ವೈದ್ಯರೇ ದಂಗಾಗುವಂತಹ ಘಟನೆ ನಡೆದಿದೆ. ಡಚ್ ಭಾಷೆಯೇ ಮಾತೃಭಾಷೆಯಾಗಿದ್ದರೂ, ಆತ ಎಚ್ಚರಗೊಂಡಾಗ ಕೇವಲ ಇಂಗ್ಲಿಷ್‌ನಲ್ಲಿ ಮಾತನಾಡಲು ಶುರುಮಾಡಿದ್ದಾನೆ…! ತಂದೆ-ತಾಯಿಯ ಗುರುತೇ ಮರೆತ… ಫುಟ್ಬಾಲ್ ಆಡುವಾಗ … Continued

ವಿಶ್ವಕಪ್‌ 2023 : ನೆದರ್ಲೆಂಡ್ಸ್ ವಿರುದ್ಧ ಅಫ್ಘಾನಿಸ್ಥಾನಕ್ಕೆ ಭರ್ಜರಿ ಜಯ; ಚಿಗುರಿದ ಸೆಮಿಫೈನಲ್ ಕನಸು…!

ಲಕ್ನೋ : ಶುಕ್ರವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ಅಫ್ಘಾನಿಸ್ಥಾನ ತಂಡವು ನೆದರ್ಲೆಂಡ್ಸ್ ವಿರುದ್ಧ 7 ವಿಕೆಟ್ ಗಳ ಅಮೋಘ ಜಯ ಸಾಧಿಸಿದ ನಂತರ ಅದರ ಸೆಮಿ ಫೈನಲ್ ಆಸೆ ಚಿಗುರಿದೆ.. ಅಫ್ಘಾನ್ 7 ನೇ ಪಂದ್ಯಗಳಲ್ಲಿ 4 ನೇ ಗೆಲುವು ಸಾಧಿಸಿದ್ದು ಆದರೆ ಮುಂದಿನ ಪಂದ್ಯಗಳಲ್ಲಿ ಬಲಾಢ್ಯ ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಎದುರು … Continued

ವಿಶ್ವಕಪ್‌ ಕ್ರಿಕೆಟ್‌ : ನೆದರ್ಲೆಂಡ್ಸ್‌ ವಿರುದ್ಧ 309 ರನ್‌ ಗಳಿಂದ ಜಯಗಳಿಸಿದ ಆಸ್ಟ್ರೇಲಿಯಾ ; ಮ್ಯಾಕ್ಸ್‌ವೆಲ್‌ ಅತ್ಯಂತ ವೇಗದ ಶತಕ

ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನೆದರ್ಲೆಂಡ್ಸ್‌ ವಿರುದ್ಧ ಆಸ್ಟ್ರೇಲಿಯಾ ತಂಡವು ದಾಖಲೆ ಅಂತರದಿಂದ ಜಯಗಳಿಸಿದೆ. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಪಂದ್ಯ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ ತಂಡವುಯ ನಿಗದಿತ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 399 ರನ್‌ ಪೇರಿಸಿತು. ಈ ಪಂದ್ಯ ಗೆಲ್ಲಲು ನೆದರ್ಲೆಂಡ್ಸ್ ತಂಡಕ್ಕೆ … Continued

ವಿಶ್ವಕಪ್ 2023: ಬಲಿಷ್ಠ ದಕ್ಷಿಣ ಆಫ್ರಿಕಾಕ್ಕೆ ಆಘಾತಕಾರಿ ಸೋಲಿನ ರುಚಿ ತೋರಿಸಿದ ನೆದರ್ಲ್ಯಾಂಡ್ಸ್

ಧರ್ಮಶಾಲಾ : ಈ ವಿಶ್ವಕಪ್ ಪಂದ್ಯಾವಳಿ ಘಟಾನುಘಟಿ ತಂಡಗಳಿಗೆ ಶಾಕಿಂಗ್‌ ಪಂದ್ಯಾವಳಿಯಾಗಿ ಪರಿಣಮಿಸುತ್ತಿದೆ. ಕೆಲದಿನಗಳ ಹಿಂದೆ ಅಫ್ಘಾನಿಸ್ತಾನವು ಹಾಲಿ ಚಾಂಪಿಯನ್ ಇಂಗ್ಲೆಂಡ್ ಅನ್ನು ಮಣಿಸಿದ ಕೆಲವು ದಿನಗಳ ನಂತರ, ವಿಶ್ವದ ನಂ.14 ಶ್ರೇಯಾಂಕದ ನೆದರ್ಲ್ಯಾಂಡ್ಸ್ ತಂಡವು ಬಲಿಷ್ಠ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಮತ್ತೊಂದು ಅಚ್ಚರಿಯ ಫಲಿತಾಂಶ ನೀಡಿದೆ. ಪ್ರಸ್ತುತ ಏಕದಿನದ ಪಂದ್ಯದಲ್ಲಿ ವಿಶ್ವದ ನಂ. 3 … Continued